ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ಮತದಾರರ ದಿನದಂದು ನಾಗರಿಕರಿಗೆ ಶುಭ ಕೋರಿದ ಪ್ರಧಾನಮಂತ್ರಿ


ಮತದಾರರಾಗುವುದು ಸಂಭ್ರಮಾಚರಣೆಯ ಸಂದರ್ಭ ಎಂದು ಬಣ್ಣಿಸಿದ ಪ್ರಧಾನಮಂತ್ರಿ, ಮೈ-ಭಾರತ್ ಸ್ವಯಂಸೇವಕರಿಗೆ ಪತ್ರ

प्रविष्टि तिथि: 25 JAN 2026 9:18AM by PIB Bengaluru

ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ದೇಶದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ದೇಶದ ಜನತೆಗೆ ಶುಭ ಕೋರಿದ್ದಾರೆ.

ರಾಷ್ಟ್ರದ ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಾಢವಾಗಿಸಲು ಈ ದಿನ ಒಂದು ಅವಕಾಶವಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಬಲಪಡಿಸಲು ಸಮರ್ಪಣಾ ಮನೋಭಾವದ ಪ್ರಯತ್ನಗಳಿಗಾಗಿ ಭಾರತದ ಚುನಾವಣಾ ಆಯೋಗದೊಂದಿಗೆ ಸಂಬಂಧ ಹೊಂದಿರುವ ಎಲ್ಲರನ್ನೂ ಅವರು ಶ್ಲಾಘಿಸಿದರು.

ಮತದಾರರ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಮತದಾರರಾಗಿರುವುದು ಸಾಂವಿಧಾನಿಕ ಸವಲತ್ತು ಮಾತ್ರವಲ್ಲ, ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಧ್ವನಿ ನೀಡುವ ಪ್ರಮುಖ ಕರ್ತವ್ಯವಾಗಿದೆ ಎಂದು ಹೇಳಿದರು. ಜನರು ಯಾವಾಗಲೂ ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಭಾಗವಹಿಸಬೇಕು ಮತ್ತು ಪ್ರಜಾಪ್ರಭುತ್ವದ ಮನೋಭಾವವನ್ನು ಗೌರವಿಸಬೇಕು, ಆ ಮೂಲಕ ವಿಕಸಿತ ಭಾರತದ ಅಡಿಪಾಯವನ್ನು ಬಲಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಶ್ರಿ ನರೇಂದ್ರ ಮೋದಿ ಅವರು ಮತದಾರರಾಗುವುದು ಆಚರಣೆಯ ಸಂದರ್ಭ ಎಂದು ಬಣ್ಣಿಸಿದ್ದಾರೆ ಮತ್ತು ಮೊದಲ ಬಾರಿಗೆ ಮತ ಚಲಾಯಿಸುವವರನ್ನು ಪ್ರೋತ್ಸಾಹಿಸುವ ಮಹತ್ವವನ್ನು ಒತ್ತಿಹೇಳಿದ್ದಾರೆ.

ರಾಷ್ಟ್ರೀಯ ಮತದಾರರ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು  ಮೈ-ಭಾರತ್ ಸ್ವಯಂಸೇವಕರಿಗೆ ಪತ್ರ ಬರೆದಿದ್ದು, ತಮ್ಮ ಸುತ್ತಮುತ್ತಲಿನ ಯಾರಾದರೊಬ್ಬರು, ವಿಶೇಷವಾಗಿ ಯುವಕರು ಮೊದಲ ಬಾರಿಗೆ ಮತದಾರರಾಗಿ ನೋಂದಾಯಿಸಿಕೊಂಡಾಗ ಸಂತೋಷಪಡುವಂತೆ ಮತ್ತು ಸಂಭ್ರಮಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಸಂಬಂಧ ಎಕ್ಸ್ ಖಾತೆಯ ಸರಣಿ ಪೋಸ್ಟ್ ಗಳಲ್ಲಿ; ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ;
"#NationalVotersDay ಶುಭಾಶಯಗಳು.

ಈ ದಿನವು ನಮ್ಮ ರಾಷ್ಟ್ರದ ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಮ್ಮ ನಂಬಿಕೆಯನ್ನು ಇನ್ನಷ್ಟು ಗಾಢವಾಗಿಸುವ ದಿನವಾಗಿದೆ.

ನಮ್ಮ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಬಲಪಡಿಸುವ ಪ್ರಯತ್ನಗಳಿಗಾಗಿ ಭಾರತದ ಚುನಾವಣಾ ಆಯೋಗದೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ನನ್ನ ಅಭಿನಂದನೆಗಳು.

ಮತದಾರರಾಗಿರುವುದು ಕೇವಲ ಸಾಂವಿಧಾನಿಕ ಸವಲತ್ತು ಮಾತ್ರವಲ್ಲ, ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಧ್ವನಿ ನೀಡುವ ಪ್ರಮುಖ ಕರ್ತವ್ಯವಾಗಿದೆ. ಯಾವಾಗಲೂ ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಮನೋಭಾವವನ್ನು ಗೌರವಿಸೋಣ, ಆ ಮೂಲಕ ವಿಕಸಿತ ಭಾರತದ ಅಡಿಪಾಯವನ್ನು ಬಲಪಡಿಸೋಣ." 

"ಮತದಾರರಾಗುವುದು ಸಂಭ್ರಮಾಚರಣೆಯ ಸಂದರ್ಭ!

ಇಂದು, #NationalVotersDay ರಂದು, ನಮ್ಮ ಸುತ್ತಮುತ್ತಲಿನ ಯಾರಾದರೂ ಮತದಾರರಾಗಿ ನೋಂದಾಯಿಸಿಕೊಂಡಾಗ ನಾವೆಲ್ಲರೂ ಹೇಗೆ ಸಂತೋಷಪಡಬೇಕು ಎಂಬುದರ ಕುರಿತು ಮೈ-ಭಾರತ್ ಸ್ವಯಂಸೇವಕರಿಗೆ ಪತ್ರ ಬರೆದಿದ್ದೇನೆ.

“मतदाता बनना उत्सव मनाने का एक गौरवशाली अवसर है!

आज #NationalVotersDay पर मैंने MY-Bharat के वॉलंटियर्स को एक पत्र लिखा है। इसमें मैंने उनसे आग्रह किया है कि जब हमारे आसपास का कोई युवा साथी पहली बार मतदाता के रूप में रजिस्टर्ड हो, तो हमें उस खुशी के मौके को मिलकर सेलिब्रेट करना चाहिए।”

 

*****


(रिलीज़ आईडी: 2218415) आगंतुक पटल : 4
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Gujarati , Tamil , Malayalam