ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav AI Impact Summit 2026

ಗ್ರೀಸ್ ಗಣರಾಜ್ಯದ ಪ್ರಧಾನಮಂತ್ರಿ ಶ್ರೀ ಕಿರಿಯಾಕೋಸ್ ಮಿಟ್ಸೋಟಾಕಿಸ್ ಅವರೊಂದಿಗೆ ಪ್ರಧಾನಮಂತ್ರಿ ಚರ್ಚೆ

ಪ್ರಕಟಣಾ ದಿನಾಂಕ: 19 FEB 2026 7:15PM by PIB Bengaluru

ಫೆಬ್ರವರಿ 18 ರಿಂದ 19 ರವರೆಗೆ ನವದೆಹಲಿಯಲ್ಲಿ ನಡೆದ ಭಾರತ AI ಇಂಪ್ಯಾಕ್ಟ್ ಶೃಂಗಸಭೆ, 2026ರಲ್ಲಿ ಭಾಗವಹಿಸಲು ಹೆಲೆನಿಕ್ ರಿಪಬ್ಲಿಕ್ ಆಫ್‌  ಪ್ರಧಾನಮಂತ್ರಿ ಶ್ರೀ ಕಿರಿಯಾಕೋಸ್ ಮಿಟ್ಸೋಟಾಕಿಸ್  ಭಾರತಕ್ಕೆ ಆಗಮಿಸಿದ್ದಾರೆ 

ಫೆಬ್ರವರಿ 19, 2026 ರಂದು ನಡೆದ AI ಇಂಪ್ಯಾಕ್ಟ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವರೊಂದಿಗೆ ಮಾತುಕತೆ ನಡೆಸಿದರು.

ಈ ನಿಯೋಗದಲ್ಲಿ ಡಿಮಿಟ್ರಿಯೊಸ್ ಪಾಪಾಸ್ಟರ್ಗಿಯೊ ಮತ್ತು ಹಿರಿಯ ಅಧಿಕಾರಿಗಳಿದ್ದರು.

ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯ ಸಂಪೂರ್ಣ ವ್ಯಾಪ್ತಿಯ ಬಗ್ಗೆ ಉಭಯ ನಾಯಕರು ಪರಿಶೀಲನೆ ನಡೆಸಿದರು. ಪಾಲುದಾರಿಕೆಯು ವೈವಿಧ್ಯಮಯ ಕ್ಷೇತ್ರಗಳಲ್ಲಿ ಸ್ಥಿರವಾದ ವೇಗದಲ್ಲಿ ಬೆಳೆಯುತ್ತಿದೆ. ಪ್ರಾದೇಶಿಕ ಮತ್ತು ಜಾಗತಿಕ ಹಿತಾಸಕ್ತಿಯ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವುದರ ಜೊತೆಗೆ, ಹೊಸ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮುಂದಿನ ಮಾರ್ಗದ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು. IMEC ಅಡಿಯಲ್ಲಿ ಇತ್ತೀಚಿನ ಸಂಪರ್ಕ ಉಪಕ್ರಮಗಳು ಮತ್ತು ಅವುಗಳನ್ನು ಮತ್ತಷ್ಟು ವಿಸ್ತರಿಸುವ ಸಾಮರ್ಥ್ಯವನ್ನು ಇಬ್ಬರೂ ನಾಯಕರು ಶ್ಲಾಘಿಸಿದರು.

ಇತ್ತೀಚೆಗೆ ಉನ್ನತ ಮಟ್ಟದ ಭೇಟಿಗಳ ವಿನಿಮಯವು ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ಪ್ರಚೋದನೆಯನ್ನು ನೀಡಿದೆ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಭಾರತ - EU FTA ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ಇಬ್ಬರೂ ನಾಯಕರು ತಿಳಿಸಿದರು.

ಇದು ಪ್ರಧಾನಮಂತ್ರಿ ಮಿಟ್ಸೋಟಾಕಿಸ್ ಅವರ ಭಾರತಕ್ಕೆ ಎರಡನೇ ಭೇಟಿಯಾಗಿತ್ತು; ಅವರು ಈ ಹಿಂದೆ ಫೆಬ್ರವರಿ 2024ರಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು, 15 ವರ್ಷಗಳ ನಂತರ ಭಾರತಕ್ಕೆ ಗ್ರೀಸ್‌ ಸರ್ಕಾರದ ಮುಖ್ಯಸ್ಥರ ಮೊದಲ ಭೇಟಿಯಾಗಿತ್ತು. ಇದಕ್ಕೂ ಮೊದಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 25, 2023 ರಂದು ಅಥೆನ್ಸ್‌ಗೆ ಭೇಟಿ ನೀಡಿದ್ದರು, ದ್ವಿಪಕ್ಷೀಯ ಸಂಬಂಧಗಳ ಕಾರ್ಯತಂತ್ರದ ಪಾಲುದಾರಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

 

*****


(ಪ್ರಕಟಣೆ ಐ.ಡಿ.: 2230538) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Gujarati , Tamil , Telugu , Malayalam