ರಕ್ಷಣಾ ಸಚಿವಾಲಯ
ರಕ್ಷಣಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪಶ್ಚಿಮ ಏಷ್ಯಾ ಕುರಿತಾದ ಸಚಿವರ ಅನೌಪಚಾರಿಕ ಗುಂಪಿನ (ಐಜಿಒಎಂ) 5ನೇ ಸಭೆಯ ಮುಖ್ಯಾಂಶಗಳು: ಯಾವುದೇ ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಿಲ್ಲ; ಭಾರತದ ಬಳಿ 60 ದಿನಗಳ ಕಚ್ಚಾ ತೈಲ, 60 ದಿನಗಳ ನೈಸರ್ಗಿಕ ಅನಿಲ ಮತ್ತು 45 ದಿನಗಳ ಎಲ್ ಪಿ ಜಿ ದಾಸ್ತಾನು ಲಭ್ಯವಿದೆ
ಪ್ರಸ್ತುತ ಉಳಿತಾಯ ಕ್ರಮಗಳು ದೀರ್ಘಾವಧಿಯ ಸಾಮರ್ಥ್ಯ ವೃದ್ಧಿಯ ಉದ್ದೇಶವನ್ನು ಹೊಂದಿವೆ
ಪೂರೈಕೆ ಸರಪಳಿ ವ್ಯತ್ಯಯವಾಗದಂತೆ ತಡೆಯಲು ಎಲ್ಲಾ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ, ಸಾರ್ವಜನಿಕರು ಶಾಂತರಾಗಿರಬೇಕು: ಶ್ರೀ ರಾಜನಾಥ್ ಸಿಂಗ್
“ಇಂಧನ ಹರಿವು ಅಡೆತಡೆಯಿಲ್ಲದೆ ಸಾಗುವಂತೆ ನೋಡುವುದು, ಆರ್ಥಿಕ ಸ್ಥಿರತೆಯನ್ನು ಕಾಪಾಡುವುದು ಮತ್ತು ಕಡಲ ವ್ಯಾಪಾರ ಮಾರ್ಗಗಳನ್ನು ಸುರಕ್ಷಿತವಾಗಿಡುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ”
“ಕಾರ್ಯತಂತ್ರದ ಬಿಕ್ಕಟ್ಟಿನ ಮುನ್ಸೂಚನೆ, ಆರಂಭಿಕ ಎಚ್ಚರಿಕೆ ಮೌಲ್ಯಮಾಪನ, ಸನ್ನಿವೇಶ ಯೋಜನೆ ಮತ್ತು ಸಮಯೋಚಿತವಾಗಿ ಇಡೀ ಸರ್ಕಾರದ ಸನ್ನದ್ಧತೆಯ ಮೇಲೆ ಗಮನಹರಿಸುವ ಅಗತ್ಯವಿದೆ”
ಪ್ರಕಟಣಾ ದಿನಾಂಕ:
11 MAY 2026 4:06PM by PIB Bengaluru
ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಮೇ 11, 2026 ರಂದು ನವದೆಹಲಿಯ ಕರ್ತವ್ಯ ಭವನ-2 ರಲ್ಲಿ ಪಶ್ಚಿಮ ಏಷ್ಯಾ ಕುರಿತಾದ ಸಚಿವರ ಅನೌಪಚಾರಿಕ ಗುಂಪಿನ (ಐಜಿಒಎಂ) 5ನೇ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯು ಸಂಘರ್ಷದ ಇತ್ತೀಚಿನ ಬೆಳವಣಿಗೆಗಳನ್ನು ಪರಾಮರ್ಶಿಸಿತು ಮತ್ತು ಜನರ ಮೇಲೆ ಇದರ ಪ್ರಭಾವ ಕನಿಷ್ಠ ಮಟ್ಟದಲ್ಲಿರುವಂತೆ ನೋಡಿಕೊಳ್ಳಲು ಭಾರತದ ಸನ್ನದ್ಧತೆಯನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿತು.
ಸಭೆಯಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ; ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ; ರೈಲ್ವೆ, ವಾರ್ತಾ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್; ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು; ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು; ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್ ಅವರು ಭಾಗವಹಿಸಿದ್ದರು.

ಹೆಚ್ಚಿನ ರಾಷ್ಟ್ರಗಳು ದೇಶೀಯ ಬಳಕೆಯನ್ನು ತೀವ್ರವಾಗಿ ಕಡಿಮೆ ಮಾಡಲು ತುರ್ತು ಕ್ರಮಗಳನ್ನು ತೆಗೆದುಕೊಂಡಿದ್ದರೂ ಸಹ, ಭಾರತವು ಸುರಕ್ಷಿತವಾಗಿದೆ ಮತ್ತು ಯಾವುದೇ ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಿಲ್ಲ ಎಂದು ಸಭೆಯಲ್ಲಿ ತಿಳಿಸಲಾಯಿತು. ಭಾರತದ ಬಳಿ 60 ದಿನಗಳ ಕಚ್ಚಾ ತೈಲ, 60 ದಿನಗಳ ನೈಸರ್ಗಿಕ ಅನಿಲ ಮತ್ತು 45 ದಿನಗಳ ಎಲ್ ಪಿ ಜಿ ದಾಸ್ತಾನು ಇದೆ. ವಿದೇಶಿ ವಿನಿಮಯ ಮೀಸಲು 703 ಬಿಲಿಯನ್ ಡಾಲರ್ ಗಳಷ್ಟಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಸಂಸ್ಕರಣಾಗಾರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ನಾಲ್ಕನೇ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿದ್ದು, 150 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ ಮತ್ತು ದೇಶೀಯ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸುತ್ತಿದೆ. ಆದರೆ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ತೀವ್ರ ಮಟ್ಟದಲ್ಲಿ ಮುಂದುವರಿಯುತ್ತಿರುವುದರಿಂದ ರಾಷ್ಟ್ರವು ಭಾರಿ ವೆಚ್ಚವನ್ನು ಭರಿಸುತ್ತಿದೆ. ಇಂಧನ ಸಂರಕ್ಷಣೆಯು ಈ ಹೊರೆಯನ್ನು ಕಡಿಮೆ ಮಾಡಬಲ್ಲದು. ಅಂತರರಾಷ್ಟ್ರೀಯ ಸಂಘರ್ಷಗಳಿಂದ ಉಂಟಾಗುವ ಜಾಗತಿಕ ಆರ್ಥಿಕ ಅಡೆತಡೆಗಳು, ಪೂರೈಕೆ ಸರಪಳಿ ಸವಾಲುಗಳು ಮತ್ತು ಏರುತ್ತಿರುವ ಬೆಲೆಗಳನ್ನು ಎದುರಿಸಲು ಜನರ ಸಾಮೂಹಿಕ ಸಹಭಾಗಿತ್ವಕ್ಕಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿರುವ ಕರೆಯನ್ನು ಈ ಸಭೆಯಲ್ಲಿ ಒತ್ತಿಹೇಳಲಾಯಿತು. ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಲ್ಲಿ ವಿವೇಕ ಮತ್ತು ವ್ಯರ್ಥ ಬಳಕೆಯನ್ನು ಕಡಿಮೆ ಮಾಡುವುದರಿಂದ ದೇಶದ ಮೇಲಿನ ಹಣಕಾಸಿನ ಹೊರೆಯನ್ನು ಈಗ ಮತ್ತು ಭವಿಷ್ಯದಲ್ಲಿ ತಗ್ಗಿಸಬಹುದು.
ಸಂಘರ್ಷ ಆರಂಭವಾಗಿ 70 ದಿನಗಳಿಗೂ ಹೆಚ್ಚು ಕಾಲ ಕಳೆದಿದ್ದರೂ ಜಾಗತಿಕ ಏರಿಳಿತದ ನಡುವೆಯೂ ಪೆಟ್ರೋಲಿಯಂ ಬೆಲೆಗಳು ಸ್ಥಿರವಾಗಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಅನೇಕ ರಾಷ್ಟ್ರಗಳಲ್ಲಿ ಬೆಲೆಗಳು ಶೇಕಡಾ 30 ರಿಂದ 70 ರಷ್ಟು ಹೆಚ್ಚಾಗಿವೆ. ಆದಾಗ್ಯೂ, ಜಾಗತಿಕ ಬೆಲೆಗಳ ಹೊರೆಯನ್ನು ಭಾರತೀಯ ನಾಗರಿಕರ ಮೇಲೆ ಹಾಕಬಾರದು ಎಂಬ ಉದ್ದೇಶದಿಂದ ಭಾರತದ ತೈಲ ಮಾರುಕಟ್ಟೆ ಕಂಪನಿಗಳು ದಿನಕ್ಕೆ ಸುಮಾರು 1,000 ಕೋಟಿ ರೂಪಾಯಿಗಳ ನಷ್ಟವನ್ನು ಭರಿಸುತ್ತಿವೆ ಮತ್ತು 2026ರ ಮೊದಲ ತ್ರೈಮಾಸಿಕದಲ್ಲಿ ಸುಮಾರು 2 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸಿವೆ. ಜನರು ಆತಂಕಪಡುವ ಅಗತ್ಯವಿಲ್ಲ ಮತ್ತು ನಾಗರಿಕರು ಪೆಟ್ರೋಲ್ ಬಂಕ್ ಗಳಿಗೆ ಮುಗಿಬೀಳುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಜನರಿಗೆ ಅಗತ್ಯ ವಸ್ತುಗಳ ಹೆಚ್ಚುವರಿ ದಾಸ್ತಾನು ಲಭ್ಯವಿದೆ ಮತ್ತು ಬಿಕ್ಕಟ್ಟು ದೀರ್ಘಕಾಲ ಮುಂದುವರಿದರೆ ದೀರ್ಘಾವಧಿಯ ಸಾಮರ್ಥ್ಯ ವೃದ್ಧಿಗಾಗಿ ಪ್ರಸ್ತುತ ಉಳಿತಾಯ ಕ್ರಮಗಳನ್ನು ಯೋಜಿಸಲಾಗಿದೆ ಎಂದು ಸಚಿವರಿಗೆ ತಿಳಿಸಲಾಯಿತು. ಪೂರೈಕೆ ನಿರ್ವಹಣೆ ಉತ್ತಮವಾಗಿದೆ ಮತ್ತು ಜನರು ಗಾಬರಿಯಾಗಬಾರದು ಅಥವಾ ಇಂಧನ ಮತ್ತು ಇತರ ಉತ್ಪನ್ನಗಳನ್ನು ಅತಿಯಾಗಿ ಖರೀದಿಸಬಾರದು ಎಂದು ವಿನಂತಿಸಲಾಗಿದೆ.
ಪ್ರಧಾನಮಂತ್ರಿಯವರ ಮನವಿಯನ್ನು ತಳಮಟ್ಟದಲ್ಲಿ ಜಾರಿಗೊಳಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಕ್ಷಣಾ ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು. ಮೇ 11, 2026 ರಂದು ಪ್ರಧಾನಮಂತ್ರಿಯವರು ಸಾರ್ವಜನಿಕರಿಗೆ ಈ ಕೆಳಗಿನ ಕರೆಗಳನ್ನು ನೀಡಿದ್ದಾರೆ:
- ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸುವ ಮೂಲಕ ಮತ್ತು ಕಾರ್ ಪೂಲಿಂಗ್ ಆಯ್ಕೆ ಮಾಡುವ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಿ.
- ಅನಗತ್ಯ ವಿದೇಶಿ ಪ್ರವಾಸಗಳನ್ನು ತಪ್ಪಿಸಿ, ದೇಶೀಯ ಪ್ರವಾಸೋದ್ಯಮ ಮತ್ತು ಭಾರತದೊಳಗೆ ಆಚರಣೆಗಳನ್ನು ಆರಿಸಿಕೊಳ್ಳುವ ಮೂಲಕ ವಿದೇಶಿ ವಿನಿಮಯ ಮೀಸಲನ್ನು ಉಳಿಸಲು ಸಹಾಯ ಮಾಡಿ.
- ಒಂದು ವರ್ಷದವರೆಗೆ ಅನಿವಾರ್ಯವಲ್ಲದ ಚಿನ್ನದ ಖರೀದಿಯನ್ನು ತಪ್ಪಿಸಿ.
- ರೈತರು ರಾಸಾಯನಿಕ ರಸಗೊಬ್ಬರ ಬಳಕೆಯನ್ನು ಶೇಕಡಾ 50 ರಷ್ಟು ಕಡಿಮೆ ಮಾಡಿ ನೈಸರ್ಗಿಕ ಕೃಷಿಯತ್ತ ಸಾಗಬೇಕು ಮತ್ತು ಕೃಷಿಯಲ್ಲಿ ಡೀಸೆಲ್ ಪಂಪ್ ಗಳ ಬದಲಿಗೆ ಸೌರಚಾಲಿತ ನೀರಾವರಿ ಪಂಪ್ ಗಳನ್ನು ಅಳವಡಿಸಿಕೊಳ್ಳಬೇಕು.
“ಸಚಿವಾಲಯಗಳು ಮತ್ತು ರಾಜ್ಯಗಳು ಸಮನ್ವಯದೊಂದಿಗೆ ಇಂಧನ ದಕ್ಷತೆ, ಸಾರ್ವಜನಿಕ ಜಾಗೃತಿ ಮತ್ತು ಜವಾಬ್ದಾರಿಯುತ ಬಳಕೆಯ ನಡವಳಿಕೆಯನ್ನು ಸಾಂಸ್ಥಿಕಗೊಳಿಸಲು ಕ್ರಮಗಳನ್ನು ಗುರುತಿಸಬೇಕು” ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು.
ಸಭೆಯ ನಂತರ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ ಶ್ರೀ ರಾಜನಾಥ್ ಸಿಂಗ್ ಅವರು, ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದರು. ಪೂರೈಕೆ ಸರಪಳಿಗಳಲ್ಲಿ ಯಾವುದೇ ಕೊರತೆ ಅಥವಾ ಅಡೆತಡೆಗಳನ್ನು ತಡೆಯಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಜನರು ಶಾಂತರಾಗಿರಲು ಮತ್ತು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದಂತೆ ಅವರು ಮನವಿ ಮಾಡಿದರು.
ಪ್ರಸ್ತುತ ಹಂತದಲ್ಲಿ ಭಾರತದ ಪ್ರಾಥಮಿಕ ಗಮನವು ಇಂಧನ ಹರಿವು ಅಡೆತಡೆಯಿಲ್ಲದೆ ಸಾಗುವಂತೆ ನೋಡುವುದು, ಆರ್ಥಿಕ ಸ್ಥಿರತೆಯನ್ನು ಕಾಪಾಡುವುದು ಮತ್ತು ಕಡಲ ವ್ಯಾಪಾರ ಮಾರ್ಗಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಎಂದು ರಕ್ಷಣಾ ಸಚಿವರು ಒತ್ತಿಹೇಳಿದರು. ಪ್ರತಿಯೊಂದು ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಮಧ್ಯಸ್ಥಗಾರರು ಜಾಗರೂಕರಾಗಿರಲು ಅವರು ಸೂಚಿಸಿದರು.
ಭಾರತವು ತನ್ನ ಇಂಧನ ಮಿಶ್ರಣವನ್ನು ಪರಿವರ್ತಿಸುವ ಪ್ರಕ್ರಿಯೆಯನ್ನು ವೇಗಗೊಳಿಸುವ ಅಗತ್ಯವಿದೆ, ನವೀಕರಿಸಬಹುದಾದ ಇಂಧನ ಮೂಲಗಳನ್ನು ವೇಗವಾಗಿ ವಿಸ್ತರಿಸಬೇಕು ಮತ್ತು ಇಂಧನ ದಕ್ಷತೆಯ ತಂತ್ರಜ್ಞಾನಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕು ಎಂದು ಶ್ರೀ ರಾಜನಾಥ್ ಸಿಂಗ್ ಪ್ರತಿಪಾದಿಸಿದರು. ಪೂರೈಕೆ ಸರಪಳಿ ವ್ಯತ್ಯಯದಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಭವಿಷ್ಯದ ಇಂಧನ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯತಂತ್ರದ ಮೀಸಲು ಅಗತ್ಯತೆಗಳ ಮರು-ಮೌಲ್ಯಮಾಪನಕ್ಕೆ ಅವರು ಕರೆ ನೀಡಿದರು.

ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ಕೇವಲ ಒಂದು ಪ್ರತ್ಯೇಕ ಘಟನೆಯಾಗಿ ನೋಡಬಾರದು, ಏಕೆಂದರೆ ಇಂದಿನ ಪರಸ್ಪರ ಸಂಪರ್ಕಿತ ಜಾಗತಿಕ ಪರಿಸರದಲ್ಲಿ ಯಾವುದೇ ಅಂತರರಾಷ್ಟ್ರೀಯ ಬಿಕ್ಕಟ್ಟು ಎಲ್ಲಾ ರಾಷ್ಟ್ರಗಳ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ಕಾರ್ಯತಂತ್ರದ ಬಿಕ್ಕಟ್ಟಿನ ನಿರೀಕ್ಷೆ, ಮುಂಚಿನ ಎಚ್ಚರಿಕೆ ಮೌಲ್ಯಮಾಪನ, ಸನ್ನಿವೇಶ ಯೋಜನೆ ಮತ್ತು ಸಕಾಲಿಕ ಸರ್ಕಾರದ ಸಂಪೂರ್ಣ ಸಿದ್ಧತೆಯ ಮೇಲೆ ಗಮನಹರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಎಂ ಎಸ್ ಎಂ ಇ ಗಳು ಸೇರಿದಂತೆ ಉದ್ಯಮಗಳಿಗೆ ಬೆಂಬಲ ನೀಡಲು ಇತ್ತೀಚೆಗೆ ಕೈಗೊಂಡ ನೀತಿ ಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಲಾಯಿತು. ಉದ್ಯಮಗಳಿಗೆ ಹಣಕಾಸಿನ ನೆರವು ನೀಡಲು, ಕೇಂದ್ರ ಸಚಿವ ಸಂಪುಟವು ಮೇ 05, 2026 ರಂದು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ 5.0 ಅನ್ನು ಅನುಮೋದಿಸಿದೆ. ಇದರಡಿ 2,55,000 ಕೋಟಿ ರೂಪಾಯಿಗಳ ಹೆಚ್ಚುವರಿ ಸಾಲದ ಗುರಿಯನ್ನು ಹೊಂದಲಾಗಿದ್ದು, ಎಂ ಎಸ್ ಎಂ ಇ ಗಳಿಗೆ ಶೇ. 100 ಮತ್ತು ಎಂ ಎಸ್ ಎಂ ಇ ಯೇತರ ಹಾಗೂ ವಿಮಾನಯಾನ ವಲಯಗಳಿಗೆ ಶೇ. 90 ಸಾಲ ಖಾತರಿ ಒದಗಿಸಲಾಗುತ್ತದೆ.
ಇದಲ್ಲದೆ, ಸಾರ್ವಜನಿಕ ಸಂಗ್ರಹಣೆ ಒಪ್ಪಂದಗಳಲ್ಲಿ ಎದುರಾಗುವ 'ಫೋರ್ಸ್ ಮೆಜೂರ್' (ಅನಿವಾರ್ಯ ಪರಿಸ್ಥಿತಿ) ಮಾದರಿಯ ಅಪಾಯಗಳಿಗೆ ಸಂಬಂಧಿಸಿದಂತೆ ಉದ್ಯಮ ವಲಯದ ಬೇಡಿಕೆಯನ್ನು ಪರಿಗಣಿಸಿ, ಹಣಕಾಸು ಸಚಿವಾಲಯವು 'ಫೋರ್ಸ್ ಮೆಜೂರ್' ಸಂಬಂಧಿತ ಪರಿಹಾರ ಕ್ರಮಗಳನ್ನು ಒದಗಿಸಿದೆ. ಈ ಕುರಿತು ವೆಚ್ಚ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದ್ದು, ಪ್ರಸ್ತುತ ನಡೆಯುತ್ತಿರುವ ಬಿಕ್ಕಟ್ಟನ್ನು 'ಫೋರ್ಸ್ ಮೆಜೂರ್' ಅಡಿಯಲ್ಲಿ 'ಯುದ್ಧ' ಎಂದು ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿದೆ. ಇದರ ಅನ್ವಯ, ಉದ್ಯಮಗಳು ತಮ್ಮ ಕೆಲಸದ ಗಡುವನ್ನು ಫೆಬ್ರವರಿ 28, 2026 ರಿಂದ 2-4 ತಿಂಗಳುಗಳವರೆಗೆ ವಿಸ್ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ದೇಶದಲ್ಲಿ ರಸಗೊಬ್ಬರಗಳ ಲಭ್ಯತೆಯು ಸದೃಢವಾಗಿದೆ ಮತ್ತು ಪೂರೈಕೆಯು ಅಗತ್ಯಕ್ಕಿಂತ ಹೆಚ್ಚಾಗಿ ಮುಂದುವರಿಯುತ್ತಿದೆ ಎಂದು ಸಚಿವರ ಅನೌಪಚಾರಿಕ ಗುಂಪಿಗೆ ತಿಳಿಸಲಾಯಿತು. ದೇಶದಲ್ಲಿನ ರಸಗೊಬ್ಬರಗಳ ಒಟ್ಟಾರೆ ದಾಸ್ತಾನು ಸ್ಥಿತಿ ಈ ಕೆಳಗಿನಂತಿದೆ (ಲಕ್ಷ ಟನ್ಗಳಲ್ಲಿ):
|
ಉತ್ಪನ್ನ
|
11.05.2026 ರಲ್ಲಿದ್ದ ದಾಸ್ತಾನು
|
11.05.2025 ರಲ್ಲಿದ್ದ ದಾಸ್ತಾನು
|
|
ಯೂರಿಯಾ
|
76.65
|
75.48
|
|
ಡಿಎಪಿ
|
22.52
|
14.87
|
|
ಎನ್ ಪಿ ಕೆ ಎಸ್
|
60.42
|
48.32
|
|
ಎಸ್ ಎಸ್ ಪಿ
|
26.99
|
26.92
|
|
ಎಂಒಪಿ
|
13.07
|
12.99
|
|
ಒಟ್ಟು
|
199.65
|
178.58
|
ಖಾರಿಫ್ 2026 ರ ರಸಗೊಬ್ಬರ ಅಗತ್ಯವನ್ನು 390.54 ಲಕ್ಷ ಮೆಟ್ರಿಕ್ ಟನ್ (ಎಲ್ ಎಂ ಟಿ) ಎಂದು ಅಂದಾಜಿಸಲಾಗಿದ್ದು, ಇಂದಿನ ದಾಸ್ತಾನು 199.65 ಎಲ್ ಎಂ ಟಿ ಯಷ್ಟಿದೆ (ಶೇ. 51 ಕ್ಕಿಂತ ಹೆಚ್ಚು). ಇದು ಸಾಮಾನ್ಯ ಮಟ್ಟದ ಶೇ. 33 ಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ.
ಬಿಕ್ಕಟ್ಟಿನ ನಂತರ ರಸಗೊಬ್ಬರಗಳ ದೇಶೀಯ ಉತ್ಪಾದನೆ ಮತ್ತು ಆಮದು (ಲಕ್ಷ ಟನ್ ಗಳಲ್ಲಿ):
|
ಉತ್ಪನ್ನ
|
ಬಿಕ್ಕಟ್ಟಿನ ನಂತರದ ದೇಶೀಯ ಉತ್ಪಾದನೆ (01.03.2026 ರಿಂದ 10.05.26)
|
ದೇಶೀಯ ಉತ್ಪಾದನೆ (01.03.2025 ರಿಂದ 10.05.25)
|
|
ಯೂರಿಯಾ
|
46.28
|
54.98
|
|
ಡಿಎಪಿ
|
6.20
|
5.56
|
|
ಎನ್ ಪಿ ಕೆ ಎಸ್
|
15.57
|
22.03
|
|
ಎಸ್ ಎಸ್ ಪಿ
|
8.73
|
9.44
|
|
ಒಟ್ಟು
|
76.78
|
92.01
|
ರಸಗೊಬ್ಬರಗಳ ಮಾರಾಟ (ಲಕ್ಷ ಟನ್ ಗಳಲ್ಲಿ):
|
ಉತ್ಪನ್ನ
|
ಮಾರಾಟ (01.03.26 ರಿಂದ 10.05.26)
|
ಮಾರಾಟ (01.03.25 ರಿಂದ 10.05.25)
|
|
ಯೂರಿಯಾ
|
38.94
|
34.60
|
|
ಡಿಎಪಿ
|
9.40
|
6.17
|
|
ಎನ್ ಪಿ ಕೆ ಎಸ್
|
14.25
|
11.71
|
|
ಎಸ್ ಎಸ್ ಪಿ
|
5.52
|
4.28
|
|
ಎಂಒಪಿ
|
3.08
|
2.89
|
|
ಒಟ್ಟು
|
71.19
|
59.65
|
*****
(ಪ್ರಕಟಣೆ ಐ.ಡಿ.: 2259879)
ವಿಸಿಟರ್ ಕೌಂಟರ್ : 12