ಹಣಕಾಸು ಸಚಿವಾಲಯ
azadi ka amrit mahotsav

ಭಾರತದ ನಾವೀನ್ಯತೆ ಕಾರ್ಯಕ್ಷಮತೆ ಸ್ಥಿರವಾಗಿ ಬಲಗೊಂಡಿದೆ, ಜಾಗತಿಕ ನಾವೀನ್ಯತೆ ಸೂಚ್ಯಂಕ 2019 ರಲ್ಲಿ ಇದ್ದ 66 ನೇ ಸ್ಥಾನದಿಂದ 2025ರಲ್ಲಿ 38 ನೇ ಸ್ಥಾನಕ್ಕೆ ಏರಿದೆ: ಆರ್ಥಿಕ ಸಮೀಕ್ಷೆ 2025-26


ಪಿಎಲ್ಐ ಯೋಜನೆಯು ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಗಳು ತಮ್ಮ ಉತ್ಪಾದನೆಯನ್ನು ಭಾರತಕ್ಕೆ ಮರು-ಸ್ಥಳಾಂತರಿಸಲು ಪ್ರೋತ್ಸಾಹಿಸುತ್ತದೆ


ಪಿಎಲ್ಐ ಯೋಜನೆಯಡಿ, ₹2.0 ಲಕ್ಷ ಕೋಟಿಗಿಂತ ಹೆಚ್ಚಿನ ಹೂಡಿಕೆ, ₹18.70 ಲಕ್ಷ ಕೋಟಿಗೂ ಹೆಚ್ಚಿನ ಉತ್ಪಾದನೆ/ಮಾರಾಟದ ಹೆಚ್ಚಳ ಮತ್ತು 12.60 ಲಕ್ಷಕ್ಕೂ ಹೆಚ್ಚಿನ ಉದ್ಯೋಗ ಸೃಜನೆ


"ಜಾಗತಿಕ ನಾವೀನ್ಯತೆ ಸೂಚ್ಯಂಕ"ದಲ್ಲಿ ಭಾರತದ ಸ್ಥಾನವು 2019 ರಲ್ಲಿ 66 ನೇ ಸ್ಥಾನದಿಂದ 2025 ರಲ್ಲಿ 38 ನೇ ಸ್ಥಾನಕ್ಕೆ ಸುಧಾರಣೆ



ವಿಶ್ವದಾದ್ಯಂತ ಟಾಪ್ 50 ಅತ್ಯಂತ ನಾವೀನ್ಯತೆ ತೀವ್ರ ಗುಂಪುಗಳಲ್ಲಿ ಬೆಂಗಳೂರು, ದೆಹಲಿ ಮತ್ತು ಮುಂಬೈ


6 ರಾಜ್ಯಗಳಲ್ಲಿ ₹1.60 ಲಕ್ಷ ಕೋಟಿ ಸಂಚಿತ ಹೂಡಿಕೆಯೊಂದಿಗೆ ಹತ್ತು ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಯೋಜನೆಗಳನ್ನು ಅನುಮೋದಿಸಲಾಗಿದೆ

ಸ್ಟಾರ್ಟ್-ಅಪ್ ಇಂಡಿಯಾ ಉಪಕ್ರಮದ ಅಡಿಯಲ್ಲಿ, ಡಿಪಿಐಐಟಿಯಲ್ಲಿನ ಏರಿಕೆ 500 ರಿಂದ 2 ಲಕ್ಷಕ್ಕೂ ಹೆಚ್ಚು ನವೋದ್ಯಮಗಳನ್ನು ಗುರುತಿಸಿದೆ

प्रविष्टि तिथि: 29 JAN 2026 2:11PM by PIB Bengaluru

"ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ  ಯೋಜನೆಯು (ಪಿಎಲ್‌ ಐ) ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಗಳು ತಮ್ಮ ಉತ್ಪಾದನೆಯನ್ನು ಭಾರತಕ್ಕೆ ಮರುಸ್ಥಳಾಂತರಿಸಲು ಪ್ರೋತ್ಸಾಹಿಸಿದೆ. ಇದರ ಪರಿಣಾಮವಾಗಿ, ಭಾರತವು ಪ್ರಮುಖ ಮೊಬೈಲ್ ಫೋನ್ ಉತ್ಪಾದನಾ ಕೇಂದ್ರವಾಗಿದೆ" ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2025-26ರ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಿದರು.

ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತದ 'ಆತ್ಮನಿರ್ಭರ ಭಾರತ'ದ ದೃಷ್ಟಿಕೋನಕ್ಕೆ ಅನುಗುಣವಾಗಿ, ಉತ್ಪಾದನೆಗೆ ಸಂಬಂಧಿಸಿದ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಯನ್ನು 2020 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಈಗ ₹1.97 ಲಕ್ಷ ಕೋಟಿ ವೆಚ್ಚದಲ್ಲಿ 14 ಪ್ರಮುಖ ವಲಯಗಳನ್ನು ವ್ಯಾಪಿಸಿದೆ. ಸೆಪ್ಟೆಂಬರ್ 2025 ರವರೆಗೆ, ಪಿಎಲ್‌ ಐ ಯೋಜನೆಯಡಿಯಲ್ಲಿ, ₹2.0 ಲಕ್ಷ ಕೋಟಿಗಿಂತ ಹೆಚ್ಚಿನ ಹೂಡಿಕೆಯನ್ನು ಸಾಧಿಸಲಾಗಿದೆ, ಇದು ₹18.70 ಲಕ್ಷ ಕೋಟಿಗಿಂತ ಹೆಚ್ಚಿನ ಉತ್ಪಾದನೆ ಹಾಗು ಮಾರಾಟ ಮತ್ತು 12.60 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಗೆ (ನೇರ ಮತ್ತು ಪರೋಕ್ಷ) ಕಾರಣವಾಗಿದೆ.

2025-2026ರ ಆರ್ಥಿಕ ಸಮೀಕ್ಷೆಯ ಪ್ರಕಾರ, 12 ವಲಯಗಳಲ್ಲಿ ₹23,946 ಕೋಟಿಗಳ ಒಟ್ಟು  ಪ್ರೋತ್ಸಾಹ ಧನವನ್ನು ವಿತರಿಸಲಾಗಿದೆ, ಎಲ್ಲಾ 14 ವಲಯಗಳಲ್ಲಿ 806 ಅರ್ಜಿಗಳನ್ನು ಅನುಮೋದಿಸಲಾಗಿದೆ. ಪಿಎಲ್‌ಐ ಯೋಜನೆಗಳ ರಫ್ತು ₹8.20 ಲಕ್ಷ ಕೋಟಿಗಳನ್ನು ಮೀರಿದೆ, ಎಲೆಕ್ಟ್ರಾನಿಕ್ಸ್, ಔಷಧಗಳು ಮತ್ತು ಟೆಲಿಕಾಂ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳಂತಹ ವಲಯಗಳಿಂದ ಗಮನಾರ್ಹವಾಗಿ ನಡೆಸಲ್ಪಟ್ಟಿದೆ ಎಂದು ಸಮೀಕ್ಷೆಯು ತಿಳಿಸಿದೆ. ಪಿಎಲ್‌ ಐಗೆ ಪೂರಕವಾಗಿ, ರಾಷ್ಟ್ರೀಯ ಉತ್ಪಾದನಾ ಮಿಷನ್ (ಎನ್‌ ಎಂ ಎಂ) ಅನ್ನು ಕೇಂದ್ರ ಬಜೆಟ್ 2025–26 ರಲ್ಲಿ ಘೋಷಿಸಲಾಯಿತು.

ಆರ್ಥಿಕ ಸಮೀಕ್ಷೆಯ ಪ್ರಕಾರ, "2025-26ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ರಾಷ್ಟ್ರೀಯ ಉತ್ಪಾದನಾ ಮಿಷನ್ (ಎನ್‌ ಎಂ ಎಂ) , ಮುಂದಿನ ದಶಕದಲ್ಲಿ ಭಾರತದ ಕೈಗಾರಿಕಾ ಬೆಳವಣಿಗೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ತೀವ್ರಗೊಳಿಸುವ  ಮೂಲಭೂತ ನೀತಿ ನೀಲನಕ್ಷೆಯನ್ನು ಪ್ರತಿನಿಧಿಸುತ್ತದೆ."

ನಾವೀನ್ಯತೆಗೆ ಪ್ರಮಾಣದಲ್ಲಿ ಹಣಕಾಸು ಒದಗಿಸಲು, ಸರ್ಕಾರವು ಆರು ವರ್ಷಗಳಲ್ಲಿ ₹1 ಲಕ್ಷ ಕೋಟಿ ಒಟ್ಟು ವೆಚ್ಚ ಮತ್ತು ಆರ್ಥಿಕ ವರ್ಷ 26 ಕ್ಕೆ ₹20,000 ಕೋಟಿ ಹಂಚಿಕೆಯೊಂದಿಗೆ ಹೊಸ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ  ( ಆರ್‌ ಡಿ ಐ) ನಿಧಿಯನ್ನು ಸಹ ಘೋಷಿಸಿತು. ಭಾರತದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮುನ್ನಡೆಸುವ ಮತ್ತು ಈ ಮೇಲೆ ಎತ್ತಿ ತೋರಿಸಿರುವ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಪ್ರಮುಖ ಸಾಂಸ್ಥಿಕ ಸುಧಾರಣೆಯೆಂದರೆ ಎ ಎನ್‌ ಆರ್‌ ಎಫ್‌ ಕಾಯ್ದೆ, 2023ರ ಅಡಿಯಲ್ಲಿ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ಎ ಎನ್‌ ಆರ್‌ ಎಫ್‌) ಸ್ಥಾಪನೆ.  ಎ ಎನ್‌ ಆರ್‌ ಎಫ್‌, ಉದ್ಯಮ, ಶೈಕ್ಷಣಿಕ ಮತ್ತು ಸರ್ಕಾರದಾದ್ಯಂತ ಕಾರ್ಯತಂತ್ರದ ನಿರ್ದೇಶನ, ಸ್ಪರ್ಧಾತ್ಮಕ ಹಣಕಾಸು ಅವಕಾಶಗಳು ಮತ್ತು ಸಹಯೋಗ ಮಾರ್ಗಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.

2025-26 ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತದ ಸಂಶೋಧನೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯು ವರ್ಷಗಳಲ್ಲಿ ಗಮನಾರ್ಹವಾಗಿ ಬಲಗೊಂಡಿದೆ. ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ (ಜಿ ಐ ಐ)  ದೇಶದ ಶ್ರೇಯಾಂಕವು 2019 ರಲ್ಲಿ 66 ನೇ ಸ್ಥಾನದಿಂದ 2025 ರಲ್ಲಿ 38 ನೇ ಸ್ಥಾನಕ್ಕೆ ಏರಿತು. ಇದು ಭಾರತವನ್ನು ಕಡಿಮೆ ಮಧ್ಯಮ ಆದಾಯದ ದೇಶಗಳ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮತ್ತು ಮಧ್ಯ ಮತ್ತು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಮೊದಲ ಸ್ಥಾನದಲ್ಲಿ ಇರಿಸುತ್ತದೆ". ಇದಲ್ಲದೆ, ಬೆಂಗಳೂರು, ದೆಹಲಿ ಮತ್ತು ಮುಂಬೈ ವಿಶ್ವದ ಅಗ್ರ 50 ಅತ್ಯಂತ ನಾವೀನ್ಯತೆ ತೀವ್ರ ಕ್ಲಸ್ಟರ್‌ಗಳಲ್ಲಿ ಸೇರಿವೆ ಹಾಗು ಒಟ್ಟಾರೆಯಾಗಿ ದೇಶದ ನಾವೀನ್ಯತೆ ಉತ್ಪಾದನೆಯು ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ.

ಬೌದ್ಧಿಕ ಆಸ್ತಿ (ಐ ಪಿ) ಯಲ್ಲಿ ಗಮನಾರ್ಹ ಜಾಗತಿಕ ಶಕ್ತಿಯಾಗಿ  ಹೊರಹೊಮ್ಮುತ್ತಿರುವ ಭಾರತವು 2024 ರಲ್ಲಿ ಟ್ರೇಡ್‌ಮಾರ್ಕ್‌ಗಳಲ್ಲಿ 4 ನೇ ಸ್ಥಾನದಲ್ಲಿದೆ, ಪೇಟೆಂಟ್‌ಗಳಲ್ಲಿ 6 ನೇ ಸ್ಥಾನದಲ್ಲಿದೆ ಮತ್ತು ಜಾಗತಿಕ ಫೈಲಿಂಗ್‌ಗಳಲ್ಲಿ ಕೈಗಾರಿಕಾ ವಿನ್ಯಾಸಗಳಲ್ಲಿ 7 ನೇ ಸ್ಥಾನದಲ್ಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. ಆರ್ಥಿಕ ವರ್ಷ 20 ರಿಂದ  ಆರ್ಥಿಕ ವರ್ಷ 25 ರವರೆಗೆ, ಸಲ್ಲಿಸಲಾದ ಪೇಟೆಂಟ್ ಅರ್ಜಿಗಳು ಬಹುತೇಕ ದ್ವಿಗುಣಗೊಂಡಿವೆ ಮತ್ತು ಟ್ರೇಡ್‌ಮಾರ್ಕ್ ನೋಂದಣಿಗಳು 1.5 ಪಟ್ಟು ಹೆಚ್ಚಾಗಿದೆ. ನೋಂದಾಯಿತ ವಿನ್ಯಾಸಗಳು 2.5 ಪಟ್ಟು ಹೆಚ್ಚಾಗಿದೆ. ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯೂ ಐ ಪಿ ಒ) ತನ್ನ ಉದ್ಯಮಶೀಲತೆ ನೀತಿಗಳು ಮತ್ತು ಉದ್ಯಮಶೀಲತಾ ಸಂಸ್ಕೃತಿಗಾಗಿ ಭಾರತವನ್ನು ಜಾಗತಿಕವಾಗಿ 12 ನೇ ಸ್ಥಾನವನ್ನು ಕೊಟ್ಟಿದೆ. 2016 ರಲ್ಲಿ ಸ್ಟಾರ್ಟ್‌ಅಪ್ ಇಂಡಿಯಾ ಉಪಕ್ರಮ ಪ್ರಾರಂಭವಾದಾಗಿನಿಂದ, 2025 ರ ಹೊತ್ತಿಗೆ ಡಿಪಿಐಐಟಿ -ಮಾನ್ಯತೆ ಪಡೆದ ನವೋದ್ಯಮಗಳ  ಸಂಖ್ಯೆ ಸರಿಸುಮಾರು 500 ರಿಂದ 2 ಲಕ್ಷಕ್ಕೆ ಏರಿದೆ.

ಆರ್ಥಿಕ ಸಮೀಕ್ಷೆ 2025-26ರ ಪ್ರಕಾರ, ಆಗಸ್ಟ್ 2025 ರವರೆಗೆ 6 ರಾಜ್ಯಗಳಲ್ಲಿ ಸುಮಾರು 1.60 ಲಕ್ಷ ಕೋಟಿ ರೂ.ಗಳ ಸಂಯೋಜಿತ ಹೂಡಿಕೆಯೊಂದಿಗೆ ಹತ್ತು ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಯೋಜನೆಗಳನ್ನು ಅನುಮೋದಿಸಲಾಗಿದೆ. ಇದಲ್ಲದೆ, ಒಡಿಶಾದ ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಫ್ಯಾಬ್ಲೆಸ್ ನೀತಿಯಂತಹ ಉಪಕ್ರಮಗಳ ಮೂಲಕ ಹೆಚ್ಚುವರಿ ಪ್ರೋತ್ಸಾಹ ಮತ್ತು ಸಾಂಸ್ಥಿಕ ಬೆಂಬಲವನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಚೌಕಟ್ಟನ್ನು ಪೂರೈಸಲು ಪ್ರಾರಂಭಿಸಿವೆ.

ಮೂಲ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಚೇತರಿಕೆಯನ್ನ ನಿರ್ಮಿಸಲು ʻಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಫಾರ್ ಎ ರೆಸಿಲಿಯಂಟ್ ಇಂಡಿಯಾʼ ಅಡಿಯಲ್ಲಿ, ಭಾರತ ಸರ್ಕಾರವು ಮೊದಲಿಂದ ಕೊನೆಯವರೆಗೆ ದೇಶೀಯ ಸೆಮಿಕಂಡಕ್ಟರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಂಘಟಿತ ಕ್ರಮಗಳ ಸರಣಿಯನ್ನು ಕೈಗೊಂಡಿದೆ.

ʻಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಮತ್ತು ಸೆಮಿಕಾನ್ ಇಂಡಿಯಾ ಕಾರ್ಯಕ್ರಮʼವು ಈ ಕಾರ್ಯತಂತ್ರವನ್ನು ರೂಪಿಸುತ್ತದೆ. ಫ್ಯಾಬ್ರಿಕೇಶನ್, ಅಸೆಂಬ್ಲಿ, ಪರೀಕ್ಷೆ, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್ ಸೌಲಭ್ಯಗಳಲ್ಲಿ ಹೂಡಿಕೆಯನ್ನು ಉತ್ತೇಜಿಸಲು ರೂ. 76,000 ಕೋಟಿಗಳ ಪ್ರೋತ್ಸಾಹಕ ಚೌಕಟ್ಟಿನಿಂದಲೂ ಇದು ಬೆಂಬಲಿತವಾಗಿದೆ. ಈ ಕಾರ್ಯಕ್ರಮಗಳ ಅಡಿಯಲ್ಲಿ ನಾಲ್ಕು ಉದ್ದೇಶಿತ  ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಪ್ರತಿಯೊಂದೂ ಸೆಮಿಕಂಡಕ್ಟರ್ (ಅರೆವಾಹಕ) ಮತ್ತು ಡಿಸ್ಪ್ಲೇ ಫ್ಯಾಬ್‌ಗಳು, ಸಂಯುಕ್ತ ಸೆಮಿಕಂಡಕ್ಟರ್ ಸೌಲಭ್ಯಗಳು ಮತ್ತು ಹೊರಗುತ್ತಿಗೆ ಪಡೆದ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಪರೀಕ್ಷಾ ಘಟಕಗಳಿಗೆ ವೆಚ್ಚ ಹಾಗು ಬಂಡವಾಳ ವೆಚ್ಚದ ಶೇಕಡಾ 50 ರಷ್ಟು ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ದೇಶೀಯ ಚಿಪ್ ವಿನ್ಯಾಸವನ್ನು ಉತ್ತೇಜಿಸಲು ಇದು ಮೀಸಲಾದ ವಿನ್ಯಾಸ ಲಿಂಕ್ಡ್ ಪ್ರೋತ್ಸಾಹಕ ಯೋಜನೆಯನ್ನು ಸಹ ಹೊಂದಿದೆ.

******

 


(रिलीज़ आईडी: 2220447) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Bengali , Punjabi , Malayalam