ನಾಗರೀಕ ವಿಮಾನಯಾನ ಸಚಿವಾಲಯ
ಪಶ್ಚಿಮ ಏಷ್ಯಾ ವಾಯುಪ್ರದೇಶದ ಪರಿಸ್ಥಿತಿ - ಭಾರತೀಯ ವೈಮಾನಿಕ ಸಂಸ್ಥೆಗಳಿಂದ ಇಂದು 50 ವಿಮಾನಗಳ ಕಾರ್ಯಾಚರಣೆ
ಪ್ರಕಟಣಾ ದಿನಾಂಕ:
09 MAR 2026 12:08AM by PIB Bengaluru
ಭಾರತ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ನಡುವಿನ ವಿಮಾನಯಾನ ಪ್ರಯಾಣದ ಮೇಲೆ ಪರಿಣಾಮ ಬೀರುವ ಪಶ್ಚಿಮ ಏಷ್ಯಾದಲ್ಲಿನ ಉಲ್ಭಣಗೊಳ್ಳುತ್ತಿರುವ ಪರಿಸ್ಥಿತಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಅತ್ಯಂತ ಸೂಕ್ಷ್ಮವಾಗಿ ನಿಗಾ ವಹಿಸುತ್ತಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ವಿಮಾನ ಕಾರ್ಯಾಚರಣೆಗಳ ಕ್ರಮಬದ್ಧ ವ್ಯವಸ್ಥೆಯನ್ನು ಖಾತ್ರಿಪಡಿಸಿಕೊಳ್ಳಲು ಸದ್ಯ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಗಮನದರಿಸಿಕೊಂಡು ವಿಮಾನಯಾನ ಸಂಸ್ಥೆಗಳು ಅಗತ್ಯ ಕಾರ್ಯಾಚರಣೆಯ ಹೊಂದಾಣಿಕೆಗಳನ್ನು ಮಾಡುತ್ತಿವೆ.
2026ರ ಮಾರ್ಚ್ 07ರ ಪ್ರಯಾಣಿಕರ ಚಲನವಲನದ ದತ್ತಾಂಶವು ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಒಟ್ಟು 51 ಆಗಮನ ವಿಮಾನಗಳು 8,175 ಪ್ರಯಾಣಿಕರನ್ನು ಹೊತ್ತು ಪಶ್ಚಿಮಾ ಏಷ್ಯಾ ಪ್ರದೇಶದಿಂದ ಭಾರತಕ್ಕೆ ಬಂದಿವೆ ಎಂಬುದನ್ನು ತೋರಿಸುತ್ತದೆ.
2026ರ ಮಾರ್ಚ್ 08ಕ್ಕೆ, ಭಾರತೀಯ ವೈಮಾನಿಕ ಸಂಸ್ಥೆಗಳಾದ- ಏರ್ ಇಂಡಿಯಾ. ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೊ, ಸ್ಪೈಸ್‌ಜೆಟ್ ಮತ್ತು ಅಕಾಸಾ - ಕಾರ್ಯಾಚರಣೆಯ ಕಾರ್ಯಸಾಧ್ಯತೆ ಮತ್ತು ಚಾಲ್ತಿಯಲ್ಲಿರುವ ಪರಿಸ್ಥಿತಿಗಳಿಗೆ ಒಳಪಟ್ಟು ದುಬೈ, ಅಬುಧಾಬಿ, ರಾಸ್ ಅಲ್ ಖೈಮಾ, ಫುಜೈರಾ, ಮಸ್ಕತ್ ಮತ್ತು ಜೆಡ್ಡಾದಂತಹ ಪ್ರದೇಶದ ವಿಮಾನ ನಿಲ್ದಾಣಗಳಿಂದ 49 ಆಗಮನ ವಿಮಾನಗಳನ್ನು ಸಂಚಾರ ಕೈಗೊಂಡಿವೆ.
ಸದ್ಯದ ಪರಿಸ್ಥಿತಿಯ ಪ್ರಕಾರ, ಭಾರತೀಯ ವಿಮಾನಯಾನ ಸಂಸ್ಥೆಗಳು 2026ರ ಮಾರ್ಚ್ 9 ಕ್ಕೆ 50 ವಿಮಾನಗಳ ಕಾರ್ಯಾಚರಣೆಯನ್ನು ನಡೆಸಲು ಉದ್ದೇಶಿಸಿವೆ.
ಅಲ್ಲದೆ, ಭಾರತೀಯ ವೈಮಾನಿಕ ಸಂಸ್ಥೆಗಳು ಈ ಪ್ರದೇಶದ ಇತರ ವಿಮಾನ ನಿಲ್ದಾಣಗಳಲ್ಲಿನ ಪರಿಸ್ಥಿತಿಯನ್ನು ನಿರಂತರವಾಗಿ ಅವಲೋಕಿಸುತ್ತಿವೆ, ಇದರಿಂದಾಗಿ ಈ ಸ್ಥಳಗಳಿಂದ ಭಾರತೀಯ ವಿಮಾನಯಾನ ಸಂಸ್ಥೆಗಳು ಹೆಚ್ಚಿನ ವಿಮಾನಗಳ ಸಂಚಾರವನ್ನು ನಿರ್ವಹಿಸಬಹುದಾಗಿದೆ.
ವೈಮಾನಿಕ ಸಂಸ್ಥೆಗಳು ಮತ್ತು ಇತರ ಪಾಲುದಾರರೊಂದಿಗೆ ಸಚಿವಾಲಯವು ನಿರಂತರ ಸಮನ್ವಯದಲ್ಲಿದೆ. ಟಿಕೆಟ್ ಬೆಲೆಗಳು ಸಮಂಜಸವಾಗಿರುವುದನ್ನು ಮತ್ತು ಈ ಅವಧಿಯಲ್ಲಿ ಯಾವುದೇ ಅನಗತ್ಯ ಏರಿಕೆಯಾಗದಂತೆ ನೋಡಿಕೊಳ್ಳಲು ವಿಮಾನ ದರಗಳನ್ನು ಸಹ ಸೂಕ್ಷ್ಮವಾಗಿ ನಿಗಾ ವಹಿಸಲಾಗುತ್ತಿದೆ.
ವಿಮಾನ ವೇಳಾಪಟ್ಟಿಗಳಿಗೆ ಸಂಬಂಧಿಸಿದ ಇತ್ತೀಚಿನ ತಾಜಾ ಮಾಹಿತಿಗಾಗಿ ಪ್ರಯಾಣಿಕರು ತಮ್ಮ ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಸಚಿವಾಲಯವು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಮತ್ತು ಅಗತ್ಯವಿರುವಂತೆ ಹೆಚ್ಚಿನ ತಾಜಾ ಮಾಹಿತಿಗಳನ್ನು ಒದಗಿಸುತ್ತದೆ.
*****
(ಪ್ರಕಟಣೆ ಐ.ಡಿ.: 2236845)
ವಿಸಿಟರ್ ಕೌಂಟರ್ : 10