ಜವಳಿ ಸಚಿವಾಲಯ
azadi ka amrit mahotsav

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ಜವಳಿ ಉದ್ಯಮಕ್ಕೆ ಪ್ರಮುಖ ಉತ್ತೇಜನ

ಪ್ರಕಟಣಾ ದಿನಾಂಕ: 07 FEB 2026 5:12PM by PIB Bengaluru

ಜವಳಿ ಸಚಿವಾಲಯವು ಭಾರತ ಮತ್ತು ಅಮೆರಿಕ (ಯುಎಸ್‌) ನಡುವಿನ ಐತಿಹಾಸಿಕ ಒಪ್ಪಂದವನ್ನು ರಾಷ್ಟ್ರಗಳ ನಡುವಿನ ಜವಳಿ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವ ಪ್ರಮುಖ ವೇಗವರ್ಧಕವಾಗಿದೆ ಎಂದು ಸ್ವಾಗತಿಸಿತು. ಜವಳಿ ಉದ್ಯಮವು ಈ ವಲಯಕ್ಕೆ ಪ್ರಮುಖ ಆರ್ಥಿಕ ಗೇಮ್‌ ಚೇಂಜರ್‌ ಎಂದು ಭರವಸೆ ವ್ಯಕ್ತಪಡಿಸಿತು.

ಜವಳಿ ರಫ್ತಿಗಾಗಿ, ಇದು ಜವಳಿ, ಉಡುಪುಗಳು ಮತ್ತು ಮೇಕ್‌ ಅಪ್‌ಗಳ 118 ಶತಕೋಟಿ ರೂಪಾಯಿ ಅಮೆರಿಕ ಜಾಗತಿಕ ಆಮದು ಮಾರುಕಟ್ಟೆಯನ್ನು ತೆರೆಯುತ್ತದೆ. ಸುಮಾರು 10.5 ಶತಕೋಟಿ ಡಾಲರ್‌ ರಫ್ತು ಮಾಡುವ ಭಾರತದ ಅತಿದೊಡ್ಡ ರಫ್ತು ತಾಣವಾಗಿರುವುದು ಅಮೆರಿಕ, ಸುಮಾರು ಶೇ.70ರಷ್ಟು ಉಡುಪು ಮತ್ತು ಶೇ.15 ರಷ್ಟು ಮೇಕ್‌-ಅಪ್‌ಗಳನ್ನು ಒಳಗೊಂಡಿದೆ. ಇದು ಒಂದು ಪ್ರಮುಖ ಅವಕಾಶವಾಗಿದೆ. 2030ರಲ್ಲಿ ಭಾರತವು 100 ಶತಕೋಟಿ ಡಾಲರ್‌ ರಫ್ತುಗಳ ಉದ್ದೇಶಿತ ಗುರಿಯನ್ನು ಸಾಧಿಸುವಲ್ಲಿಇದು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಈ ಒಪ್ಪಂದವು ಅಗತ್ಯವಾದ ಆವೇಗವನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಈ ಗುರಿಯ 1/5 ಕ್ಕಿಂತ ಹೆಚ್ಚು ಕೊಡುಗೆಯನ್ನು ಅಮೆರಿಕ ನೀಡುತ್ತದೆ.

ಉಡುಪು ಮತ್ತು ಮೇಡ್‌ ಅಪ್‌ಗಳು ಸೇರಿದಂತೆ ಎಲ್ಲಾ ಜವಳಿ ಉತ್ಪನ್ನಗಳ ಮೇಲಿನ ಶೇ.18ರಷ್ಟು ಪರಸ್ಪರ ಸುಂಕವು ಭಾರತೀಯ ರಫ್ತುದಾರರಿಗೆ ಇರುವ ಅನಾನುಕೂಲತೆಯನ್ನು ತೆಗೆದುಹಾಕುವುದಲ್ಲದೆ, ಹೆಚ್ಚಿನ ಪರಸ್ಪರ ಸುಂಕವನ್ನು ಹೊಂದಿರುವ ಬಾಂಗ್ಲಾದೇಶ (ಶೇ.20), ಚೀನಾ (ಶೇ.30), ಪಾಕಿಸ್ತಾನ (ಶೇ.19) ಮತ್ತು ವಿಯೆಟ್ನಾಂ (ಶೇ.20) ನಂತಹ ಹೆಚ್ಚಿನ ಪ್ರತಿಸ್ಪರ್ಧಿಗಳಿಗಿಂತ ಉತ್ತಮ ಸ್ಥಾನದಲ್ಲಿಇರಿಸುತ್ತದೆ. ಇದು ಮಾರುಕಟ್ಟೆಯ ಚಲನಶೀಲತೆಯನ್ನು ಬದಲಾಯಿಸುತ್ತದೆ. ಏಕೆಂದರೆ ದೊಡ್ಡ ಖರೀದಿದಾರರು ಖಂಡಿತವಾಗಿಯೂ ಈ ಒಪ್ಪಂದದ ಬೆಳಕಿನಲ್ಲಿ ತಮ್ಮ ಸೋರ್ಸಿಂಗ್‌ ಅನ್ನು ಮರುಪರಿಶೀಲಿಸುತ್ತಾರೆ.

ಈ ಒಪ್ಪಂದವು ಉದ್ಯಮವು ವೆಚ್ಚ ಸ್ಪರ್ಧಾತ್ಮಕವಾಗಲು ಮತ್ತು ಅಮೆರಿಕದಿಂದ ಜವಳಿ ಕ್ಷೇತ್ರಕ್ಕೆ ಮಧ್ಯವರ್ತಿಗಳನ್ನು ಪಡೆಯುವ ಮೂಲಕ ಅವರ ಅಪಾಯಗಳನ್ನು ವೈವಿಧ್ಯಗೊಳಿಸಲು ಅನುವು ಮಾಡಿಕೊಡುತ್ತದೆ. ಇದು ದೇಶದಲ್ಲಿಮೌಲ್ಯವರ್ಧಿತ ಜವಳಿ ಉತ್ಪಾದನೆಗೆ ಅನುಕೂಲ ಮಾಡಿಕೊಡುತ್ತದೆ ಮತ್ತು ನಮ್ಮ ಉತ್ಪಾದನೆ ಮತ್ತು ರಫ್ತು ವೈವಿಧ್ಯಗೊಳಿಸುತ್ತದೆ. ಈ ಒಪ್ಪಂದವು ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಅಮೆರಿಕ ಘಟಕಗಳಿಂದ ಹೂಡಿಕೆಗಳನ್ನು ಉತ್ತೇಜಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2224937) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Odia , Malayalam