ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿಗಳಿಂದ ಅವರ ಸ್ವಯಂ ಗಣತಿ ಪೂರ್ಣ; ನಾಗರಿಕರು ತಮ್ಮ ಕುಟುಂಬದ ವಿವರಗಳೊಂದಿಗೆ ಸ್ವಯಂ ಗಣತಿ ಮಾಡಿಕೊಳ್ಳುವ ಮೂಲಕ ಗಣತಿ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಮನವಿ

ಪ್ರಕಟಣಾ ದಿನಾಂಕ: 01 APR 2026 8:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆರಂಭವಾದ ಮನೆಗಳ ಪಟ್ಟಿ ಮತ್ತು ವಸತಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದ 2027ರ ಜನಗಣತಿಯ ಮೊದಲ ಹಂತದಲ್ಲಿ ತಮ್ಮ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿದ್ದಾರೆ. ಇದೇ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ಜನಗಣತಿಯ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಭಾರತದ ಜನರು ತಮ್ಮ ಕುಟುಂಬದ ವಿವರಗಳೊಂದಿಗೆ ಸ್ವಯಂ ಗಣತಿ ಮಾಡಲು ಅವಕಾಶ ನೀಡಲಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಭಾರತದ ಜನರು ತಮ್ಮ ಕುಟುಂಬದ ವಿವರಗಳನ್ನು ಸ್ವಯಂ ಗಣತಿಯಲ್ಲಿ ಒದಗಿಸುವ ಮೂಲಕ ಜನಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಶ್ರೀ ಮೋದಿ ಅವರು ಮನವಿ ಮಾಡಿದ್ದಾರೆ.

ಪ್ರಧಾನಮಂತ್ರಿಯವರ ಎಕ್ಸ್ ಪೋಸ್ಟ್ ಹೀಗಿದೆ:

“ನನ್ನ ಸ್ವಯಂ-ಗಣತಿಯನ್ನು ಪೂರ್ಣಗೊಳಿಸಿದ್ದೇನೆ.

ಮನೆಗಳ ಪಟ್ಟಿ ಮತ್ತು ವಸತಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದ 2027ರ ಜನಗಣತಿಯ ಮೊದಲ ಹಂತ ಇಂದು ಪ್ರಾರಂಭವಾಗಿದೆ. ಈ ಜನಗಣತಿಯಲ್ಲಿ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಇದು ಭಾರತದ ಜನರಿಗೆ ತಮ್ಮ ಮನೆಯ ವಿವರಗಳ ಸ್ವಯಂ-ಗಣತಿಗೆ ಅವಕಾಶ ನೀಡಿದೆ.

ಭಾರತದ ಜನರು ತಮ್ಮ ಮನೆಯ ವಿವರಗಳನ್ನು ತಾವೇ ಸ್ವಯಂ-ಗಣತಿ ಮಾಡುವ ಮೂಲಕ ಈ ಜನಗಣತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ನಾನು ಮನವಿ ಮಾಡುತ್ತೇನೆ.”

 

*****


(ಪ್ರಕಟಣೆ ಐ.ಡಿ.: 2248150) ವಿಸಿಟರ್ ಕೌಂಟರ್ : 18