ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

1 ಕೋಟಿ ಬಳಕೆದಾರರ ಮೈಲಿಗಲ್ಲು ದಾಟಿದ ವೇವ್ಸ್ ಒಟಿಟಿ; ಭಾರತದ ಸಾರ್ವಜನಿಕ ಸೇವಾ ಡಿಜಿಟಲ್ ಮಾಧ್ಯಮ ಪರಿಸರ ವ್ಯವಸ್ಥೆಗೆ ಮತ್ತಷ್ಟು ಬಲ


24,000 ಶೀರ್ಷಿಕೆಗಳು ಮತ್ತು 140 ಲೈವ್ ಚಾನೆಲ್‌ ಗಳಿಗೆ ಉಚಿತ ಪ್ರವೇಶವನ್ನು ನೀಡುವ ಮೂಲಕ ವೇವ್ಸ್ ಒಟಿಟಿ ಭಾರತದ ಅತ್ಯಂತ ವೈವಿಧ್ಯಮಯ ಸಾರ್ವಜನಿಕ ಸ್ಟ್ರೀಮಿಂಗ್ ತಾಣವಾಗಿ ಹೊರಹೊಮ್ಮಿದೆ

ಪ್ರಕಟಣಾ ದಿನಾಂಕ: 02 JUN 2026 6:52PM by PIB Bengaluru

ನವೆಂಬರ್ 2024ರಲ್ಲಿ ಪ್ರಾರಂಭವಾದ ಪ್ರಸಾರ ಭಾರತಿಯ ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆದ ವೇವ್ಸ್ ಒಟಿಟಿ, ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ 1 ಕೋಟಿ (10 ಮಿಲಿಯನ್) ನೋಂದಾಯಿತ ಬಳಕೆದಾರರ ಮಹತ್ವದ ಮೈಲಿಗಲ್ಲನ್ನು ದಾಟಿದೆ.

ಈ ಸಾಧನೆಯು ಭಾರತದ ಸಾರ್ವಜನಿಕ ಡಿಜಿಟಲ್ ಮಾಧ್ಯಮ ಪರಿಸರ ವ್ಯವಸ್ಥೆಯ ಬೆಳವಣಿಗೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು ಭಾರತ ಹಾಗೂ ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ವಿಶ್ವಾಸಾರ್ಹ, ಒಳಗೊಳ್ಳುವಿಕೆಯ ಮತ್ತು ವೈವಿಧ್ಯಮಯ ವಿಷಯವನ್ನು (ಕಂಟೆಂಟ್) ಒದಗಿಸುವ ಸ್ಥಳೀಯ ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳ ಹೆಚ್ಚುತ್ತಿರುವ ಅಳವಡಿಕೆಯನ್ನು ಪ್ರತಿಬಿಂಬಿಸುತ್ತದೆ.

ಇಂದು, ವೇವ್ಸ್ ಒಟಿಟಿ ಮನರಂಜನೆ, ಸುದ್ದಿ, ಶಿಕ್ಷಣ, ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಸಾರ್ವಜನಿಕ ಸೇವಾ ಪ್ರಕಾರಗಳಲ್ಲಿ 24,000 ಕ್ಕೂ ಹೆಚ್ಚು ವಿಷಯದ ಶೀರ್ಷಿಕೆಗಳನ್ನು ಮತ್ತು 15,000 ಕ್ಕೂ ಹೆಚ್ಚು ಗಂಟೆಗಳ ವಿಷಯವನ್ನು ಒಳಗೊಂಡಿದೆ. ಈ ಪ್ಲಾಟ್‌ಫಾರ್ಮ್ 140 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ ಗಳು, 200 ಕ್ಕೂ ಹೆಚ್ಚು ರೇಡಿಯೊ ಸೇವೆಗಳು, ನೇರ ಈವೆಂಟ್ ಸ್ಟ್ರೀಮಿಂಗ್, ಪಿಎಂ ಇ-ವಿದ್ಯಾ ಚಾನೆಲ್‌ ಗಳ ಮೂಲಕ ಶೈಕ್ಷಣಿಕ ವಿಷಯಗಳು; ಯೋಜನಾ, ಕುರುಕ್ಷೇತ್ರ ಮತ್ತು ರೋಜ್‌ಗಾರ್ ಸಮಾಚಾರ್‌ ಗಳ ಡಿಜಿಟಲ್ ಆವೃತ್ತಿಗಳು, ಪ್ರಮುಖ ದೇವಾಲಯಗಳ ಭಕ್ತಿ ಪ್ರಸಾರಗಳು ಮತ್ತು ಪ್ರಸಾರ ಭಾರತಿಯ ಸಾವಿರಾರು ಗಂಟೆಗಳ ಐತಿಹಾಸಿಕ ಸಂಗ್ರಹದ (ಆರ್ಕೈವಲ್) ವಿಷಯಗಳನ್ನು ಒದಗಿಸುತ್ತದೆ.

ಮೊಬೈಲ್, ವೆಬ್ ಮತ್ತು ಕನೆಕ್ಟಡ್ ಟಿವಿ ಸಾಧನಗಳಲ್ಲಿ ಲಭ್ಯವಿರುವ ವೇವ್ಸ್ ಒಟಿಟಿ ಈಗ 130 ಕ್ಕೂ ಹೆಚ್ಚು ದೇಶಗಳಲ್ಲಿನ ಪ್ರೇಕ್ಷಕರನ್ನು ತಲುಪುತ್ತಿದೆ, ಇದು ಬಹು ಭಾರತೀಯ ಭಾಷೆಗಳಲ್ಲಿ ವಿಷಯವನ್ನು ಒದಗಿಸುತ್ತದೆ ಮತ್ತು ಸಾರ್ವಜನಿಕ ಹಿತಾಸಕ್ತಿ ಹಾಗೂ ಮನರಂಜನಾ ಕಾರ್ಯಕ್ರಮಗಳ ವ್ಯಾಪಕ ಶ್ರೇಣಿಗೆ ಉಚಿತ ಪ್ರವೇಶವನ್ನು ನೀಡುತ್ತದೆ.

ಈ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿರುವ ಪ್ರಸಾರ ಭಾರತಿ, ಈ ಸಾಧನೆಯು ಡಿಜಿಟಲ್ ಯುಗದಲ್ಲಿ ಡಿಜಿಟಲ್ ಸಾರ್ವಜನಿಕ ಸೇವಾ ಮಾಧ್ಯಮದ ಹೆಚ್ಚುತ್ತಿರುವ ಪ್ರಸ್ತುತತೆಯನ್ನು ಪ್ರದರ್ಶಿಸುತ್ತದೆ ಮತ್ತು ದೂರದರ್ಶನ, ರೇಡಿಯೋ, ಬೇಡಿಕೆಯ ವಿಷಯ, ಶಿಕ್ಷಣ, ಸಂಸ್ಕೃತಿ ಮತ್ತು ಪರಂಪರೆಗಾಗಿ ಒಂದೇ ತಾಣವನ್ನು ರಚಿಸುವ ದೂರದೃಷ್ಟಿಯನ್ನು ಸಾಬೀತುಪಡಿಸುತ್ತದೆ ಎಂದು ತಿಳಿಸಿದೆ.

ವಿಷಯಗಳ (ಕಂಟೆಂಟ್)‌ ನಿರಂತರ ವಿಸ್ತರಣೆ, ಕಾರ್ಯತಂತ್ರದ ಡಿಜಿಟಲ್ ಪಾಲುದಾರಿಕೆಗಳು, ವ್ಯಾಪಕವಾದ ಸಾಧನಗಳ ಲಭ್ಯತೆ ಮತ್ತು ಸುಧಾರಿತ ಬಳಕೆದಾರ ಅನುಭವದ ಮೂಲಕ ಪ್ಲಾಟ್‌ಫಾರ್ಮ್ ನಿರಂತರ ಬೆಳವಣಿಗೆಯನ್ನು ಕಂಡಿದೆ. ಭಕ್ತಿ ಪ್ರಸಾರಗಳು, ಶೈಕ್ಷಣಿಕ ವಿಷಯಗಳು, ಡಿಜಿಟಲ್ ಪ್ರಕಟಣೆಗಳು, ಆರ್ಕೈವಲ್ ಸಂಗ್ರಹಣೆಗಳು ಮತ್ತು ನೇರ ಕಾರ್ಯಕ್ರಮಗಳ ಪ್ರಸಾರದಂತಹ ಇತ್ತೀಚಿನ ಸೇರ್ಪಡೆಗಳು ಪ್ರೇಕ್ಷಕರ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸಿವೆ.

1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರು ಮತ್ತು 1.4 ಕೋಟಿಗೂ ಹೆಚ್ಚು ಡೌನ್‌ಲೋಡ್‌ ಗಳನ್ನು ಹೊಂದಿರುವ ವೇವ್ಸ್ ಒಟಿಟಿ ಈಗ ತನ್ನ ಮುಂದಿನ ಹಂತದ ಬೆಳವಣಿಗೆಯತ್ತ ಗಮನ ಹರಿಸಿದೆ, ಇದರಲ್ಲಿ ವಿಷಯ ಪಾಲುದಾರಿಕೆಗಳ ವಿಸ್ತರಣೆ, ಸಾಧನಗಳು ಮತ್ತು ಪ್ಲಾಟ್‌ಫಾರ್ಮ್‌ ಗಳಾದ್ಯಂತ ವ್ಯಾಪಕ ವಿತರಣೆ, ಪ್ರಾದೇಶಿಕ ಮತ್ತು ಶೈಕ್ಷಣಿಕ ವಿಷಯಗಳ ಕೊಡುಗೆಗಳನ್ನು ಬಲಪಡಿಸುವುದು ಮತ್ತು ಮಾರ್ಚ್ 2027 ರ ವೇಳೆಗೆ 2 ಕೋಟಿ ನೋಂದಾಯಿತ ಬಳಕೆದಾರರ ಗುರಿಯನ್ನು ಸಾಧಿಸುವುದು ಸೇರಿದೆ.

ಈ ಮೈಲಿಗಲ್ಲು ವೇವ್ಸ್ ಒಟಿಟಿಯ ಭಾರತದ ಅತಿ ವೇಗವಾಗಿ ಬೆಳೆಯುತ್ತಿರುವ ಸಾರ್ವಜನಿಕ ಸೇವಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಎಂಬ ಸ್ಥಾನವನ್ನು ಮತ್ತು ಭಾರತದ ಸಂಸ್ಕೃತಿ, ಜ್ಞಾನ, ಪರಂಪರೆ ಹಾಗೂ ಸೃಜನಶೀಲತೆಯ ಡಿಜಿಟಲ್ ಪ್ರದರ್ಶನವಾಗಿ ಅದರ ಸ್ಥಾನವನ್ನು ದೃಢಪಡಿಸುತ್ತದೆ.

 

******


(ಪ್ರಕಟಣೆ ಐ.ಡಿ.: 2268136) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: Khasi , English , Urdu , हिन्दी , Marathi , Assamese , Gujarati , Tamil , Malayalam