ಪ್ರಧಾನ ಮಂತ್ರಿಯವರ ಕಛೇರಿ
ಡಾ. ರಾಮ್ ಮನೋಹರ್ ಲೋಹಿಯಾ ಅವರ ಜನ್ಮದಿನದ ಅಂಗವಾಗಿ ಪ್ರಧಾನಮಂತ್ರಿ ಅವರಿಂದ ಗೌರವ ನಮನ
ಪ್ರಕಟಣಾ ದಿನಾಂಕ:
23 MAR 2026 8:01AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿಗ್ಗಜ ಸಮಾಜವಾದಿ ನಾಯಕ ಮತ್ತು ಚಿಂತಕರಾದ ರಾಮ್ ಮನೋಹರ್ ಲೋಹಿಯಾ ಅವರ ಜನ್ಮದಿನದ ಅಂಗವಾಗಿ ಇಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಡಾ. ಲೋಹಿಯಾ ಅವರದ್ದು ಬಹುಮುಖ ವ್ಯಕ್ತಿತ್ವ ಎಂದು ಬಣ್ಣಿಸಿರುವ ಶ್ರೀ ಮೋದಿ ಅವರು, ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಜನಸಮೂಹವನ್ನು ಸಜ್ಜುಗೊಳಿಸುವಲ್ಲಿ ಲೋಹಿಯಾ ಅವರ ಪ್ರಮುಖ ಪಾತ್ರ ಮತ್ತು 1947 ರ ನಂತರ ಭಾರತದ ಪ್ರಗತಿಗೆ ಅವರು ನೀಡಿದ ಕೊಡುಗೆಗಳನ್ನು ವಿವರಿಸಿದ್ದಾರೆ. ಡಾ. ಲೋಹಿಯಾ ಅವರು ಅತ್ಯುತ್ತಮ ಚಿಂತಕರು ಮತ್ತು ದೇಶದಲ್ಲಿ ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ಪ್ರಮುಖರಲ್ಲೊಬ್ಬರು ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಬಡವರು ಮತ್ತು ದುರ್ಬಲವರ್ಗದವರ ಸಬಲೀಕರಣಕ್ಕೆ ಡಾ. ಲೋಹಿಯಾ ಅವರ ಅಚಲ ಬದ್ಧತೆಯು ಪೀಳಿಗೆಗಳಾದ್ಯಂತ ಸ್ಫೂರ್ತಿ ನೀಡುತ್ತಲೇ ಇರಲಿದೆ ಎಂದು ಹೇಳಿರುವ ಶ್ರೀ ಮೋದಿ ಅವರು, ಲಿಂಗ ಸಮಾನತೆ ಮತ್ತು ಪಾಲ್ಗೊಳ್ಳುವಿಕಾತ್ಮಕ ಆಡಳಿತದ ಕುರಿತಾದ ಲೋಹಿಯಾ ಅವರ ಆಲೋಚನೆಗಳು ಇಂದಿಗೂ ಸಮಾನವಾಗಿ ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:
"ಡಾ. ರಾಮ್ ಮನೋಹರ್ ಲೋಹಿಯಾ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನಗಳು. ಬಹುಮುಖ ವ್ಯಕ್ತಿತ್ವದ ಅವರು ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಜನರನ್ನು ಸಜ್ಜುಗೊಳಿಸುವಲ್ಲಿ ಮತ್ತು 1947 ರ ನಂತರ ಭಾರತದ ಪ್ರಗತಿಗೆ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅತ್ಯುತ್ತಮ ಚಿಂತಕರು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತಿದ ಪ್ರಮುಖರ ಪೈಕಿ ಒಬ್ಬರಾಗಿದ್ದರು. ಬಡವರು ಮತ್ತು ದುರ್ಬಲ ವರ್ಗದವರ ಸಬಲೀಕರಣಕ್ಕಾಗಿ ಅವರ ಅಚಲ ಬದ್ಧತೆಯು ಭವಿಷ್ಯದ ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಲೇ ಇರಲಿದೆ. ಲಿಂಗ ಸಮಾನತೆ ಮತ್ತು ಪಾಲ್ಗೊಳ್ಳುವಿಕಾತ್ಮಕ ಆಡಳಿತದ ಕುರಿತಂತೆ ಅವರ ಆಲೋಚನೆಗಳು ಅಷ್ಟೇ ಗಮನಾರ್ಹವಾಗಿವೆ."
*****
(ಪ್ರಕಟಣೆ ಐ.ಡಿ.: 2243812)
ವಿಸಿಟರ್ ಕೌಂಟರ್ : 4