ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯ ಸುದ್ದಿಗೋಷ್ಠಿ


ಜವಳಿ ಮತ್ತು ಕರಕುಶಲ ವಲಯವು ನೈಸರ್ಗಿಕ ಅನಿಲ ಪೂರೈಕೆಗಾಗಿ ಆದ್ಯತಾ ವರ್ಗದ ಅಡಿಯಲ್ಲಿದೆ; ಕಳೆದ ಆರು ತಿಂಗಳ ಸರಾಸರಿ ಬಳಕೆಯ ಶೇಕಡಾ 80 ರಷ್ಟು ಪೂರೈಕೆಯನ್ನು ಕಾಯ್ದುಕೊಳ್ಳಲಾಗಿದೆ

29 ಪ್ರಮುಖ ಜವಳಿ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಮುಂದೂಡಲಾಗಿದೆ; ಎಂಎಂಎಫ್ ಮೌಲ್ಯ ಸರಪಳಿ ಮತ್ತು ಹತ್ತಿ ಸೇರಿದಂತೆ ಇತರ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ರದ್ದುಗೊಳಿಸಲು ಜವಳಿ ಸಚಿವಾಲಯ ಪ್ರಯತ್ನಿಸುತ್ತಿದೆ

ಡೌನ್‌ ಸ್ಟ್ರೀಮ್ ವಲಯಗಳನ್ನು ರಕ್ಷಿಸಲು EFY ಮತ್ತು VFY ಮೇಲಿನ ಡಂಪಿಂಗ್ ವಿರೋಧಿ ಸುಂಕವನ್ನು ರದ್ದುಗೊಳಿಸಲು ಅಥವಾ ಮುಂದೂಡಲು ಜವಳಿ ಸಚಿವಾಲಯ ಶಿಫಾರಸು ಮಾಡಿದೆ

ಮಾರ್ಚ್ 2026 ರಿಂದ ದೇಶಾದ್ಯಂತ 67,000 ಕ್ಕೂ ಹೆಚ್ಚು ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ, 1160 ಕ್ಕೂ ಹೆಚ್ಚು ಎಫ್.ಐ.ಆರ್ ದಾಖಲಿಸಲಾಗಿದೆ ಮತ್ತು 271 ವ್ಯಕ್ತಿಗಳನ್ನು ಬಂಧಿಸಲಾಗಿದೆ

ನಿನ್ನೆಯವರೆಗೆ 42,800 ಕ್ಕೂ ಹೆಚ್ಚು ಪಿ ಎನ್‌ ಜಿ ಗ್ರಾಹಕರು MYPNGD.in ವೆಬ್‌ಸೈಟ್ ಮೂಲಕ ತಮ್ಮ ಎಲ್‌ ಪಿ ಜಿ ಸಂಪರ್ಕಗಳನ್ನು ಸರೆಂಡರ್ ಮಾಡಿದ್ದಾರೆ

9 ಏಪ್ರಿಲ್ 2026 ರಿಂದ ಮುಂಬೈ, ಕೊಚ್ಚಿ, ವೈಜಾಗ್, ಚೆನ್ನೈ ಮತ್ತು ಮಥುರಾ ಸಂಸ್ಕರಣಾಗಾರಗಳು ರಾಸಾಯನಿಕ, ಫಾರ್ಮಾ ಮತ್ತು ಪೇಂಟ್ ಉದ್ಯಮಗಳಿಗೆ 8300 ಮೆಟ್ರಿಕ್ ಟನ್‌ ಗಿಂತ ಹೆಚ್ಚು ಪ್ರೊಪಿಲೀನ್ ಮತ್ತು 870 ಮೆಟ್ರಿಕ್ ಟನ್‌ ಗಿಂತ ಹೆಚ್ಚು ಬ್ಯುಟೈಲ್ ಅಕ್ರಿಲೇಟ್ ಅನ್ನು ಮಾರಾಟ ಮಾಡಿವೆ

ಹಡಗು ಸಚಿವಾಲಯವು ಇದುವರೆಗೆ 2,800 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿ ತರಲು ಅನುಕೂಲ ಮಾಡಿಕೊಟ್ಟಿದೆ; ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಗಲ್ಫ್ ಪ್ರದೇಶದ ವಿವಿಧ ಸ್ಥಳಗಳಿಂದ ಬಂದ 24 ನಾವಿಕರು ಸೇರಿದ್ದಾರೆ

ಆ ಪ್ರದೇಶದಿಂದ ಭಾರತದ ವಿವಿಧ ಸ್ಥಳಗಳಿಗೆ ಹೆಚ್ಚಿನ ವಿಮಾನಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟಾರೆ ವಿಮಾನ ಪ್ರಯಾಣದ ಪರಿಸ್ಥಿತಿಯು ಸುಧಾರಿಸುತ್ತಿದೆ

ಪ್ರಕಟಣಾ ದಿನಾಂಕ: 28 APR 2026 5:35PM by PIB Bengaluru

ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ನಡುವೆ, ಭಾರತ ಸರ್ಕಾರವು ನಿಯಮಿತ ಅಪ್‌ಡೇಟ್‌ಗಳ ಮೂಲಕ ನಾಗರಿಕರಿಗೆ ಮಾಹಿತಿ ನೀಡುವ ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ. ಈ ನಿಟ್ಟಿನಲ್ಲಿ, ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಗೋಷ್ಠಿ ನಡೆಯಿತು. ಇದರಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಬಂದರು, ನೌಕಾಯಾನ ಮತ್ತು ಜಲಮಾರ್ಗಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳ ಅಧಿಕಾರಿಗಳು, ಇಂಧನ ಲಭ್ಯತೆ, ಕಡಲ ಕಾರ್ಯಾಚರಣೆಗಳು, ಈ ಪ್ರದೇಶದಲ್ಲಿರುವ ಭಾರತೀಯ ನಾಗರಿಕರಿಗೆ ನೀಡಲಾಗುತ್ತಿರುವ ನೆರವು ಮತ್ತು ಪ್ರಮುಖ ವಲಯಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಜವಳಿ ಸಚಿವಾಲಯವು ಜವಳಿ ವಲಯಕ್ಕೆ ಸಂಬಂಧಿಸಿದ ಅಪ್‌ ಡೇಟ್ ಗಳನ್ನು ಸಹ ಹಂಚಿಕೊಂಡಿದೆ.

ಜವಳಿ ಮತ್ತು ಕರಕುಶಲ ವಲಯದ ಅಪ್ಡೇಟ್ ಗಳು

ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಜವಳಿ ಮತ್ತು ಕರಕುಶಲ ವಲಯವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜವಳಿ ಸಚಿವಾಲಯವು ಪಾಲುದಾರರೊಂದಿಗೆ (stakeholders) ನಿಯಮಿತವಾಗಿ ಸಂಪರ್ಕದಲ್ಲಿದೆ. ಕೈಗಾರಿಕೆಗೆ ಅನುಕೂಲ ಮಾಡಿಕೊಡಲು ಸಚಿವಾಲಯವು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಪರಿಶೀಲಿಸಲು ಮೇಲ್ವಿಚಾರಣಾ ಸೆಲ್‌ (monitoring cell) ರಚಿಸಲಾಗಿದೆ. ಈ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ಕೈಗೊಂಡ ಕೆಲವು ಕ್ರಮಗಳು ಈ ಕೆಳಗಿನಂತಿವೆ: -

ನಿಯಮಿತ ಪಾಲುದಾರರ ಸಮಾಲೋಚನೆಗಳು

  • ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಚಿವಾಲಯವು ಪಾಲುದಾರರೊಂದಿಗೆ ವಾರಕ್ಕೊಮ್ಮೆ ನಿಯಮಿತ ಸಭೆಗಳನ್ನು ನಡೆಸುತ್ತಿದೆ. ಇವುಗಳಲ್ಲಿ ರಫ್ತು ಉತ್ತೇಜನಾ ಮಂಡಳಿಗಳು (EPCs), ದೇಶೀಯ ಸಂಘಗಳು, ಪ್ರಾದೇಶಿಕ ಕ್ಲಸ್ಟರ್ ಸಂಘಗಳು (ತಿರುಪುರ, ಸೂರತ್, ಪಾಲಿ ಬಲೋತ್ರಾ) ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗಿನ ಸಭೆಗಳು ಸೇರಿವೆ. ಸಚಿವಾಲಯವು ಡಿಜಿ ಶಿಪ್ಪಿಂಗ್ (DG Shipping) ಕಚೇರಿ, ಗೇಲ್ (GAIL) ಮತ್ತು ಇತರ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ. ವಾಣಿಜ್ಯ ಇಲಾಖೆಯ 'ರೆಸಿಲಿಯನ್ಸ್ ಅಂಡ್ ಲಾಜಿಸ್ಟಿಕ್ಸ್ ಇಂಟರ್ವೆನ್ಶನ್ ಫಾರ್ ಎಕ್ಸ್‌ ಪೋರ್ಟ್ ಫೆಸಿಲಿಟೇಶನ್' (RELIEF) ಯೋಜನೆಯ ಕುರಿತು ಸಚಿವಾಲಯವು ಔಟ್‌ರೀಚ್ ಕಾರ್ಯಕ್ರಮವನ್ನೂ ಆಯೋಜಿಸಿತ್ತು.
  • ಇದಲ್ಲದೆ, ರಫ್ತು ಉತ್ತೇಜನಾ ಮಂಡಳಿಗಳು (EPCs) ಸಹ ತಮ್ಮದೇ ಆದ ಸ್ವತಂತ್ರ ಸಮಾಲೋಚನೆಗಳನ್ನು ಆಯೋಜಿಸಿವೆ. ಕಾರ್ಪೆಟ್ ರಫ್ತು ಉತ್ತೇಜನಾ ಮಂಡಳಿಯು (CEPC) 6 ಏಪ್ರಿಲ್ 2026 ರಂದು RELIEF ಕ್ರಮಗಳ ಕುರಿತು ವೆಬಿನಾರ್ ಆಯೋಜಿಸಿತ್ತು. ಹ್ಯಾಂಡಿಕ್ರಾಫ್ಟ್ ರಫ್ತು ಉತ್ತೇಜನಾ ಮಂಡಳಿಯು (EPCH) ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಲಾಜಿಸ್ಟಿಕ್ಸ್ ಸವಾಲುಗಳ ಕುರಿತು 20 ಏಪ್ರಿಲ್ 2026 ರಂದು ಜಾಗೃತಿ ವಿಚಾರಗೋಷ್ಠಿಗಳನ್ನು ಆಯೋಜಿಸಿತ್ತು. ಜಾಗತಿಕ ಶಿಪ್ಪಿಂಗ್ ವ್ಯತ್ಯಯಗಳು, ಪರ್ಯಾಯ ಮಾರ್ಗಗಳು, ಲಾಜಿಸ್ಟಿಕ್ಸ್ ಯೋಜನೆ, ವೆಚ್ಚ ಆಪ್ಟಿಮೈಸೇಶನ್ ತಂತ್ರಗಳು ಮತ್ತು ಅನುಸರಣೆ ಸಮಸ್ಯೆಗಳ ಕುರಿತು ಚರ್ಚೆಗಳು ಕೇಂದ್ರೀಕೃತವಾಗಿದ್ದವು.
  • ಡಿಜಿ ಶಿಪ್ಪಿಂಗ್ ಹೊರಡಿಸಿದ ಸಲಹೆಗಳನ್ನು ಪಾಲುದಾರರಲ್ಲಿ ಹಂಚಲಾಗುತ್ತಿದೆ. ಪಶ್ಚಿಮ ಏಷ್ಯಾಕ್ಕೆ ಪೂರೈಕೆಗಾಗಿ ಜೆಡ್ಡಾದಂತಹ ಪರ್ಯಾಯ ಬಂದರುಗಳ ಬಳಕೆ ಸೇರಿದಂತೆ ಶಿಪ್ಪಿಂಗ್ ಲೈನ್ ‌ಗಳಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಸಹ ಪಾಲುದಾರರಿಗೆ ತಿಳಿಸಲಾಗುತ್ತಿದೆ.

ಕೈಗಾರಿಕೆಗಳಿಗೆ ಇಂಧನ/ನೈಸರ್ಗಿಕ ಅನಿಲದ ಪೂರೈಕೆಯನ್ನು ಖಚಿತಪಡಿಸುವುದು

  • ಜವಳಿ ಮತ್ತು ಕರಕುಶಲ ಕೈಗಾರಿಕೆಗಳಿಗೆ ನೈಸರ್ಗಿಕ ಅನಿಲ ಪೂರೈಕೆಗಾಗಿ ಜವಳಿ ಸಚಿವಾಲಯವು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ (PNG) ಜೊತೆ ಈ ವಿಷಯವನ್ನು ಪ್ರಸ್ತಾಪಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಜವಳಿ ಮತ್ತು ಕರಕುಶಲ ವಲಯವು ಆದ್ಯತಾ ವಲಯ (Priority Sector) III/IV (ಕೈಗಾರಿಕಾ ಗ್ರಾಹಕರು) ಅಡಿಯಲ್ಲಿ ಬರುತ್ತದೆ ಮತ್ತು ಕಳೆದ 6 ತಿಂಗಳ ಸರಾಸರಿ ಬಳಕೆಯ ಶೇಕಡಾ 80 ರಷ್ಟು ಪೂರೈಕೆಯನ್ನು ಕಾಯ್ದುಕೊಳ್ಳಲಾಗಿದೆ ಎಂದು ಗೇಲ್ (GAIL) ಸೂಚಿಸಿದೆ. ಪೂರೈಕೆಯಲ್ಲಿ ಅಡಚಣೆಗಳಾದ ಸಂದರ್ಭದಲ್ಲಿ, ಗೇಲ್ ಮಧ್ಯಂತರವಾಗಿ ಸ್ಪಾಟ್ ಮಾರುಕಟ್ಟೆಯಿಂದ ಪೂರೈಕೆಯನ್ನು ಪಡೆಯುತ್ತಿದೆ.
  • ಸಚಿವಾಲಯವು ಕ್ಲಸ್ಟರ್ ‌ಗಳಲ್ಲಿನ ಪೂರೈಕೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಯಾವುದೇ ರೀತಿಯ ಕೊರತೆ ಉಂಟಾದಲ್ಲಿ, ಮೇಲ್ವಿಚಾರಣಾ ಸೆಲ್‌ ಸ್ಪಾಟ್ ಮಾರುಕಟ್ಟೆ ಖರೀದಿಗಾಗಿ ಗೇಲ್ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಚರ್ಚಿಸಲಿದೆ.

ಜವಳಿ ಮತ್ತು ಕರಕುಶಲ ವಲಯದ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕದ ರದ್ದತಿ

  • ಬೆಲೆ ಏರಿಳಿತ ಮತ್ತು ಡೌನ್‌ ಸ್ಟ್ರೀಮ್ ಕೈಗಾರಿಕೆಗಳಿಗೆ ಪೂರೈಕೆ ಸರಪಳಿಯ ನಿರಂತರತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯತೆಯ ಹಿನ್ನೆಲೆಯಲ್ಲಿ, ಜವಳಿ ಮತ್ತು ಕರಕುಶಲ ವಲಯದ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ರದ್ದುಗೊಳಿಸುವಂತೆ ಸಚಿವಾಲಯವು ಪ್ರತಿಪಾದಿಸುತ್ತಿದೆ.
  • ಈ ಸಂದರ್ಭದಲ್ಲಿ, ಕಂದಾಯ ಇಲಾಖೆಯು ದಿನಾಂಕ 1.4.26 ರ ತನ್ನ ಕಸ್ಟಮ್ಸ್ ಅಧಿಸೂಚನೆ 12/2026 ರ ಮೂಲಕ ಎಂಎಂಎಫ್ (MMF) ವಲಯದ ಕಚ್ಚಾ ವಸ್ತುಗಳು ಸೇರಿದಂತೆ ಹಲವಾರು ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ರದ್ದುಗೊಳಿಸಿದೆ. ಜವಳಿ ವಲಯಕ್ಕೆ ಸಂಬಂಧಿಸಿದಂತೆ, ಈ ಕೆಳಗಿನವುಗಳು ಸೇರಿದಂತೆ ಒಟ್ಟು 29 ಕಚ್ಚಾ ವಸ್ತುಗಳ ಮೇಲಿನ ಸುಂಕಗಳನ್ನು ಮುಂದೂಡಲಾಗಿದೆ: ಮೊನೊಎಥಿಲೀನ್ ಗ್ಲೈಕಾಲ್ (MEG), ಪ್ಯೂರಿಫೈಡ್ ಟೆರೆಫ್ಥಾಲಿಕ್ ಆಸಿಡ್ (PTA), ಪಾಲಿ(ಎಥಿಲೀನ್ ಟೆರೆಫ್ತಾಲೇಟ್) (PET) ಚಿಪ್ಸ್, ಪಾಲಿ(ಬ್ಯುಟಿಲೀನ್ ಟೆರೆಫ್ತಾಲೇಟ್) (PBT), ಮೆಥನಾಲ್, ಟೋಲುಯಿನ್, ಸ್ಟೈರೀನ್, ವಿನೈಲ್ ಕ್ಲೋರೈಡ್ ಮಾನೋಮರ್ (VCM), ಫೀನಾಲ್, ಅಸಿಟಿಕ್ ಆಸಿಡ್, ವಿನೈಲ್ ಅಸಿಟೇಟ್ ಮಾನೋಮರ್ (VAM), ಎಥಿಲೀನ್‌ಡಿಯಮೈನ್, ಮೊನೊಎಥೆನೊಲಮೈನ್/ ಡೈಎಥೆನೊಲಮೈನ್, ಪಾಲಿಥಿಲೀನ್ (PE), ಪಾಲಿಪ್ರೊಪಿಲೀನ್ (PP), ಪಾಲಿಸ್ಟೈರೀನ್ (PS), ಪಾಲಿವಿನೈಲ್ ಕ್ಲೋರೈಡ್ (PVC), ಅಕ್ರಿಲೋನಿಟ್ರೈಲ್-ಬ್ಯುಟಾಡೀನ್-ಸ್ಟೈರೀನ್ (ABS), ಸ್ಟೈರೀನ್-ಅಕ್ರಿಲೋನಿಟ್ರೈಲ್ (SAN), ಪಾಲಿವಿನೈಲ್ ಅಸಿಟೇಟ್ (PVA), ಪಾಲಿವಿನೈಲ್ ಆಲ್ಕೋಹಾಲ್, ಎಪಾಕ್ಸಿ ರೆಸಿನ್ಸ್‌, ಪಾಲಿಯುರೆಥೇನ್ಸ್, ಪಾಲಿಕಾರ್ಬೊನೇಟ್ಸ್‌, ಆಲ್ಕೈಡ್ ರೆಸಿನ್ಸ್‌, ಅನ್‌ಸ್ಯಾಚುರೇಟೆಡ್ ಪಾಲಿಯೆಸ್ಟರ್ ರೆಸಿನ್ಸ್‌, ಟೋಲುಯಿನ್ ಡೈ-ಐಸೋಸೈನೇಟ್ (TDI), ಪಾಲಿಯೋಲ್ಸ್ ಮತ್ತು ಲೀನಿಯರ್ ಆಲ್ಕೈಲ್‌ಬೆಂಜೀನ್ಸ್‌ (Linear Alkylbenzenes).
  • ಎರಡನೆಯದಾಗಿ, ಸಚಿವಾಲಯವು ಇತರ ಕೆಲವು ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ರದ್ದುಗೊಳಿಸುವ ವಿಷಯವನ್ನು ಕಂದಾಯ ಇಲಾಖೆಯೊಂದಿಗೆ ಪ್ರಸ್ತಾಪಿಸಿದೆ, ಅವುಗಳೆಂದರೆ:
  • ಎಂಎಂಎಫ್ (MMF) ಮೌಲ್ಯ ಸರಪಳಿ: 
    • a. ಕ್ಯಾಪ್ರೊಲ್ಯಾಕ್ಟಮ್ (Caprolactam)
    • b. ನೈಲಾನ್ ಚಿಪ್ಸ್ (Nylon chips)
  • ರೇಯಾನ್ ಗ್ರೇಡ್ ವುಡ್ ಪಲ್ಪ್ (Rayon Grade Wood Pulp)
  • ಹತ್ತಿ (Cotton)

ಗಾಜಿನ ಸಾಮಾನುಗಳ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳು: ಸೋಡಾ ಆಶ್ (ಸೋಡಿಯಂ ಕಾರ್ಬೊನೇಟ್) (HS 283620), ಬೋರಿಕ್ ಆಸಿಡ್/ ಬೋರಾನ್ ಆಕ್ಸೈಡ್ (HS 281000), ಅಲುಮಿನಾ (HS 281820), ಸೆಲೆನಿಯಮ್ ಸಂಯುಕ್ತಗಳು (HS 280490), ಸಿರಿಯಮ್ ಆಕ್ಸೈಡ್ (HS 284610), ಜಿರ್ಕೋನಿಯಾ ರಿಫ್ರ್ಯಾಕ್ಟರಿಗಳು (HS 690390), ಫರ್ನೇಸ್ ಬರ್ನರ್‌ಗಳು/ ವ್ಯವಸ್ಥೆಗಳು (HS 841620, 841780), ಪೊಟ್ಯಾಸಿಯಮ್ ನೈಟ್ರೇಟ್ (HS 283421), ಪೊಟ್ಯಾಸಿಯಮ್ ಕಾರ್ಬೊನೇಟ್ (HS 283640), ಆರ್ಸೆನಿಕ್ ಟ್ರೈಆಕ್ಸೈಡ್ (HS 281129) ಮತ್ತು ಬೇರಿಯಮ್ ಕಾರ್ಬೊನೇಟ್ (HS 283660).

ಡಂಪಿಂಗ್ ವಿರೋಧಿ ಸುಂಕದ ರದ್ದತಿ/ ಮುಂದೂಡಿಕೆ

  • ಬೆಲೆ ಏರಿಳಿತದ ಹಿನ್ನೆಲೆಯಲ್ಲಿ, ತಮ್ಮ ಕೆಲವು ಕಚ್ಚಾ ವಸ್ತುಗಳ ಮೇಲಿನ ಡಂಪಿಂಗ್ ವಿರೋಧಿ ಸುಂಕವು ತಮ್ಮ ಖರೀದಿ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಕೆಲವು ಡೌನ್‌ ಸ್ಟ್ರೀಮ್ ಉತ್ಪಾದಕರು ಸೂಚಿಸಿದ್ದಾರೆ. ಡೌನ್‌ಸ್ಟ್ರೀಮ್ ವಲಯದಲ್ಲಿ ಸೃಷ್ಟಿಯಾದ ಉದ್ಯೋಗ, ಈ ವಲಯದಲ್ಲಿ ಎಂಎಸ್‌ಎಂಇ (MSME) ಪಾಲ್ಗೊಳ್ಳುವಿಕೆ, ಪೂರೈಕೆ ಸರಪಳಿ ವ್ಯತ್ಯಯಗಳು ಇತ್ಯಾದಿಗಳನ್ನು ಪರಿಗಣಿಸಿ ಆಂತರಿಕ ವಿಶ್ಲೇಷಣೆ ನಡೆಸಿದ ನಂತರ, ಜವಳಿ ಸಚಿವಾಲಯವು ಈ ಕೆಳಗಿನವುಗಳ ಮೇಲಿನ ಆಂಟಿ-ಡಂಪಿಂಗ್ ಸುಂಕವನ್ನು ರದ್ದುಗೊಳಿಸಲು ಅಥವಾ ಮುಂದೂಡಲು ಕಂದಾಯ ಇಲಾಖೆಗೆ ಸೂಚಿಸಿದೆ: 
  • ಎಲಾಸ್ಟೊಮೆರಿಕ್ ಫಿಲಮೆಂಟ್ ಯಾರ್ನ್ (EFY)
  • ವಿಸ್ಕೋಸ್ ರೇಯಾನ್ ಫಿಲಮೆಂಟ್ ಯಾರ್ನ್ (VFY)

ರಾಜ್ಯ ಸರ್ಕಾರಗಳ ಅತ್ಯುತ್ತಮ ಕಾರ್ಯವಿಧಾನಗಳ ಕುರಿತಾದ ಮಾಹಿತಿಯ ಪ್ರಸಾರ

ರಾಜ್ಯ ಸರ್ಕಾರಗಳು ಮತ್ತು ಕ್ಲಸ್ಟರ್ ಸಂಘಗಳೊಂದಿಗಿನ ಸಭೆಯಲ್ಲಿ, ರಾಜ್ಯಗಳು ಅಳವಡಿಸಿಕೊಂಡ ಕೆಲವು ಅತ್ಯುತ್ತಮ ಕಾರ್ಯವಿಧಾನಗಳನ್ನು ಪಾಲುದಾರರಿಗೆ (stakeholders) ತಿಳಿಸಲಾಯಿತು. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ:

  • ಎಲ್‌ ಪಿ ಜಿ (LPG) ವಿತರಣೆಯನ್ನು ಪರಿಶೀಲಿಸಲು ಡಿಎಂ/ಡಿಸಿ (DM/DC) ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚನೆ.
  • ಪೈಪ್ಡ್ ನೈಸರ್ಗಿಕ ಅನಿಲಕ್ಕೆ (PNG) ಬದಲಾಗಲು ಎಂಎಸ್‌ಎಂಇ (MSME) ಘಟಕಗಳನ್ನು ಪ್ರೋತ್ಸಾಹಿಸುವುದು.
  • ಬ್ಲೂ ಕಾಲರ್ ಕೆಲಸಗಾರರಿಗೆ ಸಮುದಾಯ ಅಡುಗೆ ಮನೆಗಳನ್ನು ತೆರೆಯುವುದು.
  • ಕಲ್ಲಿದ್ದಲಿನ ಬದಲಿಗೆ ಹತ್ತಿ ಗಿಡದ ಕಾಂಡದಿಂದ ತಯಾರಿಸಿದ ಟೋರೆಫೈಡ್ ಬಯೋಮಾಸ್‌ ನಂತಹ ಪರ್ಯಾಯ ಇಂಧನದ ಬಳಕೆ.

ರಫ್ತು ಮನ್ನಾ ಯೋಜನೆಗಳು

  • ಪಾಲುದಾರರಿಂದ ಬಂದ ಕೆಲವು ಸಲಹೆಗಳು ಜವಳಿ ವಲಯಕ್ಕೆ ಸಂಬಂಧಿಸಿದ ರಫ್ತು ಮನ್ನಾ ಯೋಜನೆಗಳ ಮೇಲಿವೆ. ಈ ಯೋಜನೆಗಳಲ್ಲಿ 'ರಫ್ತು ಮಾಡಿದ ಉತ್ಪನ್ನಗಳ ಮೇಲಿನ ಸುಂಕಗಳು ಮತ್ತು ತೆರಿಗೆಗಳ ಮನ್ನಾ' (RODTEP) ಮತ್ತು 'ರಾಜ್ಯ ಮತ್ತು ಕೇಂದ್ರ ತೆರಿಗೆಗಳು ಹಾಗೂ ಲೆವಿಗಳ ರಿಯಾಯಿತಿ' (ROSCTL) ಸೇರಿವೆ.
  • ದರಗಳ ಹೆಚ್ಚಳ, ದರಗಳನ್ನು ಕಡಿಮೆ ಮಾಡಲಾಗಿದ್ದ ಅವಧಿಗೆ ಅವುಗಳನ್ನು ಮರುಸ್ಥಾಪಿಸುವುದು ಮತ್ತು ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಸಲಹೆಗಳು ಬಂದಿವೆ. ಇವುಗಳನ್ನು ಪರಿಶೀಲಿಸಲಾಗಿದ್ದು, ಸೂಕ್ತ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗಿದೆ.

ವಿದೇಶಿ ವ್ಯಾಪಾರ ನೀತಿ (FTP)/ ರಫ್ತು ಉತ್ತೇಜನಾ ಮಿಷನ್ (EPM) ಗೆ ಸಂಬಂಧಿಸಿದ ಪ್ರಸ್ತಾವನೆಗಳು

  • ಪಾಲುದಾರರ ಸಮಾಲೋಚನೆಗಳ ಸಮಯದಲ್ಲಿ, ವಿದೇಶಿ ವ್ಯಾಪಾರ ನೀತಿ (FTP)/ ರಫ್ತು ಉತ್ತೇಜನಾ ಮಿಷನ್ (EPM) ಗೆ ಸಂಬಂಧಿಸಿದ ಕೆಲವು ಪ್ರಸ್ತಾವನೆಗಳು ಬಂದಿವೆ. ಇವುಗಳಲ್ಲಿ ಬಡ್ಡಿ ರಿಯಾಯಿತಿ (interest subvention), ರಫ್ತು ಉತ್ತೇಜನಾ ಬಂಡವಾಳ ಸರಕುಗಳ (EPCG) ಯೋಜನೆ, ಅಡ್ವಾನ್ಸ್ ಆಥರೈಸೇಶನ್ (AA) ಮುಂತಾದ ಪ್ರಸ್ತಾವನೆಗಳು ಸೇರಿವೆ. ಈ ಎಲ್ಲಾ ಸಲಹೆಗಳು ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಸಮಯದಲ್ಲಿ ರಫ್ತುದಾರರಿಗೆ ಅನುಕೂಲ ಮಾಡಿಕೊಡುವುದಕ್ಕೆ ಸಂಬಂಧಿಸಿವೆ. ಈ ವಿಷಯವನ್ನು ಆಂತರಿಕವಾಗಿ ಪರಿಶೀಲಿಸಲಾಗಿದ್ದು, ಡಿ ಜಿ ಎಫ್‌ ಟಿ (DGFT) ಕಚೇರಿಗೆ ಪ್ರಸ್ತಾವನೆಗಳನ್ನು ಕಳುಹಿಸಲಾಗಿದೆ.

ಇಂಧನ ಪೂರೈಕೆ ಮತ್ತು ಇಂಧನದ ಲಭ್ಯತೆ

ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ ಜಿ (LPG) ನಿರಂತರವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸುತ್ತಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪ್ರಸ್ತುತ ಇಂಧನ ಪೂರೈಕೆಯ ಸ್ಥಿತಿಗತಿಯ ಬಗ್ಗೆ ಅಪ್‌ ಡೇಟ್ ನೀಡಿದೆ. ಈ ಕೆಳಗಿನ ಅಂಶಗಳನ್ನು ಗಮನಿಸಲಾಗಿದೆ:

ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ

  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ, ನಾಗರಿಕರು ಇವುಗಳನ್ನು ಆತಂಕದಿಂದ (panic purchase) ಖರೀದಿಸುವುದನ್ನು ತಪ್ಪಿಸಬೇಕು ಎಂದು ಸೂಚಿಸಲಾಗಿದೆ.
  • ವದಂತಿಗಳ ಬಗ್ಗೆ ಎಚ್ಚರದಿಂದಿರಿ ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಅವಲಂಬಿಸಿ.
  • ಎಲ್‌ ಪಿ ಜಿ ಗ್ರಾಹಕರು ಡಿಜಿಟಲ್ ಬುಕಿಂಗ್ ಪ್ಲಾಟ್‌ ಫಾರ್ಮ್‌ಗಳನ್ನು ಬಳಸಲು ಮತ್ತು ವಿತರಕರ ಬಳಿ ನೇರವಾಗಿ ಹೋಗುವುದನ್ನು ತಪ್ಪಿಸಲು ವಿನಂತಿಸಲಾಗಿದೆ.
  • ಪಿ ಎನ್‌ ಜಿ (PNG) ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಕುಕ್‌ ಟಾಪ್‌ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತದೆ.
  • ಪ್ರಸ್ತುತ ಪರಿಸ್ಥಿತಿಯಲ್ಲಿ ನಾಗರಿಕರೆಲ್ಲರೂ ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಉಳಿಸಲು ಅಗತ್ಯ ಪ್ರಯತ್ನಗಳನ್ನು ಮಾಡುವಂತೆ ಕೋರಲಾಗಿದೆ.

ಸರ್ಕಾರದ ಸಿದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು

  • ನಡೆಯುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ದೇಶೀಯ ಎಲ್‌ ಪಿ ಜಿ (LPG), ದೇಶೀಯ ಪಿ ಎನ್‌ ಜಿ (PNG) ಮತ್ತು ಸಿ ಎನ್‌ ಜಿ (CNG) (ಸಾರಿಗೆ) ಗೆ 100% ಪೂರೈಕೆಯನ್ನು ಮಾಡಲಾಗುತ್ತಿದೆ ಎಂದು ಸರ್ಕಾರವು ಖಚಿತಪಡಿಸಿದೆ.
  • ವಾಣಿಜ್ಯ ಎಲ್‌ ಪಿ ಜಿಗಾಗಿ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ, ಫಾರ್ಮಾ, ಉಕ್ಕು, ಆಟೋಮೊಬೈಲ್, ಬೀಜ, ಕೃಷಿ ಇತ್ಯಾದಿ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ. ಇದಲ್ಲದೆ, ವಲಸೆ ಕಾರ್ಮಿಕರಿಗೆ 5 ಕೆಜಿ ಎಫ್‌ಟಿಎಲ್ (FTL) ಪೂರೈಕೆಯನ್ನು ಮಾರ್ಚ್ 2 ಮತ್ತು 3, 2026 ರ ಸರಾಸರಿ ದೈನಂದಿನ ಪೂರೈಕೆಯ ಆಧಾರದ ಮೇಲೆ ದ್ವಿಗುಣಗೊಳಿಸಲಾಗಿದೆ.
  • ಸರ್ಕಾರವು ಈಗಾಗಲೇ ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಹಲವು ತರ್ಕಬದ್ಧಗೊಳಿಸುವ ಕ್ರಮಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಸಂಸ್ಕರಣಾಗಾರ ಉತ್ಪಾದನೆಯನ್ನು ಹೆಚ್ಚಿಸುವುದು, ನಗರ ಪ್ರದೇಶಗಳಲ್ಲಿ ಬುಕಿಂಗ್ ಅಂತರವನ್ನು 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಹಾಗೂ ಪೂರೈಕೆಗಾಗಿ ವಲಯಗಳಿಗೆ ಆದ್ಯತೆ ನೀಡುವುದು ಸೇರಿವೆ.
  • ಎಲ್‌ಪಿಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.
  • ಕಲ್ಲಿದ್ದಲು ಸಚಿವಾಲಯವು ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲರೀಸ್‌ ಗೆ ಸಣ್ಣ ಮತ್ತು ಮಧ್ಯಮ ಗ್ರಾಹಕರಿಗೆ ವಿತರಿಸಲು ರಾಜ್ಯಗಳಿಗೆ ಹೆಚ್ಚುವರಿ ಕಲ್ಲಿದ್ದಲನ್ನು ಪೂರೈಸುವಂತೆ ನಿರ್ದೇಶನ ನೀಡಿದೆ.
  • ದೇಶೀಯ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ ಪಿ ಎನ್‌ ಜಿ ಸಂಪರ್ಕಗಳನ್ನು ಸುಗಮಗೊಳಿಸುವಂತೆ ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಘಟಿತ ಪ್ರಯತ್ನಗಳು ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು

  • ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್‌ ಪಿ ಜಿ (LPG) ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ದಾಸ್ತಾನು (ಹೋರ್ಡಿಂಗ್) ಹಾಗೂ ಕಪ್ಪು ಮಾರುಕಟ್ಟೆಯ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ.
  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಮುಖ ಪಾತ್ರ ವಹಿಸಬೇಕಾಗಿದೆ. ಭಾರತ ಸರ್ಕಾರವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಲವು ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್‌ಗಳ (VCs) ಮೂಲಕ ಇದನ್ನು ಪುನರುಚ್ಚರಿಸಿದೆ.
  • ಭಾರತ ಸರ್ಕಾರವು 27.03.2026 ಮತ್ತು 02.04.2026 ರ ದಿನಾಂಕದ ಪತ್ರಗಳ ಮೂಲಕ, ಇಂಧನದ ಲಭ್ಯತೆಯ ಬಗ್ಗೆ ನಾಗರಿಕರಿಗೆ ಭರವಸೆ ನೀಡಲು ಪೂರ್ವಭಾವಿ ಸಾರ್ವಜನಿಕ ಸಂವಹನದ ಅಗತ್ಯವನ್ನು ಒತ್ತಿಹೇಳಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, 02.04.2026 ರಂದು (MoPNG ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ) ಮತ್ತು 06.04.2026 ರಂದು (MoPNG ಕಾರ್ಯದರ್ಶಿಗಳು ಹಾಗೂ ಮಾಹಿತಿ ಮತ್ತು ಪ್ರಸಾರ (I&B) ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿಗಳೊಂದಿಗೆ) ಸಭೆಗಳನ್ನು ನಡೆಸಲಾಯಿತು, ಅದರಲ್ಲಿ ಈ ಕೆಳಗಿನವುಗಳನ್ನು ಒತ್ತಿಹೇಳಲಾಯಿತು:
  • ದೈನಂದಿನ ಪತ್ರಿಕಾಗೋಷ್ಠಿಗಳನ್ನು ನಡೆಸುವುದು ಮತ್ತು ನಿಯಮಿತ ಸಾರ್ವಜನಿಕ ಸಲಹೆಗಳನ್ನು ನೀಡುವುದು.
  • ಸಾಮಾಜಿಕ ಮಾಧ್ಯಮಗಳಲ್ಲಿನ ನಕಲಿ ಸುದ್ದಿಗಳು / ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಅದನ್ನು ತಡೆಯುವುದು.
  • ಜಿಲ್ಲಾಡಳಿತದಿಂದ ದೈನಂದಿನ ಜಾರಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸುವುದು ಮತ್ತು ಓಎಂಸಿಗಳೊಂದಿಗೆ (OMCs) ಸಮನ್ವಯ ಸಾಧಿಸಿ ದಾಳಿ ಮತ್ತು ತಪಾಸಣೆಗಳನ್ನು ಮುಂದುವರಿಸುವುದು.
  • ತಮ್ಮ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಎಲ್‌ಪಿಜಿ ಹಂಚಿಕೆ ಆದೇಶಗಳನ್ನು ಹೊರಡಿಸುವುದು.
  • ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾದ ಹೆಚ್ಚುವರಿ ಎಸ್‌ಕೆಒ (SKO) ಗಾಗಿ ಎಸ್‌ಕೆಒ ಹಂಚಿಕೆ ಆದೇಶಗಳನ್ನು ಹೊರಡಿಸುವುದು.
  • ಪಿ ಎನ್‌ ಜಿ (PNG) ಅಳವಡಿಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸುವುದು.
  • ಎಲ್‌ ಪಿ ಜಿ ಪೂರೈಕೆಗೆ, ವಿಶೇಷವಾಗಿ ದೇಶೀಯ ಅಗತ್ಯಗಳಿಗಾಗಿ ಆದ್ಯತೆ ನೀಡುವುದು ಮತ್ತು ಪೂರೈಕೆಯ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು 5 ಕೆಜಿ ಎಫ್‌ಟಿಎಲ್ (FTL) ಸಿಲಿಂಡರ್‌ಗಳ ಗುರಿ ಆಧಾರಿತ ವಿತರಣೆಯನ್ನು ಅಳವಡಿಸಿಕೊಳ್ಳುವುದು.
  • ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆಯನ್ನು ತಡೆಯಲು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿಯಂತ್ರಣ ಕೊಠಡಿಗಳನ್ನು (Control Rooms) ಮತ್ತು ಜಿಲ್ಲಾ ಮೇಲ್ವಿಚಾರಣಾ ಸಮಿತಿಗಳನ್ನು ಸ್ಥಾಪಿಸಿವೆ.
  • ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ/ಮಾಹಿತಿ ನೀಡುತ್ತಿವೆ.

ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು

  • ಎಲ್‌ ಪಿ ಜಿ ಅಕ್ರಮ ದಾಸ್ತಾನು ಮತ್ತು ಕಳ್ಳಸಂತೆಯನ್ನು ತಡೆಗಟ್ಟಲು ದೇಶಾದ್ಯಂತ ಜಾರಿ ಕ್ರಮಗಳು ಮುಂದುವರಿದಿವೆ. ನಿನ್ನೆ ದೇಶಾದ್ಯಂತ 2800 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ.
  • ಮಾರ್ಚ್ 2026 ರಿಂದ, ದೇಶಾದ್ಯಂತ ನಡೆದ ಹಲವಾರು ದಾಳಿಗಳಲ್ಲಿ 67,000 ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, 1160 ಕ್ಕೂ ಹೆಚ್ಚು ಎಫ್‌ ಐ ಆರ್ (FIR) ಗಳನ್ನು ದಾಖಲಿಸಲಾಗಿದೆ ಮತ್ತು 271 ಜನರನ್ನು ಬಂಧಿಸಲಾಗಿದೆ.
  • ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (PSU OMCs) ದಿಢೀರ್ ತಪಾಸಣೆಗಳನ್ನು ಬಲಪಡಿಸಿ ಮುಂದುವರಿಸಿವೆ ಮತ್ತು 316 ಎಲ್‌ಪಿಜಿ ವಿತರಕರಿಗೆ ದಂಡ ವಿಧಿಸಿವೆ ಹಾಗೂ ನಿನ್ನೆಯವರೆಗೆ 72 ಎಲ್‌ಪಿಜಿ ವಿತರಕರನ್ನು ಅಮಾನತುಗೊಳಿಸಲಾಗಿದೆ.
  • ನಿನ್ನೆ 46 ಎಲ್‌ ಪಿ ಜಿ ವಿತರಕರಿಗೆ ಕಾರಣ ಕೇಳುವ ನೋಟಿಸ್ ನೀಡಲಾಗಿದೆ, 6 ವಿತರಕರಿಗೆ ದಂಡ ವಿಧಿಸಲಾಗಿದೆ ಮತ್ತು ಒಬ್ಬ ವಿತರಕರನ್ನು ಅಮಾನತುಗೊಳಿಸಲಾಗಿದೆ.

ಎಲ್ಪಿಜಿ ಪೂರೈಕೆ

ಗೃಹಬಳಕೆಯ ಎಲ್ಪಿ ಜಿ ಪೂರೈಕೆ ಸ್ಥಿತಿ:

  • ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದ ಎಲ್‌ ಪಿ ಜಿ ಪೂರೈಕೆಯ ಮೇಲೆ ಪರಿಣಾಮ ಮುಂದುವರಿದಿದೆ.
  • ಗೃಹಬಳಕೆಯ ಮನೆಗಳಿಗೆ ಎಲ್‌ಪಿಜಿ ಪೂರೈಕೆಗೆ ಆದ್ಯತೆ ನೀಡಲಾಗಿದೆ.
  • ಎಲ್‌ಪಿಜಿ ವಿತರಕರ ಬಳಿ ದಾಸ್ತಾನು ಸಂಪೂರ್ಣ ಖಾಲಿಯಾದ (dry-outs) ಬಗ್ಗೆ ಯಾವುದೇ ವರದಿಯಾಗಿಲ್ಲ.
  • ನಿನ್ನೆ ಉದ್ಯಮದ ಆಧಾರದ ಮೇಲೆ ಆನ್‌ ಲೈನ್ ಎಲ್‌ ಪಿ ಜಿ ಸಿಲಿಂಡರ್ ಬುಕಿಂಗ್ ಶೇಕಡಾ 99 ಕ್ಕೆ ಏರಿದೆ.
  • ಅಕ್ರಮ ವರ್ಗಾವಣೆಯನ್ನು ತಡೆಗಟ್ಟಲು 'ಡೆಲಿವರಿ ಅಥೆಂಟಿಕೇಶನ್ ಕೋಡ್' (DAC) ಆಧಾರಿತ ವಿತರಣೆಗಳು ಸುಮಾರು ಶೇಕಡಾ 93 ಕ್ಕೆ ಏರಿವೆ. ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಡಿಎಸಿ (DAC) ರವಾನೆಯಾಗುತ್ತದೆ.

ವಾಣಿಜ್ಯ ಎಲ್ಪಿ ಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:

  • ಒಟ್ಟು ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ಬಿಕ್ಕಟ್ಟಿನ ಮುಂಚಿನ ಮಟ್ಟದ ಶೇಕಡಾ 70 ಕ್ಕೆ ಹೆಚ್ಚಿಸಲಾಗಿದೆ, ಇದರಲ್ಲಿ ಶೇಕಡಾ 10 ರಷ್ಟು ಸುಧಾರಣೆ-ಆಧಾರಿತ (reform-linked) ಹಂಚಿಕೆ ಸೇರಿದೆ.
  • ಭಾರತ ಸರ್ಕಾರವು 06.04.2026 ರ ಪತ್ರದ ಮೂಲಕ, ವಲಸೆ ಕಾರ್ಮಿಕರಿಗೆ ವಿತರಿಸಲು ಪ್ರತಿ ರಾಜ್ಯದಲ್ಲಿ ಲಭ್ಯವಿರುವ 5 ಕೆಜಿ ಎಫ್‌ಟಿಎಲ್ (FTL) ಸಿಲಿಂಡರ್ ಗಳ ದೈನಂದಿನ ಪ್ರಮಾಣವನ್ನು ದ್ವಿಗುಣಗೊಳಿಸಲಾಗುತ್ತಿದೆ ಎಂದು ತಿಳಿಸಿದೆ. ಇದು ಮಾರ್ಚ್ 2-3, 2026 ರ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ನೀಡಲಾದ ಸರಾಸರಿ ದೈನಂದಿನ ಪೂರೈಕೆಯ (ಸಿಲಿಂಡರ್‌ಗಳ ಸಂಖ್ಯೆ) ಆಧಾರದ ಮೇಲೆ ಇರುತ್ತದೆ ಮತ್ತು 21.03.2026 ರ ಪತ್ರದಲ್ಲಿ ಉಲ್ಲೇಖಿಸಲಾದ ಶೇಕಡಾ 20 ರ ಮಿತಿಗಿಂತ ಹೆಚ್ಚಾಗಿರುತ್ತದೆ.
  • ಈ 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳು ಆಯಾ ರಾಜ್ಯದ ವಲಸೆ ಕಾರ್ಮಿಕರಿಗೆ ಮಾತ್ರ ಪೂರೈಕೆ ಮಾಡಲು ರಾಜ್ಯ ಸರ್ಕಾರದ ಸುಪರ್ದಿಯಲ್ಲಿರುತ್ತವೆ ಮತ್ತು ತೈಲ ಮಾರುಕಟ್ಟೆ ಕಂಪನಿಗಳ (OMCs) ನೆರವಿನೊಂದಿಗೆ ಇದನ್ನು ಕೈಗೊಳ್ಳಲಾಗುತ್ತದೆ.
  • ಫೆಬ್ರವರಿ-26 ರ ತಿಂಗಳಿನಲ್ಲಿ ಮಾರಾಟವಾದ ಒಟ್ಟು 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ ಗಳ ಸಂಖ್ಯೆ 21.7 ಲಕ್ಷವಾಗಿತ್ತು. ಆದರೆ, 1 ಏಪ್ರಿಲ್ 2026 ರಿಂದ ಸುಮಾರು 20.32 ಲಕ್ಷ 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳು ಮಾರಾಟವಾಗಿವೆ.
  • ನಿನ್ನೆ ದೇಶಾದ್ಯಂತ 82,000 ಕ್ಕೂ ಹೆಚ್ಚು 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳು ಮಾರಾಟವಾಗಿವೆ.
  • 3 ಏಪ್ರಿಲ್ 2026 ರಿಂದ, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ ಗಳಿಗಾಗಿ 9350 ಕ್ಕೂ ಹೆಚ್ಚು ಜಾಗೃತಿ ಶಿಬಿರಗಳನ್ನು ಆಯೋಜಿಸಿದ್ದು, ಅಲ್ಲಿ 1,53,000 ಕ್ಕೂ ಹೆಚ್ಚು 5 ಕೆಜಿ ಎಫ್‌ಟಿಎಲ್ ಸಿಲಿಂಡರ್ ಗಳು ಮಾರಾಟವಾಗಿವೆ.
  • ನಿನ್ನೆ 220 ಕ್ಕೂ ಹೆಚ್ಚು ಶಿಬಿರಗಳ ಮೂಲಕ 5436 - 5 ಕೆಜಿ ಎಫ್‌ಟಿಎಲ್ ಸಿಲಿಂಡರ್ ಗಳು ಮಾರಾಟವಾಗಿವೆ.
  • ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಎಲ್‌ಪಿಜಿ ವಿತರಣೆಯನ್ನು ಯೋಜಿಸಲು ಐಒಸಿಎಲ್ (IOCL), ಎಚ್‌ಪಿಸಿಎಲ್ (HPCL) ಮತ್ತು ಬಿಪಿಸಿಎಲ್ (BPCL) ನ ಕಾರ್ಯನಿರ್ವಾಹಕ ನಿರ್ದೇಶಕರ ಮೂವರು ಸದಸ್ಯರ ಸಮಿತಿಯು ರಾಜ್ಯ ಅಧಿಕಾರಿಗಳು ಮತ್ತು ಕೈಗಾರಿಕಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
  • ಏಪ್ರಿಲ್-26 ತಿಂಗಳಿನಲ್ಲಿ (27.04.26 ರವರೆಗೆ), ಒಟ್ಟು 1,75,205 ಮೆಟ್ರಿಕ್ ಟನ್ (92.21 ಲಕ್ಷಕ್ಕೂ ಹೆಚ್ಚು 19 ಕೆಜಿ ಎಲ್‌ಪಿಜಿ ಸಿಲಿಂಡರ್ ಗಳಿಗೆ ಸಮಾನವಾದ) ವಾಣಿಜ್ಯ ಎಲ್‌ ಪಿ ಜಿ ಮಾರಾಟವಾಗಿದೆ.
  • 27.04.2026 ರಂದು 9578 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ಪಿಜಿ (5.04 ಲಕ್ಷಕ್ಕೂ ಹೆಚ್ಚು 19 ಕೆಜಿ ಸಿಲಿಂಡರ್‌ಗಳಿಗೆ ಸಮಾನವಾದ) ಮಾರಾಟವಾಗಿದೆ.
  • ಫೆಬ್ರವರಿ-26 ರ ಅವಧಿಯಲ್ಲಿ ಸುಮಾರು 5000 ಮೆಟ್ರಿಕ್ ಟನ್ ಆಟೋ ಎಲ್‌ ಪಿ ಜಿ ಮಾರಾಟವಾಗಿದ್ದರೆ, ಏಪ್ರಿಲ್-26 ತಿಂಗಳಿನಲ್ಲಿ (27.04.2026 ರವರೆಗೆ) ಇದು 9500 ಮೆಟ್ರಿಕ್ ಟನ್‌ಗಿಂತ ಹೆಚ್ಚಾಗಿದೆ.
  • ಜನವರಿ-26 ಮತ್ತು ಫೆಬ್ರವರಿ-26 ರ ಅವಧಿಯಲ್ಲಿ ಸರಾಸರಿ ದಿನಕ್ಕೆ ಸುಮಾರು 177 ಮೆಟ್ರಿಕ್ ಟನ್ ಆಟೋ ಎಲ್‌ಪಿಜಿ ಮಾರಾಟವಾಗಿದ್ದರೆ, ಏಪ್ರಿಲ್-26 ರ ತಿಂಗಳಿನಲ್ಲಿ (27.04.26 ರವರೆಗೆ) ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಸರಾಸರಿ ಮಾರಾಟವು ದಿನಕ್ಕೆ ಸುಮಾರು 353 ಮೆಟ್ರಿಕ್ ಟನ್ ಆಗಿದೆ. ಇದು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಆಟೋ ಎಲ್‌ಪಿಜಿ ಮಾರಾಟದಲ್ಲಿ ಸುಮಾರು ಶೇಕಡಾ 100 ರಷ್ಟು ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ.

ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿಎನ್ಜಿ (PNG) ವಿಸ್ತರಣಾ ಉಪಕ್ರಮಗಳು

  • ಗ್ರಾಹಕರಿಗೆ ಆದ್ಯತೆ ನೀಡಲಾಗಿದ್ದು, ಗೃಹಬಳಕೆಯ ಪಿಎನ್‌ಜಿ (D-PNG) ಮತ್ತು ಸಿ ಎನ್‌ ಜಿ-ಸಾರಿಗೆಗೆ (CNG-Transport) ಶೇಕಡಾ 100 ರಷ್ಟು ಪೂರೈಕೆ ಮಾಡಲಾಗುತ್ತಿದೆ.
  • ರಸಗೊಬ್ಬರ ಕಾರ್ಖಾನೆಗಳಿಗೆ ಒಟ್ಟಾರೆ ಅನಿಲ ಹಂಚಿಕೆಯನ್ನು ಅವುಗಳ ಆರು ತಿಂಗಳ ಸರಾಸರಿ ಬಳಕೆಯ ಸುಮಾರು ಶೇಕಡಾ 95 ಕ್ಕ್ಕೆ ಹೆಚ್ಚಿಸಲಾಗಿದೆ.
  • ಹೆಚ್ಚುವರಿಯಾಗಿ, ಸಿಜಿಡಿ (CGD) ನೆಟ್‌ವರ್ಕ್ ಗಳ ಮೂಲಕ ಪೂರೈಕೆ ಸೇರಿದಂತೆ ಇತರ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಅನಿಲ ಪೂರೈಕೆಯನ್ನು ಶೇಕಡಾ 80 ರವರೆಗೆ ಹೆಚ್ಚಿಸಲಾಗಿದೆ.
  • ವಾಣಿಜ್ಯ ಎಲ್‌ ಪಿ ಜಿ ಲಭ್ಯತೆಯ ಕುರಿತಾದ ಆತಂಕಗಳನ್ನು ನಿವಾರಿಸಲು, ಹೋಟೆಲ್‌ಗಳು, ರೆಸ್ಟೋರೆಂಟ್ ‌ಗಳು ಮತ್ತು ಕ್ಯಾಂಟೀನ್ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ತಮ್ಮ ಎಲ್ಲಾ ಭೌಗೋಳಿಕ ಪ್ರದೇಶಗಳಲ್ಲಿ (GAs) ಪಿಎನ್‌ಜಿ ಸಂಪರ್ಕಗಳನ್ನು ನೀಡಲು ಆದ್ಯತೆ ನೀಡುವಂತೆ ಸಿಜಿಡಿ (CGD) ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ.
  • ಐಜಿಎಲ್ (IGL), ಎಂಜಿಎಲ್ (MGL), ಗೇಲ್ ಗ್ಯಾಸ್ (GAIL Gas) ಮತ್ತು ಬಿಪಿಸಿಎಲ್ (BPCL) ಸೇರಿದಂತೆ ಸಿಜಿಡಿ ಕಂಪನಿಗಳು ಗೃಹಬಳಕೆಯ ಮತ್ತು ವಾಣಿಜ್ಯ ಪಿಎನ್‌ಜಿ ಸಂಪರ್ಕಗಳಿಗೆ ಪ್ರೋತ್ಸಾಹಕಗಳನ್ನು ನೀಡುತ್ತಿವೆ.
  • ಸಿಜಿಡಿ ನೆಟ್‌ವರ್ಕ್‌ಗಳ ವಿಸ್ತರಣೆಗೆ ಅಗತ್ಯವಿರುವ ಅನುಮೋದನೆಗಳನ್ನು ತ್ವರಿತಗೊಳಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳನ್ನು ವಿನಂತಿಸಲಾಗಿದೆ.
  • ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ, ಎಲ್‌ ಪಿ ಜಿ ಯಿಂದ ಪಿ ಎನ್‌ ಜಿ ಗೆ ದೀರ್ಘಕಾಲೀನ ಪರಿವರ್ತನೆಗೆ ಸಹಾಯ ಮಾಡುವ ಷರತ್ತಿನ ಮೇಲೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಶೇಕಡಾ 10 ರಷ್ಟು ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ನೀಡಿದೆ.
  • 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪಿಎನ್‌ಜಿ ವಿಸ್ತರಣಾ ಸುಧಾರಣೆಗಳಿಗೆ ಸಂಬಂಧಿಸಿದ ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಪಡೆಯುತ್ತಿವೆ.
  • ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 24.03.26 ರ ಪತ್ರದ ಮೂಲಕ, ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪ್ರಕ್ರಿಯೆಗೊಳಿಸಲು 3 ತಿಂಗಳ ಅವಧಿಗೆ ವಿಶೇಷವಾಗಿ 'ಕಡಿಮೆ ಕಾಲಮಿತಿಯೊಂದಿಗೆ ಸಿಜಿಡಿ ಮೂಲಸೌಕರ್ಯಕ್ಕಾಗಿ ತ್ವರಿತ ಅನುಮೋದನಾ ಚೌಕಟ್ಟು' ಅಳವಡಿಸಿಕೊಂಡಿದೆ.
  • ಭಾರತ ಸರ್ಕಾರವು 24.03.2026 ರ ಗೆಜೆಟ್ ಮೂಲಕ, ಅಗತ್ಯ ವಸ್ತುಗಳ ಕಾಯ್ದೆ, 1955 ರ ಅಡಿಯಲ್ಲಿ 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ (ಪೈಪ್‌ಲೈನ್‌ಗಳು ಮತ್ತು ಇತರ ಸೌಲಭ್ಯಗಳ ಅಳವಡಿಕೆ, ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026' ಅನ್ನು ಅಧಿಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್‌ಲೈನ್‌ಗಳನ್ನು ಅಳವಡಿಸಲು ಮತ್ತು ವಿಸ್ತರಿಸಲು ಸುವ್ಯವಸ್ಥಿತ ಮತ್ತು ಕಾಲಮಿತಿಯ ಚೌಕಟ್ಟನ್ನು ಒದಗಿಸುತ್ತದೆ. ಇದು ಅನುಮೋದನೆಗಳಲ್ಲಿನ ವಿಳಂಬ ಮತ್ತು ಭೂಮಿಯ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಹಾಗೂ ವಸತಿ ಪ್ರದೇಶಗಳು ಸೇರಿದಂತೆ ನೈಸರ್ಗಿಕ ಅನಿಲ ಮೂಲಸೌಕರ್ಯದ ವೇಗದ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ.
  • ಇದು ಪಿಎನ್‌ಜಿ ನೆಟ್‌ವರ್ಕ್ ಬೆಳವಣಿಗೆಯನ್ನು ವೇಗಗೊಳಿಸಲು, ಕೊನೆಯ ಹಂತದ ಸಂಪರ್ಕವನ್ನು (last-mile connectivity) ಸುಧಾರಿಸಲು ಮತ್ತು ಸ್ವಚ್ಛ ಇಂಧನಗಳ ಕಡೆಗೆ ಪರಿವರ್ತನೆಗೆ ಬೆಂಬಲ ನೀಡುವ ನಿರೀಕ್ಷೆಯಿದೆ, ಆ ಮೂಲಕ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಅನಿಲ-ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುತ್ತದೆ.
  • PNGRB ಗೃಹಬಳಕೆಯ ಪಿ ಎನ್‌ ಜಿ ಸಂಪರ್ಕಗಳನ್ನು ತ್ವರಿತಗೊಳಿಸುವಂತೆ ಸಿಜಿಡಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಪಿಎನ್‌ಜಿ ವಿಸ್ತರಣೆಯ ವೇಗವನ್ನು ಕಾಯ್ದುಕೊಳ್ಳಲು 'ನ್ಯಾಷನಲ್ ಪಿಎನ್‌ಜಿ ಡ್ರೈವ್ 2.0' ಅನ್ನು 30.06.2026 ರವರೆಗೆ ವಿಸ್ತರಿಸಲಾಗಿದೆ.
  • ಸ್ವಚ್ಛ, ಹೆಚ್ಚು ಸುರಕ್ಷಿತ ಮತ್ತು ಸ್ವಾವಲಂಬಿ ಇಂಧನ ಭವಿಷ್ಯವನ್ನು ಉತ್ತೇಜಿಸಲು, ಭಾರತ ಸರ್ಕಾರವು ಮಾದರಿ ಕರಡು 'ರಾಜ್ಯ ಸಿಬಿಜಿ (CBG) ನೀತಿ'ಯನ್ನು ಸಿದ್ಧಪಡಿಸಿದೆ. ಈ ಮಾದರಿ ನೀತಿಯು ರಾಜ್ಯಗಳು ಸಿಬಿಜಿ ಅಭಿವೃದ್ಧಿಗಾಗಿ ತಮ್ಮದೇ ಆದ ಹೂಡಿಕೆದಾರ ಸ್ನೇಹಿ ಮತ್ತು ಅನುಷ್ಠಾನ-ಆಧಾರಿತ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಒಂದು ಸಮಗ್ರ ಮತ್ತು ಹೊಂದಿಕೊಳ್ಳುವ ಮಾರ್ಗದರ್ಶಿ ಚೌಕಟ್ಟಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ. ಇದನ್ನು ಆಯ್ದುಕೊಳ್ಳುವ ರಾಜ್ಯಗಳಿಗೆ ಮುಂದಿನ ಹಂತದ ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ಹಂಚಿಕೆಗಾಗಿ ಆದ್ಯತೆ ನೀಡಲಾಗುವುದು.
  • ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) 07.04.2026 ರ ಆದೇಶದ ಮೂಲಕ, ಸಿಜಿಡಿ ನೆಟ್‌ವರ್ಕ್/ಮೂಲಸೌಕರ್ಯಕ್ಕಾಗಿ 15 ದಿನಗಳ ಒಳಗೆ ಸ್ಥಾಪನೆಗೆ ಒಪ್ಪಿಗೆ ಅಥವಾ ಕಾರ್ಯಾಚರಣೆಗೆ ಒಪ್ಪಿಗೆ ನೀಡಲು ಎಸ್‌ಪಿಸಿಬಿ (SPCB)/ಪಿಸಿಸಿ (PCC)ಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಸಿಪಿಸಿಬಿ (CPCB) ಗೆ ಸೂಚಿಸಿದೆ.
  • ಮಾರ್ಚ್ 2026 ರಿಂದ, ಸುಮಾರು 5.60 ಲಕ್ಷ ಪಿಎನ್‌ಜಿ ಸಂಪರ್ಕಗಳಿಗೆ ಅನಿಲ ಪೂರೈಕೆ (gasified) ಮಾಡಲಾಗಿದೆ ಮತ್ತು ಹೆಚ್ಚುವರಿ 2.64 ಲಕ್ಷ ಸಂಪರ್ಕಗಳಿಗೆ ಮೂಲಸೌಕರ್ಯವನ್ನು ನಿರ್ಮಿಸಲಾಗಿದೆ, ಈ ಮೂಲಕ ಒಟ್ಟು ಸಂಖ್ಯೆ 8.24 ಲಕ್ಷಕ್ಕೆ ತಲುಪಿದೆ. ಇದಲ್ಲದೆ, ಸುಮಾರು 6.29 ಲಕ್ಷ ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ.
  • 27.04.2026 ರವರೆಗೆ, 42,800 ಕ್ಕೂ ಹೆಚ್ಚು ಪಿಎನ್‌ಜಿ ಗ್ರಾಹಕರು MYPNGD.in ವೆಬ್‌ಸೈಟ್ ಮೂಲಕ ತಮ್ಮ ಎಲ್‌ಪಿಜಿ ಸಂಪರ್ಕಗಳನ್ನು ಬಿಟ್ಟುಕೊಟ್ಟಿದ್ದಾರೆ.

ಕಚ್ಚಾ ತೈಲದ ಸ್ಥಿತಿ ಮತ್ತು ಸಂಸ್ಕರಣಾಗಾರಗಳ ಕಾರ್ಯಾಚರಣೆ

  • ಎಲ್ಲಾ ಸಂಸ್ಕರಣಾಗಾರಗಳು ಸಮರ್ಪಕ ಕಚ್ಚಾ ತೈಲದ ದಾಸ್ತಾನಿನೊಂದಿಗೆ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ, ಹಾಗೆಯೇ ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನನ್ನು ಕಾಯ್ದುಕೊಳ್ಳಲಾಗುತ್ತಿದೆ.
  • ದೇಶೀಯ ಬಳಕೆಯನ್ನು ಬೆಂಬಲಿಸಲು ಸಂಸ್ಕರಣಾಗಾರಗಳಿಂದ ಗೃಹಬಳಕೆಯ ಎಲ್‌ ಪಿ ಜಿ (LPG) ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
  • ದೇಶೀಯ ಮಾರುಕಟ್ಟೆಗೆ ಪೆಟ್ರೋಕೆಮಿಕಲ್ ಫೀಡ್‌ಸ್ಟಾಕ್ (feedstock) ಪೂರೈಕೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತರ-ಸಚಿವಾಲಯ ಜಂಟಿ ಕಾರ್ಯಕಾರಿ ಗುಂಪನ್ನು (JWG) ರಚಿಸಲಾಗಿದೆ. ತರುವಾಯ, ಭಾರತ ಸರ್ಕಾರವು 01.04.2026 ರ ಆದೇಶದ ಮೂಲಕ, ಉನ್ನತ ತಂತ್ರಜ್ಞಾನ ಕೇಂದ್ರವು (CHT) ನಿರ್ಧರಿಸಿದಂತೆ ನಿರ್ಣಾಯಕ ವಲಯಗಳಿಗೆ ನಿರ್ದಿಷ್ಟ ಕನಿಷ್ಠ ಪ್ರಮಾಣದ C3 ಮತ್ತು C4 ಸ್ಟ್ರೀಮ್‌ ಗಳನ್ನು ಲಭ್ಯವಾಗುವಂತೆ ಮಾಡಲು ಪೆಟ್ರೋಕೆಮಿಕಲ್ ಸಂಕೀರ್ಣಗಳು ಸೇರಿದಂತೆ ತೈಲ ಸಂಸ್ಕರಣಾ ಕಂಪನಿಗಳಿಗೆ ಅನುಮತಿ ನೀಡಿದೆ.
  • ಔಷಧೀಯ ಇಲಾಖೆ, ರಾಸಾಯನಿಕ ಮತ್ತು ಪೆಟ್ರೋ ಕೆಮಿಕಲ್ಸ್ ಇಲಾಖೆ (DCPC), ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ (DPIIT) ಗಳಿಂದ ಬಂದ ವಿನಂತಿಗಳ ಆಧಾರದ ಮೇಲೆ, ಎಲ್‌ಪಿಜಿ ಪೂಲ್‌ನಿಂದ ಔಷಧೀಯ ಮತ್ತು ರಾಸಾಯನಿಕ ವಲಯದ ಕಂಪನಿಗಳಿಗೆ ದಿನಕ್ಕೆ 1000 ಮೆಟ್ರಿಕ್ ಟನ್ (MT) ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ.
  • 9 ಏಪ್ರಿಲ್ 2026 ರಿಂದ, ಮುಂಬೈ, ಕೊಚ್ಚಿ, ವೈಜಾಗ್, ಚೆನ್ನೈ ಮತ್ತು ಮಥುರಾ ಸಂಸ್ಕರಣಾಗಾರಗಳಿಂದ ರಾಸಾಯನಿಕ, ಔಷಧೀಯ ಮತ್ತು ಪೇಂಟ್ ಉದ್ಯಮಕ್ಕೆ 8300 ಮೆಟ್ರಿಕ್ ಟನ್‌ಗಿಂತ ಹೆಚ್ಚು ಪ್ರೊಪಿಲೀನ್ (propylene) ಮತ್ತು 870 ಮೆಟ್ರಿಕ್ ಟನ್‌ ಗಿಂತ ಹೆಚ್ಚು ಬ್ಯುಟೈಲ್ ಅಕ್ರಿಲೇಟ್ (Butyl Acrylate) ಅನ್ನು ಮಾರಾಟ ಮಾಡಲಾಗಿದೆ.

ಇಂಧನ ರೀಟೇಲ್ ಲಭ್ಯತೆ ಮತ್ತು ಬೆಲೆ ನಿಗದಿ ಕ್ರಮಗಳು

  • ದೇಶಾದ್ಯಂತ ಎಲ್ಲಾ ರೀಟೇಲ್ ಔಟ್‌ ಲೆಟ್ ಗಳು (ಪೆಟ್ರೋಲ್ ಬಂಕ್‌ಗಳು) ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
  • ಪಶ್ಚಿಮ ಏಷ್ಯಾ ಬಿಕ್ಕಟ್ಟು ಕಚ್ಚಾ ತೈಲ ಬೆಲೆಗಳಲ್ಲಿ ಅಸಹಜ ಏರಿಕೆಗೆ ಕಾರಣವಾಗಿದೆ; ಆದಾಗ್ಯೂ, ಗ್ರಾಹಕರನ್ನು ರಕ್ಷಿಸಲು ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ₹10 ರಷ್ಟು ಇಳಿಸಿದೆ.
  • ದೇಶೀಯ ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರವು 11.04.2026 ರ ಗೆಜೆಟ್ ಅಧಿಸೂಚನೆಯ ಮೂಲಕ ಡೀಸೆಲ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ರೂ. 55.50 ಕ್ಕೆ ಮತ್ತು ಎಟಿಎಫ್ (ATF) ಮೇಲಿನ ಸುಂಕವನ್ನು ಪ್ರತಿ ಲೀಟರ್‌ಗೆ ರೂ. 42 ಕ್ಕೆ ಹೆಚ್ಚಿಸಿದೆ.
  • ವದಂತಿಗಳಿಂದಾಗಿ ಕೆಲವು ರೀಟೇಲ್ ಔಟ್‌ಲೆಟ್ ‌ಗಳಲ್ಲಿ ಆತಂಕದ ಖರೀದಿ (panic buying) ಕಂಡುಬಂದಿದೆ. ದೇಶದ ಎಲ್ಲಾ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದು ತಿಳಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ‌ನ ಸಾಮಾನ್ಯ ರೀಟೇಲ್ ಬೆಲೆಗಳು ಬದಲಾಗಿಲ್ಲ ಮತ್ತು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ (PSU OMCs) ರೀಟೇಲ್ ಔಟ್‌ಲೆಟ್‌ ಗಳಲ್ಲಿ ಯಾವುದೇ ಬೆಲೆ ಏರಿಕೆ ಮಾಡಲಾಗಿಲ್ಲ.

ಸೀಮೆಎಣ್ಣೆ ಲಭ್ಯತೆ ಮತ್ತು ವಿತರಣಾ ಕ್ರಮಗಳು

  • ಸಾಮಾನ್ಯ ಹಂಚಿಕೆಗಿಂತ ಹೆಚ್ಚುವರಿಯಾಗಿ 48,000 ಕೆಎಲ್ (KL) ಸೀಮೆಎಣ್ಣೆಯನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮಂಜೂರು ಮಾಡಲಾಗಿದೆ.
  • 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೀಮೆಎಣ್ಣೆ (SKO) ಹಂಚಿಕೆ ಆದೇಶಗಳನ್ನು ಹೊರಡಿಸಿವೆ, ಆದರೆ ಹಿಮಾಚಲ ಪ್ರದೇಶ ಮತ್ತು ಲಡಾಖ್ ಯಾವುದೇ ಅಗತ್ಯವಿಲ್ಲ ಎಂದು ತಿಳಿಸಿವೆ.

ಕಡಲ ಸುರಕ್ಷತೆ ಮತ್ತು ಶಿಪ್ಪಿಂಗ್ ಕಾರ್ಯಾಚರಣೆಗಳು

ಬಂದರು, ನೌಕಾಯಾನ ಮತ್ತು ಜಲಮಾರ್ಗಗಳ ಸಚಿವಾಲಯವು ಪರ್ಷಿಯನ್ ಗಲ್ಫ್‌ ನಲ್ಲಿನ ಪ್ರಸ್ತುತ ಕಡಲ ಪರಿಸ್ಥಿತಿಯ ಕುರಿತು ಅಪ್‌ ಡೇಟ್ ನೀಡಿದೆ, ಈ ಪ್ರದೇಶದಲ್ಲಿ ಭಾರತೀಯ ಹಡಗುಗಳು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳುತ್ತಿರುವ ಕ್ರಮಗಳ ವಿವರಗಳನ್ನು ನೀಡಿದೆ. ಈ ಕೆಳಗಿನಂತೆ ತಿಳಿಸಲಾಗಿದೆ:

  • ನಾವಿಕರ ಕಲ್ಯಾಣ ಮತ್ತು ಅಡೆತಡೆಯಿಲ್ಲದ ಕಡಲ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಬಂದರು, ನೌಕಾಯಾನ ಮತ್ತು ಜಲಮಾರ್ಗಗಳ ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಮಿಷನ್ ಗಳು ಮತ್ತು ಕಡಲ ಮಧ್ಯಸ್ಥಗಾರರೊಂದಿಗೆ ಸಮನ್ವಯವನ್ನು ಮುಂದುವರೆಸಿದೆ.
  • ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಘಟನೆಗಳು ವರದಿಯಾಗಿಲ್ಲ.
  • ಡಿಜಿ ಶಿಪ್ಪಿಂಗ್ ಕಂಟ್ರೋಲ್ ರೂಮ್ ಅಪ್‌ಡೇಟ್: ಕಂಟ್ರೋಲ್ ರೂಮ್ ಸಕ್ರಿಯಗೊಂಡಾಗಿನಿಂದ 7,920 ಕರೆಗಳನ್ನು ಮತ್ತು 16,838 ಕ್ಕೂ ಹೆಚ್ಚು ಇಮೇಲ್‌ ಗಳನ್ನು ನಿರ್ವಹಿಸಿದೆ. ಕಳೆದ 24 ಗಂಟೆಗಳಲ್ಲಿ, 140 ಕರೆಗಳು ಮತ್ತು 180 ಇಮೇಲ್ ‌ಗಳು ಸ್ವೀಕರಿಸಲ್ಪಟ್ಟಿವೆ.
  • ತಾಯ್ನಾಡಿಗೆ ವಾಪಸಾತಿ ಅಪ್‌ಡೇಟ್: ಸಚಿವಾಲಯವು, ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ (ಡಿಜಿ ಶಿಪ್ಪಿಂಗ್) ಮೂಲಕ, ಇಲ್ಲಿಯವರೆಗೆ 2,800 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ವಾಪಸ್ ಕರೆತರುವಲ್ಲಿ ಸಹಕರಿಸಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಗಲ್ಫ್ ಪ್ರದೇಶದ ವಿವಿಧ ಸ್ಥಳಗಳಿಂದ 24 ನಾವಿಕರು ಸೇರಿದ್ದಾರೆ.
  • ಬಂದರು ಕಾರ್ಯಾಚರಣೆಗಳು: ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಾಮಾನ್ಯವಾಗಿವೆ, ಯಾವುದೇ ದಟ್ಟಣೆ ವರದಿಯಾಗಿಲ್ಲ.

ಪ್ರದೇಶದಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ಬೆಳವಣಿಗೆಗಳನ್ನು ಗಮನಿಸುತ್ತಿದೆ ಮತ್ತು ಆ ಪ್ರದೇಶದಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಕೇಂದ್ರೀಕೃತ ಪ್ರಯತ್ನಗಳನ್ನು ಮಾಡುತ್ತಿದೆ. ಈ ಕೆಳಗಿನ ಮಾಹಿತಿಯನ್ನು ನೀಡಲಾಗಿದೆ:

  • ಭಾರತೀಯ ನಾಗರಿಕರು ಮತ್ತು ಅವರ ಕುಟುಂಬಗಳ ಪ್ರಶ್ನೆಗಳಿಗೆ ಉತ್ತರಿಸಲು ಸಚಿವಾಲಯದಲ್ಲಿನ ಮೀಸಲಾದ ವಿಶೇಷ ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದೆ.
  • ಮಾಹಿತಿ ಹಂಚಿಕೆ ಮತ್ತು ಪ್ರಯತ್ನಗಳ ಉತ್ತಮ ಸಮನ್ವಯಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತ ಸಂಪರ್ಕದಲ್ಲಿದೆ.
  • ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು ಸಕಾಲಿಕ ನೆರವು ನೀಡಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಹೆಲ್ಪ್‌ಲೈನ್‌ಗಳನ್ನು ನಡೆಸುತ್ತಿವೆ ಮತ್ತು ನಮ್ಮ ನಾಗರಿಕರಿಗೆ ಸಕ್ರಿಯವಾಗಿ ಸಹಾಯ ಮಾಡುತ್ತಿವೆ. ಅವು ಸ್ಥಳೀಯ ಸರ್ಕಾರಗಳೊಂದಿಗೂ ನಿಕಟ ಸಂಪರ್ಕದಲ್ಲಿವೆ.
  • ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳು, ವಿಮಾನ ಮತ್ತು ಪ್ರಯಾಣದ ಪರಿಸ್ಥಿತಿಗಳು, ಕಾನ್ಸುಲರ್ ಸೇವೆಗಳು ಮತ್ತು ಸಮುದಾಯಕ್ಕಾಗಿ ಕೈಗೊಳ್ಳಲಾಗುತ್ತಿರುವ ವಿವಿಧ ಕಲ್ಯಾಣ ಕ್ರಮಗಳಿಗೆ ಸಂಬಂಧಿಸಿದ ಮಾಹಿತಿ ಸೇರಿದಂತೆ ನವೀಕೃತ ಸಲಹೆಗಳನ್ನು (advisories) ಹೊರಡಿಸಲಾಗುತ್ತಿದೆ.
  • ಭಾರತೀಯ ಮಿಷನ್ ‌ಗಳು ಅಲ್ಲಿ ವಾಸವಿರುವ ಭಾರತೀಯ ಸಮುದಾಯದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಅವರು ತಮ್ಮ ಕಳಕಳಿಗಳನ್ನು ಪರಿಹರಿಸಲು ಭಾರತೀಯ ಸಮುದಾಯದ ಸಂಘಗಳು, ಸಂಸ್ಥೆಗಳು, ವೃತ್ತಿಪರ ಗುಂಪುಗಳು ಮತ್ತು ಭಾರತೀಯ ಕಂಪನಿಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದಾರೆ.
  • ಈ ಪ್ರದೇಶದಲ್ಲಿರುವ ಭಾರತೀಯ ನಾವಿಕರ ಕಲ್ಯಾಣಕ್ಕೆ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತಿದೆ. ಭಾರತೀಯ ಮಿಷನ್‌ಗಳು ಅವರಿಗೆ ಸ್ಥಳೀಯ ಅಧಿಕಾರಿಗಳು ಮತ್ತು ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುವುದು, ಕಾನ್ಸುಲರ್ ನೆರವು ನೀಡುವುದು ಮತ್ತು ಭಾರತಕ್ಕೆ ಮರಳುವ ವಿನಂತಿಗಳಿಗೆ ಸಹಾಯ ಮಾಡುವುದು ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುತ್ತಿವೆ.
  • ಆ ಪ್ರದೇಶದಿಂದ ಭಾರತದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ವಿಮಾನಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟಾರೆ ವಿಮಾನ ಪ್ರಯಾಣದ ಪರಿಸ್ಥಿತಿಯು ಸುಧಾರಿಸುತ್ತಿದೆ.
  • ಯುಎಇನಲ್ಲಿ (UAE), ಏರ್‌ಲೈನ್ಸ್ ‌ಗಳು ಕಾರ್ಯಾಚರಣೆ ಮತ್ತು ಸುರಕ್ಷತಾ ಅಂಶಗಳ ಆಧಾರದ ಮೇಲೆ ಯುಎಇ ಮತ್ತು ಭಾರತದ ನಡುವೆ ಸೀಮಿತ ವಾಣಿಜ್ಯ ವಿಮಾನಗಳನ್ನು ನಡೆಸುತ್ತಿವೆ; ಇಂದು ಯುಎಇ ಮತ್ತು ಭಾರತದ ನಡುವೆ ಸುಮಾರು 105 ವಿಮಾನಗಳನ್ನು ನಿರೀಕ್ಷಿಸಲಾಗಿದೆ.
  • ಸೌದಿ ಅರೇಬಿಯಾ ಮತ್ತು ಓಮನ್‌ನ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳು ಸಂಚರಿಸುತ್ತಿವೆ.
  • ಕತಾರ್ ವಾಯುಪ್ರದೇಶವು ಭಾಗಶಃ ತೆರೆದಿದ್ದು, ಕತಾರ್ ಏರ್ವೇಸ್ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳನ್ನು ನಡೆಸುತ್ತಿದೆ. ಏರ್ ಇಂಡಿಯಾ ಮತ್ತು ಇಂಡಿಗೋ ಕೂಡ ಶೀಘ್ರದಲ್ಲೇ ಕತಾರ್‌ನಿಂದ ಭಾರತಕ್ಕೆ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಲು ಯೋಜಿಸುತ್ತಿವೆ.
  • ಕುವೈತ್ ವಾಯುಪ್ರದೇಶ ತೆರೆದಿದೆ. ಜಜೀರಾ ಏರ್ವೇಸ್ ಮತ್ತು ಕುವೈತ್ ಏರ್ವೇಸ್ ಕುವೈತ್‌ನಿಂದ ಭಾರತಕ್ಕೆ ಸೀಮಿತ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ.
  • ಬಹ್ರೇನ್ ವಾಯುಪ್ರದೇಶ ತೆರೆದಿದೆ. ಗಲ್ಫ್ ಏರ್ ಬಹ್ರೇನ್‌ನಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳನ್ನು ನಡೆಸುತ್ತಿದೆ.
  • ಇರಾಕ್ ವಾಯುಪ್ರದೇಶವು ಸೀಮಿತ ವಿಮಾನ ಕಾರ್ಯಾಚರಣೆಯೊಂದಿಗೆ ತೆರೆದಿದೆ, ಇದನ್ನು ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಬಳಸಿಕೊಳ್ಳಬಹುದು.
  • ಇರಾನ್ ವಾಯುಪ್ರದೇಶವು ಕಾರ್ಗೋ ಮತ್ತು ಚಾರ್ಟರ್ಡ್ ವಿಮಾನಗಳಿಗಾಗಿ ಭಾಗಶಃ ತೆರೆದಿದೆ. ಭಾರತೀಯ ನಾಗರಿಕರು ಇರಾನ್‌ಗೆ ಪ್ರಯಾಣಿಸುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ ಮತ್ತು ಈಗಾಗಲೇ ಅಲ್ಲಿರುವವರು ಭಾರತೀಯ ರಾಯಭಾರ ಕಚೇರಿಯ ಬೆಂಬಲದೊಂದಿಗೆ ಭೂ ಗಡಿ ಮಾರ್ಗಗಳ ಮೂಲಕ ಹೊರಬರಲು ಸೂಚಿಸಲಾಗಿದೆ. ಇಲ್ಲಿಯವರೆಗೆ, ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 2,461 ಭಾರತೀಯ ನಾಗರಿಕರನ್ನು ಭೂ ಗಡಿ ಮಾರ್ಗಗಳ ಮೂಲಕ ಇರಾನ್‌ ನಿಂದ ಹೊರಬರಲು ಅನುಕೂಲ ಮಾಡಿಕೊಟ್ಟಿದೆ.
  • ಇಸ್ರೇಲ್ ವಾಯುಪ್ರದೇಶ ತೆರೆದಿದೆ ಮತ್ತು ಸೀಮಿತ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಂಡಿದ್ದು, ಇದನ್ನು ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಬಳಸಿಕೊಳ್ಳಬಹುದು.

 

*****


(ಪ್ರಕಟಣೆ ಐ.ಡಿ.: 2256393) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Gujarati , Tamil , Telugu , Malayalam