ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಸೆಮಿಕಂಡಕ್ಟರ್ ಕ್ಷೇತ್ರದ ಪ್ರಮುಖರು ಮತ್ತು ಹೂಡಿಕೆದಾರರಿಗೆ ಬೆಂಬಲವನ್ನು ನೀಡಲು ಭಾರತೀಯ ಸೆಮಿಕಂಡಕ್ಟರ್ ಮಿಷನ್ (ಐಎಸ್ ಎಂ), ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ “ಹೂಡಿಕೆದಾರರಿಗೆ ಬೆಂಬಲ (ಇನ್ವೆಸ್ಟರ್ಸ್ ಸಪೋರ್ಟ್) “ಪೋರ್ಟಲ್ ಗೆ ಚಾಲನೆ
ಪ್ರಕಟಣಾ ದಿನಾಂಕ:
26 MAY 2026 11:47AM by PIB Bengaluru
ವಿವಿಧ ಕಾರ್ಯತಂತ್ರದ ಉಪಕ್ರಮಗಳು ಮತ್ತು ನೀತಿ ಮಧ್ಯಸ್ಥಿಕೆಗಳ ಮೂಲಕ ದೇಶದಲ್ಲಿ ಚೇತರಿಸಿಕೊಳ್ಳುವ, ವಿಶ್ವಾಸಾರ್ಹ ಮತ್ತು ಸುಸ್ಥಿರ ಸೆಮಿಕಂಡಕ್ಟರ್ (ಅರೆವಾಹಕ) ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರವು ನಿರಂತರ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ. ಸೆಮಿಕಾನ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ, ಇದುವರೆಗೆ 24 ಸೆಮಿಕಂಡಕ್ಟರ್ಸ್ ವಿನ್ಯಾಸ ಯೋಜನೆಗಳೊಂದಿಗೆ 12 ಫ್ಯಾಬ್ ಮತ್ತು ಪ್ಯಾಕೇಜಿಂಗ್ ಯೋಜನೆಗಳನ್ನು ಅನುಮೋದಿಸಲಾಗಿದೆ.
ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ದೃಷ್ಟಿಯೊಂದಿಗೆ, ಭಾರತೀಯ ಸೆಮಿಕಂಡಕ್ಟರ್ ಮಿಷನ್ 26.5.2026 ರಂದು “ಇನ್ವೆಸ್ಟರ್ಸ್ ಸಪೋರ್ಟ್” ಹೆಸರಿನ ಆನ್ ಲೈನ್ ಪೋರ್ಟಲ್ ಗೆ ಚಾಲನೆ ನೀಡಿದೆ, ಇದನ್ನು https://www.ism.gov.in/investment. ನಲ್ಲಿ ಕಾಣಬಹುದು.
ಭಾರತದಲ್ಲಿ ಹೂಡಿಕೆ ಮಾಡಲು ಪರಿಗಣಿಸುತ್ತಿರುವ ಹೂಡಿಕೆದಾರರಿಗೆ ಸರ್ಕಾರಿ ಯೋಜನೆಗಳು, ನೀತಿಗಳು, ಸೆಮಿಕಾನ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಅನುಮೋದಿತ ಯೋಜನೆಗಳು, ನಿಯಂತ್ರಕ ಅವಶ್ಯಕತೆಗಳು ಮುಂತಾದವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಪೋರ್ಟಲ್ ಹೂಡಿಕೆದಾರರು ತಮ್ಮ ಕುಂದುಕೊರತೆಗಳನ್ನು ಮತ್ತು ಸಮಸ್ಯೆಗಳನ್ನು ನೋಂದಾಯಿಸಲು ಅನುವು ಮಾಡಿಕೊಡುತ್ತದೆ. ಇವುಗಳನ್ನು ಸಂಬಂಧಪಟ್ಟ ಸಚಿವಾಲಯಗಳು, ಇಲಾಖೆಗಳು, ಸಂಸ್ಥೆಗಳು, ರಾಜ್ಯ ಸರ್ಕಾರಗಳು, ಅನುಮೋದಿತ ಯೋಜನಾ ಕಂಪನಿಗಳು ಮತ್ತು ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ವ್ಯಾಪಾರ ಸಂಸ್ಥೆಗಳು ಮತ್ತು ಸಂಘಗಳ ನೋಡಲ್ ಅಧಿಕಾರಿಗಳ ಬೆಂಬಲದೊಂದಿಗೆ ಭಾರತೀಯ ಸೆಮಿಕಂಡಕ್ಟರ್ ಮಿಷನ್ (ಐ ಎಸ್ ಎಂ) ಅಧಿಕಾರಿಗಳು ಪರಿಹರಿಸುತ್ತಾರೆ.
ಉದ್ಘಾಟನಾ ಸಮಾರಂಭದಲ್ಲಿ, ಐ ಎಸ್ ಎಂ ನ ಸಿಇಒ ಶ್ರೀ ಅಮಿತೇಶ್ ಕುಮಾರ್ ಸಿನ್ಹಾ ಅವರು ವಿದೇಶಿ ಹೂಡಿಕೆದಾರರಿಗೆ ಬೆಂಬಲಿಸುವ ಮತ್ತು ಸುಗಮಗೊಳಿಸುವಿಕೆಯ ಮಹತ್ವವನ್ನು ಒತ್ತಿಹೇಳಿದರು. ಹಾಗೂ ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ವಿನ್ಯಾಸದ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಹೂಡಿಕೆದಾರರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಲ್ಲಾ ಸಂಬಂಧಿತ ಪಾಲುದಾರರ ಪ್ರತಿನಿಧಿಗಳು ತಮ್ಮ ಪಾತ್ರಗಳನ್ನು ಪೂರ್ವಭಾವಿಯಾಗಿ ನಿರ್ವಹಿಸುವಂತೆ ಒತ್ತಾಯಿಸಿದರು.
ಸಂಬಂಧಿತ ಪಾಲುದಾರರು ಸುವ್ಯವಸ್ಥಿತ ಸಮನ್ವಯ ಮತ್ತು ಸಮಸ್ಯೆಗಳ ಸಮಯೋಚಿತ ಪರಿಹಾರಕ್ಕಾಗಿ ಸುರಕ್ಷಿತ, ಪಾತ್ರ ಆಧಾರಿತ, ಏಕ ಗವಾಕ್ಷಿ ಡಿಜಿಟಲ್ ಸಂಪರ್ಕ ಸಂವಹನವನ್ನು ಪಡೆಯಲಿದ್ದಾರೆ.
ಈ ಉದ್ಘಾಟನಾ ಸಮಾರಂಭವು ಪೋರ್ಟಲ್ ನ ಚೌಕಟ್ಟು, ಕಾರ್ಯನಿರ್ವಹಣೆಗಳು, ಉಪಯೋಗಿಸುವ ಪ್ರಕ್ರಿಯೆ, ಸಮನ್ವಯ ಕಾರ್ಯವಿಧಾನಗಳು ಮತ್ತು ಸಂಬಂಧಪಟ್ಟ ಸಚಿವಾಲಯಗಳು, ಇಲಾಖೆಗಳು, ಸಂಸ್ಥೆಗಳು, ರಾಜ್ಯ ಸರ್ಕಾರಗಳು, ಅನುಮೋದಿತ ಯೋಜನಾ ಕಂಪನಿಗಳು, ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ವ್ಯಾಪಾರ ಸಂಸ್ಥೆಗಳು ಮತ್ತು ಸಂಘಗಳ ನೋಡಲ್ ಅಧಿಕಾರಿಗಳ ಪಾತ್ರ ಮತ್ತು ಜವಾಬ್ದಾರಿಗಳ ಅವಲೋಕನ ಹಾಗೂ ಪ್ರಾತ್ಯಕ್ಷಿಕೆಯನ್ನು ಒಳಗೊಂಡಿತ್ತು.
*****
(ಪ್ರಕಟಣೆ ಐ.ಡಿ.: 2265347)
ವಿಸಿಟರ್ ಕೌಂಟರ್ : 6