ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗೋವಾ ರಾಜ್ಯೋತ್ಸವ ದಿನದಂದು ರಾಜ್ಯದ ಜನತೆಗೆ ಶುಭಾಶಯ ತಿಳಿಸಿದ ಪ್ರಧಾನಮಂತ್ರಿ

प्रविष्टि तिथि: 30 MAY 2026 8:36AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೋವಾ ರಾಜ್ಯೋತ್ಸವ ದಿನದ ಅಂಗವಾಗಿ ರಾಜ್ಯದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ. 

ಗೋವಾ ತನ್ನ ಜೀವಂತ ಸಂಸ್ಕೃತಿ, ಸಮೃದ್ಧ ಪರಂಪರೆ, ನೈಸರ್ಗಿಕ ಸೌಂದರ್ಯ ಹಾಗೂ ಬೇರೆಯವರನ್ನು ಆತ್ಮೀಯವಾಗಿ ಕಾಣುವ ಜನರಿಂದ ವಿಶ್ವಾದ್ಯಂತ ಹೆಸರುವಾಸಿಯಾಗಿದೆ ಎಂದು ಪ್ರಧಾನ ಮಂತ್ರಿ ಶ್ರೀ ಮೋದಿ ಹೇಳಿದ್ದಾರೆ. 

ಗೋವಾ ರಾಜ್ಯದ ಪ್ರಗತಿ ಮತ್ತು ವಿಶಿಷ್ಟ ಗುರುತಿನಿಂದ ನಿರಂತರವಾಗಿ ಶ್ರಮಿಸಿದ ಎಲ್ಲರನ್ನು ಕೃತಜ್ಞತೆಯಿಂದ ಸ್ಮರಿಸಲು ಈ ದಿನವು ಒಂದು ಅವಕಾಶವಾಗಿದೆ. 

ಗೋವಾ ಮುಂದೆಯೂ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಾ, ವಿಕಸಿತ ಭಾರತ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಆಶಿಸಿದ್ದಾರೆ. ಗೋವಾ ರಾಜ್ಯದ ಪ್ರತಿ ನಾಗರಿಕರ ಆರೋಗ್ಯ, ಸುಖ-ಸಮೃದ್ಧಿಗಾಗಿ ಪ್ರಾರ್ಥಿಸುವುದಾಗಿ ಅವರು ಹೇಳಿದ್ದಾರೆ. 

ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನ ಮಂತ್ರಿಗಳು ಹೀಗೆ ಬರೆದುಕೊಂಡಿದ್ದಾರೆ:

“ಗೋವಾ ರಾಜ್ಯೋತ್ಸವ ದಿನದ ಈ ವಿಶೇಷ ಸಂದರ್ಭದಲ್ಲಿ ಗೋವಾ ಜನತೆಗೆ ಶುಭಾಶಯಗಳು. ಗೋವಾ ರಾಜ್ಯದ ಜೀವಂತ ಸಂಸ್ಕೃತಿ, ಸಮೃದ್ಧ ಪರಂಪರೆ, ನೈಸರ್ಗಿಕ ಸೌಂದರ್ಯ ಮತ್ತು ಎಲ್ಲರನ್ನೂ ಆತ್ಮೀಯವಾಗಿ ಕಾಣುವ ಜನರಿಂದ ವ್ಯಾಪಕವಾಗಿ ಪ್ರಸಿದ್ಧರಾಗಿದ್ದಾರೆ. ಈ ದಿನವು ಗೋವಾದ ಪ್ರಗತಿ ಮತ್ತು ಗುರುತಿಗೆ ದಣಿವರಿಯದೆ ಶ್ರಮಿಸಿದ ಎಲ್ಲರನ್ನು ಕೃತಜ್ಞತೆಯಿಂದ ಸ್ಮರಿಸುವ ಅವಕಾಶವೂ ಹೌದು. ಗೋವಾ ರಾಜ್ಯವು ಮುಂದೆಯೂ ಅಭಿವೃದ್ಧಿ ಹೊಂದುತ್ತಾ, ವಿಕಸಿತ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಲಿ. ಗೋವಾ ರಾಜ್ಯದ ಪ್ರತಿಯೊಬ್ಬ ನಾಗರಿಕರ ಉತ್ತಮ ಆರೋಗ್ಯ ಮತ್ತು ಸಮೃದ್ಧಿಗೆ ಈ ಸಮಯದಲ್ಲಿ ಪ್ರಾರ್ಥಿಸುತ್ತೇನೆ.”

 

*****


(रिलीज़ आईडी: 2267242) आगंतुक पटल : 33
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Bengali-TR , Assamese , Manipuri , Punjabi , Gujarati , Odia , Tamil , Telugu , Malayalam