ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರಿಂದ 2026ರ 23 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಕುಸ್ತಿಪಟುಗಳಿಗೆ ಅಭಿನಂದನೆ
प्रविष्टि तिथि:
28 MAY 2026 8:10PM by PIB Bengaluru
ವಿಯೆಟ್ನಾಂನ ಡಾ ನಾಂಗ್ ನಲ್ಲಿ ನಡೆದ 2026 ರ 23 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಕುಸ್ತಿಪಟುಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಭಾರತದ ಪುರುಷರ ಫ್ರೀಸ್ಟೈಲ್ ಮತ್ತು ಮಹಿಳಾ ಕುಸ್ತಿ ತಂಡಗಳು ಚಾಂಪಿಯನ್ ಶಿಪ್ ನಲ್ಲಿ ತಂಡ ಪ್ರಶಸ್ತಿ ಜಯಿಸಿವೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪುರುಷರ ಫ್ರೀಸ್ಟೈಲ್ ಕುಸ್ತಿ ತಂಡವು 4 ಚಿನ್ನದ ಪದಕ ಸೇರಿದಂತೆ 9 ಪದಕಗಳನ್ನು ಗೆದ್ದಿದ್ದು 23 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್ ಶಿಪ್ ನ ಇತಿಹಾಸದಲ್ಲಿ ಭಾರತ ಒಟ್ಟಾರೆ ಅತ್ಯಧಿಕ ಪದಕ ಪಡೆದಿದೆ.
ಮಹಿಳಾ ಕುಸ್ತಿ ತಂಡ 6 ಚಿನ್ನದ ಪದಕ ಸೇರಿದಂತೆ 10 ಪದಕಗಳನ್ನು ಗೆದ್ದಿದೆ ಎಂದು ಅವರು ಹೇಳಿದ್ದಾರೆ.
ಗ್ರೀಕೋ-ರೋಮನ್ ತಂಡವು 8 ಪದಕಗಳೊಂದಿಗೆ ತನ್ನ ಒಟ್ಟಾರೆ ಅತಿ ಹೆಚ್ಚು ಪದಕಗಳನ್ನು ಜಯಿಸಿದೆ ಎಂದು ಪ್ರಧಾನಮಂತ್ರಿ ವಿವರಿಸಿದ್ದಾರೆ.
ಕುಸ್ತಿಪಟುಗಳಿಗೆ ಅಭಿನಂದನೆ ಸಲ್ಲಿಸುತ್ತಾ ಪ್ರಧಾನಮಂತ್ರಿಗಳು, ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:
“ನಮ್ಮ ಕುಸ್ತಿಪಟುಗಳಿಂದ ಅಮೋಘ ಪ್ರದರ್ಶನ!
ವಿಯೆಟ್ನಾಂನ ಡಾ ನಾಂಗ್ ನಲ್ಲಿ ನಡೆದ 2026 ರ 23 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ನಮ್ಮ ಪುರುಷರ ಫ್ರೀಸ್ಟೈಲ್ ಮತ್ತು ಮಹಿಳಾ ಕುಸ್ತಿ ತಂಡಗಳು ತಂಡ ಪ್ರಶಸ್ತಿ ಜಯಿಸಿವೆ.
ಪುರುಷರ ಫ್ರೀಸ್ಟೈಲ್ ಕುಸ್ತಿ ತಂಡವು 4 ಚಿನ್ನ ಸೇರಿದಂತೆ 9 ಪದಕಗಳನ್ನು ಜಯಿಸಿದ್ದು 23 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್ ಶಿಪ್ ಇತಿಹಾಸದಲ್ಲಿ ಭಾರತ ಅತ್ಯಧಿಕ ಒಟ್ಟಾರೆ ಪದಕ ಜಯಿಸಿದೆ.
ಮಹಿಳಾ ಕುಸ್ತಿ ತಂಡವು 6 ಸ್ವರ್ಣ ಪದಕ ಸೇರಿದಂತೆ 10 ಪದಕಗಳನ್ನು ಗೆದ್ದಿದೆ.
ಗ್ರೀಕೋ-ರೋಮನ್ ತಂಡವು 8 ಪದಕಗಳೊಂದಿಗೆ ತನ್ನ ಅತ್ಯಧಿಕ ಒಟ್ಟಾರೆ ಪದಕ ಗಳಿಕೆ ದಾಖಲಿಸಿದೆ.
ನಮ್ಮ ಕುಸ್ತಿಪಟುಗಳಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು.”
*****
(रिलीज़ आईडी: 2267278)
आगंतुक पटल : 29
इस विज्ञप्ति को इन भाषाओं में पढ़ें:
Telugu
,
Malayalam
,
Marathi
,
Tamil
,
Bengali
,
Assamese
,
Odia
,
English
,
Urdu
,
हिन्दी
,
Manipuri
,
Punjabi
,
Gujarati