ಆಯುಷ್
2026ರ ಅಂತಾರಾಷ್ಟ್ರೀಯ ಯೋಗ ದಿನದ ಪರಿಕಲ್ಪನೆಯಾದ 'ಆರೋಗ್ಯಕರ ಪ್ರಾಯಕ್ಕಾಗಿ ಯೋಗ' ಭಾರತದ ದೀರ್ಘಾಯುಷ್ಯ ಮತ್ತು ಯೋಗಕ್ಷೇಮದ ಸಮಗ್ರ ದೃಷ್ಟಿಕೋನವನ್ನು ಉಲ್ಲೇಖಿಸುತ್ತದೆ
"ಯೋಗವು ವೃದ್ದಾಪ್ಯ ಹೊಂದುವುದನ್ನು ಕಲಾತ್ಮಕವಾಗಿ ಸುಂದರವಾಗಿ ಮತ್ತು ಆರೋಗ್ಯಕರವಾಗಿಸುತ್ತದೆ": ಕೇಂದ್ರ ಸಚಿವರಾದ ಶ್ರೀ ಪ್ರತಾಪ್‌ರಾವ್ ಜಾಧವ್
ಕಳೆದ ದಶಕದಲ್ಲಿ ಯೋಗ ಮತ್ತು ಆರೋಗ್ಯಕರ ವೃದ್ಧಾಪ್ಯದ ಕುರಿತಾಗಿ ಜಾಗತಿಕ ವೈಜ್ಞಾನಿಕ ಅಧ್ಯಯನಗಳು ನಾಟಕೀಯವಾಗಿ ಹೆಚ್ಚುತ್ತಿವೆ
ಪ್ರಕಟಣಾ ದಿನಾಂಕ:
01 JUN 2026 5:50PM by PIB Bengaluru
ಜೂನ್ 21, 2026ರಂದು ಆಚರಿಸಲಾಗುವ 12ನೇ ಅಂತಾರಾಷ್ಟ್ರೀಯ ಯೋಗ ದಿನದ (IDY) ಥೀಮ್ "ಆರೋಗ್ಯಕರ ಪ್ರಾಯಕ್ಕಾಗಿ ಯೋಗ", ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಉತ್ತೇಜಿಸುವ ಸಮಗ್ರ ವಿಧಾನವಾಗಿ ಯೋಗದ ಬೆಳೆಯುತ್ತಿರುವ ಜಾಗತಿಕ ಮನ್ನಣೆಯನ್ನು ಪ್ರತಿಬಿಂಬಿಸುತ್ತದೆ. ಭಾರತದ ಪ್ರಾಚೀನ ಬುದ್ಧಿವಂತಿಕೆಯಲ್ಲಿ ಬೇರೂರಿರುವ ಮತ್ತು ದೇಶಗಳಾದ್ಯಂತ ಸ್ವೀಕರಿಸಲ್ಪಟ್ಟ ಯೋಗವು ಆರೋಗ್ಯಕರ ಮತ್ತು ಸಕ್ರಿಯ ಜೀವನಕ್ಕೆ ವಿಶ್ವಾಸಾರ್ಹ ಮಾರ್ಗವಾಗಿ ಹೊರಹೊಮ್ಮಿದೆ. ತಡೆಗಟ್ಟಬಲ್ಲ ಆರೋಗ್ಯ ರಕ್ಷಣೆ ಮತ್ತು ಸಮಗ್ರ ಸ್ವಾಸ್ಥ್ಯದ ಮೂಲಾಧಾರವಾಗಿ ಯೋಗದ ಪಾತ್ರವನ್ನು ನೆನೆದಾಗ, ಚೈತನ್ಯ, ಸ್ಥಿತಿಸ್ಥಾಪಕತ್ವ ಮತ್ತು ಸ್ವಾತಂತ್ರ್ಯದ ನಿಟ್ಟಿನಲ್ಲಿ ಯೋಗದ ಪರಿವರ್ತಕ ಸಾಮರ್ಥ್ಯವನ್ನು ಈ ಪರಿಕಲ್ಪನೆಯು ಉಲ್ಲೇಖಿಸುತ್ತದೆ.
ಈ ವಿಷಯದ ಮಹತ್ವವನ್ನು ವಿವರಿಸುತ್ತಾ ಮಾತನಾಡಿದ ಕೇಂದ್ರ ಆಯುಷ್ ರಾಜ್ಯ ಸಚಿವರಾದ (ಸ್ವತಂತ್ರ ನಿರ್ವಹಣೆ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ಪ್ರತಾಪ್‌ರಾವ್ ಜಾಧವ್, "ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ವಿಷಯವಾದ 'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' ಇಂದು ಅಪಾರ ಪ್ರಸ್ತುತತೆಯನ್ನು ಹೊಂದಿದೆ. ಜೀವಿತಾವಧಿ ಹೆಚ್ಚುತ್ತಲೇ ಇರುವುದರಿಂದ, ನಾವು ವೃದ್ಧಾಪ್ಯವನ್ನು ಕಲಾತ್ಮಕವಾಗಿ, ಸುಂದರವಾಗಿ ಮತ್ತು ಆರೋಗ್ಯಕರವಾಗಿ ಕಲಿಯುವುದು ಅತ್ಯಗತ್ಯವಾಗಿದೆ. ಇದು ಭಾರತದ ಪ್ರಾಚೀನ ನಾಗರಿಕತೆಯಲ್ಲಿ ಸುಂದರವಾಗಿ ನಿರೂಪಿಸಲ್ಪಟ್ಟ ಪರಿಕಲ್ಪನೆಯಾಗಿದ್ದು, ಅದರಲ್ಲಿ ನಮ್ಮ ಋಷಿಗಳು ಮತ್ತು ಯೋಗಿಗಳು ಯೋಗ ಮತ್ತು ಆಧ್ಯಾತ್ಮಿಕ ಶಿಸ್ತಿನ ಶಕ್ತಿಯ ಮೂಲಕ ದೀರ್ಘಾಯುಷ್ಯ ಮತ್ತು ಚೈತನ್ಯಶೀಲ ಆರೋಗ್ಯವನ್ನು ಹೊಂದಿದ್ದರು" ಎಂದು ಹೇಳಿದರು.
ಈ ಪರಿಕಲ್ಪನೆಯು ಜೀವಿತಾವಧಿಯನ್ನು ಮಾತ್ರವಲ್ಲದೆ "ಆರೋಗ್ಯಾವಧಿ" - ಉತ್ತಮ ಆರೋಗ್ಯದಲ್ಲಿ ಕಳೆದ ಜೀವನದ ಅವಧಿ - ಎರಡನ್ನೂ ಹೆಚ್ಚಿಸುವ ಅಗತ್ಯದತ್ತ ಗಮನ ಸೆಳೆಯುತ್ತದೆ. ದೈಹಿಕ ಭಂಗಿಗಳು, ಉಸಿರಾಟದ ಅಭ್ಯಾಸಗಳು, ಧ್ಯಾನ ಮತ್ತು ಸಾವಧಾನತೆಯ ಸಂಯೋಜನೆಯ ಮೂಲಕ, ಯೋಗವು ವೃದ್ದಾಪ್ಯ ಪ್ರಕ್ರಿಯೆಯ ಉದ್ದಕ್ಕೂ ಚಲನಶೀಲತೆ, ಮಾನಸಿಕ ಯೋಗಕ್ಷೇಮ ಮತ್ತು ಭಾವನಾತ್ಮಕ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಮಗ್ರ ವಿಧಾನವನ್ನು ನೀಡುತ್ತದೆ.
ಬೆಳೆಯುತ್ತಿರುವ ವೈಜ್ಞಾನಿಕ ಮನ್ನಣೆ
ಆರೋಗ್ಯಕರ ಪ್ರಾಯದಲ್ಲಿ ಯೋಗದ ಪಾತ್ರವು ಜಾಗತಿಕ ವೈಜ್ಞಾನಿಕ ಸಮುದಾಯದಿಂದ ಹೆಚ್ಚಿನ ಗಮನವನ್ನು ಪಡೆಯುತ್ತಿದೆ. ಪಬ್‌ಮೆಡ್ ಸೆಂಟ್ರಲ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕಳೆದ ದಶಕದಲ್ಲಿ "ಆರೋಗ್ಯಕರ ಪ್ರಾಯಕ್ಕಾಗಿ ಯೋಗ" ಸಂಬಂಧಿಸಿದ ವಿದ್ವತ್ಪೂರ್ಣ ಪ್ರಕಟಣೆಗಳು ಗಣನೀಯ ಹೆಚ್ಚಳವನ್ನು ಕಂಡಿವೆ.
2014ರಲ್ಲಿ ಈ ವಿಷಯದ ಕುರಿತಾಗಿ ಕೇವಲ 183 ಸಂಶೋಧನಾ ಪ್ರಬಂಧಗಳು ಪ್ರಕಟವಾದರೂ, 2025ರ ವೇಳೆಗೆ ಈ ಸಂಖ್ಯೆ 1,207 ಪ್ರಕಟಣೆಗಳಿಗೆ ಏರಿದೆ. ಸಂಶೋಧನಾ ಫಲಿತಾಂಶವು 2020ರಲ್ಲಿ 500 ಪ್ರಕಟಣೆಗಳನ್ನು ದಾಟಿದ್ದು, ಸ್ಥಿರವಾಗಿ ಬೆಳೆಯುತ್ತಲೇ ಇದೆ, ಇದು ವಯಸ್ಸಿಗೆ ಸಂಬಂಧಿಸಿದ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಪರಿಹರಿಸುವಲ್ಲಿ ಯೋಗದ ಪಾತ್ರದಲ್ಲಿ ವಿಸ್ತರಿಸುತ್ತಿರುವ ವೈಜ್ಞಾನಿಕ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಆರೋಗ್ಯಕರ ವೃದ್ಧಾಪ್ಯಕ್ಕೆ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಒಳಗೊಂಡ ಸಮತೋಲಿತ ವಿಧಾನದ ಅಗತ್ಯವಿದೆ ಎಂಬ ಭಾರತದ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯಲ್ಲಿ ದೀರ್ಘಕಾಲದಿಂದ ಇರುವ ತಿಳುವಳಿಕೆಯನ್ನು ಬೆಳೆಯುತ್ತಿರುವ ಈ ಪುರಾವೆಗಳು ಬೆಂಬಲಿಸುತ್ತವೆ.
ಬೆಳ್ಳಿ ಆರ್ಥಿಕತೆಯಲ್ಲಿ ಉದಯೋನ್ಮುಖ ಅವಕಾಶಗಳು
ಆರೋಗ್ಯಕರ ಪ್ರಾಯಕ್ಕೆ ಒತ್ತು ನೀಡುವ ಈ ಥೀಮ್ ಜಾಗತಿಕ "ಬೆಳ್ಳಿ ಆರ್ಥಿಕತೆ"ಯ ತ್ವರಿತ ಬೆಳವಣಿಗೆಯೊಂದಿಗೆ ಹೊಂದಿಕೆಯಾಗುತ್ತಿದ್ದು, ಇದು ಹಿರಿಯ ನಾಗರಿಕರಿಗೆ ಸೇವೆ ಸಲ್ಲಿಸುವ ಉತ್ಪನ್ನಗಳು ಮತ್ತು ಸೇವೆಗಳನ್ನು ಒಳಗೊಂಡಿದೆ. ಭಾರತದಲ್ಲಿ, ಆರೋಗ್ಯ ರಕ್ಷಣೆ, ಕ್ಷೇಮ ಸೇವೆಗಳು, ಪುನರ್ವಸತಿ, ನೆರವಿನ ಜೀವನ, ಡಿಜಿಟಲ್ ಆರೋಗ್ಯ ಮತ್ತು ಹಿರಿಯರ ಆರೈಕೆ ಸೇರಿದಂತೆ ಹಿರಿಯ-ಕೇಂದ್ರಿತ ಆರ್ಥಿಕತೆಯು ಸುಮಾರು ₹73,000 ಕೋಟಿಗಳಷ್ಟಿದ್ದು, ಮುಂಬರುವ ವರ್ಷಗಳಲ್ಲಿ ಗಮನಾರ್ಹವಾಗಿ ವಿಸ್ತರಣೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.
45–64 ವರ್ಷ ವಯಸ್ಸಿನ ವ್ಯಕ್ತಿಗಳು ವಿಶ್ವಾದ್ಯಂತ ಪ್ರಮುಖ ಗ್ರಾಹಕ ವಿಭಾಗವನ್ನು ಪ್ರತಿನಿಧಿಸುತ್ತಿರುವುದರಿಂದ, ತಡೆಗಟ್ಟುವ ಆರೋಗ್ಯ ಪರಿಹಾರಗಳು ಮತ್ತು ಕ್ಷೇಮ-ಆಧಾರಿತ ಜೀವನಶೈಲಿಗಳಿಗೆ ಬೇಡಿಕೆ ಸ್ಥಿರವಾಗಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ, ಯೋಗವು ಆರೋಗ್ಯಕರ ಪ್ರಾಯ ಮತ್ತು ಸಕ್ರಿಯ ಜೀವನವನ್ನು ಬೆಂಬಲಿಸುವ ವೆಚ್ಚ-ಪರಿಣಾಮಕಾರಿ ಮತ್ತು ಸುಲಭವಾಗಿ ಲಬ್ಯವಿರುವ ಪ್ರಕ್ರಿಯೆಯಾಗಿ ಹೊರಹೊಮ್ಮುತ್ತಿದೆ.
ಆಯುಷ್ ಸಚಿವಾಲಯದ ಉಪಕ್ರಮಗಳು
ಯೋಗಾಭ್ಯಾಸವನ್ನು ವರ್ಷಪೂರ್ತಿ ಅಳವಡಿಸಿಕೊಳ್ಳುವ ಕ್ಷೇಮಾಭ್ಯಾಸವಾಗಿ ಉತ್ತೇಜಿಸಲು ಮತ್ತು ತಡೆಗಟ್ಟುವ ಆರೋಗ್ಯ ರಕ್ಷಣೆಯಲ್ಲಿ ತನ್ನ ಪಾತ್ರವನ್ನು ಬಲಪಡಿಸಲು ಆಯುಷ್ ಸಚಿವಾಲಯವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.
ಇವುಗಳಲ್ಲಿ ಸಚಿವಾಲಯದ ಪುರಾವೆ-ಆಧಾರಿತ “ಸಾಂಕ್ರಾಮಿಕವಲ್ಲದ ರೋಗಗಳಿಗೆ (NCDs) ಮತ್ತು ಗುರಿ ಗುಂಪುಗಳಿಗೆ 10 ಯೋಗ ಪ್ರೋಟೋಕಾಲ್‌ಗಳು” ಸೇರಿವೆ. ಇದು ವೃದ್ಧಾಪ್ಯರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೀಸಲಾದ ಪ್ರೋಟೋಕಾಲ್ ಅನ್ನು ಒಳಗೊಂಡಿದೆ. ವಯಸ್ಸಿಗೆ ಸೂಕ್ತವಾದ ಯೋಗಾಭ್ಯಾಸಗಳ ಮೂಲಕ ನಮ್ಯತೆ, ಸಮತೋಲನ, ಚಲನಶೀಲತೆ, ಉಸಿರಾಟದ ಕಾರ್ಯ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಹೆಚ್ಚಿಸುವತ್ತ ಈ ಪ್ರೋಟೋಕಾಲ್ ಗಮನಹರಿಸುತ್ತದೆ.
ಅಂತಾರಾಷ್ಟ್ರೀಯ ಯೋಗ ದಿನದ ವಾರ್ಷಿಕ ಆಚರಣೆಯನ್ನು ಮೀರಿ ದೈನಂದಿನ ಯೋಗ ಅಳವಡಿಕೆಯನ್ನು ಉತ್ತೇಜಿಸಲು ಸಚಿವಾಲಯವು “ಯೋಗ 365” ಎಂಬ ಉಪಕ್ರಮವನ್ನು ಸಹ ಉತ್ತೇಜಿಸುತ್ತಿದೆ. ತಂತ್ರಜ್ಞಾನ-ಸಕ್ರಿಯಗೊಳಿಸಿದ ವೇದಿಕೆಗಳು ಮತ್ತು ಮನೆಯಲ್ಲೇ ಮಾಡಬಹುದಾದ ಅಭ್ಯಾಸ ಮಾಡ್ಯೂಲ್‌ಗಳ ಮೂಲಕ ಯೋಗವನ್ನು ಪಡೆಯುವಂತೆ ಮಾಡುವ ಗುರಿಯನ್ನು ಈ ಉಪಕ್ರಮವು ಹೊಂದಿದ್ದು, ಇದು ದೈನಂದಿನ ಯೋಗಾಭ್ಯಾಸದಲ್ಲಿ ವ್ಯಾಪಕ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ.
ಮತ್ತೊಂದು ಪ್ರಮುಖ ಉಪಕ್ರಮವಾದ “ಯೋಗ ಸಮಾವೇಶ”ವು, ಯೋಗದ ಪ್ರಯೋಜನಗಳು ಸಮಾಜದ ದುರ್ಬಲ ಮತ್ತು ವಂಚಿತ ವರ್ಗಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಕುರ್ಚಿ ಯೋಗ, ಕಡಿಮೆ-ಪ್ರಭಾವಿತ ದಿನಚರಿಗಳು ಮತ್ತು ಸಮುದಾಯ ಆಧಾರಿತ ಕ್ಷೇಮ ಅವಧಿಗಳಂತಹ ಸಮಗ್ರ ಕಾರ್ಯಕ್ರಮಗಳ ಮೂಲಕ, ಈ ಉಪಕ್ರಮವು ಹಿರಿಯ ನಾಗರಿಕರಿಗೆ ಸ್ವಾತಂತ್ರ್ಯ, ಸಾಮಾಜಿಕ ಭಾಗವಹಿಸುವಿಕೆ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಬೆಂಬಲ ನೀಡುವ ಗುರಿಯನ್ನು ಹೊಂದಿದೆ.
ನಾವೀನ್ಯತೆಯ ಮೂಲಕ ಆರೋಗ್ಯಕರ ವೃದ್ಧಾಪ್ಯದ ಬೆಂಬಲಿಕೆ
ಅಂತಾರಾಷ್ಟ್ರೀಯ ಯೋಗ ದಿನ 2026ರ ವಿಷಯವು ವೃದ್ದಾಪ್ಯರ ಅಗತ್ಯಗಳನ್ನು ಪೂರೈಸುವ ವ್ಯಾಪಕ ಸರ್ಕಾರಿ ಪ್ರಯತ್ನಗಳಿಗೆ ಪೂರಕವಾಗಿದೆ. ಸೀನಿಯರ್‌ಕೇರ್ ಏಜಿಂಗ್ ಗ್ರೋತ್ ಎಂಜಿನ್ (SAGE) ನಂತಹ ಉಪಕ್ರಮಗಳು ವೃದ್ಧರ ಆರೈಕೆ ಪರಿಹಾರಗಳಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ಸ್ಟಾರ್ಟ್-ಅಪ್ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತಿವೆ.
ಯೋಗದ ಪ್ರಯೋಜನಗಳ ಅರಿವು ವಿಸ್ತರಿಸುತ್ತಲೇ ಇರುವುದರಿಂದ, ಕ್ಷೇಮ ವೃತ್ತಿಪರರು, ಆರೈಕೆದಾರರು, ಡಿಜಿಟಲ್ ಆರೋಗ್ಯ ಪೂರೈಕೆದಾರರು ಮತ್ತು ಹಿರಿಯರ ಆರೈಕೆ ಕ್ಷೇತ್ರದಲ್ಲಿ ಕೆಲಸ ಮಾಡುವ ಸಮುದಾಯ ಸಂಸ್ಥೆಗಳಿಗೆ ಅವಕಾಶಗಳು ಹೊರಹೊಮ್ಮುತ್ತಿವೆ. ವೃದ್ಧರ ಯೋಗಕ್ಷೇಮದ ಮೇಲೆ ಹೆಚ್ಚುತ್ತಿರುವ ಒತ್ತು ಆರೋಗ್ಯಕರ ವಯಸ್ಸಾದ ಸಮಗ್ರ ಮತ್ತು ವೈದ್ಯಕೀಯೇತರ ಅಂಶಗಳನ್ನು ಬೆಂಬಲಿಸುವ ಸಾಮರ್ಥ್ಯವಿರುವ ತರಬೇತಿ ಪಡೆದ ವೃತ್ತಿಪರರಿಗೆ ಬೇಡಿಕೆಯನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಆರೋಗ್ಯಕರ ವೃದ್ಧಾಪ್ಯಕ್ಕೆ ಸಮಗ್ರ ಮಾರ್ಗ
"ಆರೋಗ್ಯಕರ ಪ್ರಾಯಕ್ಕಾಗಿ ಯೋಗ" ಎಂಬ ವಿಷಯವು ವಿಶ್ವಾದ್ಯಂತ ಸಮಾಜಗಳು ಬದಲಾಗುತ್ತಿರುವ ಜನಸಂಖ್ಯಾ ವಾಸ್ತವಗಳಿಗೆ ಹೊಂದಿಕೊಂಡು ಸಕಾಲಿಕ ಸಂದೇಶವನ್ನು ನೀಡುತ್ತದೆ. ತಡೆಗಟ್ಟುವ ಆರೋಗ್ಯ ರಕ್ಷಣೆ, ಸಕ್ರಿಯ ಜೀವನಶೈಲಿ ಮತ್ತು ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸುವ ಮೂಲಕ, ಯೋಗವು ಎಲ್ಲಾ ವಯೋಮಾನದವರಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಲು ಪ್ರಾಯೋಗಿಕ ಮಾರ್ಗವನ್ನು ನೀಡುತ್ತದೆ.
2026ರ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ನಿಟ್ಟಿನಲ್ಲಿ ಜಗತ್ತು ಸಿದ್ಧತೆ ನಡೆಸುತ್ತಿರುವಾಗ, ಆರೋಗ್ಯಕರ, ಸಕ್ರಿಯ ಮತ್ತು ಆಕರ್ಷಕವಾದ ಪ್ರಾಯವನ್ನು ಬೆಂಬಲಿಸುವ ಕಾಲ-ಪರೀಕ್ಷಿತ ಸಂಪ್ರದಾಯವನ್ನು ಹಂಚಿಕೊಳ್ಳುವ ಭಾರತದ ಬದ್ಧತೆಯನ್ನು ಈ ಪರಿಕಲ್ಪನೆಯು ಪುನರುಚ್ಚರಿಸುತ್ತದೆ.

*****
(ಪ್ರಕಟಣೆ ಐ.ಡಿ.: 2267796)
ವಿಸಿಟರ್ ಕೌಂಟರ್ : 13