ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತಿರು ಡಿ. ಜ್ಞಾನಸುಂದರಂ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

प्रविष्टि तिथि: 26 JAN 2026 9:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿ. ಜ್ಞಾನಸುಂದರಂ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. 

ತಿರು ಡಿ. ಜ್ಞಾನಸುಂದರಂ ಅವರು ತಮಿಳು ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು ಸದಾ ಸ್ಮರಣೀಯವಾಗಿರುತ್ತವೆ. ತಮ್ಮ ಬರಹಗಳು ಹಾಗೂ ಜೀವನಪೂರ್ತಿ ಸಲ್ಲಿಸಿದ ಸಮರ್ಪಣೆಯ ಮೂಲಕ ಅವರು ಸಮಾಜದ ಸಾಂಸ್ಕೃತಿಕ ಪ್ರಜ್ಞೆಯನ್ನು ಸಮೃದ್ಧಗೊಳಿಸಿದರು. ಅವರ ಕೃತಿಗಳು ಮುಂದಿನ ಪೀಳಿಗೆಗಳ ಓದುಗರಿಗೂ ವಿದ್ವಾಂಸರಿಗೂ ಪ್ರೇರಣೆಯಾಗುತ್ತಲೇ ಇರುತ್ತವೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

2024ರ ಜನವರಿಯಲ್ಲಿ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ತಮ್ಮ ಭೇಟಿ ಸಂದರ್ಭದಲ್ಲಿ ಅವರೊಂದಿಗೆ ಸಂವಾದ ನಡೆಸಿದ್ದನ್ನು ಪ್ರಧಾನಮಂತ್ರಿ ಸ್ಮರಿಸಿದ್ದಾರೆ. ಕಂಬ ರಾಮಾಯಣದ ಬಗ್ಗೆ ಅವರ ಅರಿವು ಅತ್ಯಂತ ವಿಶಿಷ್ಟವಾಗಿತ್ತು ಎಂದು ಹೇಳಿದ್ದಾರೆ. 

ಜ್ಞಾನಸುಂದರಂ ಅವರ ಶೋಕತಪ್ತ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಹೃತ್ಪೂರ್ವಕ ಸಂತಾಪಗಳನ್ನು ತಿಳಿಸಿ, ಅಗಲಿದ ಆತ್ಮಕ್ಕೆ ಶಾಶ್ವತ ಶಾಂತಿಗಾಗಿ ಪ್ರಧಾನಮಂತ್ರಿ ಪ್ರಾರ್ಥಿಸಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಬರೆದುಕೊಂಡಿದ್ದಾರೆ;

''ತಿರು ಡಿ. ಜ್ಞಾನಸುಂದರಂ ಅವರ ಅಗಲಿಕೆಯ ಸುದ್ದಿ ನನಗೆ ತೀವ್ರ ನೋವು ತಂದಿದೆ. ತಮಿಳು ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಅವರ ಕೊಡುಗೆ ಸದಾ ಸ್ಮರಣೀಯವಾಗಿರುತ್ತದೆ. ತಮ್ಮ ಬರಹಗಳು ಮತ್ತು ಜೀವನಪೂರ್ತಿ ಸಲ್ಲಿಸಿದ ಸಮರ್ಪಣೆಯ ಮೂಲಕ ಅವರು ಸಮಾಜದಲ್ಲಿ ಸಾಂಸ್ಕೃತಿಕ ಜಾಗೃತಿಯನ್ನು ಸಮೃದ್ಧಗೊಳಿಸಿದರು. ಅವರ ಕೃತಿಗಳು ಮುಂದಿನ ಪೀಳಿಗೆಗಳ ಓದುಗರಿಗೂ ವಿದ್ವಾಂಸರಿಗೂ ಪ್ರೇರಣೆಯಾಗುತ್ತಲೇ ಇರುತ್ತವೆ.

2024ರ ಜನವರಿಯಲ್ಲಿ ತಿರುಚಿರಾಪಳ್ಳಿ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಅವರೊಂದಿಗೆ ಸಂವಾದ ನಡೆಸಿದ್ದೆನು. ಕಂಬ ರಾಮಾಯಣದ ಕುರಿತು ಅವರ ಅರಿವು ಮತ್ತು ಜ್ಞಾನ ಅತ್ಯಂತ ವಿಶಿಷ್ಟವಾಗಿತ್ತು.

ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.”

 

*****


(रिलीज़ आईडी: 2218937) आगंतुक पटल : 13
इस विज्ञप्ति को इन भाषाओं में पढ़ें: English , Urdu , हिन्दी , Bengali , Gujarati , Malayalam