ರಕ್ಷಣಾ ಸಚಿವಾಲಯ
azadi ka amrit mahotsav

ವಿಯೆಟ್ನಾಂನ ಉಪಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವರಾಗಿ ನೇಮಕಗೊಂಡ ಜನರಲ್ ಫಾನ್ ವ್ಯಾನ್ ಗಿಯಾಂಗ್ ಅವರನ್ನು ಅಭಿನಂದಿಸಿದ ರಕ್ಷಣಾ ಸಚಿವರು


ವಿಯೆಟ್ನಾಂ ಜೊತೆಗಿನ ದೀರ್ಘಕಾಲದ ರಕ್ಷಣಾ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಭಾರತ ಎದುರು ನೋಡುತ್ತಿದೆ: ಶ್ರೀ ರಾಜನಾಥ್ ಸಿಂಗ್

प्रविष्टि तिथि: 09 APR 2026 9:42AM by PIB Bengaluru

ವಿಯೆಟ್ನಾಂ ಸಮಾಜವಾದಿ ಗಣರಾಜ್ಯದ ಉಪಪ್ರಧಾನಮಂತ್ರಿ ಮತ್ತು ರಾಷ್ಟ್ರೀಯ ರಕ್ಷಣಾ ಸಚಿವರಾಗಿ ನೇಮಕಗೊಂಡ ಜನರಲ್ ಫಾನ್ ವ್ಯಾನ್ ಗಿಯಾಂಗ್ ಅವರನ್ನು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಅಭಿನಂದಿಸಿದ್ದಾರೆ.

ರಕ್ಷಣಾ ಸಚಿವರು ಎಕ್ಸ್ ಪೋಸ್ಟ್ ನಲ್ಲಿ, ವಿಯೆಟ್ನಾಂ ನೊಂದಿಗಿನ ದೀರ್ಘಕಾಲದ ರಕ್ಷಣಾ ಬಾಂಧವ್ಯಗಳನ್ನು ಮತ್ತಷ್ಟು ಬಲಪಡಿಸಲು ಹಾಗೂ ಭದ್ರತೆ, ಮಿಲಿಟರಿ ವಿನಿಮಯ ಮತ್ತು ಕೈಗಾರಿಕಾ ಸಹಯೋಗಗಳಲ್ಲಿ ಸಹಕಾರವನ್ನು ಆಳವಾಗಿಸಲು ಭಾರತ ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ. ಮುಂಬರುವ ವರ್ಷಗಳಲ್ಲಿ ಭಾರತ-ವಿಯೆಟ್ನಾಂ ಪಾಲುದಾರಿಕೆ ಬೆಳವಣಿಗೆ ಹೊಂದುತ್ತಾ ಮತ್ತಷ್ಟು ಬಲಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

*****


(रिलीज़ आईडी: 2250604) आगंतुक पटल : 54
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Bengali-TR , Punjabi , Gujarati , Telugu