ಲೋಕಸಭಾ ಸಚಿವಾಲಯ
azadi ka amrit mahotsav

ನ್ಯಾಯಾಧೀಶರ ವಿಚಾರಣಾ ಸಮಿತಿಯು ಗೌರವಾನ್ವಿತ ಲೋಕಸಭಾ ಸ್ಪೀಕರ್ ಅವರಿಗೆ ವರದಿಯನ್ನು ಸಲ್ಲಿಸಿದೆ

ಪ್ರಕಟಣಾ ದಿನಾಂಕ: 18 MAY 2026 9:31PM by PIB Bengaluru

ನ್ಯಾಯಾಧೀಶರ ವಿಚಾರಣಾ ಸಮಿತಿಯು ಇಂದು ಸಂಸತ್ ಭವನದಲ್ಲಿ ಲೋಕಸಭಾ ಅಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರಿಗೆ ತನ್ನ ವರದಿಯನ್ನು ಸಲ್ಲಿಸಿತು. ನ್ಯಾಯಾಧೀಶರ (ವಿಚಾರಣಾ) ಕಾಯ್ದೆ, 1968ರ ಅಡಿಯಲ್ಲಿ ಶಾಸನಬದ್ಧ ಅವಶ್ಯಕತೆಗಳಿಗೆ ಅನುಗುಣವಾಗಿ ಸಲ್ಲಿಸಲಾದ ವರದಿಯನ್ನು ಸಂಸತ್ತಿನ ಎರಡೂ ಸದನಗಳ ಮುಂದೆ ಸಕಾಲದಲ್ಲಿ ಮಂಡಿಸಲಾಗುವುದು.

ನ್ಯಾಯಾಧೀಶರ ವಿಚಾರಣಾ ಸಮಿತಿಯ ಅಧ್ಯಕ್ಷರಾದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಅರವಿಂದ್ ಕುಮಾರ್ ಅವರು, ಭಾರತದ ಸರ್ವೋಚ್ಚ ನ್ಯಾಯಾಲಯದ ಮತ್ತು ಬಾಂಬೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಶ್ರೀ ಬಿ.ವಿ. ಆಚಾರ್ಯ ಅವರೊಂದಿಗೆ,  ನ್ಯಾಯಾಧೀಶರ ವಿಚಾರಣಾ ಸಮಿತಿಯ ತನ್ನ ವರದಿಯನ್ನು ಮಾನ್ಯ ಲೋಕಸಭಾ ಅಧ್ಯಕ್ಷರಿಗೆ ಸಂಸತ್ ಭವನದಲ್ಲಿ ಮೇ 18, 2026 ರಂದು ಮಂಡಿಸಿದರು.

ಈ ಸಮಿತಿಯನ್ನು ಆಗಸ್ಟ್ 12, 2025 ರಂದು ಮಾನ್ಯ ಲೋಕಸಭಾ ಅಧ್ಯಕ್ಷರು ರಚಿಸಿದ್ದರು.

 

*****


(ಪ್ರಕಟಣೆ ಐ.ಡಿ.: 2262578) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Gujarati , Tamil