ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಹೋಳಿ ಹಬ್ಬದ ಮುನ್ನಾದಿನದಂದು ಭಾರತದ ರಾಷ್ಟ್ರಪತಿ ಅವರ ಶುಭಾಶಯ

प्रविष्टि तिथि: 03 MAR 2026 5:29PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೋಳಿ ಹಬ್ಬದ ಮುನ್ನಾದಿನದಂದು ದೇಶದ ನಾಗರಿಕರಿಗೆ ಶುಭಾಶಯ ಕೋರಿದ್ದಾರೆ.

ರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ, "ಸಂಭ್ರಮದ ಹೋಳಿ ಹಬ್ಬದ ಸಂದರ್ಭದಲ್ಲಿ, ದೇಶ ವಿದೇಶಗಳಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಶುಭ ಹಾರೈಕೆಗಳು.

ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರುವ ಹೋಳಿ ಹಬ್ಬವು ಸಂತೋಷ ಮತ್ತು ಸಂಭ್ರಮದ ಆಚರಣೆಯಾಗಿದೆ. ಈ ಹಬ್ಬವು ಸಮಾಜದಲ್ಲಿ ಪ್ರೀತಿ ಮತ್ತು ಭರವಸೆಯನ್ನು ಪಸರಿಸುತ್ತಾ ಸಾಮಾಜಿಕ ಒಗ್ಗಟ್ಟಿನ ಚೈತನ್ಯವನ್ನು ಬಲಪಡಿಸುತ್ತದೆ. ಬಣ್ಣಗಳ ಹಬ್ಬವು ವೈವಿಧ್ಯತೆಯಲ್ಲಿ ಏಕತೆಯ ಸಂಕೇತವೂ ಆಗಿದೆ.

ಹೋಳಿ ಹಬ್ವದ ರಂಗು ರಂಗಿನ ಬಣ್ಣಗಳು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷವನ್ನು ತರಲಿ ಮತ್ತು ನಾವೆಲ್ಲರೂ ಒಟ್ಟಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸಲು ಕೊಡುಗೆ ನೀಡುವಂತಾಗಲಿ.”

Please click here to see the President's message-

 

*****


(रिलीज़ आईडी: 2235203) आगंतुक पटल : 70
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Gujarati , Tamil , Malayalam