ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ (PMSMA) ದಶಕೋತ್ಸವದ ಅಂಗವಾಗಿ ದೇಶವ್ಯಾಪಿ ಆಚರಣೆಗಳು ನಾಳೆಯಿಂದ ಪ್ರಾರಂಭ
“10 ಇಯರ್ಸ್ ಆಫ್ ಪಿಎಂಎಸ್‌ಎಂಎ – ಎ ಡಿಕೇಡ್ ಆಫ್ ಕೇರ್” ಆಚರಣೆಯ ರಾಷ್ಟ್ರೀಯ ಚಾಲನೆಯ ಅಧ್ಯಕ್ಷತೆ ವಹಿಸಲಿರುವ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ
ಪಿಎಂಎಸ್‌ಎಂಎ ಅಡಿಯಲ್ಲಿ ಒದಗಿಸಲಾಗುವ ಒಂಬತ್ತು ಖಚಿತ ಉಚಿತ ಸೇವೆಗಳನ್ನು ಉತ್ತೇಜಿಸಲು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಜಾಗೃತಿ ಮತ್ತು ಪ್ರಚಾರ ಚಟುವಟಿಕೆಗಳ ಆಯೋಜನೆ
ಪಿಎಂಎಸ್‌ಎಂಎ ಅಡಿಯಲ್ಲಿ ಸುರಕ್ಷಿತ ಮಾತೃತ್ವದ ಒಂದು ದಶಕದ ನೆನಪಿಗಾಗಿ ವಿಶೇಷ ₹75 ಮುಖಬೆಲೆಯ ಸ್ಮರಣಾರ್ಥ ನಾಣ್ಯ ಮತ್ತು ₹5 ಮುಖಬೆಲೆಯ ಅಂಚೆ ಚೀಟಿ ಬಿಡುಗಡೆ ಮಾಡಲಿರುವ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ. ನಡ್ಡಾ
प्रविष्टि तिथि:
08 JUN 2026 3:19PM by PIB Bengaluru
ಭಾರತದಲ್ಲಿ, ಸುರಕ್ಷಿತ ಗರ್ಭಧಾರಣೆ ಮತ್ತು ಆರೋಗ್ಯಕರ ಮಾತೃತ್ವವನ್ನು ಖಚಿತಪಡಿಸುವ ಗುರಿಯನ್ನು ಹೊಂದಿರುವ ಪ್ರಮುಖ ಉಪಕ್ರಮಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ (PMSMA) ಯಶಸ್ವಿ ಅನುಷ್ಠಾನದ ಹತ್ತು ವರ್ಷಗಳ ನೆನಪಿಗಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಾಳೆಯಿಂದ (9 ಜೂನ್ 2026) “10 ಇಯರ್ಸ್ ಆಫ್ ಪಿಎಂಎಸ್‌ಎಂಎ – ಎ ಡಿಕೇಡ್ ಆಫ್ ಕೇರ್” ದೇಶವ್ಯಾಪಿ ಆಚರಣೆಗಳಿಗೆ ಚಾಲನೆ ನೀಡಲಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ವಹಿಸಲಿದ್ದಾರೆ.
ಈ ಆಚರಣೆಯ ಭಾಗವಾಗಿ, ಗರ್ಭಿಣಿಯರು ಮತ್ತು ಅವರ ಕುಟುಂಬದವರು ಪಿಎಂಎಸ್‌ಎಂಎ ಅಡಿಯಲ್ಲಿ ಲಭ್ಯವಿರುವ ಒಂಬತ್ತು ಖಚಿತ ಉಚಿತ ಸೇವೆಗಳನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸಲು ಹಾಗೂ ಸಕಾಲಿಕ ಮತ್ತು ಗುಣಮಟ್ಟದ ಪ್ರಸವಪೂರ್ವ ಆರೈಕೆಯ ಮಹತ್ವವನ್ನು ಉತ್ತೇಜಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಜಾಗೃತಿ ಮತ್ತು ಪ್ರಚಾರ ಚಟುವಟಿಕೆಗಳನ್ನು ಆಯೋಜಿಸಲಾಗುವುದು.
ಇದಲ್ಲದೆ, ದೇಶಾದ್ಯಂತ ಸುರಕ್ಷಿತ ಮಾತೃತ್ವವನ್ನು ಮುನ್ನಡೆಸುವಲ್ಲಿ ಮತ್ತು ತಾಯಂದಿರ ಆರೋಗ್ಯ ರಕ್ಷಣೆ ಸೇವೆಗಳನ್ನು ಬಲಪಡಿಸುವಲ್ಲಿ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಒಂದು ದಶಕದ ಕೊಡುಗೆಯನ್ನು ಗೌರವಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ವಿಶೇಷ ₹75 ಮುಖಬೆಲೆಯ ಸ್ಮರಣಾರ್ಥ ನಾಣ್ಯ ಮತ್ತು ₹5 ಮುಖಬೆಲೆಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ.
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2016 ರ ಜೂನ್ 9 ರಂದು ಚಾಲನೆ ನೀಡಿದ್ದ ಈ ಯೋಜನೆಯು, ಪ್ರತಿ ತಿಂಗಳ 9 ರಂದು ಗರ್ಭಿಣಿಯರಿಗೆ ಉಚಿತ, ಸಮಗ್ರ ಮತ್ತು ಗುಣಮಟ್ಟದ ಪ್ರಸವಪೂರ್ವ ಆರೈಕೆ (ANC) ಸೇವೆಗಳನ್ನು ಒದಗಿಸುವ ಮೂಲಕ ತಾಯಂದಿರ ಮತ್ತು ನವಜಾತ ಶಿಶುಗಳ ಆರೋಗ್ಯ ರಕ್ಷಣೆಯ ಚಿತ್ರಣವನ್ನು ಬದಲಾಯಿಸುವಲ್ಲಿ ಒಂದು ದಶಕವನ್ನು ಪೂರೈಸಿದೆ.
ಒಂದು ದಶಕದ ಅತ್ಯುತ್ತಮ ಸಾಧನೆಯನ್ನು (2016-26) ಗುರುತಿಸುವ ಪಿಎಂಎಸ್‌ಎಂಎ ಯೋಜನೆಯು, ಸಂತಾನೋತ್ಪತ್ತಿ, ತಾಯಿ, ನವಜಾತ ಶಿಶು, ಮಗು ಮತ್ತು ಹದಿಹರೆಯದವರ ಆರೋಗ್ಯ (RMNCH+A) ಕಾರ್ಯತಂತ್ರದ ಅಡಿಯಲ್ಲಿ ಭಾರತ ಸರ್ಕಾರದ ನಿರಂತರ ಆರೈಕೆ ವಿಧಾನದ ಪ್ರಮುಖ ಆಧಾರಸ್ತಂಭವಾಗಿದೆ. ಇದು ಪ್ರಸವಪೂರ್ವ ಆರೈಕೆಯ (ANC) ಗುಣಮಟ್ಟ, ವ್ಯಾಪ್ತಿ, ರೋಗನಿರ್ಣಯ ಮತ್ತು ಆಪ್ತಸಮಾಲೋಚನೆ ಸೇವೆಗಳನ್ನು ಪರಿವರ್ತಿಸಲು ಸಮರ್ಪಿತವಾಗಿದ್ದು, ಆ ಮೂಲಕ ಕೋಟ್ಯಂತರ ಕುಟುಂಬಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ ಮತ್ತು ದೇಶದ ತಾಯಂದಿರ ಮರಣ ಅನುಪಾತವನ್ನು (MMR) ಗಣನೀಯವಾಗಿ ಕಡಿಮೆ ಮಾಡಿದೆ.
*****
(रिलीज़ आईडी: 2270257)
आगंतुक पटल : 21