ಚುನಾವಣಾ ಆಯೋಗ
azadi ka amrit mahotsav

ಸಾರ್ವತ್ರಿಕ ಚುನಾವಣೆಗಳು ಮತ್ತು ಉಪಚುನಾವಣೆಗಳು 2026: ಸಾಮಾಜಿಕ ಮಾಧ್ಯಮಗಳಲ್ಲಿನ ಕಾನೂನುಬಾಹಿರ ವಿಷಯಗಳ ಮೇಲೆ ಇಸಿಐ ಕ್ರಮ

ಪ್ರಕಟಣಾ ದಿನಾಂಕ: 19 APR 2026 3:18PM by PIB Bengaluru
  1. ಮಾಹಿತಿ ತಂತ್ರಜ್ಞಾನ ಕಾಯ್ದೆ, 2000; ಐಟಿ ನಿಯಮಗಳು, 2021 ಮತ್ತು ಮಾದರಿ ನೀತಿ ಸಂಹಿತೆ ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನು ನಿಬಂಧನೆಗಳಿಗೆ ಅನುಸಾರವಾಗಿ, ಎಲ್ಲಾ ಸಂಬಂಧಿತರು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳ ಜವಾಬ್ದಾರಿಯುತ ಮತ್ತು ನೈತಿಕ ಬಳಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಪುನರುಚ್ಚರಿಸಿದೆ.
  2. ಯಾವುದೇ ದಾರಿತಪ್ಪಿಸುವ ಅಥವಾ ಕಾನೂನುಬಾಹಿರ ಕೃತಕ ಬುದ್ಧಿಮತ್ತೆ (ಎಐ) ರಚಿತ ಅಥವಾ ತಿರುಚಲಾದ ವಿಷಯವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಕಟವಾದ 3 ಗಂಟೆಗಳ ಒಳಗೆ ಕ್ರಮ ಕೈಗೊಳ್ಳುವಂತೆ ಆಯೋಗ ನಿರ್ದೇಶನ ನೀಡಿದೆ.
  3. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಕಾಪಾಡಿಕೊಳ್ಳಲು ಪ್ರಚಾರಕ್ಕೆ ಬಳಸಲಾಗುವ ಯಾವುದೇ ಸಂಶ್ಲೇಷಿತ ರಚನೆ ಅಥವಾ ಎಐ-ರಚಿತ ವಿಷಯವನ್ನು ಸ್ಪಷ್ಟವಾಗಿ "ಎಐ-ರಚಿತ", "ಡಿಜಿಟಲ್ ವರ್ಧಿತ" ಅಥವಾ "ಸಂಶ್ಲೇಷಿತ ವಿಷಯ" ಎಂದು ನಮೂದು ಮಾಡುವುದನ್ನು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಪ್ರಚಾರ ಪ್ರತಿನಿಧಿಗಳು ಖಾತರಿಪಡಿಸಬೇಕೆಂದು ಹಾಗೂ ವಿಷಯದ ಮೂಲವನ್ನೂ ಬಹಿರಂಗಪಡಿಸಬೇಕೆಂದು ಸೂಚಿಸಲಾಗಿದೆ.
  4. ಅಸ್ಸಾಂ, ಕೇರಳ, ತಮಿಳುನಾಡು, ಪುದುಚೆರಿ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಪ್ರಸ್ತುತ ನಡೆದಿರುವ ವಿಧಾನಸಭಾ ಚುನಾವಣೆಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸುವ ಅಥವಾ ಅಡ್ಡಿಪಡಿಸುವ ಸಂಭಾವ್ಯತೆಯಿರುವ ಪೋಸ್ಟ್‌ ಗಳು, ಮತದಾನ ಪ್ರಕ್ರಿಯೆ ಅಥವಾ ವ್ಯವಸ್ಥೆಯ ಬಗ್ಗೆ ಸುಳ್ಳು ನಿರೂಪಣೆಗಳಂತಹ ಸಾಮಾಜಿಕ ಮಾಧ್ಯಮ ವಿಷಯವನ್ನು ಐಟಿ ಕಾಯ್ದೆಯಡಿಯಲ್ಲಿ ಸೂಚಿಸಲಾದ ಸಂಬಂಧಪಟ್ಟ ರಾಜ್ಯ ಐಟಿ ನೋಡಲ್ ಅಧಿಕಾರಿಗಳು ಮೇಲ್ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತಿದ್ದಾರೆ.
  5. ಅದರಂತೆ, 2026ರ ಮಾರ್ಚ್ 15 ರಂದು ಚುನಾವಣೆ ಘೋಷಣೆಯಾದಾಗಿನಿಂದ, 11 ಸಾವಿರಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು/ಯು ಆರ್ ಎಲ್ ಗಳನ್ನು ಗುರುತಿಸಲಾಗಿದೆ ಮತ್ತು ಪ್ರಸ್ತುತದ ಚುನಾವಣೆ ಸಂಬಂಧಿತ ಸ್ಪಷ್ಟೀಕರಣಗಳು ಮತ್ತು ಆರೋಪಗಳು, ಪ್ರಥಮ ವರ್ತಮಾನ ವರದಿ (ಎಫ್ ಐ ಆರ್) ಸೇರಿದಂತೆ ಹಲವು ವಿಷಯಗಳನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಲಾಗಿದೆ.
  6. ಜನಪ್ರತಿನಿಧಿಗಳ ಕಾಯ್ದೆ, 1951 ರ ನಿಯಮ 126 ರ ಅಡಿಯಲ್ಲಿನ ನಿಬಂಧನೆಗಳನ್ನು ಆಯೋಗವು ಪುನರುಚ್ಚರಿಸಿದ್ದು, ಇದರಡಿ ಮತದಾನ ಮುಕ್ತಾಯವಾಗುವ ಪೂರ್ವದ 48 ಗಂಟೆಗಳ ಮೌನ ಅವಧಿಯಲ್ಲಿ ಯಾವುದೇ ಚುನಾವಣಾ ವಿಷಯವನ್ನು ಮತದಾನ ನಡೆಯುವ ಪ್ರದೇಶಗಳಲ್ಲಿ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ. ದೂರದರ್ಶನ, ಆಕಾಶವಾಣಿ, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲಾ ಮಾಧ್ಯಮ ವೇದಿಕೆಗಳು ಈ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.
  7. ಇದಲ್ಲದೆ, ನಾಗರಿಕರು/ರಾಜಕೀಯ ಪಕ್ಷಗಳು/ಅಭ್ಯರ್ಥಿಗಳು ECINET ನಲ್ಲಿ ನಾಗರಿಕ ಜಾಗೃತಿ ಸಿ-ವಿಜಿಲ್ ಮಾಡ್ಯೂಲ್ ಬಳಸಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳನ್ನು ವರದಿ ಮಾಡಬಹುದಾಗಿದೆ. ಈ ಚುನಾವಣೆಗಳಗೆ ಸಂಬಂಧಿಸಿದಂತೆ ಮಾರ್ಚ್ 15 ರಿಂದ ಏಪ್ರಿಲ್ 19 ರವರೆಗೆ ಸಿ-ವಿಜಿಲ್ ಅಪ್ಲಿಕೇಶನ್ ಮೂಲಕ ನಾಗರಿಕರು 3,23,099 ದೂರುಗಳನ್ನು ದಾಖಲಿಸಿದ್ದಾರೆ. ಈ ಪೈಕಿ, 3,10,393 ದೂರುಗಳು ಅಂದರೆ, ಶೇ. 96.01 ದೂರುಗಳನ್ನು ನಿಗದಿತ ಅವಧಿಯ 100 ನಿಮಿಷಗಳೊಳಗೆ ಪರಿಹರಿಸಲಾಗಿದೆ.

 

*****


(ಪ್ರಕಟಣೆ ಐ.ಡಿ.: 2253538) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , Bengali , English , Urdu , हिन्दी , Marathi , Gujarati , Tamil