ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಔಷಧ ಬೇಡಿಕೆ ಕಡಿತಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್ ಎ ಪಿ ಡಿ ಡಿ ಆರ್) ಅಡಿಯಲ್ಲಿ ಮೇಲ್ವಿಚಾರಣೆ ಮತ್ತು ಸಾಂಸ್ಥಿಕ ಸಮನ್ವಯ ಬಲಪಡಿಸಲು ನಶಾ ಮುಕ್ತ ಭಾರತ ಅಭಿಯಾನ (ಎನ್ ಎಂ ಬಿ ಎ) 2.0 ಅಪ್ಲಿಕೇಶನ್ ಗೆ ಚಾಲನೆ

ಪ್ರಕಟಣಾ ದಿನಾಂಕ: 25 APR 2026 10:42AM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು 272 ಅತ್ಯಂತ ದುರ್ಬಲ ಜಿಲ್ಲೆಗಳಲ್ಲಿ 2020ರ ಆಗಸ್ಟ್ 15 ರಂದು ನಶಾ ಮುಕ್ತ ಭಾರತ ಅಭಿಯಾನ (ಎನ್ ಎಂ ಬಿ ಎ) ಅನ್ನು ಆರಂಭಿಸಿತು ಮತ್ತು ಇದೀಗ ಅದನ್ನು 2023ರ ಆಗಸ್ಟ್ 15 ರಿಂದ ಜಾರಿಗೆ ಬರುವಂತೆ ದೇಶದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಗಿದೆ. ನಶಾ ಮುಕ್ತ ಭಾರತ ಅಭಿಯಾನವು ಜನಸಾಮಾನ್ಯರನ್ನು ತಲುಪಲು ಮತ್ತು ಮಾದಕವಸ್ತು ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಉದ್ದೇಶಿಸಿದೆ.

ಈವರೆಗೆ 9.5 ಕೋಟಿಗೂ ಅಧಿಕ ಯುವಕರು 6.47 ಕೋಟಿಗೂ ಅಧಿಕ ಮಹಿಳೆಯರು ಮತ್ತು 28 ಸಾವಿರಕ್ಕೂ ಅಧಿಕ ನಶಾ ಮುಕ್ತಿ ಮಿತ್ರ (ಮೊದಲು ಮಾಸ್ಟರ್ ಸ್ವಯಂಸೇವಕರು ಎಂದು ಕರೆಯಲಾಗುತ್ತಿತ್ತು) ಸೇರಿದಂತೆ 26 ಕೋಟಿಗೂ ಅಧಿಕ ಜನರಿಗೆ ದೇಶಾದ್ಯಂತ ಶಿಕ್ಷಣ ಸಂಸ್ಥೆಗಳು ಸೇರಿದಂತೆ ತಳಮಟ್ಟದಲ್ಲಿ ಕೈಗೊಂಡ 8.3 ಲಕ್ಷಕ್ಕೂ ಅಧಿಕ  ಚಟುವಟಿಕೆಗಳ ಮೂಲಕ ಮಾದಕವಸ್ತು ಬಳಕೆಯ ಬಗ್ಗೆ ಸಂವೇದನಾಶೀಲತೆ ಮೂಡಿಸಲಾಗಿದೆ.  

ಔಷಧ ಬೇಡಿಕೆ ಕಡಿತಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್ ಎ ಪಿ ಡಿ ಡಿ ಆರ್)  ಮೇಲ್ವಿಚಾರಣೆ ಮತ್ತು ಜಾರಿ ನಿಟ್ಟಿನಲ್ಲಿ ಸಮನ್ವಯ ಬಲವರ್ಧನೆಗೆ ನವೀಕರಿಸಿದ ನಶಾ ಮುಕ್ತ ಭಾರತ ಅಭಿಯಾನ (ಎನ್ ಎಂ ಬಿ ಎ) 2.0 ಅಪ್ಲಿಕೇಶನ್ ಅನ್ನು ಪಂಜಾಬ್‌ನ ಗೌರವಾನ್ವಿತ ರಾಜ್ಯಪಾಲರು ಮತ್ತು ಚಂಡೀಗಢದ ಆಡಳಿತಾಧಿಕಾರಿ ಶ್ರೀ ಗುಲಾಬ್ ಚಂದ್ ಕಟಾರಿಯಾ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರು 2026ರ ಏಪ್ರಿಲ್ 24ರಂದು ಚಿಂತನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಿದರು. ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮತ್ತು ಸಾಂಸ್ಥಿಕ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಸಂಸ್ಥೆಗಳ ನಡುವೆ ನೈಜ-ಸಮಯದ ವರದಿ, ಮೇಲ್ವಿಚಾರಣೆ ಮತ್ತು ಸಮನ್ವಯವನ್ನು ಸುಗಮಗೊಳಿಸಲು ರಾಜ್ಯಗಳು/ಜಿಲ್ಲೆಗಳು ಮತ್ತು ಇತರ ಪಾಲುದಾರರಿಗೆ ವರ್ಧಿತ ಅಪ್ಲಿಕೇಶನ್ ಅನ್ನು ಕೇಂದ್ರೀಕೃತ ಡಿಜಿಟಲ್ ಸಾಧನವಾಗಿ ವಿನ್ಯಾಸಗೊಳಿಸಲಾಗಿದೆ. ನವೀಕರಿಸಿದ ಆವೃತ್ತಿಯು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದತ್ತಾಂಶ ಆಧರಿಸಿದ  ಆಡಳಿತವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದ್ದು, ಹಾಲಿ ಇದ್ದ ಸಾಮರ್ಥ್ಯಗಳ ಮೇಲೆ ಅದನ್ನು ರೂಪಿಸಲಾಗಿದೆ.

ಎನ್ ಎಂ ಬಿ ಎ ಅಪ್ಲಿಕೇಶನ್ ಪ್ರಸ್ತುತ ಅಧಿಕೃತ ಬಳಕೆದಾರರಿಗೆ ಲಭ್ಯವಿದೆ, ಇದು ನಶಾ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಚಟುವಟಿಕೆಗಳನ್ನು ಅಪ್‌ಲೋಡ್ ಮಾಡುವ ಮತ್ತು ನಿಗಾ ಇಡುವಲ್ಲಿ ರಾಜ್ಯಗಳು, ಜಿಲ್ಲೆಗಳು, ಆಧ್ಯಾತ್ಮಿಕ ಸಂಸ್ಥೆಗಳು ಮತ್ತು ಇತರ ಪಾಲುದಾರರನ್ನು ನೈಜ-ಸಮಯದ ಗೋಚರತೆಯೊಂದಿಗೆ ಏಕೀಕೃತ ಡ್ಯಾಶ್‌ಬೋರ್ಡ್ ಮೂಲಕ ಬೆಂಬಲಿಸುತ್ತದೆ. ಜಾಗೃತಿ ಪ್ರಯತ್ನಗಳನ್ನು ಸುಗಮಗೊಳಿಸಲು ನಶಾ ಮುಕ್ತಿ ಮಿತ್ರರಿಗೆ ಮೂಲಭೂತ ಸಂವಹನ ಬೆಂಬಲದೊಂದಿಗೆ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಸಾಮಗ್ರಿಗಳನ್ನು ಒದಗಿಸುವ ಮೂಲಕ ಇದು ಸಂಪನ್ಮೂಲ ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಅಪ್ಲಿಕೇಶನ್ ಮಾಸ್ಟರ್ ಸ್ವಯಂಸೇವಕರನ್ನು (ನಶಾ ಮುಕ್ತಿ ಮಿತ್ರ)  ಸೇರ್ಪಡೆ ಮತ್ತು ನಿರ್ವಹಿಸಲು ಸರಳ ವ್ಯವಸ್ಥೆಯನ್ನು ಒಳಗೊಂಡಿದೆ ಮತ್ತು ಸಂಸ್ಥೆಗಳು ತಮ್ಮ ಸಂಪರ್ಕದ ಭಾಗವಾಗಿ ಪ್ರತಿಜ್ಞೆ ಸ್ವೀಕರಿಸುವ ಚಟುವಟಿಕೆಗಳನ್ನು ಸಂಘಟಿಸಲು ಅನುವು ಮಾಡಿಕೊಡುತ್ತದೆ. ಅದರ ಜೊತೆಗೆ ಇದು ಪ್ರಮುಖ ಸಹಾಯವಾಣಿ ಸಂಖ್ಯೆಗಳು ಲಭ್ಯವಾಗುವಂತೆ ಮಾಡುತ್ತದೆ, ಅಂದರೆ ವ್ಯಸನ ಮುಕ್ತಿ ಮತ್ತು ಮಾನಸಿಕ ಆರೋಗ್ಯ ಬೆಂಬಲ ಸೇವೆಗಳನ್ನು ಒಳಗೊಂಡಂತೆ ಡೆಡ್‌ಡಿಕ್ಷನ್ ಸಹಾಯವಾಣಿ ಮತ್ತು ಮಾನಸ್ ಸಹಾಯವಾಣಿ, ಜೊತೆಗೆ ಮೂಲಭೂತ ತಾಂತ್ರಿಕ ಸಹಾಯ ಸಂಪರ್ಕಗಳನ್ನು ಒದಗಿಸುತ್ತದೆ.

ಎನ್ ಎಂ ಬಿ ಎ 2.0 ಅಪ್ಲಿಕೇಶನ್ನಲ್ಲಿ ಹೊಸ ವೈಶಿಷ್ಟ್ಯಗಳು

ಹಾಲಿ ಅಸ್ತಿತ್ವದಲ್ಲಿರುವ ವೈಶಿಷ್ಟ್ಯಗಳ ಜೊತೆಗೆ ಎನ್ ಎಂ ಬಿ ಎ 2.0 ಅಪ್ಲಿಕೇಶನ್‌ನ ಬಲಪಡಿಸುವ ಕಾರ್ಯವಿಧಾನವು ಇವುಗಳನ್ನು ಒಳಗೊಂಡಿದೆ:

  • ಇ-ಪ್ಲೆಡ್ಜ್ ಅನ್ನು ಕೈಗೊಳ್ಳುವ ವೈಶಿಷ್ಟ್ಯಗಳೊಂದಿಗೆ ನಾಗರಿಕರಿಗೆ ಈಗ ಲಭ್ಯವಿದ್ದು, ಐಇಸಿ ಸಾಮಗ್ರಿಗಳ ಲಭ್ಯತೆ,  ಸಹಾಯವಾಣಿ ಬೆಂಬಲ ಮತ್ತು ಡೆಡ್‌ಡಿಕ್ಷನ್ ಕೇಂದ್ರದ ವಿವರಗಳು ಒಳಗೊಂಡಿವೆ.
  • ಅನುದಾನ-ಸಹಾಯ ಸಂಸ್ಥೆಗಳಿಗೆ (ಜಿಐಎ) ಮೀಸಲಾದ ಲಭ್ಯತೆ; ಜಿಐಎಗಳನ್ನು ಈಗ ಪಾತ್ರ-ಆಧಾರಿತ ಲಭ್ಯತೆಯೊಂದಿಗೆ ವೇದಿಕೆಗೆ ಸೇರಿಸಲಾಗುತ್ತದೆ. ವ್ಯಸನ ಮುಕ್ತ (ಡೆಡ್‌ಡಿಕ್ಷನ್) ಸೌಲಭ್ಯಗಳಲ್ಲಿ ಚಟುವಟಿಕೆಗಳ ನೈಜ-ಸಮಯದ ವರದಿ ಮತ್ತು ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತದೆ.
  • ಜಿಐಎ ಸಂಸ್ಥೆಗಳಿಗೆ ಅನುದಾನಗಳ ನೈಜ-ಸಮಯದ ಸ್ಥಿತಿ:
  • ಆ್ಯಪ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಐಎಗೆ ;ಲಭ್ಯವಿರಬಹುದಾದ ಎಲ್ಲಾ ಜಿಐಎಗಳ ಅನುದಾನ ಸ್ಥಿತಿಗತಿಯನ್ನು ಸಂಯೋಜಿಸುತ್ತದೆ, ಹೆಚ್ಚಿನ ಪಾರದರ್ಶಕತೆ, ಸುವ್ಯವಸ್ಥಿತ ನಿಧಿ ಟ್ರ್ಯಾಕಿಂಗ್ ಮತ್ತು ಅನುದಾನ ಬಳಕೆಯಲ್ಲಿ ವರ್ಧಿತ ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ.
  • ‘ಹತ್ತಿರದ ವ್ಯಸನ-ವಿಮೋಚನೆ ಕೇಂದ್ರ’ ವೈಶಿಷ್ಟ್ಯ:

ಬಳಕೆದಾರರು ಹತ್ತಿರದ ವ್ಯಸನ-ವಿಮೋಚನೆ ಕೇಂದ್ರವನ್ನು ಗುರುತಿಸಲು ಅನುಮತಿಸುತ್ತದೆ, ತ್ವರಿತ ಉಲ್ಲೇಖ ಮತ್ತು ಚಿಕಿತ್ಸಾ ಸೇವೆಗಳಿಗೆ ಸುಧಾರಿತ ಲಭ್ಯತೆಯನ್ನು ಸಕ್ರಿಯಗೊಳಿಸುತ್ತದೆ.

  • ಪ್ರತಿಕ್ರಿಯೆ ಕಾರ್ಯವಿಧಾನ:

ನಿರಂತರ ಸುಧಾರಣೆಗಾಗಿ ಸಾರ್ವಜನಿಕರು ಪ್ರತಿಕ್ರಿಯೆಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಎನ್ ಎಂ ಬಿ ಎ 2.0 ಆ್ಯಪ್‌ನ ಬಿಡುಗಡೆಯು ಔಷಧ ಬೇಡಿಕೆ ಕಡಿತ ಪ್ರಯತ್ನಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಾಂಸ್ಥಿಕ ಕಾರ್ಯವಿಧಾನಗಳನ್ನು ಬಲಪಡಿಸುವ ಮತ್ತು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳುವ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ.

 

*****


(ಪ್ರಕಟಣೆ ಐ.ಡಿ.: 2255491) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Punjabi , Gujarati , Telugu