ಗೃಹ ವ್ಯವಹಾರಗಳ ಸಚಿವಾಲಯ
ಮಹಾನ್ ಕ್ರಾಂತಿಕಾರಿ, ಅಜೇಯ ಚಂದ್ರಶೇಖರ್ ಆಜಾದ್ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ತಮ್ಮ ಕೊನೆಯ ಉಸಿರಿನವರೆಗೂ "ವಂದೇ ಮಾತರಂ" ಎಂದು ಜಪಿಸುತ್ತಾ, ಚಂದ್ರಶೇಖರ್ ಆಜಾದ್ ಬ್ರಿಟಿಷ್ ಆಡಳಿತದ ವಿರುದ್ಧ ಶೌರ್ಯದಿಂದ ಹೋರಾಡಿದರು
ಅದು ಕಾಕೋರಿ ರೈಲು ಕಾರ್ಯಾಚರಣೆಯಾಗಲಿ, ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (ಎಚ್‌ಎಸ್‌ಆರ್‌ಎ) ರಚನೆಯಾಗಲಿ ಅಥವಾ ಕ್ರಾಂತಿಕಾರಿಗಳಿಗಾಗಿ ಪ್ರಬಲ ಸಂಘಟನೆಯ ರಚನೆಯಾಗಲಿ, ಚಂದ್ರಶೇಖರ ಆಜಾದ್ ಅವರ ಜೀವನದ ಪ್ರತಿಯೊಂದು ಕ್ಷಣವೂ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿತ್ತು
ಅವರ ತ್ಯಾಗದ ಕಥೆಯನ್ನು ನೆನಪಿಸಿಕೊಳ್ಳುವುದು ಇನ್ನೂ ನಮ್ಮಲ್ಲಿ ದೇಶಭಕ್ತಿಯನ್ನು ತುಂಬುತ್ತದೆ
प्रविष्टि तिथि:
27 FEB 2026 11:50AM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಹಾನ್ ಕ್ರಾಂತಿಕಾರಿ, ಅಜೇಯ ಚಂದ್ರಶೇಖರ್ ಆಜಾದ್ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು.
ತಮ್ಮ ಕೊನೆಯ ಉಸಿರಿರುವವರೆಗೂ "ವಂದೇ ಮಾತರಂ" ಎಂದು ಜಪಿಸುತ್ತಾ, ಚಂದ್ರಶೇಖರ್ ಆಜಾದ್ ಅವರು ಬ್ರಿಟಿಷ್ ಆಡಳಿತದ ವಿರುದ್ಧ ಧೈರ್ಯದಿಂದ ಹೋರಾಡಿದರು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಎಕ್ಸ್ ಪ್ಲಾಟ್ ಫಾರ್ಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ಕಾಕೋರಿ ರೈಲು ಕಾರ್ಯಾಚರಣೆಯಾಗಿರಲಿ, ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (ಎಚ್‌ಎಸ್‌ಆರ್‌ಎ) ರಚನೆಯಾಗಲಿ ಅಥವಾ ಕ್ರಾಂತಿಕಾರಿಗಳಿಗಾಗಿ ಪ್ರಬಲ ಸಂಘಟನೆಯ ರಚನೆಯಾಗಲಿ, ಚಂದ್ರಶೇಖರ್ ಆಜಾದ್ ಅವರ ಜೀವನದ ಪ್ರತಿಯೊಂದು ಕ್ಷಣವೂ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟಿದೆ ಎಂದು ಅವರು ಹೇಳಿದರು. ಅವರ ತ್ಯಾಗದ ಕಥೆಯನ್ನು ನೆನಪಿಸಿಕೊಳ್ಳುವುದು ಇನ್ನೂ ನಮ್ಮಲ್ಲಿ ದೇಶಭಕ್ತಿಯನ್ನು ತುಂಬುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
*****
(रिलीज़ आईडी: 2233441)
आगंतुक पटल : 27
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Bengali-TR
,
Punjabi
,
Gujarati
,
Tamil
,
Malayalam