ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ಪರೀಕ್ಷಾ ಪೇ ಚರ್ಚೆ ಹೇಗೆ ಜನ ಆಂದೋಲನವಾಗಿ ಮಾರ್ಪಟ್ಟಿದೆ ಮತ್ತು ವಿಕಸಿತ ಭಾರತಕ್ಕೆ ದಾರಿ ಮಾಡಿಕೊಡುತ್ತಿದೆ ಎಂಬುದನ್ನು ವಿವರಿಸುವ ಲೇಖನವನ್ನು ಹಂಚಿಕೊಂಡಿದ್ದಾರೆ
ಪ್ರಕಟಣಾ ದಿನಾಂಕ:
05 FEB 2026 1:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪರೀಕ್ಷಾ ಪೇ ಚರ್ಚೆ ಹೇಗೆ ಒಂದು 'ಜನ ಆಂದೋಲನ'ವಾಗಿ ಮಾರ್ಪಟ್ಟಿದೆ ಎಂಬುದನ್ನು ವಿವರಿಸುವ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಇದು ಭಾರತದ ಶೈಕ್ಷಣಿಕ ಪಯಣದಲ್ಲಿ ನಿರ್ಣಾಯಕ ಬದಲಾವಣೆಯನ್ನು ಗುರುತಿಸುತ್ತದೆ ಮತ್ತು 'ವಿಕಸಿತ ಭಾರತ' ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಕಚೇರಿ ಈ ರೀತಿ ತಿಳಿಸಿದೆ:
"ಕೇಂದ್ರ ಸಚಿವರಾದ ಶ್ರೀ @dpradhanbjp ಅವರು ಈ ಲೇಖನದಲ್ಲಿ ಪರೀಕ್ಷಾ ಪೇ ಚರ್ಚೆಯು ಹೇಗೆ ಜನ ಆಂದೋಲನವಾಗಿ ಮಾರ್ಪಟ್ಟಿದೆ ಎಂಬುದನ್ನು ವಿವರಿಸಿದ್ದಾರೆ. ಇದು ಭಾರತದ ಶೈಕ್ಷಣಿಕ ಪಯಣದಲ್ಲಿ ಮಹತ್ವದ ಬದಲಾವಣೆ ತರುವ ಮೂಲಕ ವಿಕಸಿತ ಭಾರತಕ್ಕೆ ಅಡಿಪಾಯ ಹಾಕುತ್ತಿದೆ."
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಬಗ್ಗೆ ಸಚಿವರು ಪುನರುಚ್ಚರಿಸುತ್ತಾ, ಶಿಶು-ಕೇಂದ್ರಿತ ವಿಧಾನ, ಭಾರತೀಯ ಜ್ಞಾನ ಪದ್ಧತಿಗಳ ಮೇಲಿನ ಗಮನ ಮತ್ತು ಮಾತೃಭಾಷೆಗೆ ನೀಡಲಾಗಿರುವ ಒತ್ತು, ವಿದ್ಯಾರ್ಥಿಗಳನ್ನು 21ನೇ ಶತಮಾನದ ಸವಾಲುಗಳಿಗೆ ಸಜ್ಜುಗೊಳಿಸುತ್ತದೆ ಎಂದು ಹೇಳಿದ್ದಾರೆ.
******
(ಪ್ರಕಟಣೆ ಐ.ಡಿ.: 2223724)
ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ:
Punjabi
,
English
,
Urdu
,
हिन्दी
,
Marathi
,
Bengali
,
Manipuri
,
Assamese
,
Gujarati
,
Telugu
,
Malayalam