ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸಿ ಬಿ ಎಫ್‌ ಸಿ ಯಿಂದ ಕಳೆದ 5 ವರ್ಷಗಳಲ್ಲಿ 70 ಸಾವಿರಕ್ಕೂ ಹೆಚ್ಚು ಚಲನಚಿತ್ರಗಳ ಪ್ರಮಾಣೀಕರಣ; ಶಾಸನಬದ್ಧ ಉಲ್ಲಂಘನೆಯ ಪ್ರಕರಣಗಳಲ್ಲಿ ಮಾತ್ರ ಕಡಿತಕ್ಕೆ ಸೂಚನೆ

ಪ್ರಕಟಣಾ ದಿನಾಂಕ: 04 FEB 2026 4:25PM by PIB Bengaluru

ವಾರ್ತಾ ಮತ್ತು ಪ್ರಸಾರ ಸಚಿವಾಲಯದಡಿಯಲ್ಲಿರುವ ಶಾಸನಬದ್ಧ ಸಂಸ್ಥೆಯಾದ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (CBFC), ಸಿನಿಮಾಟೋಗ್ರಾಫ್ ಕಾಯ್ದೆ, 1952, ಸಿನಿಮಾಟೋಗ್ರಾಫ್ ಪ್ರಮಾಣೀಕರಣ ನಿಯಮಗಳು, 2024 ಮತ್ತು ಸಂಬಂಧಿತ ಮಾರ್ಗಸೂಚಿಗಳನ್ವಯ ಸಾರ್ವಜನಿಕ ಪ್ರದರ್ಶನಕ್ಕಾಗಿ ಚಲನಚಿತ್ರಗಳನ್ನು ಪ್ರಮಾಣೀಕರಿಸುತ್ತದೆ.

ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ, ನೈತಿಕತೆ, ಮಾನನಷ್ಟ, ನ್ಯಾಯಾಲಯ ಆದೇಶ ಉಲ್ಲಂಘನೆ ಅಥವಾ ಅಪರಾಧಕ್ಕೆ ಪ್ರಚೋದನೆ ಮೊದಲಾದ ಶಾಸನಬದ್ಧ ಅಂಶಗಳ ಉಲ್ಲಂಘನೆಯಾದರೆ ಮಾತ್ರ ಕಡಿತ ಅಥವಾ ಮಾರ್ಪಾಡುಗಳನ್ನು ಶಿಫಾರಸು ಮಾಡಲಾಗುತ್ತದೆ.

ಕಳೆದ ಐದು ವರ್ಷಗಳಲ್ಲಿ (2020–21 ರಿಂದ 2024–25),  71,963 ಚಲನಚಿತ್ರಗಳನ್ನು ಸಿ ಬಿ ಎಫ್ ಸಿ ಪ್ರಮಾಣೀಕರಿಸಿದೆ.

 

ಸಿನಿಮಾಟೋಗ್ರಾಫ್ ಕಾಯ್ದೆಯಡಿ ಮಂಡಳಿಯ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅಂತಹ ಪ್ರಕರಣಗಳನ್ನು ನ್ಯಾಯಾಂಗ ನಡಾವಳಿಗಳ ಫಲಿತಾಂಶಕ್ಕೆ ಅನುಗುಣವಾಗಿ ಇತ್ಯರ್ಥಪಡಿಸಲಾಗುತ್ತದೆ.

ಸೃಜನಶೀಲ ಸ್ವಾತಂತ್ರ್ಯವನ್ನು ರಕ್ಷಿಸುವುದರ ಜೊತೆಗೆ ಸಿನಿಮಾಟೋಗ್ರಾಫ್ ಕಾಯ್ದೆಯಡಿ ತನ್ನ ಬಾಧ್ಯತೆಗಳನ್ನು ನಿರ್ವಹಿಸುತ್ತಾ ಪಾರದರ್ಶಕ ಮತ್ತು ಜವಾಬ್ದಾರಿಯುತ ಪ್ರಮಾಣೀಕರಣ ಪ್ರಕ್ರಿಯೆಯನ್ನು ನಿರ್ವಹಿಸಲು ಸರ್ಕಾರ ಬದ್ಧವಾಗಿದೆ. 

ಶ್ರೀ. ಮನೀಶ್ ತಿವಾರಿ ಮತ್ತು ಶ್ರೀ ಟಿ.ಆರ್. ಬಲ್ಲು ಅವರು ಕೇಳಿದ ಪ್ರಶ್ನೆಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ಲೋಕಸಭೆಯಲ್ಲಿ ಈ ಉತ್ತರ ನೀಡಿದ್ದಾರೆ.

 

******


(ಪ್ರಕಟಣೆ ಐ.ಡಿ.: 2223456) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Tamil , Telugu , Malayalam