ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯುತ್ತಿರುವ ಸಾಮಾಜಿಕ ಅಭಿವೃದ್ಧಿ ಆಯೋಗದ 64ನೇ ಅಧಿವೇಶನದಲ್ಲಿ ಭಾರತ ಭಾಗವಹಿಸಿದೆ
ಈ ಕುರಿತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರು ಭಾರತದ ರಾಷ್ಟ್ರೀಯ ಹೇಳಿಕೆಐನ್ನು ನೀಡುತ್ತಾ, "ಸಮನ್ವಯ, ಸಮಾನತೆ ಮತ್ತು ಸಮಗ್ರ ನೀತಿಗಳ ಮೂಲಕ ಸಾಮಾಜಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯವನ್ನು ಮುಂದುವರಿಸುವುದು" ಎಂದು ಹೇಳಿದರು
ಯಾರನ್ನೂ ಹಿಂದೆ ಬಿಡದ “ಭಾರತದ ಹಕ್ಕು ಆಧಾರಿತ ಮತ್ತು ಇಡೀ ಸಮಾಜ ಆಧಾರಿತ” ವಿಧಾನವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರು ೀ ಸಂದರ್ಭದಲ್ಲಿ ವಿವರಿಸಿದ್ದಾರೆ
ಪ್ರಕಟಣಾ ದಿನಾಂಕ:
03 FEB 2026 2:54AM by PIB Bengaluru
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರ ನೇತೃತ್ವದ ಭಾರತೀಯ ನಿಯೋಗವು “ಸಾಮಾಜಿಕ ಅಭಿವೃದ್ಧಿ ಆಯೋಗ” (ಸಿ.ಎಸ್.ಒ.ಸಿ.ಡಿ.) ಇದರ 64 ನೇ ಅಧಿವೇಶನದಲ್ಲಿ ಭಾರತದ ಸಮಗ್ರ ಮತ್ತು ಹಕ್ಕು ಆಧಾರಿತ ಸಾಮಾಜಿಕ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರು ಭಾರತದ ರಾಷ್ಟ್ರೀಯ ಹೇಳಿಕೆಯನ್ನು ನೀಡುತ್ತಾ, “ಭಾರತದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ರಕ್ಷಣೆ ಸಾಂವಿಧಾನಿಕ ಖಾತರಿಗಳಲ್ಲಿ ಬೇರೂರಿದೆ ಮತ್ತು ದೇಶದ ದೀರ್ಘಕಾಲೀನ ಪರಿಕಲ್ಪನೆಯ ದೃಷ್ಟಿಕೋನವು "2047ರಲ್ಲಿ ವಿಕಸಿತ ಭಾರತ" ಗೆ ಹೊಂದಿಕೆಯಾಗಿದೆ” ಎಂದು ಹೇಳಿದರು.

ಯಾರೂ ಹಿಂದುಳಿದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇಡೀ ಸರ್ಕಾರ ಮತ್ತು ಇಡೀ ಸಮಾಜದ ವಿಧಾನವನ್ನು ಪ್ರತಿಬಿಂಬಿಸುವ "ಎಲ್ಲರ ಜೊತೆಯಲ್ಲಿ, ಎಲ್ಲರ ವಿಕಾಸದ ಜೊತೆಯಲ್ಲಿ(ಸಬ್ಕಾ ಸಾಥ್, ಸಬ್ಕಾ ವಿಕಾಸ್)" ಪರಿಕಲ್ಪನೆಯ ದೂರದೃಷ್ಟಿಕೋನದ ಮಾರ್ಗದರ್ಶಿ ತತ್ವವನ್ನು ಕೇಂದ್ರ ಸಚಿವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ಪ್ರಮಾಣ, ಸೇರ್ಪಡೆ ಮತ್ತು ಕೊನೆಯ ಹಂತದ ವಿತರಣೆಯನ್ನು ಪ್ರದರ್ಶಿಸುವ ಪ್ರಮುಖ ರಾಷ್ಟ್ರೀಯ ಉಪಕ್ರಮಗಳನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರು ವಿವರಿಸಿದ್ದಾರೆ:
- ದೂರ ಪ್ರದೇಶಗಳಲ್ಲಿ ಸುಧಾರಿತ ಶಾಲಾ ಮೂಲಸೌಕರ್ಯ ಮತ್ತು ವಸತಿ ಶಾಲಾ ಶಿಕ್ಷಣದಿಂದ ಬೆಂಬಲಿತವಾದ ಶಿಕ್ಷಣದಲ್ಲಿ ಹುಡುಗಿಯರು ಮತ್ತು ಹುಡುಗರ ಭಾಗವಹಿಸುವಿಕೆಯಲ್ಲಿ ಸಮಾನತೆ.
- ಮಹಿಳೆಯರು ಮತ್ತು ದುರ್ಬಲ ಸಮುದಾಯಗಳಿಗೆ ಗಮನಾರ್ಹ ಪ್ರಯೋಜನಗಳೊಂದಿಗೆ ಶುದ್ಧ ನಳ್ಳಿ (ಪೈಪ್ಲೈನ್) ಕುಡಿಯುವ ನೀರು, ಶುದ್ಧ ಅಡುಗೆ ಅನಿಲ ಮತ್ತು ನೈರ್ಮಲ್ಯ ಸೌಲಭ್ಯಗಳು ಸೇರಿದಂತೆ ಮೂಲಭೂತ ಸೇವೆಗಳ ದೊಡ್ಡ ಪ್ರಮಾಣದ ವಿಸ್ತರಣೆ.
- ಉದ್ಯಮಶೀಲತೆ ಮತ್ತು ಸಾಲ ಯೋಜನೆಗಳ ಪ್ರಮುಖ ಫಲಾನುಭವಿಗಳಾಗಿ ಮಹಿಳೆಯರು ಸುಲಭವಾಗಿ ಲಭ್ಯ ನೂತನ ಅವಕಾಶಗಳು ಮತ್ತು ಹೊರಹೊಮ್ಮುತ್ತಿರುವ ನೂರಾರು ದಶಲಕ್ಷ ಬ್ಯಾಂಕ್ ಖಾತೆಗಳ ಮೂಲಕ ಪರಿವರ್ತನಾತ್ಮಕ ಆರ್ಥಿಕ ಸೇರ್ಪಡೆ.
- ಮೀಸಲಾದ ಸಹಾಯವಾಣಿಗಳು ಮತ್ತು ಸಂಯೋಜಿತ ಸೇವಾ ಕೇಂದ್ರಗಳ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಲಭ್ಯವಾಗುವ ರಾಷ್ಟ್ರವ್ಯಾಪಿ ರಕ್ಷಣೆ ಮತ್ತು ಬೆಂಬಲ ಕಾರ್ಯವಿಧಾನಗಳು.
- 100 ದಶಲಕ್ಷಕ್ಕಿಂತಲೂ ಹೆಚ್ಚು ಫಲಾನುಭವಿಗಳನ್ನು ತಲುಪುವ ಸಮಗ್ರ ತಾಯಂದಿರ, ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕಾಂಶ ಕಾರ್ಯಕ್ರಮಗಳು.
- ವೃದ್ಧರು, ಅಂಗವಿಕಲರು, ಅಸಂಘಟಿತ ಕಾರ್ಮಿಕರು ಮತ್ತು ಲಿಂಗಪರಿವರ್ತಿತ(ಟ್ರಾನ್ಸ್ಜೆಂಡರ್) ವ್ಯಕ್ತಿಗಳಿಗೆ ವಿಸ್ತೃತ ಸಾಮಾಜಿಕ ಭದ್ರತೆ ಮತ್ತು ಉದ್ದೇಶಿತ ಯೋಜನೆಗಳು.
ಸಾರ್ವಜನಿಕ ಸೇವಾ ವಿತರಣೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ನೇರ ಲಾಭ ವರ್ಗಾವಣೆಗಳ (ಡಿಬಿಟಿ) ಪಾತ್ರವನ್ನು ಭಾರತ ಈ ಸಂದರ್ಭದಲ್ಲಿ ಉಲ್ಲೇಖಿಸಿ ಎತ್ತಿ ತೋರಿಸಿದೆ.
“ಜಾಗತಿಕ ಸವಾಲುಗಳಿಗೆ ಸಾಮೂಹಿಕ ಪ್ರತಿಕ್ರಿಯೆ ಹಾಗೂ ಭಾಗವಹಿಸುವಿಕೆಗಳ ಅಗತ್ಯವಿದೆ” ಎಂದು ಒತ್ತಿ ಹೇಳುತ್ತಾ, ಸಾಮಾಜಿಕ ಅಭಿವೃದ್ಧಿ ಮಾದರಿಗಳಲ್ಲಿ ಪ್ರಗತಿಯನ್ನು ವೇಗಗೊಳಿಸಲು ಬಲಪಡಿಸಿದ ಬಹುಪಕ್ಷೀಯ ಸಹಕಾರ, ಸಾಮರ್ಥ್ಯ ವೃದ್ಧಿ ಮತ್ತು ಜಾಗತಿಕ ದಕ್ಷಿಣ-ದಕ್ಷಿಣ ಸಹಯೋಗಕ್ಕೆ ಭಾರತ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು.

64ನೇ ಅಧಿವೇಶನದ ಅಧ್ಯಕ್ಷತೆಯನ್ನು ಆಯೋಗದ ಅಧ್ಯಕ್ಷರಾದ ರಾಯಭಾರಿ ಶ್ರೀಮತಿ ಕ್ರಿಸ್ಟಿನಾ ಹಯೋವಿಶಿನ್ ವಹಿಸಿದ್ದರು, ವಿಶ್ವಸಂಸ್ಥೆಗೆ ಉಕ್ರೇನ್ ನ ಖಾಯಂ ಪ್ರತಿನಿಧಿ; ವಿಶ್ವಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅಮಿನಾ ಜೆ ಮೊಹಮ್ಮದ್, ಸಾಮಾನ್ಯ ಸಭೆಯ ಅಧ್ಯಕ್ಷೆ ಘನತೆವೆತ್ತ ಶ್ರೀಮತಿ ಅನ್ನಾಲೆನಾ ಬೇರ್ಬಾಕ್, ಇಕೊಸೊಕ್ ಅಧ್ಯಕ್ಷರಾದ ಮತ್ತು ನೇಪಾಳದ ಖಾಯಂ ಪ್ರತಿನಿಧಿ, ರಾಯಭಾರಿ ಶ್ರೀ ಲೋಕ್ ಬಹಾದೂರ್ ಥಾಪಾ, ಡೆಸಾ - ಎ.ಎಸ್.ಜಿ (ನೀತಿ ಸಮನ್ವಯ) ಶ್ರೀಮತಿ ಬ್ಜೋರ್ಗ್ ಸ್ಯಾಂಡ್ಕ್ಜೇರ್ ಮತ್ತು ಸಾಮಾಜಿಕ ಅಭಿವೃದ್ಧಿಯ ಎನ್.ಜಿ.ಒ. ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಗಿಲಿಯನ್ ಡಿ'ಸೋಜಾ-ನಜರೆತ್ ಅವರುಗಳು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಅಧಿವೇಶನವು ವಿಶ್ವಸಂಸ್ಥೆಯ 100 ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.
*****
(ಪ್ರಕಟಣೆ ಐ.ಡಿ.: 2222448)
ವಿಸಿಟರ್ ಕೌಂಟರ್ : 7