ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರ ಆರ್ಥಿಕ ಸಲಹಾ ಮಂಡಳಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 06 JUN 2026 6:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಡೆದ ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತದ ಆರ್ಥಿಕ ಪರಿವರ್ತನೆ ಮತ್ತು ದೀರ್ಘಕಾಲೀನ ಅಭಿವೃದ್ಧಿ ಆದ್ಯತೆಗಳಿಗೆ ಸಂಬಂಧಿಸಿದ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಗಮನಿಸಿದರು. 

ಸುಧಾರಣಾ ಪ್ರಯಾಣಕ್ಕೆ ಹೆಚ್ಚಿನ ತೀವ್ರ ಗತಿಯನ್ನು ನೀಡುವುದು ಮತ್ತು 'ಜೀವನ ವ್ಯವಸ್ಥೆಗಳ ಸುಲಭತೆ' ಮತ್ತು 'ವ್ಯಾಪಾರ ಮಾಡುವ ಸುಲಭತೆ'ಯನ್ನು ಖಚಿತಪಡಿಸಿಕೊಳ್ಳುವ ಬಗ್ಗೆಯೂ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದರು.

ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:

"ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸಭೆಯನ್ನು ಆಯೋಜಿಸಲಾಗಿದೆ. ಭಾರತದ ಆರ್ಥಿಕ ಪರಿವರ್ತನೆ ಮತ್ತು ದೀರ್ಘಕಾಲೀನ ಅಭಿವೃದ್ಧಿ ಆದ್ಯತೆಗಳಿಗೆ ಸಂಬಂಧಿಸಿದ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಚರ್ಚಿಸಲಾಗಿದೆ. ಸುಧಾರಣಾ ಪ್ರಯಾಣಕ್ಕೆ ಹೆಚ್ಚಿನ ಆವೇಗಗತಿಯನ್ನು ಸೇರಿಸುವುದು ಮತ್ತು 'ಜೀವನದ ಸುಲಭತೆ' ಮತ್ತು 'ವ್ಯಾಪಾರ ಮಾಡುವ ಸುಲಭತೆ'ಯನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ದೃಷ್ಟಿಕೋನಗಳನ್ನು ಸಭೆಯಲ್ಲಿ ಹಂಚಿಕೊಂಡಿದ್ದಾರೆ.

@EACtoPM"

 

*****


(ಪ್ರಕಟಣೆ ಐ.ಡಿ.: 2269846) ವಿಸಿಟರ್ ಕೌಂಟರ್ : 61