ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರ ನಿರ್ಮಾಣದಲ್ಲಿ ನಾರಿ ಶಕ್ತಿಯ ಪಾತ್ರದ ಕುರಿತು ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 07 MAR 2026 2:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವೆ ಶ್ರೀಮತಿ ಅನ್ನಪೂರ್ಣಾ ದೇವಿ ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.
ಲೇಖನದಲ್ಲಿ, ದೇಶವು ನಾರಿ ಶಕ್ತಿಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಭಾರತದ ಕಥೆಯನ್ನು ಅದರ ಮಹಿಳೆಯರ ಶಕ್ತಿಯೇ ರೂಪಿಸಿದ್ದು, ಅದು ಸಮೃದ್ಧವಾದ ಐತಿಹಾಸಿಕ ಪರಂಪರೆಯಿಂದ ಪ್ರೇರಿತವಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದಲ್ಲದೆ, ವಿಕಸಿತ ಭಾರತದತ್ತ ಸಾಗುವ ಪಯಣದಲ್ಲಿ ಕಾಳಜಿ ಆರ್ಥಿಕತೆ (Care Economy) ಪ್ರಮುಖ ಆಧಾರವಾಗಿದೆಯೆಂದು ಇದರಲ್ಲಿ ಸಾರಲಾಗಿದೆ,

ಲೇಖನವನ್ನು ಹಂಚಿಕೊಂಡು ಪ್ರಧಾನಮಂತ್ರಿಗಳ ಕಚೇರಿಯ ಎಕ್ಸ್ ಖಾತೆಯಲ್ಲಿ ಹೀಗೆ ಬರೆಯಲಾಗಿದೆ:  

“ದೇಶವು ನಮ್ಮ ನಾರಿ ಶಕ್ತಿಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸಚಿವರಾದ ಶ್ರೀಮತಿ ಅನ್ನಪೂರ್ಣಾ ದೇವಿ ಅವರು ಭಾರತದ ಕಥೆಯನ್ನು ಅದರ ಮಹಿಳೆಯರ ಶಕ್ತಿಯೇ ರೂಪಿಸಿದ್ದು, ಅದು ಸಮೃದ್ಧ ಐತಿಹಾಸಿಕ ಪರಂಪರೆಯಿಂದ ಬಂದಿದೆ.

ವಿಕಸಿತ ಭಾರತದತ್ತ ಸಾಗುವ ನಮ್ಮ ಪ್ರಯಾಣದಲ್ಲಿ ಆರೈಕೆ ಆರ್ಥಿಕತೆ ಪ್ರಮುಖ ಆಧಾರವಾಗಿದೆ ಎಂದು ಉಲ್ಲೇಖಿಸಿದ್ದಾರೆ."

 

*****


(ಪ್ರಕಟಣೆ ಐ.ಡಿ.: 2236672) ವಿಸಿಟರ್ ಕೌಂಟರ್ : 10