ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಎಐ ಇಂಪ್ಯಾಕ್ಟ್ ಕುರಿತು ನವದೆಹಲಿ ಘೋಷಣೆಗೆ ಮತ್ತಷ್ಟು ದೇಶಗಳು ಸೇರ್ಪಡೆ
ಪ್ರಕಟಣಾ ದಿನಾಂಕ:
24 FEB 2026 11:19AM by PIB Bengaluru
ಫೆಬ್ರವರಿ 18-19ರ ಅವಧಿಯಲ್ಲಿ ನವದೆಹಲಿಯಲ್ಲಿ ನಡೆದ ʻಎಐ ಪರಿಣಾಮ ಶೃಂಗಸಭೆʼಯು, ಕೃತಕ ಬುದ್ಧಿಮತ್ತೆಯ ಜಾಗತಿಕ ಸಹಕಾರದಲ್ಲಿ ಮಹತ್ವದ ಮೈಲುಗಲ್ಲನ್ನು ಗುರುತಿಸುವ ಎಐ ಪರಿಣಾಮದ ಕುರಿತು ʻನವದೆಹಲಿ ಘೋಷಣೆʼಯನ್ನು ಅಂಗೀಕರಿಸುವುದರೊಂದಿಗೆ ಸಂಪನ್ನಗೊಂಡಿತು.
ಫೆಬ್ರವರಿ 21, 2026 ರಂತೆ, 88 ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಈ ʻಘೋಷಣೆʼಯನ್ನು ಅನುಮೋದಿಸಿದ್ದವು. ಅಂದಿನಿಂದ, ಇನ್ನೂ 3 ದೇಶಗಳು - ಬಾಂಗ್ಲಾದೇಶ, ಕೋಸ್ಟಾರಿಕಾ ಮತ್ತು ಗ್ವಾಟೆಮಾಲಾ ಈ ʻಘೋಷಣೆʼಗೆ ಸೇರ್ಪಡೆಗೊಂಡಿವೆ. ಇದರೊಂದಿಗೆ ಒಟ್ಟು ಸಹಿ ಹಾಕಿದವರ ಸಂಖ್ಯೆ 91 ದೇಶಗಳು ಮತ್ತು ಸಂಸ್ಥೆಗಳಿಗೆ ಏರಿದೆ.
ಅದಂತೆ, ಈ ವಿಷಯದ ಬಗ್ಗೆ ಫೆಬ್ರವರಿ 21ರ ಪತ್ರಿಕಾ ಪ್ರಕಟಣೆಯನ್ನು (ಐಡಿ: 2231208) 3 ಹೊಸ ಸಹಿದಾರರ ಸೇರ್ಪಡೆಯೊಂದಿಗೆ ನವೀಕರಿಸಲಾಗಿದೆ:
https://www.pib.gov.in/PressReleasePage.aspx?PRID=2231208®=3&lang=2#:~:text=Guided%20by%20the%20principle%20of,Respecting%20national%20sovereignty
*****
(ಪ್ರಕಟಣೆ ಐ.ಡಿ.: 2232019)
ವಿಸಿಟರ್ ಕೌಂಟರ್ : 12