ಆಯುಷ್
ಬಹುಭಾಷಾ ಅಂತಾರಾಷ್ಟ್ರೀಯ ಯೋಗ ದಿನ (ಐಡಿವೈ) 2026 ಕೈಪಿಡಿ ಈಗ ಸಾರ್ವಜನಿಕರಿಗೆ ಲಭ್ಯವಿದೆ
ಅಂತಾರಾಷ್ಟ್ರೀಯ ಯೋಗ ದಿನ, ಸಾಮಾನ್ಯ ಯೋಗ ಶಿಷ್ಟಾಚಾರ ಮತ್ತು ಸಚಿವಾಲಯದ ಉಪಕ್ರಮಗಳ ಕುರಿತು ಸಮಗ್ರ ಮಾರ್ಗದರ್ಶಿ ಈಗ ಇಂಗ್ಲಿಷ್, ಹಿಂದಿ ಮತ್ತು 21 ಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿ ಲಭ್ಯವಿದೆ
ಪ್ರಕಟಣಾ ದಿನಾಂಕ:
26 MAY 2026 3:46PM by PIB Bengaluru
ಅಂತಾರಾಷ್ಟ್ರೀಯ ಯೋಗ ದಿನ (ಐಡಿವೈ) 2026ರ ಸಿದ್ಧತೆಗಳು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ವೇಗವನ್ನು ಪಡೆದುಕೊಳ್ಳುತ್ತಿದ್ದಂತೆ, ಕೇಂದ್ರ ಆಯುಷ್ ಸಚಿವಾಲಯವು “ಐಡಿವೈ ಕೈಪಿಡಿ 2026” ಅನ್ನು ಆಚರಣೆಗೆ ಸಂಬಂಧಿಸಿದ ಎಲ್ಲಾ ಪಾಲುದಾರರಿಗೆ ಸಮಗ್ರ ಸಂಪನ್ಮೂಲವಾಗಿ ಪ್ರಸ್ತುತಪಡಿಸುತ್ತದೆ. ಸಂಘಟಕರು, ಸಂಸ್ಥೆಗಳು, ಯೋಗ ಸಾಧಕರು, ಸರ್ಕಾರಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಮುದಾಯ ಗುಂಪುಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾದ ಬಹುಭಾಷಾ ಕೈಪಿಡಿಯು ಅಂತಾರಾಷ್ಟ್ರೀಯ ಯೋಗ ದಿನ (ಐಡಿವೈ) , ಸಾಮಾನ್ಯ ಯೋಗ ಶಿಷ್ಟಾಚಾರ (ಸಿವೈಪಿ), ಸಚಿವಾಲಯದ ಉಪಕ್ರಮಗಳು ಮತ್ತು ಸಾರ್ವಜನಿಕ ಭಾಗವಹಿಸುವಿಕೆಯ ಅವಕಾಶಗಳ ಕುರಿತು ಅಗತ್ಯ ಮಾಹಿತಿಯನ್ನು ಒಂದು ಕೈಪಿಡಿ ಕೋಷ್ಟಕ ರೀತಿಯಲ್ಲಿ ಒಟ್ಟುಗೂಡಿಸುತ್ತದೆ.

ಇಂಗ್ಲಿಷ್, ಹಿಂದಿ ಮತ್ತು 21 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುವ ಈ ಕೈಪಿಡಿ, ಅಂತಾರಾಷ್ಟ್ರೀಯ ಯೋಗ ದಿನ, ಸಾಮಾನ್ಯ ಯೋಗ ಶಿಷ್ಟಾಚಾರ (ಸಿವೈಪಿ), ಪ್ರಮುಖ ಸಚಿವಾಲಯದ ಉಪಕ್ರಮಗಳು ಮತ್ತು ಅಂತಾರಾಷ್ಟ್ರೀಯ ಯೋಗ ದಿನ (ಐಡಿವೈ) 2026 ಕ್ಕೆ ಸಂಬಂಧಿಸಿದ ಸಾರ್ವಜನಿಕ ಭಾಗವಹಿಸುವಿಕೆಯ ಅವಕಾಶಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಒಂದೇ ಉಲ್ಲೇಖ ಕೈಪಿಡಿ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.
ಯೋಗ ಮತ್ತು ಅಂತಾರಾಷ್ಟ್ರೀಯ ಯೋಗ ದಿನ (ಐಡಿವೈ) ಕುರಿತು ಅಧಿಕೃತ ಮಾಹಿತಿಯನ್ನು ಬಹು ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುವ ಮೂಲಕ ಪ್ರವೇಶವನ್ನು ಹೆಚ್ಚಿಸಲು ಮತ್ತು ವ್ಯಾಪಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಪ್ರಕಟಣೆಯು ಪ್ರಯತ್ನಿಸುತ್ತದೆ. ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಯೋಗ ಸಂಬಂಧಿತ ಚಟುವಟಿಕೆಗಳನ್ನು ಆಯೋಜಿಸುವಲ್ಲಿ ತೊಡಗಿರುವ ಸಮುದಾಯ ಗುಂಪುಗಳು ಸೇರಿದಂತೆ ದೇಶಾದ್ಯಂತ ಪಾಲುದಾರರನ್ನು ಬೆಂಬಲಿಸುವ ಉದ್ದೇಶವನ್ನು ಇದು ಹೊಂದಿದೆ.
2014ರಲ್ಲಿ ವಿಶ್ವಸಂಸ್ಥೆಯು ಅಳವಡಿಸಿಕೊಂಡಾಗಿನಿಂದ ಅಂತಾರಾಷ್ಟ್ರೀಯ ಯೋಗ ದಿನದ ವಿಕಸನದ ಅವಲೋಕನವನ್ನು ಕೈಪಿಡಿ ಒದಗಿಸುತ್ತದೆ ಮತ್ತು ಅಂತಾರಾಷ್ಟ್ರೀಯ ಯೋಗ ದಿನ (ಐಡಿವೈ) 2026 ಕ್ಕಾಗಿ ಯೋಜಿಸಲಾದ ಪ್ರಮುಖ ಉಪಕ್ರಮಗಳನ್ನು ವಿವರಿಸುತ್ತದೆ. ಇದು 21 ಜೂನ್ 2026 ರವರೆಗೆ ನಡೆಯುವ ನಿಗದಿತ ಕೌಂಟ್ಡೌನ್ ಚಟುವಟಿಕೆಗಳೊಂದಿಗೆ ಸಚಿವಾಲಯದ ಮಹತ್ವದ(ಸಿಗ್ನೇಚರ್) ಕಾರ್ಯಕ್ರಮಗಳಾದ ಯೋಗ ಸಂಗಮ, ಹರಿತ್ ಯೋಗ, ಯೋಗ ಸಮಾವೇಶ, ಯೋಗ ಪಾರ್ಕ್ ಮತ್ತು ಯೋಗ ಅನ್‌ಪ್ಲಗ್ ಗಳ ವಿವರಗಳನ್ನು ಒಳಗೊಂಡಿದೆ.
ಮಾಹಿತಿ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ಕೈಪಿಡಿ ಪ್ರಾಯೋಗಿಕ ಡಿಜಿಟಲ್ ಟೂಲ್ ಕಿಟ್ನಂತೆ ಕಾರ್ಯನಿರ್ವಹಿಸುತ್ತದೆ. ಇದು ಕ್ಯೂಆರ್ ಕೋಡ್ ಗಳು ಮತ್ತು ಬೋಧನಾ ಸಾಮಗ್ರಿಗಳಿಗೆ ಲಿಂಕ್ ಗಳನ್ನು ಒದಗಿಸುತ್ತದೆ, ಇದರಲ್ಲಿ ಇಂಗ್ಲಿಷ್, ಹಿಂದಿ ಮತ್ತು 21 ಪ್ರಾದೇಶಿಕ ಭಾಷೆಗಳಲ್ಲಿ ಸಾಮಾನ್ಯ ಯೋಗ ಶಿಷ್ಟಾಚಾರ ವೀಡಿಯೊಗಳು ಸೇರಿವೆ, ಇದು ದೇಶಾದ್ಯಂತ ನಾಗರಿಕರು ಪ್ರಮಾಣೀಕೃತ ಯೋಗ ಮಾರ್ಗದರ್ಶನವನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ.
MyGov ಮೂಲಕ ಆಯೋಜಿಸಲಾದ ಸ್ಪರ್ಧೆಗಳು ಸೇರಿದಂತೆ ವಿವಿಧ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆ ಚಟುವಟಿಕೆಗಳು ಮತ್ತು ಭಾಗವಹಿಸುವಿಕೆಯ ಅವಕಾಶಗಳ ಮಾಹಿತಿಯನ್ನು ಸಹ ಈ ಯೋಗ ಕೈಪಿಡಿಯು ಹೊಂದಿದೆ, ಇದು ನಾಗರಿಕರು ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2026 ಇದರ ಆಚರಣೆಯಲ್ಲಿ ಸಕ್ರಿಯ ಪಾಲುದಾರರಾಗಲು ಪ್ರೋತ್ಸಾಹಿಸುತ್ತದೆ.
ಕೈಪಿಡಿಯನ್ನು ಇಲ್ಲಿ ಪಡೆಯಬಹುದು: IDY Handbook 2026
*****
(ಪ್ರಕಟಣೆ ಐ.ಡಿ.: 2265534)
ವಿಸಿಟರ್ ಕೌಂಟರ್ : 2