ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಮಿಷನ್‌ ದೃಷ್ಟಿಯನ್ನು ನಿರ್ಮಿಸಿದ್ದಕ್ಕಾಗಿ ಗ್ಯಾಲಕ್ಸ್‌ ಐನ ಯುವ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಅಭಿನಂದಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ


ಇದು ಆಪ್ಟಿಕಲ್‌ ಕ್ಯಾಮೆರಾಗಳು ಮತ್ತು ಸರ್ವಋುತು ರಾಡಾರ್‌ಗಳನ್ನು ಸಂಯೋಜಿಸುವ ವಿಶ್ವದ ಮೊದಲ ಆಪ್ರೋಸಾರ್‌ ಉಪಗ್ರಹವಾಗಿದೆ

ಭಾರತದ ಅತಿದೊಡ್ಡ ಖಾಸಗಿಯಾಗಿ ನಿರ್ಮಿಸಲಾದ ಉಪಗ್ರಹದ ಉಡಾವಣೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬಾಹ್ಯಾಕಾಶ ಶಕ್ತಿ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

ಇದು ಜಗತ್ತಿನಲ್ಲಿ ನಮ್ಮ ಯುವಕರ ಪರಾಕ್ರಮವನ್ನು ಅಚ್ಚುಕಿದೆ

ಭವಿಷ್ಯದ ಎಲ್ಲಾ ಕಾರ್ಯಾಚರಣೆಗಳಿಗಾಗಿ ಗ್ಯಾಲಕ್ಸ್‌ ಐನ ಇಡೀ ತಂಡಕ್ಕೆ ಶ್ರೀ ಅಮಿತ್‌ ಶಾ ಶುಭ ಹಾರೈಕೆ

ಪ್ರಕಟಣಾ ದಿನಾಂಕ: 03 MAY 2026 8:15PM by PIB Bengaluru

ಆಪ್ಟಿಕಲ್‌ ಕ್ಯಾಮೆರಾಗಳು ಮತ್ತು ಸರ್ವಋುತು ರಾಡಾರ್‌ಗಳನ್ನು ಸಂಯೋಜಿಸುವ ವಿಶ್ವದ ಮೊದಲ ಆಪ್ರೋಸಾರ್‌ ಉಪಗ್ರಹವಾದ ಮಿಷನ್‌ ದೃಷ್ಟಿಯನ್ನು ನಿರ್ಮಿಸಿದ್ದಕ್ಕಾಗಿ ಗ್ಯಾಲಕ್ಸ್‌ ಐನ ಯುವ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು ಅಭಿನಂದಿಸಿದ್ದಾರೆ.

ಈ ಸಂಬಂಧ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು ಎಕ್ಸ್‌ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ, ಆಪ್ಟಿಕಲ್‌ ಕ್ಯಾಮೆರಾಗಳು ಮತ್ತು ಸರ್ವಋುತು ರಾಡಾರ್‌ಅನ್ನು ಸಂಯೋಜಿಸುವ ವಿಶ್ವದ ಮೊದಲ ಆಪ್ರೋಸಾರ್‌ ಉಪಗ್ರಹವಾದ ಮಿಷನ್‌ ದೃಷ್ಟಿಯನ್ನು ನಿರ್ಮಿಸಿದ್ದಕ್ಕಾಗಿ ಗ್ಯಾಲಕ್ಸ್‌ ಐನ ನಮ್ಮ ಯುವ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು. ಭಾರತದ ಅತಿದೊಡ್ಡ ಖಾಸಗಿಯಾಗಿ ನಿರ್ಮಿಸಲಾದ ಉಪಗ್ರಹದ ಉಡಾವಣೆಯು ನಮ್ಮ ಭೂಮಿಯನ್ನು ಹೇಗೆ ವೀಕ್ಷಿಸಲಾಗುತ್ತದೆ ಎಂಬುದನ್ನು ಬದಲಾಯಿಸುತ್ತದೆ ಮತ್ತು ಮೋದಿ ಅವರ ಬಾಹ್ಯಾಕಾಶ ಶಕ್ತಿ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುತ್ತದೆ. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ನನ್ನ ಎಲ್ಲಾ ಶುಭ ಹಾರೈಕೆಗಳು ನಿಮ್ಮೊಂದಿಗಿವೆ.’’ 

 

*****


(ಪ್ರಕಟಣೆ ಐ.ಡಿ.: 2257739) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Punjabi , Gujarati , Telugu