ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅರುಣಾಚಲ ಪ್ರದೇಶ ರಾಜ್ಯೋತ್ಸವದ ಅಂಗವಾಗಿ ಜನತೆಗೆ ಶುಭಾಶಯ ತಿಳಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 20 FEB 2026 9:35AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅರುಣಾಚಲ ಪ್ರದೇಶ ರಾಜ್ಯೋತ್ಸವದ ಅಂಗವಾಗಿ ರಾಜ್ಯದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಅರುಣಾಚಲ ಪ್ರದೇಶವನ್ನು ಪರಂಪರೆ ಮತ್ತು ಪ್ರಕೃತಿಯ ನಡುವಿನ ಸೌಹಾರ್ದದ ಹೊಳೆಯುವ ಉದಾಹರಣೆ ಎಂದು ಅವರು ಪ್ರಶಂಸಿಸಿದರು. ರಾಜ್ಯದ ಉತ್ಸಾಹಭರಿತ ಮತ್ತು ಪರಿಶ್ರಮಿ ನಾಗರಿಕರು ದೇಶದ ಅಭಿವೃದ್ಧಿಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದುಕೊಂಡಿದ್ದಾರೆ;

“ಅರುಣಾಚಲ ಪ್ರದೇಶ ರಾಜ್ಯೋತ್ಸವದ ಅಂಗವಾಗಿ ರಾಜ್ಯದ ಜನತೆಗೆ ಹಾರ್ದಿಕ ಶುಭಾಶಯಗಳು.

ಅದ್ಭುತ ಪ್ರಕೃತಿ ಸೌಂದರ್ಯ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯಿಂದ ಸಮೃದ್ಧವಾಗಿರುವ ಅರುಣಾಚಲ ಪ್ರದೇಶವು ಪರಂಪರೆ ಮತ್ತು ಪ್ರಕೃತಿಯ ನಡುವಿನ ಸಮತೋಲನಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ರಾಜ್ಯದ ಉತ್ಸಾಹಭರಿತ ಮತ್ತು ಪರಿಶ್ರಮಿ ನಾಗರಿಕರು ದೇಶದ ಅಭಿವೃದ್ಧಿಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅದೇ ಸಮಯದಲ್ಲಿ, ರಾಜ್ಯದ ವೈವಿಧ್ಯಮಯ ಆದಿವಾಸಿ ಸಂಸ್ಕೃತಿ ನಮ್ಮ ದೇಶದ ಸಾಂಸ್ಕೃತಿಕ ಸಂಪತ್ತನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ.

ಮುಂದಿನ ದಿನಗಳಲ್ಲಿ ರಾಜ್ಯವು ಅಭಿವೃದ್ಧಿಯ ಹೊಸ ಎತ್ತರಕ್ಕೆ ಹೋಗಲಿ ಎಂದು ಹಾರೈಸುತ್ತೇನೆ.”

 

*****


(ಪ್ರಕಟಣೆ ಐ.ಡಿ.: 2230595) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Gujarati , Telugu , Malayalam