ಗೃಹ ವ್ಯವಹಾರಗಳ ಸಚಿವಾಲಯ
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿ ಅವರು ತಮ್ಮ ಇಡೀ ಜೀವನವನ್ನು ಅನುಕಂಪ ಮತ್ತು ಶಿಕ್ಷಣಕ್ಕಾಗಿ ಮುಡಿಪಾಗಿಟ್ಟಿದ್ದರು
ಪೂಜ್ಯರ ಅನುಗ್ರಹದ ಗುಣಪಡಿಸುವ ಸ್ಪರ್ಶದಿಂದ ಅಸಂಖ್ಯಾತ ಜೀವನಗಳ ಪರಿವರ್ತನೆ
ಪ್ರಕಟಣಾ ದಿನಾಂಕ:
01 APR 2026 11:09AM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿ ಅವರ ಜಯಂತಿಯಂದು ಅವರಿಗೆ ಅತ್ಯಂತ ವಿನಮ್ರತೆಯಿಂದ ಗೌರವ ನಮನ ಸಲ್ಲಿಸಿದರು.
ಶ್ರೀ ಅಮಿತ್ ಶಾ ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ನಲ್ಲಿ “ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರು ಅನುಕಂಪ ಮತ್ತು ಶಿಕ್ಷಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ದೈವಿಕ ಅನುಗ್ರಹದ ಗುಣಪಡಿಸುವ ಸ್ಪರ್ಶವು ಅಸಂಖ್ಯಾತ ಜೀವನಗಳನ್ನು ಪರಿವರ್ತಿಸಿತು ಮತ್ತು ಸಿದ್ದಗಂಗಾ ಮಠದ ಅವರ ಪರಂಪರೆಯು ನಿಸ್ವಾರ್ಥವಾಗಿ ಸೇವೆ ಸಲ್ಲಿಸಲು ನಮಗೆ ನಿರಂತರ ಸ್ಫೂರ್ತಿಯಾಗಿದೆ.’’
*****
(ಪ್ರಕಟಣೆ ಐ.ಡಿ.: 2247584)
ವಿಸಿಟರ್ ಕೌಂಟರ್ : 20