ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಪಿಎಂ ಗತಿಶಕ್ತಿ ನೇತೃತ್ವದ ನೆಟ್‌ವರ್ಕ್ ಯೋಜನಾ ಗುಂಪಿನ 109ನೇ ಸಭೆಯಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಾಮರ್ಶೆ
ರೈಲ್ವೆ ಸಚಿವಾಲಯ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಯೋಜನೆಗಳನ್ನು ಮೌಲ್ಯಮಾಪನ ಮಾಡಿದ ಎನ್ ಪಿ ಜಿ
ಪ್ರಕಟಣಾ ದಿನಾಂಕ:
25 FEB 2026 11:32AM by PIB Bengaluru
ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಯಲ್ಲಿ (ಡಿಪಿಐಐಟಿ)ಯಲ್ಲಿ ನೆಟ್‌ವರ್ಕ್ ಯೋಜನಾ ಗುಂಪಿನ (ಎನ್ ಪಿ ಜಿ) 109ನೇ ಸಭೆಯು ನಡೆಯಿತು. ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಮೌಲ್ಯಮಾಪನ ಮಾಡಲು ಸಭೆಯನ್ನು ಕರೆಯಲಾಗಿತ್ತು. ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ (ಪಿಎಂಜಿಎಸ್ ಎನ್ ಎಂಪಿ) ಯೊಂದಿಗೆ ಹೊಂದಿಕೆಯಾಗುವ ಬಹುಮಾದರಿ ಸಂಪರ್ಕ ಮತ್ತು ಸರಕು ಸಾಗಾಣೆ (ಲಾಜಿಸ್ಟಿಕ್ಸ್) ದಕ್ಷತೆಯನ್ನು ಹೆಚ್ಚಿಸುವತ್ತ ಸಭೆ ಹೆಚ್ಚಿನ ಗಮನಹರಿಸಿತು. ಸಮಗ್ರ ಬಹುಮಾದರಿ ಮೂಲಸೌಕರ್ಯದ ಪ್ರಧಾನ ಮಂತ್ರಿ ಗತಿಶಕ್ತಿ ತತ್ವಗಳು, ಆರ್ಥಿಕ ಮತ್ತು ಸಾಮಾಜಿಕ ಅಗತ್ಯತೆಗಳಿಗೆ ಕೊನೆಯ ಮೈಲು ಸಂಪರ್ಕ ಮತ್ತು ‘ಸಮಗ್ರ ಸರ್ಕಾರದ’ ವಿಧಾನಕ್ಕೆ ಅನುಗುಣವಾಗಿರುವುದಕ್ಕಾಗಿ ಎನ್ ಪಿಜಿ ಎರಡು ರೈಲು ಯೋಜನೆಗಳು, ಒಂದು ಮೆಟ್ರೋ ಯೋಜನೆ ಹಾಗೂ ಒಂದು ವಿಮಾನ ನಿಲ್ದಾಣ ಯೋಜನೆಯನ್ನು ಮೌಲ್ಯಮಾಪನ ಮಾಡಿದೆ. ಈ ಉಪಕ್ರಮಗಳು ಸರಕು ಸಾಗಾಣೆ (ಲಾಜಿಸ್ಟಿಕ್ಸ್) ದಕ್ಷತೆಯನ್ನು ಹೆಚ್ಚಿಸುವ, ಪ್ರಯಾಣದ ಸಮಯವನ್ನು ತಗ್ಗಿಸುವ ಮತ್ತು ಯೋಜನೆಯ ಅಚ್ಚುಕಟ್ಟು ಪ್ರದೇಶಗಳಿಗೆ ಗಮನಾರ್ಹ ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ನೀಡುವ ನಿರೀಕ್ಷೆಯಿದೆ. ಈ ಯೋಜನೆಗಳ ಮೌಲ್ಯಮಾಪನ ಮತ್ತು ನಿರೀಕ್ಷಿತ ಪರಿಣಾಮಗಳನ್ನು ಕೆಳಗೆ ವಿವರಿಸಲಾಗಿದೆ:
ಯೋಜನೆಗಳ ಸಂಕ್ಷಿಪ್ತ ವಿವರಣೆಯನ್ನು ಈ ಕೆಳಗೆ ನೀಡಲಾಗಿದೆ:
ಜಲಂಧರ್ ಕಂಟೋನ್ಮೆಂಟ್-ಜಮ್ಮು ತವೈ ನಿಲ್ದಾಣ (ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು) ನಡುವಿನ ಉದ್ದೇಶಿತ 3ನೇ ಮಾರ್ಗ: ರೈಲ್ವೆ ಸಚಿವಾಲಯವು ಜಲಂಧರ್ ಕಂಟೋನ್ಮೆಂಟ್ ಮತ್ತು ಜಮ್ಮು ಕಂಟೋನ್ಮೆಂಟ್ ನಡುವೆ ಮೂರನೇ ರೈಲು ಮಾರ್ಗವನ್ನು ನಿರ್ಮಿಸಲು ಪ್ರಸ್ತಾಪಿಸಿದೆ. ಇದು ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಒಟ್ಟು 210.750 ಕಿ.ಮೀ ಉದ್ದವನ್ನು ಒಳಗೊಂಡಿದೆ. ಉದ್ದೇಶಿತ ಜೋಡಣೆಯು 27 ನಿಲ್ದಾಣಗಳನ್ನು ಒಳಗೊಂಡಿರುತ್ತದೆ ಮತ್ತು ಜಲಂಧರ್, ಹೋಶಿಯಾರ್‌ಪುರ್, ಕಾಂಗ್ರಾ, ಪಠಾಣ್‌ಕೋಟ್, ಕಥುವಾ ಮತ್ತು ಸಾಂಬಾದಂತಹ ಪ್ರಮುಖ ಜಿಲ್ಲೆಗಳನ್ನು ಹಾದುಹೋಗುತ್ತದೆ. ಈ ಯೋಜನೆಯು ಈ ಕಾರ್ಯತಂತ್ರದ ನಿರ್ಣಾಯಕ ಕಾರಿಡಾರ್‌ನಲ್ಲಿ ರೈಲು ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುವ ಮತ್ತು ಸಂಪರ್ಕವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಉದ್ದೇಶಿತ ರೈಲು ಮಾರ್ಗವು ಗಣನೀಯ ಕಾರ್ಯತಂತ್ರದ, ಆರ್ಥಿಕ ಮತ್ತು ಸಾಮಾಜಿಕ ಮಹತ್ವವನ್ನು ಹೊಂದಿದೆ. ಗಡಿ ಪ್ರದೇಶಗಳಿಗೆ ರಕ್ಷಣಾ ಸಿಬ್ಬಂದಿ, ಸಾಧನಗಳು ಮತ್ತು ಸರಬರಾಜುಗಳ ವೇಗವಾದ ಮತ್ತು ಹೆಚ್ಚು ವಿಶ್ವಾಸಾರ್ಹ ಸಾಗಾಣೆಯನ್ನು ಸಕ್ರಿಯಗೊಳಿಸುವ ಮೂಲಕ ಇದು ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕ ಮೂಲಸೌಕರ್ಯ ಆಸ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಆರ್ಥಿಕ ದೂರದೃಷ್ಟಿಯಿಂದ ಯೋಜನೆಯು ಕೃಷಿ ಉತ್ಪನ್ನಗಳು, ನಿರ್ಮಾಣ ಸಾಮಗ್ರಿಗಳು ಮತ್ತು ಅಗತ್ಯ ಸರಕುಗಳ ಸಾಗಣೆಯನ್ನು ಸುಧಾರಿಸುವ ಮೂಲಕ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ವೃದ್ಧಿಸುತ್ತದೆ.
ಜಬಲ್ಪುರದಲ್ಲಿ (ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ) ಮಾಣಿಕ್ಪುರ ಮತ್ತು ಇಟಾರ್ಸಿ ನಡುವಿನ ಉದ್ದೇಶಿತ 3ನೇ ಮಾರ್ಗ: ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಾದ್ಯಂತ ಒಟ್ಟು 518.532 ಕಿ.ಮೀ ಉದ್ದದ ಮಾಣಿಕ್ಪುರ ಮತ್ತು ಇಟಾರ್ಸಿ ನಡುವೆ ಮೂರನೇ ರೈಲು ಮಾರ್ಗವನ್ನು ನಿರ್ಮಿಸಲು ರೈಲ್ವೆ ಸಚಿವಾಲಯ ಪ್ರಸ್ತಾಪಿಸಿದೆ. ಉದ್ದೇಶಿತ ಮಾರ್ಗವು ಚಿತ್ರಕೂಟ, ಸತ್ನಾ, ಮೈಹಾರ್, ಕಟ್ನಿ, ಜಬಲ್ಪುರ, ನರಸಿಂಗ್‌ಪುರ ಮತ್ತು ನರ್ಮದಾಪುರಂ ಸೇರಿದಂತೆ ಪ್ರಮುಖ ಜಿಲ್ಲೆಗಳನ್ನು ಹಾದುಹೋಗುತ್ತದೆ, ಇದರಿಂದಾಗಿ ಉತ್ತರ ಮತ್ತು ಮಧ್ಯ ಭಾರತವನ್ನು ಸಂಪರ್ಕಿಸುವ ನಿರ್ಣಾಯಕ ಕಾರಿಡಾರ್‌ನಲ್ಲಿ ರೈಲು ಸಂಪರ್ಕವನ್ನು ಬಲಪಡಿಸುತ್ತದೆ. ಈ ವಿಭಾಗವು ಪ್ರಾದೇಶಿಕ ರೈಲು ಜಾಲದ ಅತ್ಯಗತ್ಯ ಅಂಶವಾಗಿದೆ, ಇದು ಹೆಚ್ಚಿನ ಪ್ರಮಾಣದ ಪ್ರಯಾಣಿಕ ಮತ್ತು ಸರಕು ಸಾಗಣೆಯನ್ನು ಬೆಂಬಲಿಸುತ್ತದೆ.
ಉದ್ದೇಶಿತ ಮೂರನೇ ಮಾರ್ಗವು ಕಾರ್ಯಾಚರಣೆಯ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ನೆಟ್‌ವರ್ಕ್ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ ಮತ್ತು ಹೆಚ್ಚುತ್ತಿರುವ ಸಂಚಾರ ಬೇಡಿಕೆಯನ್ನು ಪೂರೈಸಲು ಮತ್ತು ದಟ್ಟಣೆಯನ್ನು ತಗ್ಗಿಸಲು ಹೆಚ್ಚುವರಿ ರೈಲು ಸೇವೆಗಳನ್ನು ಪರಿಚಯಿಸಲು ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಾಲಿ ಇರುವ ರೈಲ್ವೆ ಮೂಲಸೌಕರ್ಯವು ಈಗಾಗಲೇ ಕೈಗಾರಿಕಾ ಕೇಂದ್ರಗಳು, ಸರಕು ಶೆಡ್‌ಗಳು ಮತ್ತು ಪ್ರಮುಖ ಪ್ರವಾಸಿ ತಾಣಗಳಂತಹ ಪ್ರಮುಖ ಆರ್ಥಿಕ ಕೇಂದ್ರಗಳಿಗೆ ಸೇವೆ ಸಲ್ಲಿಸುತ್ತಿದ್ದರೂ ಭವಿಷ್ಯದ ಸಂಚಾರ ಮುನ್ಸೂಚನೆಗಳು ಮತ್ತು ಕಾರ್ಯಾಚರಣೆಯ ಅವಶ್ಯಕತೆಗಳನ್ನು ಪೂರೈಸಲು ಸಾಮರ್ಥ್ಯ ವರ್ಧನೆ ಅತ್ಯಗತ್ಯವಾಗಿದೆ. ಈ ಯೋಜನೆಯು ಹೆಚ್ಚು ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ರೈಲು ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸುತ್ತದೆ, ಪ್ರಾದೇಶಿಕ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಮತ್ತು ಈ ಕಾರ್ಯತಂತ್ರದ ಪ್ರಮುಖ ಕಾರಿಡಾರ್‌ನ ಒಟ್ಟಾರೆ ಸಾರಿಗೆ ದಕ್ಷತೆಯನ್ನು ಬಲಪಡಿಸುತ್ತದೆ.
ಸಿಲ್ಚಾರ್ (ಅಸ್ಸಾಂ) ನ ಡೋಲೂನಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿ: ನಾಗರಿಕ ವಿಮಾನಯಾನ ಸಚಿವಾಲಯವು ಅಸ್ಸಾಂನ ಸಿಲ್ಚಾರ್‌ನ ಡೋಲೂನಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಯನ್ನು ಉದ್ದೇಶಿಸಿದ್ದು, ಇದು ರಾಷ್ಟ್ರೀಯ ಹೆದ್ದಾರಿ ಎನ್ ಎಚ್-27 ರ ಪಕ್ಕದಲ್ಲಿದೆ. ಈ ಪ್ರದೇಶದಲ್ಲಿ ವಾಯು ಪ್ರಯಾಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವುದು ಮತ್ತು ಆಧುನಿಕ ವಿಮಾನಯಾನ ಮೂಲಸೌಕರ್ಯ ಮತ್ತು ವರ್ಧಿತ ಪ್ರಾದೇಶಿಕ ಮತ್ತು ರಾಷ್ಟ್ರೀಯ ಸಂಪರ್ಕ ಒದಗಿಸುವ ಮೂಲಕ ಅಸ್ತಿತ್ವದಲ್ಲಿರುವ ನಾಗರಿಕ ಪೂರಕ ಸಾಮರ್ಥ್ಯದ ಮಿತಿಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
ವಿಮಾನನಿಲ್ದಾಣ ಕಾರ್ಯರೂಪಕ್ಕೆ ಬಂದ ನಂತರ, ವಿಮಾನ ನಿಲ್ದಾಣವು ಕ್ಯಾಚರ್ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಪ್ರಮುಖ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಸುಧಾರಿತ ವಾಯು ಸಂಪರ್ಕವು ವ್ಯಾಪಾರ, ಪ್ರವಾಸೋದ್ಯಮ ಮತ್ತು ವ್ಯವಹಾರದ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಆದರೆ ರಸ್ತೆಗಳು, ಸರಕು ಸಾಗಾಣೆ, ಆತಿಥ್ಯ ಮತ್ತು ನಗರ ಮೂಲಸೌಕರ್ಯದಂತಹ ಸಂಬಂಧಿತ ವಲಯಗಳಲ್ಲಿ ಗುಣಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ ಹಾಗೂ ನಿರಂತರ ಪ್ರಾದೇಶಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.
ಸೂರತ್ ಮೆಟ್ರೋ ಕಾರಿಡಾರ್ II ಹಂತ I ರ ಸರೋಲಿಯಿಂದ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು (HSR) ಕಾರಿಡಾರ್ (ಗುಜರಾತ್) ವರೆಗೆ ವಿಸ್ತರಣೆ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂಒಎಚ್ ಯುಎ) ಸೂರತ್ ಮೆಟ್ರೋ ಕಾರಿಡಾರ್ II (ಹಂತ I) ಅನ್ನು ಸರೋಲಿಯಿಂದ ಗುಜರಾತ್‌ನ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು (ಎಚ್ ಎಸ್ ಆರ್) ಕಾರಿಡಾರ್‌ಗೆ ವಿಸ್ತರಿಸಲು ಪ್ರಸ್ತಾಪಿಸಿದೆ. 4.4 ಕಿಮೀ ಎತ್ತರದ ವಿಸ್ತರಣೆಯು ಮೂರು ನಿಲ್ದಾಣಗಳನ್ನು ಒಳಗೊಂಡಿದ್ದು, ಎರಡು ಫ್ಯೂಚರ್ ಸ್ಟೇಷನ್ ಗಳಿಗೆ ಅವಕಾಶಗಳನ್ನು ಹೊಂದಿದೆ ಮತ್ತು ಪ್ರಾದೇಶಿಕ ಮತ್ತು ರಾಷ್ಟ್ರೀಯ ಸಾರಿಗೆ ಜಾಲಗಳೊಂದಿಗೆ ಸೂರತ್‌ನ ಸಂಯೋಜನೆಯನ್ನು ಬಲಪಡಿಸುವಾಗ ನಗರ ಸಂಚಾರವನ್ನು ವೃದ್ಧಿಸುವ ಗುರಿಯನ್ನು ಹೊಂದಿದೆ.
ಈ ಯೋಜನೆಯನ್ನು ಮುಂಬೈ-ಅಹಮದಾಬಾದ್ ಎಚ್ ಎಸ್ ಆರ್ ಕಾರಿಡಾರ್‌ಗೆ ಮೀಸಲಾದ ಫೀಡರ್ ಆಗಿ ವಿನ್ಯಾಸಗೊಳಿಸಲಾಗಿದ್ದು, ಇದು ತಡೆರಹಿತ ಕೊನೆಯ ಮೈಲು ಸಂಪರ್ಕವನ್ನು ಒದಗಿಸುತ್ತದೆ. ನೇರ ಮೆಟ್ರೋ-ಎಚ್‌ಎಸ್‌ಆರ್ ಸಂಪರ್ಕಗಳು, ಫೀಡರ್ ಬಸ್ ಸೌಲಭ್ಯಗಳು ಮತ್ತು ಮೋಟಾರು ಇಲ್ಲದಂತಹ ಸಾರಿಗೆ ಮೂಲಸೌಕರ್ಯ ಸೇರಿ ಸಂಯೋಜಿತ ನಿಲ್ದಾಣ ಯೋಜನೆಯು ಪ್ರಯಾಣಿಕರ ಅನುಕೂಲತೆಯನ್ನು ಸುಧಾರಿಸುತ್ತದೆ ಹಾಗೂ ಮಾದರಿ ಏಕೀಕರಣವನ್ನು ಉತ್ತೇಜಿಸುತ್ತದೆ ಮತ್ತು ಒಟ್ಟಾರೆ ಸಾರಿಗೆ ವ್ಯವಸ್ಥೆಯ ದಕ್ಷತೆ ಮತ್ತು ಸುಸ್ಥಿರತೆಯನ್ನು ವೃದ್ಧಿಸುತ್ತದೆ.
*****
(ಪ್ರಕಟಣೆ ಐ.ಡಿ.: 2232649)
ವಿಸಿಟರ್ ಕೌಂಟರ್ : 8