ಗೃಹ ವ್ಯವಹಾರಗಳ ಸಚಿವಾಲಯ
ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ನಿಧನಕ್ಕೆ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕುಟುಂಬ ವರ್ಗದವರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ
ಹಿರಿಯ ಸಹೋದರಿ ಆಶಾ ಅವರು ತಮ್ಮ ಸುಮಧುರ ಧ್ವನಿ ಮತ್ತು ಅನನ್ಯ ಪ್ರತಿಭೆಯ ಮೂಲಕ ವಿಶಿಷ್ಟ ಗುರುತನ್ನು ರೂಪಿಸಿಕೊಂಡಿದ್ದರು ಮಾತ್ರವಲ್ಲದೆ, ತಮ್ಮ ಸ್ವರಗಳಿಂದ ಭಾರತೀಯ ಸಂಗೀತವನ್ನು ಮತ್ತಷ್ಟು ಶ್ರೀಮಂತಗೊಳಿಸಿದರು
ಸಂಗೀತದ ಪ್ರತಿಯೊಂದು ಪ್ರಕಾರಕ್ಕೂ ಹೊಂದಿಕೊಳ್ಳುವ ಅವರ ವಿಶಿಷ್ಟ ಸಾಮರ್ಥ್ಯವು ಕೇಳುಗರೆಲ್ಲರ ಹೃದಯ ಗೆದ್ದಿದೆ
ಆಶಾ ಅವರು ತಮ್ಮ ಧ್ವನಿಯೊಂದಿಗೆ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದು ಹಿಂದಿ, ಮರಾಠಿ, ಬಂಗಾಳಿ, ತಮಿಳು, ಗುಜರಾತಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಗೂ ಜಾನಪದ ಸಂಗೀತದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ
ಆಶಾ ಅವರ ಧ್ವನಿ ಎಷ್ಟು ಮೃದುತ್ವವಾಗಿತ್ತೋ, ಅವರು ಅಷ್ಟೇ ಸರಳತೆ ಮತ್ತು ಆತ್ಮೀಯತೆಯನ್ನು ಹೊಂದಿದ್ದರು
ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ, ತಮ್ಮ ಧ್ವನಿಯ ಮೂಲಕ ಅವರು ನಮ್ಮ ಹೃದಯದಲ್ಲಿ ಸದಾ ಇರುವರು
ಅವರ ಕುಟುಂಬದವರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಆಳವಾದ ಸಂತಾಪ ವ್ಯಕ್ತಪಡಿಸುತ್ತೇನೆ
ಪ್ರಕಟಣಾ ದಿನಾಂಕ:
12 APR 2026 2:43PM by PIB Bengaluru
ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ನಿಧನಕ್ಕೆ ಅವರ ಕುಟುಂಬ ವರ್ಗದವರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಎಕ್ಸ್ ಪೋಸ್ಟ್ ನಲ್ಲಿ “ನಮ್ಮ ನಲ್ಮೆಯ ಆಶಾ ಭೋಸ್ಲೆ ಅವರು ಇನ್ನು ನಮ್ಮೊಂದಿಗಿಲ್ಲ. ಇಂದು ಪ್ರತಿಯೊಬ್ಬ ಭಾರತೀಯನಿಗೆ, ವಿಶೇಷವಾಗಿ ನನ್ನಂತಹ ಪ್ರತಿಯೊಬ್ಬ ಸಂಗೀತ ಪ್ರೇಮಿಗೆ ದುಃಖದ ದಿನವಾಗಿದೆ” ಎಂದು ಹೇಳಿದ್ದಾರೆ. ಆಶಾ ಅಕ್ಕನವರು ತಮ್ಮ ಸುಮಧುರ ಧ್ವನಿ ಮತ್ತು ಅನನ್ಯ ಪ್ರತಿಭೆಯ ಮೂಲಕ ತಮಗೆ ವಿಶಿಷ್ಟ ಗುರುತು ರೂಪಿಸಿಕೊಳ್ಳುವ ಜೊತೆಗೆ, ತಮ್ಮ ಸಂಗೀತ ಸ್ವರಗಳಿಂದ ಭಾರತೀಯ ಸಂಗೀತವನ್ನು ಮತ್ತಷ್ಟು ಶ್ರೀಮಂತಗೊಳಿಸಿದರು. ಸಂಗೀತದ ಪ್ರತಿಯೊಂದು ಪ್ರಕಾರಕ್ಕೂ ಹೊಂದಿಕೊಳ್ಳುವ ಅವರ ವಿಶಿಷ್ಟ ಧ್ವನಿ ಸಾಮರ್ಥ್ಯವು ಕೇಳುಗರೆಲ್ಲರ ಹೃದಯ ಗೆದ್ದಿತು ಎಂದು ಅವರು ಹೇಳಿದ್ದಾರೆ. ಆಶಾ ಜಿ ತಮ್ಮ ಧ್ವನಿಯಿಂದ ಲಕ್ಷಾಂತರ ಹೃದಯಗಳನ್ನು ತಲುಪಿದ್ದು, ಹಿಂದಿ, ಮರಾಠಿ, ಬಂಗಾಳಿ, ತಮಿಳು, ಗುಜರಾತಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಮತ್ತು ಜಾನಪದ ಸಂಗೀತದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಅವರು ತಿಳಿಸಿದ್ದಾರೆ. ಹಿರಿಯ ಸಹೋದರಿ ಆಶಾ ಅವರ ಸರಳತೆ ಮತ್ತು ಸೌಹಾರ್ದತೆಯು ಅವರ ಧ್ವನಿಯಲ್ಲಿನ ಮೃದುತ್ವದಷ್ಟೇ ಗಾಢವಾಗಿತ್ತು ಎಂದು ಸ್ಮರಿಸಿರುವ ಅಮಿತ್ ಶಾ ಅವರು, ಆಶಾ ಅವರನ್ನು ಭೇಟಿಯಾದಾಗಲೆಲ್ಲಾ ಸಂಗೀತ, ಕಲೆಯಂತಹ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ದೀರ್ಘ ಸಂಭಾಷಣೆಗಳಲ್ಲಿ ತೊಡಗುತ್ತಿದ್ದುದಾಗಿ ಹೇಳಿದ್ದಾರೆ. ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ತಮ್ಮ ಧ್ವನಿಯ ಮೂಲಕ ಅವರು ನಮ್ಮ ಹೃದಯದಲ್ಲಿ ಶಾಶ್ವತವಾಗಿರಲಿದ್ದಾರೆ. ಅವರ ಕುಟುಂಬದವರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಆಳವಾದ ಸಂತಾಪಗಳು ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ. ಓಂ ಶಾಂತಿ, ಶಾಂತಿ, ಶಾಂತಿ.”
*****
(ಪ್ರಕಟಣೆ ಐ.ಡಿ.: 2251341)
ವಿಸಿಟರ್ ಕೌಂಟರ್ : 3