ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಭಗವಾನ್ ಬಿರ್ಸಾ ಮುಂಡಾ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಭಗವಾನ್ ಬಿರ್ಸಾ ಮುಂಡಾ ಅವರು ಬುಡಕಟ್ಟು ಜನಾಂಗದ ಹೆಮ್ಮೆ, ದೇಶಭಕ್ತಿ ಮತ್ತು ಸಾಂಸ್ಕೃತಿಕ ಪ್ರಜ್ಞೆಯ ಅಮರ ಸಂಕೇತವಾಗಿದ್ದಾರೆ

ಧಾರ್ಮಿಕ ಮತಾಂತರದ ವಿರುದ್ಧ ಅವರ ಹೋರಾಟ ಮತ್ತು ಬುಡಕಟ್ಟು ಜನಾಂಗದ ಉದ್ದಾರಕ್ಕಾಗಿ ಅವರ ಸಮರ್ಪಣೆ ಇಂದಿಗೂ ಲಕ್ಷಾಂತರ ದೇಶವಾಸಿಗಳಿಗೆ ಸ್ಫೂರ್ತಿಯಾಗಿದೆ

प्रविष्टि तिथि: 09 JUN 2026 1:01PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಭಗವಾನ್ ಬಿರ್ಸಾ ಮುಂಡಾ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು.

Xನಲ್ಲಿ ಪೋಸ್ಟ್ ಮಾಡಿರುವ ಶ್ರೀ ಅಮಿತ್ ಶಾ ಅವರು, “ಬುಡಕಟ್ಟು ಜನಾಂಗದ ಹೆಮ್ಮೆ, ದೇಶಭಕ್ತಿ ಮತ್ತು ಸಾಂಸ್ಕೃತಿಕ ಪ್ರಜ್ಞೆಯ ಅಮರ ಸಂಕೇತವಾದ ಭಗವಾನ್ ಬಿರ್ಸಾ ಮುಂಡಾ ಅವರು 'ಉಲ್ಗುಲನ್ ಚಳುವಳಿ'ಯ ಮೂಲಕ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸ್ವಾತಂತ್ರ್ಯದ ಶಂಖವನ್ನು ಊದಿದರು. ಅವರು ಬುಡಕಟ್ಟು ಸಮಾಜವನ್ನು ತಮ್ಮ ಹಕ್ಕುಗಳು ಮತ್ತು ಪರಂಪರೆಯನ್ನು ರಕ್ಷಿಸಲು ಸಂಘಟಿಸಿ, ನೀರು, ಅರಣ್ಯ ಮತ್ತು ಭೂಮಿಯ ಸಂರಕ್ಷಣೆಯನ್ನು ಜನರ ಚಳುವಳಿಯ ರೂಪಕ್ಕೆ ತಂದರು. ಧಾರ್ಮಿಕ ಮತಾಂತರದ ವಿರುದ್ಧದ ಅವರ ಹೋರಾಟ ಮತ್ತು ಬುಡಕಟ್ಟು ಜನಾಂಗದ ಉದ್ದಾರಕ್ಕಾಗಿ ಅವರ ಸಮರ್ಪಣೆ ಇಂದಿಗೂ ಲಕ್ಷಾಂತರ ದೇಶವಾಸಿಗಳಿಗೆ ಸ್ಫೂರ್ತಿಯಾಗಿದೆ. ಭೂ ತಾಯಿ ಪಿತಾಮಹ ಭಗವಾನ್ ಬಿರ್ಸಾ ಮುಂಡಾ ಅವರ ಪುಣ್ಯತಿಥಿಯಂದು, ನಾನು ಅವರಿಗೆ ಹೃತ್ಪೂರ್ವಕವಾಗಿ ನಮಸ್ಕರಿಸುತ್ತೇನೆ.”

 

*****


(रिलीज़ आईडी: 2270785) आगंतुक पटल : 3
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Assamese , Gujarati , Tamil , Malayalam