ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಗವಾನ್ ಪರಶುರಾಮ ಜಯಂತಿಯ ಶುಭಾಶಯಗಳನ್ನು ತಿಳಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 19 APR 2026 10:53AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಗವಾನ್ ಪರಶುರಾಮ ಜಯಂತಿಯ ಸಂದರ್ಭದಲ್ಲಿ ದೇಶದ ನಾಗರಿಕರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಶ್ರೀ ಮೋದಿ ಅವರು, ಭಗವಾನ್ ಪರಶುರಾಮರು ನಮಗೆ ಅನ್ಯಾಯದ ವಿರುದ್ಧ ನಿಲ್ಲಲು ಮತ್ತು ಸತ್ಯದ ಮಾರ್ಗದಲ್ಲಿ ದೃಢವಾಗಿ ನಿಲ್ಲಲು ಪ್ರೇರಣೆ ನೀಡುತ್ತಾರೆ ಎಂದು ಹೇಳಿದ್ದಾರೆ. ಭಗವಾನ್ ಪರಶುರಾಮರು ಅಸಾಮಾನ್ಯ ಪರಾಕ್ರಮ ಮತ್ತು ವಿವೇಕದ ಪ್ರತೀಕ ಎಂದು ಹೇಳಿದ್ದಾರೆ.

ಭಗವಾನ್ ಪರಶುರಾಮರ ಆಶೀರ್ವಾದದಿಂದ ಪ್ರತಿಯೊಬ್ಬರ ಹೃದಯದಲ್ಲಿ ಹೊಸ ಶಕ್ತಿ ಮತ್ತು ಹೊಸ ಆತ್ಮವಿಶ್ವಾಸ ತುಂಬಲಿ ಎಂದು ಪ್ರಧಾನಮಂತ್ರಿಗಳು ಆಶಿಸಿದ್ದಾರೆ. ಪರಶುರಾಮರ ಕೃಪೆಯಿಂದ ಎಲ್ಲರ ಜೀವನವು ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ಪ್ರಕಾಶಮಾನವಾಗಲಿ ಎಂದು ಅವರು ಹಾರೈಸಿದ್ದಾರೆ.

ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ  ಹೀಗೆ ಹೇಳಿದ್ದಾರೆ;

“आप सभी को भगवान परशुराम जयंती की ढेरों शुभकामनाएं। उनसे हमें अन्याय के विरुद्ध खड़े होने और सत्य के मार्ग पर अडिग रहने की प्रेरणा मिलती है। अतुलनीय पराक्रम और विवेक के प्रतीक भगवान परशुराम की कृपा से हर हृदय में नई ऊर्जा और नए आत्मविश्वास का संचार हो। उनका आशीर्वाद सभी के जीवन को सुख, शांति और समृद्धि से आलोकित करे।”
 

 

******


(ಪ್ರಕಟಣೆ ಐ.ಡಿ.: 2253506) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Bengali , Assamese , Gujarati