ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಖಾದ್ಯ ತೈಲಗಳ ವಿವಿಧ ಪ್ಯಾಕ್ ಗಾತ್ರಗಳ ಕುರಿತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಪಾಲುದಾರರ ಸಭೆ
ಪ್ರಮುಖ ಖಾದ್ಯ ತೈಲಗಳಿಗೆ ಪ್ರಮಾಣಿತ ಪ್ಯಾಕ್ ಗಾತ್ರಗಳನ್ನು ಪರಿಚಯಿಸಲು ಉದ್ಯಮ ಸಂಘಗಳನಡುವೆ ಒಮ್ಮತ
ಗ್ರಾಹಕರಿಗೆ ಪಾರದರ್ಶಕತೆಯನ್ನು ಸುಧಾರಿಸಲು ಮತ್ತು ಬೆಲೆ ಹೋಲಿಕೆಯನ್ನು ಸುಲಭಗೊಳಿಸಲು ಖಾದ್ಯ ತೈಲಗಳಿಗೆ ಪ್ರಮಾಣಿತ ಪ್ಯಾಕ್ ಗಾತ್ರಗಳನ್ನು ನಿಗದಿಪಡಿಸುವ ಸಾಧ್ಯತೆಯನ್ನು ಇಲಾಖೆ ಪರಿಶೀಲಿಸುತ್ತಿದೆ
ಸಲಹೆಗಳಲ್ಲಿ 200 ಮಿಲಿ ಯಿಂದ 20 ಲೀಟರ್/20 ಕೆಜಿ ವರೆಗಿನ ಪ್ರಮಾಣಿತ ಪ್ಯಾಕ್ ಗಾತ್ರಗಳು ಸೇರಿವೆ
प्रविष्टि तिथि:
25 MAY 2026 7:04PM by PIB Bengaluru
ರಾಷ್ಟ್ರದ ಖಾದ್ಯ ತೈಲ ವಲಯದ ಸುಮಾರು ಶೇಕಡಾ 90 ರಷ್ಟನ್ನು ಪ್ರತಿನಿಧಿಸುವ ಪ್ರಮುಖ ಉದ್ಯಮ ಸಂಘಗಳಿಂದ ಬಂದ ಸಲಹೆಗಳ ಹಿನ್ನೆಲೆಯಲ್ಲಿ, ಗ್ರಾಹಕ ವ್ಯವಹಾರಗಳ ಇಲಾಖೆಯು ಕಾನೂನು ಮಾಪನಶಾಸ್ತ್ರ ಚೌಕಟ್ಟಿನಡಿಯಲ್ಲಿ ಖಾದ್ಯ ತೈಲಗಳಿಗೆ ಪ್ರಮಾಣಿತ ಪ್ಯಾಕ್ ಗಾತ್ರಗಳನ್ನು ಪರಿಚಯಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಕೇಜ್ ಗಾತ್ರಗಳ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಇದರಿಂದಾಗಿ ಗ್ರಾಹಕರು ವಿವಿಧ ಉತ್ಪನ್ನಗಳ ಬೆಲೆಗಳನ್ನು ಹೋಲಿಕೆ ಮಾಡಲು ಎದುರಿಸುತ್ತಿರುವ ತೊಂದರೆಗಳ ಕುರಿತು ಚರ್ಚಿಸಲು ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಮೇ 20, 2026 ರಂದು ಪ್ರಮುಖ ಖಾದ್ಯ ತೈಲ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಯಿತು.
ಭಾರತೀಯ ತರಕಾರಿ ಉತ್ಪಾದಕರ ಸಂಘ (ಐವಿಪಿಎ), ದ್ರಾವಕ ಹೊರತೆಗೆಯುವವರ ಸಂಘ (ಎಸ್ ಇ ಎ), ಸೋಯಾಬೀನ್ ಸಂಸ್ಕಾರಕರ ಸಂಘ (ಎಸ್ ಒಪಿಎ), ತೈಲ ಕೈಗಾರಿಕೆ ಮತ್ತು ವ್ಯಾಪಾರಕ್ಕಾಗಿ ಕೇಂದ್ರ ಸಂಸ್ಥೆ (ಸಿಒಒಐಟಿ) ಮತ್ತು ಸಾಸಿವೆ ಎಣ್ಣೆ ಉತ್ಪಾದಕರ ಸಂಘ (ಎಂಒಪಿಎ) ಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂಘಗಳು ದೇಶದಲ್ಲಿ ಖಾದ್ಯ ತೈಲ ವಲಯದ ಸುಮಾರು 90 ಪ್ರತಿಶತವನ್ನು ಒಟ್ಟಾಗಿ ಪ್ರತಿನಿಧಿಸುತ್ತವೆ ಎಂದು ತಿಳಿಸಿವೆ.
ಸಭೆಯಲ್ಲಿ, ಖಾದ್ಯ ತೈಲಗಳನ್ನು ಪ್ರಸ್ತುತ 650 ಗ್ರಾಂ, 700 ಗ್ರಾಂ, 810 ಗ್ರಾಂ, 850 ಗ್ರಾಂ ಮತ್ತು 870 ಗ್ರಾಂ ನಂತಹ ವಿವಿಧ ಪ್ಯಾಕೇಜ್ ಪ್ರಮಾಣಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಉದ್ಯಮದ ಪ್ರತಿನಿಧಿಗಳು ಗಮನಸೆಳೆದರು. ವಿಭಿನ್ನ ಪ್ರಮಾಣಗಳನ್ನು ಹೊಂದಿರುವ, ನೋಡಲು ಒಂದೇ ತರಹ ಕಾಣುವ ಪ್ಯಾಕ್ಗಳು ಬೆಲೆಗಳನ್ನು ಹೋಲಿಕೆ ಮಾಡಲು ಮತ್ತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಗ್ರಾಹಕರನ್ನು ದಾರಿ ತಪ್ಪಿಸುವ ಸಾಧ್ಯತೆ ಇರುತ್ತದೆ ಎಂದು ಅವರು ತಿಳಿಸಿದರು.
ಪ್ರಮುಖ ಖಾದ್ಯ ತೈಲಗಳಿಗೆ ಪ್ರಮಾಣಿತ ಪ್ಯಾಕ್ ಗಾತ್ರಗಳನ್ನು ಪರಿಚಯಿಸುವ ಬಗ್ಗೆ ಇಲಾಖೆಯು ಜಂಟಿಯಾಗಿ ಚರ್ಚಿಸಿತು.
ಸಂಘಗಳು ಸೂಚಿಸಿರುವ ಪ್ಯಾಕ್ ಗಾತ್ರಗಳು:
- 200 ಮಿಲಿ
- 500 ಮಿಲಿ
- 1 ಲೀಟರ್
- 2 ಲೀಟರ್
- 3 ಲೀಟರ್
- 4 ಲೀಟರ್
- 5 ಲೀಟರ್
- 15 ಲೀಟರ್/15 ಕೆಜಿ
- 20 ಲೀಟರ್/20 ಕೆಜಿ
ಈ ಕೆಳಗಿನ ಪ್ರಮುಖ ಖಾದ್ಯ ತೈಲಗಳನ್ನು ಇದಕ್ಕೆ ಒಳಪಡಿಸಲು ಸಂಘಗಳು ಜಂಟಿಯಾಗಿ ವಿನಂತಿಸಿವೆ:
- ಪಾಮ್ ಆಯಿಲ್ / ಪಾಮ್ ಒಲಿನ್
- ಸೋಯಾಬೀನ್ ಎಣ್ಣೆ
- ಸೂರ್ಯಕಾಂತಿ ಎಣ್ಣೆ
- ಸಾಸಿವೆ / ರೇಪ್ಸೀಡ್ ಎಣ್ಣೆ
- ಕಡಲೆಕಾಯಿ ಎಣ್ಣೆ
- ಎಳ್ಳೆಣ್ಣೆ
- ಅಕ್ಕಿ ಹೊಟ್ಟು ಎಣ್ಣೆ(ರೈಸ್ ಬ್ರಾನ್ ಆಯಿಲ್)
- ಹತ್ತಿಬೀಜದ ಎಣ್ಣೆ
- ಜೋಳದ ಎಣ್ಣೆ
- ಮಿಶ್ರ ಖಾದ್ಯ ತೈಲಗಳು
ಸಂಘಗಳ ಇತರ ಸಲಹೆಗಳು:
- ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಣ್ಣ ಪ್ಯಾಕ್ ಗಳು ನಿರಂತರವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು, 200 ಮಿಲಿಗಿಂತ ಕಡಿಮೆ ಇರುವ ಪ್ಯಾಕ್ ಗಳನ್ನು ಈ ಪ್ರಮಾಣೀಕರಣದ ವ್ಯಾಪ್ತಿಯಿಂದ ಹೊರಗಿಡಬಹುದು.
- ಸಣ್ಣ ಖಾದ್ಯ ತೈಲಗಳಿಗೆ ಈ ಪ್ರಸ್ತಾಪಿತ ನಿಯಮದಿಂದ ವಿನಾಯಿತಿ ನೀಡಬಹುದು.
- ಉತ್ಪಾದಕರಿಗೆ ಅಗತ್ಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಸರಿಸುಮಾರು ಮೂರು ತಿಂಗಳ ಪರಿವರ್ತನಾ ಅವಧಿಯನ್ನು ನೀಡಬಹುದು.
- ಪ್ರಸ್ತಾಪಿತ ಪ್ಯಾಕ್ ಗಾತ್ರಗಳನ್ನು ಮೊದಲೇ ಅಳವಡಿಸಿಕೊಳ್ಳಲು ಇಚ್ಛಿಸುವ ಉತ್ಪಾದಕರಿಗೆ ಹಾಗೆ ಮಾಡಲು ಅನುಮತಿ ನೀಡಬಹುದು.
ಇಂತಹ ನಿಯಮವನ್ನು ಪರಿಚಯಿಸಿದರೆ, ಅದು ದೇಶೀಯವಾಗಿ ತಯಾರಿಸಿದ ಮತ್ತು ಆಮದು ಮಾಡಿಕೊಂಡ ಎರಡೂ ಖಾದ್ಯ ತೈಲಗಳಿಗೆ ಸಮಾನವಾಗಿ ಅನ್ವಯಿಸುತ್ತದೆ ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು. ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಗಳು, ಪಾರದರ್ಶಕತೆಯನ್ನು ಸುಧಾರಿಸಲು, ಗ್ರಾಹಕರಿಗೆ ಬೆಲೆ ಹೋಲಿಕೆಯನ್ನು ಸುಲಭಗೊಳಿಸಲು ಮತ್ತು ನ್ಯಾಯಯುತ ವ್ಯಾಪಾರ ಪದ್ಧತಿಗಳನ್ನು ಬೆಂಬಲಿಸಲು ಉದ್ಯಮಗಳ ಸಂಘಗಳಿಂದ ಬಂದಿರುವ ಸಲಹೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಹಕ ವ್ಯವಹಾರಗಳ ಇಲಾಖೆಯು ಸಮಾಲೋಚನೆಯ ಸಂದರ್ಭದಲ್ಲಿ ಬಂದಿರುವ ಅಭಿಪ್ರಾಯಗಳನ್ನು ಪರಿಶೀಲಿಸುತ್ತಿದ್ದು, ಸಮತೋಲಿತ ಮತ್ತು ಪ್ರಾಯೋಗಿಕ ನೀತಿ ಕ್ರಮಗಳ ಮೂಲಕ ಗ್ರಾಹಕ ರಕ್ಷಣೆಯನ್ನು ಬಲಪಡಿಸಲು ಮತ್ತು ಮಾರುಕಟ್ಟೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ.
*****
(रिलीज़ आईडी: 2265443)
आगंतुक पटल : 55