ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಸೂರ್ಯ ಘರ್‌ ಯೋಜನೆಯಡಿ 30 ಲಕ್ಷ  ಕುಟುಂಬಗಳು ಮೇಲ್ಛಾವಣಿ ಸೌರಶಕ್ತಿಯನ್ನು ಅಳವಡಿಸಿಕೊಂಡಿರುವುದನ್ನು ಶ್ಲಾಘಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 23 FEB 2026 8:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶಾದ್ಯಂತ 30 ಲಕ್ಷ ಮನೆಗಳನ್ನು ಮೇಲ್ಛಾವಣಿ ಸೌರಶಕ್ತಿಯೊಂದಿಗೆ ಸಬಲೀಕರಣಗೊಳಿಸಿದ ಸಾಧನೆಯನ್ನು ಶ್ಲಾಘಿಸಿದ್ದಾರೆ. ಇದು ಭಾರತದ ಶುದ್ಧ ಇಂಧನ ಪಯಣದಲ್ಲಿ ಶ್ಲಾಘನೀಯ ಮೈಲಿಗಲ್ಲುಎಂದು ಬಣ್ಣಿಸಿದ್ದಾರೆ.

ಮೇಲ್ಛಾವಣಿ ಸೌರಶಕ್ತಿಯನ್ನು ಅಳವಡಿಸಿಕೊಂಡಿರುವ ಎಲ್ಲಾ ಫಲಾನುಭವಿಗಳನ್ನು ಅಭಿನಂದಿಸಿದ ಪ್ರಧಾನಮಂತ್ರಿ ಅವರು, ಈ ಉಪಕ್ರಮವು ನಾಗರಿಕರಲ್ಲಿ ಉಳಿತಾಯ, ಸುಸ್ಥಿರತೆ ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.

ಈ ಯೋಜನೆಯು ಇಂಧನ-ಸುರಕ್ಷಿತ, ಹಸಿರು ಮತ್ತು ಭವಿಷ್ಯಕ್ಕೆ ಸಿದ್ಧವಾದ ಭಾರತವನ್ನು ನಿರ್ಮಿಸುವ ಸರ್ಕಾರದ ಪ್ರಯತ್ನಗಳ ಅವಿಭಾಜ್ಯ ಅಂಗವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು.

ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್‌ ಜೋಶಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು;

ಭಾರತದ ಶುದ್ಧ ಇಂಧನ ಪ್ರಯಾಣದಲ್ಲಿಒಂದು ಶ್ಲಾಘನೀಯ ಮೈಲಿಗಲ್ಲಾಗಿದೆ!

ಈ ಯೋಜನೆಯಿಂದ ಪ್ರಯೋಜನ ಪಡೆದ ಮತ್ತು ಮೇಲ್ಛಾವಣಿ ಸೌರಶಕ್ತಿಯನ್ನು ಅಳವಡಿಸಿಕೊಂಡ ಎಲ್ಲರಿಗೂ ಅಭಿನಂದನೆಗಳು, ಆ ಮೂಲಕ ಉಳಿತಾಯ, ಸುಸ್ಥಿರತೆ ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ.

ಈ ಯೋಜನೆಯು ಇಂಧನ-ಸುರಕ್ಷಿತ, ಹಸಿರು ಮತ್ತು ಭವಿಷ್ಯಕ್ಕೆ ಸಿದ್ಧವಾದ ಭಾರತವನ್ನು ನಿರ್ಮಿಸುವ ನಮ್ಮ ಪ್ರಯತ್ನಗಳ ಒಂದು ಭಾಗವಾಗಿದೆ.

#30LakhsPMSuryaGhar”  

 

*****


(ಪ್ರಕಟಣೆ ಐ.ಡಿ.: 2231958) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: Marathi , English , हिन्दी , Gujarati