ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಸೈಬರ್ ಭದ್ರತೆ ಮತ್ತು ಡಿಜಿಟಲ್ ಫೋರೆನ್ಸಿಕ್ಸ್ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಎನ್.ಎಫ್.ಎಸ್.ಯು. ಜೊತೆ ಸಹಯೋಗಕ್ಕಾಗಿ ಕೈಜೋಡಿಸಿದ ಯುಐಡಿಎಐ
ಸೈಬರ್ ಭದ್ರತಾ ಲೆಕ್ಕಪರಿಶೋಧನೆಗಳು, ವಿಧಿವಿಜ್ಞಾನ ಸಂಶೋಧನೆ ಮತ್ತು ಸಾಮರ್ಥ್ಯ ವೃದ್ಧಿ ಸೇರಿದಂತೆ ಆರು ಪ್ರಮುಖ ಕ್ಷೇತ್ರಗಳಲ್ಲಿ ಈ ಸಹಯೋಗವನ್ನು ರಚಿಸಲಾಗಿದೆ
ಪ್ರಕಟಣಾ ದಿನಾಂಕ:
05 MAY 2026 4:41PM by PIB Bengaluru
ಡಿಜಿಟಲ್ ಫೋರೆನ್ಸಿಕ್ಸ್, ಸೈಬರ್ ಭದ್ರತೆ ಮತ್ತು ಸುಧಾರಿತ ತಂತ್ರಜ್ಞಾನ ಸಂಶೋಧನೆಯ ಕ್ಷೇತ್ರಗಳಲ್ಲಿ ರಚನಾತ್ಮಕ, ಐದು ವರ್ಷಗಳ ಸಹಯೋಗವನ್ನು ಸ್ಥಾಪಿಸಲು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮತ್ತು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (ಎನ್.ಎಫ್.ಎಸ್.ಯು.) ಕೈಜೋಡಿಸಿವೆ.
ಈ ತಿಳುವಳಿಕೆ ಒಪ್ಪಂದ ಪತ್ರವು ಸಹಯೋಗಕ್ಕಾಗಿ ಪರಸ್ಪರ ಒಂದು ಸಮಾನ ವೇದಿಕೆಯ ಚೌಕಟ್ಟನ್ನು ಒದಗಿಸುತ್ತದೆ ಮತ್ತು ಭಾರತದ ಡಿಜಿಟಲ್ ಗುರುತಿನ ಪರಿಸರ ವ್ಯವಸ್ಥೆಯನ್ನು ಆಧಾರವಾಗಿ ಹೊಂದಿರುವ ಯುಐಡಿಎಐನ ಡಿಜಿಟಲ್ ಮೂಲಸೌಕರ್ಯದಾದ್ಯಂತ ಸೈಬರ್ ಸ್ಥಿತಿಸ್ಥಾಪಕತ್ವವನ್ನು ಮತ್ತಷ್ಟು ಬಲಪಡಿಸಲು ಎರಡು ಪ್ರಮುಖ ರಾಷ್ಟ್ರೀಯ ಸಂಸ್ಥೆಗಳನ್ನು ಒಟ್ಟುಗೂಡಿಸುತ್ತದೆ.
ಯುಐಡಿಎಐ ಸಂಸ್ಥೆಯ ಸಿಇಒ ಶ್ರೀ ವಿವೇಕ್ ಚಂದ್ರ ವರ್ಮಾ ಮತ್ತು ಎನ್.ಎಫ್.ಎಸ್.ಯು. ಗುಜರಾತ್ ಕ್ಯಾಂಪಸ್ ನಿರ್ದೇಶಕ ಪ್ರೊ (ಡಾ.) ಎಸ್.ಒ. ಜುನಾರೆ ನಡುವೆ ಈ ಒಪ್ಪಂದವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು. ಈ ಸಮಾರಂಭದಲ್ಲಿ ಯುಐಡಿಎಐನ ಉಪ ಮಹಾನಿರ್ದೇಶಕ ಶ್ರೀ ಅಭಿಷೇಕ್ ಕುಮಾರ್ ಸಿಂಗ್ ಮತ್ತು ಎರಡೂ ಕಡೆಯ ಹಲವಾರು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ಸಹಯೋಗವು ಆರು ಕಾರ್ಯತಂತ್ರದ ಸ್ತಂಭಗಳ ಮೇಲೆ ಕೇಂದ್ರೀಕರಿಸುತ್ತದೆ: ಶೈಕ್ಷಣಿಕ ಮತ್ತು ವೃತ್ತಿಪರ ಅಭಿವೃದ್ಧಿ, ಮಾಹಿತಿ ಭದ್ರತೆ ಮತ್ತು ವ್ಯವಸ್ಥೆಯ ಸಮಗ್ರತೆ, ವಿಧಿವಿಜ್ಞಾನ ಮೂಲಸೌಕರ್ಯ ಮತ್ತು ಪ್ರಯೋಗಾಲಯ ಶ್ರೇಷ್ಠತೆ, ಸೈಬರ್ ಭದ್ರತಾ ಚಟುವಟಿಕೆಗಳಿಗೆ ತಾಂತ್ರಿಕ ಬೆಂಬಲ, ಎಐ, ಬ್ಲಾಕ್ಚೈನ್, ಡೀಪ್ಫೇಕ್ ಪತ್ತೆ ಮತ್ತು ಕ್ರಿಪ್ಟೋಗ್ರಾಫಿಕ್ ತಂತ್ರಜ್ಞಾನಗಳು ಮುಂತಾದ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನೆಗೆ ಸೇರ್ಪಡೆ ಸೇರಿದಂತೆ ತಾಂತ್ರಿಕ ಸಲಹಾ ಮತ್ತು ಸಂಶೋಧನೆ, ಮತ್ತು ಎನ್.ಎಫ್.ಎಸ್.ಯು. ವಿದ್ಯಾರ್ಥಿಗಳಿಗೆ ನಿಯೋಜನೆ ಮತ್ತು ಹೊರವಲಯದ ಸಂಪರ್ಕ(ಔಟ್ರೀಚ್) ಅವಕಾಶಗಳಿಗಾಗಿ ಒಂದು ಮಾರ್ಗವನ್ನು ಒಳಗೊಂಡಂತೆ ಕಾರ್ಯತಂತ್ರದ ನಿಯೋಜನೆ ಮತ್ತು ಹೊರವಲಯದ ಸಂಪರ್ಕ(ಔಟ್ರೀಚ್) ಸಾಧ್ಯತೆಗಳು.
"ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಬೆಂಬಲಿಸುವ ಮತ್ತು ಭಾರತದ ಡಿಜಿಟಲ್ ಗುರುತಿನ ವ್ಯವಸ್ಥೆಗಳಿಗೆ ಮತ್ತಷ್ಟು ಸುರಕ್ಷತೆಗಳನ್ನು ಖಚಿತಪಡಿಸಿಕೊಳ್ಳುವ ಭದ್ರತೆ, ಸ್ಥಿತಿಸ್ಥಾಪಕತ್ವ ಮತ್ತು ಫೋರೆನ್ಸಿಕ್ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸುವ ಕಡೆಗೆ ಈ ಸಹಯೋಗವು ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ" ಎಂದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸಂಸ್ಥೆಯ ಸಿಇಒ ಶ್ರೀ ವಿವೇಕ್ ಚಂದ್ರ ವರ್ಮಾ ಅವರು ಹೇಳಿದರು.
*****
(ಪ್ರಕಟಣೆ ಐ.ಡಿ.: 2258074)
ವಿಸಿಟರ್ ಕೌಂಟರ್ : 14