ನಾಗರೀಕ ವಿಮಾನಯಾನ ಸಚಿವಾಲಯ
ಬಾರಾಮತಿ ವಿಮಾನ ನಿಲ್ದಾಣದಲ್ಲಿ ʻವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ʼ ಸಂಸ್ಥೆಗೆ ಸೇರಿದ ʻವಿಟಿ-ಎಸ್‌ಎಸ್‌ಕೆʼ ವಿಮಾನ ಪತನ
प्रविष्टि तिथि:
28 JAN 2026 1:36PM by PIB Bengaluru
28.01.2026 ರಂದು, ʻವಿಟಿ-ಎಸ್ಎಸ್‌ಕೆʼ ನೋಂದಣಿ ಹೊಂದಿರುವ ʻಮೆಸರ್ಸ್ ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ʼ ಸಂಸ್ಥೆಗೆ ಸೇರಿದ ʻಲಿಯರ್‌ಜೆಟ್ 45ʼ ವಿಮಾನವು ಬಾರಾಮತಿಯಲ್ಲಿ ಅಪಘಾತಕ್ಕೀಡಾಗಿದೆ. "ಮುಂಬೈ-ಬಾರಾಮತಿ" ಸೆಕ್ಟರ್‌ನಲ್ಲಿ ವಿಮಾನವನ್ನು ಕಾರ್ಯಾಚರಣೆ ಮಾಡುವಾಗ ಅದು ಪತನಗೊಂಡಿದೆ. ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಸೇರಿದಂತೆ ಒಟ್ಟು 05 ಜನರು ಇದ್ದರು. ಪ್ರಯಾಣಿಕರಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಶ್ರೀ ಅಜಿತ್ ಪವಾರ್ ಸೇರಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು ಮರಣಿಸಿದ್ದಾರೆ.
ಸಂಸ್ಥೆ ಮಾಹಿತಿ:
- ಮೆಸರ್ಸ್ ವಿಎಸ್ಆರ್ ವೆಂಚರ್ಸ್ ಒಂದು ಅನುಸೂಚಿತವಲ್ಲದ ಆಪರೇಟರ್ (ಎನ್ಎಸ್ಒಪಿ), ಪರವಾನಗಿ ಸಂಖ್ಯೆ 07/2014,
- ಆರಂಭಿಕ ʻಎಒಪಿʼಯನ್ನು 21.04.2014 ರಂದು ನೀಡಲಾಗಿದೆ
- ʻಎಒಪಿʼಯನ್ನು ಕೊನೆಯದಾಗಿ 03.04.2023 ರಂದು ನವೀಕರಿಸಲಾಗಿದೆ ಮತ್ತು 20.04.2028 ರವರೆಗೆ ಅದು ಮಾನ್ಯತೆ ಹೊಂದಿದೆ
- ಕಾರ್ಯಾಚರಣೆಯಲ್ಲಿರುವ ವಿಮಾನಗಳ ಸಂಖ್ಯೆ: ಹದಿನೇಳು (17).
ಕಾರ್ಯಾಚರಣೆಯಲ್ಲಿರುವ ವಿಮಾನಗಳಲ್ಲಿ ಏಳು (07) ʻಲಿಯರ್‌ಜೆಟ್ 45ʼ ವಿಮಾನಗಳು (ಒಂದು ಅಪಘಾತದಲ್ಲಿ ಭಾಗಿ), ಐದು ʻಎಂಬ್ರೇರ್ 135 ಬಿಜೆʼ ವಿಮಾನಗಳು, ನಾಲ್ಕು ʻಕಿಂಗ್ ಏರ್‌ಬಿ 200ʼ ವಿಮಾನಗಳು ಮತ್ತು ಒಂದು ʻಪಿಲಾಟಸ್ ಪಿಸಿ -12ʼ ವಿಮಾನ ಸೇರಿವೆ.
- ಡಿಜಿಸಿಎ ವತಿಯಿಂದ ನಿಯಂತ್ರಕ ಲೆಕ್ಕಪರಿಶೋಧನೆಯನ್ನು ಕೊನೆಯ ಬಾರಿಗೆ ಫೆಬ್ರವರಿ 2025ರಲ್ಲಿ ನಡೆಸಲಾಗಿದೆ ಮತ್ತು ಯಾವುದೇ ʻಹಂತ-1ʼ ಶೋಧನೆಯನ್ನು ನೀಡಲಾಗಿಲ್ಲ.
- 14.09.2023ರಂದು, ಕಂಪನಿಯ ವಿಮಾನಗಳಲ್ಲಿ ಒಂದಾದ, ʻವಿಟಿ-ಡಿಬಿಎಲ್ʼ ನೋಂದಣಿ ಹೊಂದಿರುವ ʻಲಿಯರ್‌ಜೆಟ್ 45ʼ ವಿಮಾನವು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿದೆ. ಅಪಘಾತದ ಬಗ್ಗೆ ʻಎಎಐಬಿʼ ತನಿಖೆ ನಡೆಸುತ್ತಿದೆ.
26.01.2026 ರಂತೆ ವಿಮಾನದ ವಿವರ:
- ವಿಮಾನ ನೋಂದಣಿ ಸಂಖ್ಯೆ: ವಿಟಿ-ಎಸ್ಎಸ್‌ಕೆ-
- ತಯಾರಾದ ವರ್ಷ: 2010
- ನೋಂದಣಿ ಪ್ರಮಾಣಪತ್ರ ನೀಡಿದ ದಿನಾಂಕ: 27/12/2022
- ಹಾರಾಟ ಅರ್ಹತೆ ಪ್ರಮಾಣಪತ್ರ ವಿತರಣೆ ದಿನಾಂಕ:16/12/2021
- ಎಆರ್‌ಸಿ ವಿತರಿಸಿದ ದಿನಾಂಕ: 10/09/2025 ಇದು 14/09/2026 ರವರೆಗೆ ಮಾನ್ಯ
- ಟೈಮ್ ಸಿನ್ಸ್ ನ್ಯೂ(ಟಿಎಸ್ಎನ್) / ಸೈಕಲ್ಸ್ ಸಿನ್ಸ್ ನ್ಯೂ (ಸಿಎಸ್ಎನ್): 4915:48 / 5867
- ಕೊನೆಯ ಎಆರ್‌ಸಿ(ಏರ್ ವರ್ಥಿನೆಸ್ ರಿವ್ಯೂ) ಬಳಿಕ ಆದ ಸಮಯ: 85:49 ಗಂಟೆಗಳು
ಎಂಜಿನ್ ವಿವರಗಳು
ಎಂಜಿನ್ ಪ್ರಕಾರ: ಟಿಎಫ್‌ಇ731-20ಬಿಆರ್ (TFE731-20BR)
ಎಲ್‌ಎಚ್‌ಎಸ್ ಎಂಜಿನ್ ಗಂಟೆಗಳು / ಸೈಕಲ್‌ಗಳು: 4915: 48 / 5965
ಆರ್‌ಎಚ್‌ಎಸ್ ಎಂಜಿನ್ ಗಂಟೆಗಳು / ಸೈಕಲ್‌ಗಳು: 4526: 44 / 5426
ಸಿಬ್ಬಂದಿ ಮಾಹಿತಿ
ಮುಖ್ಯ ಪೈಲಟ್(ಪಿಐಸಿ): ಎಟಿಪಿಎಲ್ ಹೋಲ್ಡರ್
ಹಾರಾಟದ ಸಮಯ: 15000 ಗಂಟೆಗಳಿಗಿಂತ ಹೆಚ್ಚು
ಕೊನೆಯ ವೈದ್ಯಕೀಯ ಪರೀಕ್ಷೆಯ ದಿನಾಂಕ: 19.11.2025 ಮತ್ತು 19.05.2026 ರವರೆಗೆ ಮಾನ್ಯವಾಗಿರುತ್ತದೆ
ಕೊನೆಯ ಐಆರ್/ಪಿಪಿಸಿ ದಿನಾಂಕ: 18.08.2025
ಸಹ-ಪೈಲಟ್: ಸಿಪಿಎಲ್ ಹೋಲ್ಡರ್
ಹಾರಾಟದ ಗಂಟೆಗಳು: 1500 ಗಂಟೆಗಳು (ಅಂದಾಜು)
ಕೊನೆಯ ವೈದ್ಯಕೀಯ ಪರೀಕ್ಷೆಯ ದಿನಾಂಕ: 12.07.2025, 24.07.2026 ರವರೆಗೆ ಮಾನ್ಯವಾಗಿರುತ್ತದೆ
ಕೊನೆಯ ಐಆರ್/ಪಿಪಿಸಿ ದಿನಾಂಕ 22.07.2025
ಅಪಘಾತಕ್ಕೆ ಕಾರಣವಾಗುವ ಘಟನೆಯ ಅನುಕ್ರಮ:
ಬಾರಾಮತಿ ಅನಿಯಂತ್ರಿತ ವಾಯುನೆಲೆಯಾಗಿದೆ ಮತ್ತು ಬಾರಾಮತಿಯ ಫ್ಲೈಯಿಂಗ್ ತರಬೇತಿ ಸಂಸ್ಥೆಗಳ ಬೋಧಕರು / ಪೈಲಟ್‌ಗಳು ಸಂಚಾರ ಮಾಹಿತಿಯನ್ನು ಒದಗಿಸುತ್ತಾರೆ. ʻಎಟಿಸಿʼಯನ್ನು ನಿರ್ವಹಿಸುತ್ತಿರುವ ವ್ಯಕ್ತಿಯ ಹೇಳಿಕೆಯ ಪ್ರಕಾರ, ಘಟನೆಗಳ ಅನುಕ್ರಮವು ಈ ಕೆಳಗಿನಂತಿದೆ:
- 2026ರ ಜನವರಿ 28 ರಂದು ಭಾರತೀಯ ಕಾಲಮಾನ ಬೆಳಗ್ಗೆ 08.18ಕ್ಕೆ ವಿಟಿ-ಎಸ್‌ಎಸ್‌ಕೆ ವಿಮಾನವು ಮೊದಲ ಬಾರಿಗೆ ಬಾರಾಮತಿಯೊಂದಿಗೆ ಸಂಪರ್ಕಕ್ಕೆ ಬಂದಿತು.
- ವಿಮಾನದ ಮುಂದಿನ ಕರೆಯನ್ನು ಅದು ಬಾರಾಮತಿ ಮಾರ್ಗಯತ್ತ 30 ನಾಟಿಕಲ್ ಮೈಲ್ಸ್ (ಎನ್‌ಎಂ) ದೂರದಲ್ಲಿದ್ದಾಗ ಮತ್ತು ಪುಣೆ ಮಾರ್ಗದಿಂದ ಕಳುಹಿಸಲಾಯಿತು. ಪೈಲಟ್‌ನ ವಿವೇಚನೆಗೆ ಅನುಗುಣವಾಗಿ ದೃಶ್ಯ ಹವಾಮಾನ ಪರಿಸ್ಥಿತಿಗಳಲ್ಲಿ ಇಳಿಯಲು ಅವರಿಗೆ ಸಲಹೆ ನೀಡಲಾಯಿತು.
- ವಿಮಾನದ ಸಿಬ್ಬಂದಿಯು ಗಾಳಿ ಮತ್ತು ಗೋಚರತೆಯ ಬಗ್ಗೆ ವಿಚಾರಿಸಿದರು. ಗಾಳಿ ಶಾಂತವಾಗಿದೆ ಮತ್ತು ಗೋಚರತೆ ಸುಮಾರು 3000 ಮೀಟರ್ ಎಂದು ಅವರಿಗೆ ತಿಳಿಸಲಾಯಿತು.
- ಮುಂದೆ ವಿಮಾನವು ರನ್‌ವೇ 11ರ ಸಮೀಪದಕ್ಕೆ ಬಂದಿತು ಆದರೆ, ರನ್ ವೇ ಅವರಿಗೆ ಕಾಣಲಿಲ್ಲ. ಹೀಗಾಗಿ ಮೊದಲ ಪ್ರಯತ್ನದಲ್ಲಿ ಇಳಿಯದೆ ಕೆಲಕಾಲ ಸುತ್ತಾಟ (ʻಗೋ-ಅರೌಂಡ್ʼ) ಪ್ರಾರಂಭಿಸಿದರು.
- ಕೆಲಕಾಲ ಸುತ್ತಾಟದ ನಂತರ, ವಿಮಾನದ ಸ್ಥಾನದ ಬಗ್ಗೆ ಕೇಳಲಾಯಿತು ಮತ್ತು ಸಿಬ್ಬಂದಿ ರನ್ ವೇ 11ರ ಬಳಿ ಇರುವುದಾಗಿ ವರದಿ ಮಾಡಿದರು.
- ರನ್ ವೇ ಗೋಚರತೆ ಬಗ್ಗೆ ವರದಿ ಮಾಡಲು ಅವರನ್ನು ಕೇಳಲಾಯಿತು. "ರನ್‌ವೇ ಪ್ರಸ್ತುತ ಗೋಚರವಾಗುತ್ತಿಲ್ಲ, ರನ್‌ವೇ ಗೋಚರವಾದಾಗ ಕರೆ ಮಾಡುತ್ತೇವೆ" ಎಂದು ಅವರು ಉತ್ತರಿಸಿದರು. ಕೆಲವು ಸೆಕೆಂಡುಗಳ ನಂತರ ಅವರು ರನ್‌ವೇ ಗೋಚರಿಸುತ್ತಿದೆ ಎಂದು ವರದಿ ಮಾಡಿದರು.
- ಭಾರತೀಯ ಕಾಲಮಾನ ಬೆಳಗ್ಗೆ 08.43ಕ್ಕೆ ರನ್‌ವೇ 11ರಲ್ಲಿ ಇಳಿಯಲು ವಿಮಾನಕ್ಕೆ ಅನುಮತಿಸಲಾಯಿತು. ಆದಾಗ್ಯೂ, ಅವರು ಲ್ಯಾಂಡಿಂಗ್ ಕ್ಲಿಯರೆನ್ಸ್‌ನ ʻರೀಡ್ ಬ್ಯಾಕ್ʼ ನೀಡಲಿಲ್ಲ.
- ಮುಂದೆ, ಭಾರತೀಯ ಕಾಲಮಾನ 08.44ಕ್ಕೆ ರನ್‌ವೇ 11ರ ಬಳಿ ಬೆಂಕಿಯ ಜ್ವಾಲೆಗಳನ್ನು ಎಟಿಸಿ ಗಮನಿಸಿತು. ಕೂಡಲೇ ತುರ್ತು ಸೇವಾ ಪಡೆಗಳು ಅಪಘಾತದ ಸ್ಥಳಕ್ಕೆ ಧಾವಿಸಿದವು.
- ವಿಮಾನದ ಅವಶೇಷಗಳು ರನ್‌ವೇ 11ರ ಎಡಭಾಗದಲ್ಲಿ ಪತ್ತೆಯಾಗಿವೆ.
ʻಎಎಐಬಿʼ ತನಿಖೆಯನ್ನು ವಹಿಸಿಕೊಂಡಿದೆ. ʻಎಎಐಬಿʼನ ಮಹಾ ನಿರ್ದೇಶಕರು (ಡಿಜಿ) ತನಿಖೆಗಾಗಿ ಅಪಘಾತದ ಸ್ಥಳಕ್ಕೆ ಧಾವಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಲಭ್ಯವಾದಾಗ ಹಂಚಿಕೊಳ್ಳಲಾಗುವುದು.
*****
(रिलीज़ आईडी: 2219580)
आगंतुक पटल : 23