ಪ್ರಧಾನ ಮಂತ್ರಿಯವರ ಕಛೇರಿ
ರೋಜ್‌ಗಾರ್ ಮೇಳದ ನೇಮಕಾತಿ ಪತ್ರಗಳ ವಿತರಣೆ ಕಾರ್ಯಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
प्रविष्टि तिथि:
24 JAN 2026 12:36PM by PIB Bengaluru
ಎಲ್ಲಾ ಯುವ ಸ್ನೇಹಿತರಿಗೆ ನನ್ನ ಶುಭಾಶಯಗಳು!
2026ರ ವರ್ಷದ ಆರಂಭವು ನಿಮ್ಮ ಜೀವನದಲ್ಲಿ ಹೊಸ ಸಂತೋಷಗಳ ಆರಂಭ ಸೂಚಿಸುತ್ತದೆ. ಇದರೊಂದಿಗೆ ವಸಂತ ಪಂಚಮಿ ನಿನ್ನೆಯಷ್ಟೇ ಕಳೆದಂತೆ, ನಿಮ್ಮ ಜೀವನದಲ್ಲಿ ಹೊಸ ವಸಂತವೂ ಪ್ರಾರಂಭವಾಗುತ್ತಿದೆ. ಈ ಸಮಯವು ನಿಮ್ಮನ್ನು ಸಂವಿಧಾನದ ಕಡೆಗೆ ನಿಮ್ಮ ಕರ್ತವ್ಯಗಳೊಂದಿಗೆ ಸಂಪರ್ಕಿಸುತ್ತಿದೆ. ಕಾಕತಾಳೀಯವಾಗಿ, ದೇಶದಲ್ಲಿ ಪ್ರಸ್ತುತ ಗಣರಾಜ್ಯದ ಭವ್ಯ ಹಬ್ಬ ನಡೆಯುತ್ತಿದೆ. ನಿನ್ನೆ ಜನವರಿ 23ರಂದು ನಾವು ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಜನ್ಮ ದಿನಾಚರಣೆಯಂದು ಪರಾಕ್ರಮ್ ದಿವಸ ಆಚರಿಸಿದ್ದೇವೆ. ಈಗ ನಾಳೆ ಜನವರಿ 25ರಂದು, ರಾಷ್ಟ್ರೀಯ ಮತದಾರರ ದಿನ, ನಂತರ ಜನವರಿ 26ರಂದು ಗಣರಾಜ್ಯೋತ್ಸವ. ಇಂದು ವಿಶೇಷ ದಿನವೂ ಆಗಿದೆ. ಈ ದಿನದಂದು ನಮ್ಮ ಸಂವಿಧಾನವು 'ಜನ ಗಣ ಮನ'ವನ್ನು ರಾಷ್ಟ್ರಗೀತೆಯಾಗಿ ಮತ್ತು 'ವಂದೇ ಮಾತರಂ' ಅನ್ನು ರಾಷ್ಟ್ರೀಯ ಗೀತೆಯಾಗಿ ಅಳವಡಿಸಿಕೊಂಡಿದೆ. ಇಂದು ಈ ಮಹತ್ವದ ದಿನದಂದು, 61 ಸಾವಿರಕ್ಕೂ ಹೆಚ್ಚು ಯುವಕರು ಜೀವನದಲ್ಲಿ ಹೊಸ ಆರಂಭ ಮಾಡುತ್ತಿದ್ದಾರೆ.
ಇಂದು ನೀವೆಲ್ಲರೂ ಸರ್ಕಾರಿ ಸೇವೆಗಳಿಗೆ ನೇಮಕಾತಿ ಪತ್ರಗಳನ್ನು ಸ್ವೀಕರಿಸುತ್ತಿದ್ದೀರಿ. ಒಂದು ರೀತಿಯಲ್ಲಿ, ಇದು ರಾಷ್ಟ್ರ ನಿರ್ಮಾಣದ ಆಹ್ವಾನ ಪತ್ರವಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ವೇಗ ನೀಡುವ ನಿರ್ಣಯ ಪತ್ರ ಇದಾಗಿದೆ. ನಿಮ್ಮಲ್ಲಿ ಹಲವರು ದೇಶದ ಭದ್ರತೆಯನ್ನು ಬಲಪಡಿಸುತ್ತೀರಿ, ಹಲವರು ನಮ್ಮ ಶಿಕ್ಷಣ ಮತ್ತು ಆರೋಗ್ಯ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಸಬಲೀಕರಣಗೊಳಿಸುತ್ತೀರಿ, ಅನೇಕ ಸ್ನೇಹಿತರು ಹಣಕಾಸು ಸೇವೆಗಳು ಮತ್ತು ಇಂಧನ ಭದ್ರತೆಯನ್ನು ಬಲಪಡಿಸುತ್ತಾರೆ, ಆದರೆ ಅನೇಕ ಯುವಕರು ನಮ್ಮ ಸರ್ಕಾರಿ ಕಂಪನಿಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನಿಮ್ಮೆಲ್ಲರಿಗೂ ನಾನು ಅನೇಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಯುವ ಜನರಿಗೆ ಕೌಶಲ್ಯಗಳನ್ನು ಒದಗಿಸುವುದು ಮತ್ತು ಅವರಿಗೆ ಉದ್ಯೋಗ ಮತ್ತು ಸ್ವ-ಉದ್ಯೋಗ ಅವಕಾಶಗಳನ್ನು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಸರ್ಕಾರಿ ನೇಮಕಾತಿಯನ್ನು ಕಾರ್ಯಾಚರಣೆ ಮಾದರಿಯಲ್ಲಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ರೋಜ್‌ಗಾರ್ ಮೇಳ ಆರಂಭಿಸಲಾಯಿತು. ಕಳೆದ ವರ್ಷಗಳಲ್ಲಿ, ರೋಜ್‌ಗಾರ್ ಮೇಳವು ಒಂದು ಸಂಸ್ಥೆಯಾಗಿ ಮಾರ್ಪಟ್ಟಿದೆ. ಇದರ ಮೂಲಕ, ಲಕ್ಷಾಂತರ ಯುವಕರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ. ಈ ಧ್ಯೇಯವನ್ನು ಮತ್ತಷ್ಟು ವಿಸ್ತರಿಸುತ್ತಾ ಇಂದು, ಈ ರೋಜ್‌ಗಾರ್ ಮೇಳವನ್ನು ದೇಶದ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಸಲಾಗುತ್ತಿದೆ. ಈ ಎಲ್ಲಾ ಸ್ಥಳಗಳಲ್ಲಿ ಹಾಜರಿರುವ ಯುವಕರನ್ನು ನಾನು ವಿಶೇಷವಾಗಿ ಸ್ವಾಗತಿಸುತ್ತೇನೆ.
ಸ್ನೇಹಿತರೆ,
ಇಂದು ಭಾರತವು ಹೆಚ್ವಿನ ಯುವ ಸಮುದಾಯವನ್ನು ಹೊಂದಿರುವ ಅತ್ಯಂತ ಚಿರಯೌವ್ವನ ದೇಶಗಳಲ್ಲಿ ಒಂದಾಗಿದೆ. ನಮ್ಮ ಸರ್ಕಾರದ ನಿರಂತರ ಪ್ರಯತ್ನದಿಂದಾಗಿ ದೇಶದೊಳಗೆ ಮತ್ತು ಪ್ರಪಂಚದಾದ್ಯಂತ ಭಾರತದ ಯುವ ಶಕ್ತಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಇಂದು ಭಾರತ ಸರ್ಕಾರವು ಅನೇಕ ದೇಶಗಳೊಂದಿಗೆ ವ್ಯಾಪಾರ ಮತ್ತು ಚಲನಶೀಲತೆ ಒಪ್ಪಂದಗಳಿಗೆ ಸಹಿ ಹಾಕುತ್ತಿದೆ. ಈ ವ್ಯಾಪಾರ ಒಪ್ಪಂದಗಳು ಭಾರತದ ಯುವಕರಿಗೆ ಹಲವಾರು ಹೊಸ ಅವಕಾಶಗಳನ್ನು ತರುತ್ತಿವೆ.
ಸ್ನೇಹಿತರೆ,
ಹಿಂದಿನ ಕಾಲದಲ್ಲಿ ಭಾರತವು ಆಧುನಿಕ ಮೂಲಸೌಕರ್ಯಕ್ಕಾಗಿ ಅಭೂತಪೂರ್ವ ಹೂಡಿಕೆಗಳನ್ನು ಮಾಡಿದೆ. ಇದರಿಂದಾಗಿ, ನಿರ್ಮಾಣಕ್ಕೆ ಸಂಬಂಧಿಸಿದ ಪ್ರತಿಯೊಂದು ವಲಯದಲ್ಲಿ ಉದ್ಯೋಗಗಳು ಗಮನಾರ್ಹವಾಗಿ ಹೆಚ್ಚಾಗಿದೆ. ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯ ವ್ಯಾಪ್ತಿಯು ಕೂಡ ವೇಗವಾಗಿ ಮುಂದುವರಿಯುತ್ತಿದೆ. ಇಂದು ದೇಶದಲ್ಲಿ ಸುಮಾರು 2 ಲಕ್ಷ ನೋಂದಾಯಿತ ನವೋದ್ಯಮಗಳಿವೆ. 21 ಲಕ್ಷಕ್ಕೂ ಹೆಚ್ಚು ಯುವಕರು ಇವುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ, ಡಿಜಿಟಲ್ ಇಂಡಿಯಾ ಹೊಸ ಆರ್ಥಿಕತೆಯನ್ನು ವಿಸ್ತರಿಸಿದೆ. ಅನಿಮೇಷನ್ ಮತ್ತು ಡಿಜಿಟಲ್ ಮಾಧ್ಯಮದಂತಹ ಹಲವು ಕ್ಷೇತ್ರಗಳಲ್ಲಿ ಭಾರತವು ಜಾಗತಿಕ ಕೇಂದ್ರವಾಗುತ್ತಿದೆ. ಭಾರತದ ಸೃಷ್ಟಿಕರ್ತ ಆರ್ಥಿಕತೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದೆ, ಇದರಲ್ಲಿಯೂ ಯುವಕರು ಹೊಸ ಅವಕಾಶಗಳನ್ನು ಪಡೆಯುತ್ತಿದ್ದಾರೆ.
ನನ್ನ ಯುವ ಸ್ನೇಹಿತರೆ,
ಇಂದು ಭಾರತದ ಮೇಲಿನ ವಿಶ್ವದ ನಂಬಿಕೆ ಹೆಚ್ಚುತ್ತಿರುವ ರೀತಿ ಯುವಕರಿಗೆ ಅನೇಕ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದೆ. ಒಂದು ದಶಕದಲ್ಲಿ ತನ್ನ ಜಿಡಿಪಿಯನ್ನು ದ್ವಿಗುಣಗೊಳಿಸಿರುವ ವಿಶ್ವದ ಏಕೈಕ ದೊಡ್ಡ ಆರ್ಥಿಕತೆ ಭಾರತವಾಗಿದೆ. ಇಂದು 100ಕ್ಕೂ ಹೆಚ್ಚು ದೇಶಗಳು ಎಫ್ ಡಿಐ ಮೂಲಕ ಭಾರತದಲ್ಲಿ ಹೂಡಿಕೆ ಮಾಡುತ್ತಿವೆ. 2014ರ ಹಿಂದಿನ 10 ವರ್ಷಗಳಿಗೆ ಹೋಲಿಸಿದರೆ, ಎರಡೂವರೆ ಪಟ್ಟು ಹೆಚ್ಚು ಎಫ್ ಡಿಐ ಭಾರತಕ್ಕೆ ಬಂದಿದೆ. ಹೆಚ್ಚಿನ ವಿದೇಶಿ ಹೂಡಿಕೆ ಎಂದರೆ ಭಾರತದ ಯುವಕರಿಗೆ ಉದ್ಯೋಗಕ್ಕಾಗಿ ಲೆಕ್ಕವಿಲ್ಲದಷ್ಟು ಅವಕಾಶಗಳು ಸಿಕ್ಕಿವೆ.
ಸ್ನೇಹಿತರೆ,
ಇಂದು ಭಾರತವು ದೊಡ್ಡ ಉತ್ಪಾದನಾ ಶಕ್ತಿಯಾಗುತ್ತಿದೆ. ಎಲೆಕ್ಟ್ರಾನಿಕ್ಸ್, ಔಷಧಗಳು ಮತ್ತು ಲಸಿಕೆಗಳು, ರಕ್ಷಣೆ ಮತ್ತು ಆಟೋಮೊಬೈಲ್ ಮುಂತಾದ ಹಲವು ಕ್ಷೇತ್ರಗಳಲ್ಲಿ, ಭಾರತದ ಉತ್ಪಾದನೆ ಮತ್ತು ರಫ್ತು ಎರಡರಲ್ಲೂ ಅಭೂತಪೂರ್ವ ಹೆಚ್ಚಳ ಕಂಡುಬಂದಿದೆ. 2014ರಿಂದ ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ 6 ಪಟ್ಟು ಹೆಚ್ಚಳವಾಗಿದೆ, 6 ಪಟ್ಟು. ಇಂದು ಇದು 11 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಉದ್ಯಮವಾಗಿದೆ. ನಮ್ಮ ಎಲೆಕ್ಟ್ರಾನಿಕ್ಸ್ ರಫ್ತು ಕೂಡ 4 ಲಕ್ಷ ಕೋಟಿ ರೂಪಾಯಿ ದಾಟಿದೆ. ಭಾರತದ ಆಟೋಮೊಬೈಲ್ ಉದ್ಯಮವು ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಒಂದಾಗಿದೆ. 2025ರಲ್ಲಿ, ದ್ವಿಚಕ್ರ ವಾಹನಗಳ ಮಾರಾಟ 2 ಕೋಟಿ ಮೀರಿದೆ. ಇದು ದೇಶದ ಜನರ ಖರೀದಿ ಶಕ್ತಿ ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತಿದೆ. ಆದಾಯ ತೆರಿಗೆ ಮತ್ತು ಜಿಎಸ್ಟಿ ಕಡಿತದಿಂದ ಅವರು ಅನೇಕ ಪ್ರಯೋಜನಗಳನ್ನು ಪಡೆದಿದ್ದಾರೆ; ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದು ಸೂಚಿಸುವ ಇಂತಹ ಅನೇಕ ಉದಾಹರಣೆಗಳಿವೆ.
ಸ್ನೇಹಿತರೆ,
ಇಂದಿನ ಕಾರ್ಯಕ್ರಮದಲ್ಲಿ 8 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳು ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ. ಕಳೆದ 11 ವರ್ಷಗಳಲ್ಲಿ ದೇಶದ ಕಾರ್ಯ(ನೌಕರ)ಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯಲ್ಲಿ ಸುಮಾರು 2 ಪಟ್ಟು ಹೆಚ್ಚಳವಾಗಿದೆ. ಮುದ್ರಾ ಮತ್ತು ಸ್ಟಾರ್ಟಪ್ ಇಂಡಿಯಾದಂತಹ ಸರ್ಕಾರದ ಯೋಜನೆಗಳಿಂದ ನಮ್ಮ ಹೆಣ್ಣು ಮಕ್ಕಳು ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ. ಮಹಿಳೆಯರ ಸ್ವ-ಉದ್ಯೋಗ ದರದಲ್ಲಿ ಸುಮಾರು 15 ಪ್ರತಿಶತದಷ್ಟು ಹೆಚ್ಚಳವಾಗಿದೆ. ನಾನು ಸ್ಟಾರ್ಟಪ್ ಗಳು ಮತ್ತು ಎಂಎಸ್ಎಂಇಗಳ ಬಗ್ಗೆ ಮಾತನಾಡಿದರೆ, ಇಂದು ಮಹಿಳಾ ನಿರ್ದೇಶಕರು ಮತ್ತು ಮಹಿಳಾ ಸಂಸ್ಥಾಪಕರ ಸಂಖ್ಯೆ ಬಹಳ ದೊಡ್ಡದಾಗಿದೆ. ನಮ್ಮ ಸಹಕಾರಿ ವಲಯದಲ್ಲಿ ಮತ್ತು ಹಳ್ಳಿಗಳಲ್ಲಿ ಕೆಲಸ ಮಾಡುವ ಸ್ವಸಹಾಯ ಗುಂಪುಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಸ್ನೇಹಿತರೆ,
ಇಂದು ದೇಶವು ಸುಧಾರಣಾ ಎಕ್ಸ್ ಪ್ರೆಸ್ ಗೆ ಹೊರಟಿದೆ. ದೇಶದಲ್ಲಿ ಜೀವನ ಮತ್ತು ವ್ಯವಹಾರ ಎರಡನ್ನೂ ಸುಲಭಗೊಳಿಸುವುದು ಇದರ ಉದ್ದೇಶವಾಗಿದೆ. ಜಿಎಸ್ಟಿಯಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳಿಂದ ಪ್ರತಿಯೊಬ್ಬರೂ ಪ್ರಯೋಜನ ಪಡೆದಿದ್ದಾರೆ. ಇದರ ಮೂಲಕ ನಮ್ಮ ಯುವ ಉದ್ಯಮಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ನಮ್ಮ ಎಂಎಸ್ಎಂಇಗಳು ಪ್ರಯೋಜನ ಪಡೆಯುತ್ತಿವೆ. ಇತ್ತೀಚೆಗೆ ದೇಶವು ಐತಿಹಾಸಿಕ ಕಾರ್ಮಿಕ ಸುಧಾರಣೆಗಳನ್ನು ಜಾರಿಗೆ ತಂದಿದೆ. ಇದರ ಮೂಲಕ ಕಾರ್ಮಿಕರು, ಉದ್ಯೋಗಿಗಳು ಮತ್ತು ವ್ಯವಹಾರಗಳು ಎಲ್ಲರಿಗೂ ಪ್ರಯೋಜನ ಪಡೆಯುತ್ತವೆ. ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕರು ಮತ್ತು ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ಮತ್ತಷ್ಟು ಬಲಪಡಿಸಿವೆ.
ಸ್ನೇಹಿತರೆ,
ಇಂದು ಸುಧಾರಣಾ ಎಕ್ಸ್ ಪ್ರೆಸ್ ಬಗ್ಗೆ ಎಲ್ಲೆಡೆ ಚರ್ಚಿಸುತ್ತಿರುವಾಗ ಈ ವಿಷಯದ ಬಗ್ಗೆ ನಾನು ನಿಮಗೆ ಒಂದು ಕಾರ್ಯವನ್ನು ನಿಯೋಜಿಸಲು ಬಯಸುತ್ತೇನೆ. ಕಳೆದ 5-7 ವರ್ಷಗಳಲ್ಲಿ ನೀವು ಸರ್ಕಾರದೊಂದಿಗೆ ಯಾವಾಗ ಮತ್ತು ಯಾವ ರೂಪದಲ್ಲಿ ಸಂಪರ್ಕ ಹೊಂದಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ? ನೀವು ಯಾವುದಾದರೂ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿದ್ದರೆ, ಅಥವಾ ಬೇರೆ ಯಾವುದಾದರೂ ಮಾಧ್ಯಮದ ಮೂಲಕ ಸಂವಹನ ನಡೆಸಿದ್ದರೆ ಮತ್ತು ನೀವು ತೊಂದರೆ ಎದುರಿಸಿದ್ದರೆ, ಕೆಲವು ಕೊರತೆಗಳನ್ನು ಅನುಭವಿಸಿದ್ದರೆ ಅಥವಾ ಕೆಲವು ಕಿರಿಕಿರಿ ಅನುಭವಿಸಿದ್ದರೆ - ಅಂತಹ ವಿಷಯಗಳನ್ನು ನೆನಪಿಡಿ. ಈಗ ನೀವು ನಿಮ್ಮನ್ನು ತೊಂದರೆಗೊಳಿಸಿದ, ಕೆಲವೊಮ್ಮೆ ನಿಮ್ಮ ಹೆತ್ತವರನ್ನು ತೊಂದರೆಗೊಳಿಸಿದ, ಕೆಲವೊಮ್ಮೆ ನಿಮ್ಮ ಸ್ನೇಹಿತರನ್ನು ತೊಂದರೆಗೊಳಿಸಿದ ಮತ್ತು ನಿಮ್ಮನ್ನು ಚುಚ್ಚುವ, ಕೆಟ್ಟದಾಗಿ ಭಾವಿಸುವ ಅಥವಾ ನಿಮ್ಮನ್ನು ಕೋಪಗೊಳ್ಳುವ ವಿಷಯಗಳು ಯಾವು ಎಂದು ನಿರ್ಧರಿಸಬೇಕು - ಈಗ ನೀವು ನಿಮ್ಮ ಸ್ವಂತ ಅಧಿಕಾರಾವಧಿಯಲ್ಲಿ ಇತರೆ ನಾಗರಿಕರಿಗೆ ಆ ತೊಂದರೆಗಳು ಸಂಭವಿಸಲು ಬಿಡಬಾರದು. ಸರ್ಕಾರದ ಭಾಗವಾಗಿರುವುದರಿಂದ, ನೀವು ಸಹ ನಿಮ್ಮ ಮಟ್ಟದಲ್ಲಿ ಸಣ್ಣ ಸುಧಾರಣೆಗಳನ್ನು ಕೈಗೊಳ್ಳಬೇಕಾಗುತ್ತದೆ. ಗರಿಷ್ಠ ಸಂಖ್ಯೆಯ ಜನರಿಗೆ ಪ್ರಯೋಜನವಾಗುವಂತೆ ನೀವು ಈ ಕಾರ್ಧಾಯ ವಿಧಾನದೊಂದಿಗೆ ಮುಂದುವರಿಯಬೇಕು.
ಸ್ನೇಹಿತರೆ,
ಜೀವನ ಸುಗಮತೆ ಮತ್ತು ವ್ಯವಹಾರ ಸುಗಮತೆ ಬಲಪಡಿಸುವ ಕೆಲಸವು ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರ ಉದ್ದೇಶದ ಮೂಲಕ ನಡೆಯುವಂತೆಯೇ ನೀತಿಯ ಮೂಲಕವೂ ನಡೆಯುತ್ತದೆ. ನೀವು ಇನ್ನೊಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಈ ಯುಗದಲ್ಲಿ, ದೇಶದ ಅಗತ್ಯತೆಗಳು ಮತ್ತು ಆದ್ಯತೆಗಳು ಸಹ ವೇಗವಾಗಿ ಬದಲಾಗುತ್ತಿವೆ. ಈ ವೇಗದ ಬದಲಾವಣೆಯೊಂದಿಗೆ ನೀವು ನಿಮ್ಮನ್ನು ನವೀಕರಿಸುತ್ತಲೇ ಇರಬೇಕು. ನೀವು ಖಂಡಿತವಾಗಿಯೂ ಐಜಿಒಟಿ ಕರ್ಮಯೋಗಿಯಂತಹ ವೇದಿಕೆಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ಇಷ್ಟು ಕಡಿಮೆ ಸಮಯದಲ್ಲಿ ಸುಮಾರು ಒಂದೂವರೆ ಕೋಟಿ ಸರ್ಕಾರಿ ನೌಕರರು ಈ ಐಜಿಒಟಿ ವೇದಿಕೆಗೆ ಸೇರುವ ಮೂಲಕ ತರಬೇತಿ ಪಡೆದು ತಮ್ಮನ್ನು ತಾವು ಹೊಸದಾಗಿ ಸಬಲವಾಗುತ್ತಿದ್ದಾರೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ.
ಸ್ನೇಹಿತರೆ,
ಪ್ರಧಾನಮಂತ್ರಿಯೇ ಆಗಿರಲಿ ಅಥವಾ ಸರ್ಕಾರದ ಸಣ್ಣ ಸೇವಕರಾಗಿರಲಿ, ನಾವೆಲ್ಲರೂ ಸೇವಕರು ಮತ್ತು ನಾವೆಲ್ಲರೂ ಒಂದೇ ಸಾಮಾನ್ಯ ಮಂತ್ರವನ್ನು ಹೊಂದಿದ್ದೇವೆ. ಅದರಲ್ಲಿ, ಯಾರೂ ಮೇಲಲ್ಲ, ಯಾರೂ ಕೀಳಲ್ಲ. ನಮಗೆಲ್ಲರಿಗೂ, ನನಗಾಗಿ ಮತ್ತು ನಿಮಗಾಗಿ, ಅದು ಆ ಮಂತ್ರ - "ನಾಗರಿಕ್ ದೇವೋ ಭವ" (ನಾಗರಿಕರೇ ದೇವರು). ನಾವು "ನಾಗರಿಕ್ ದೇವೋ ಭವ" ಮಂತ್ರದೊಂದಿಗೆ ಕೆಲಸ ಮಾಡಬೇಕು. ನೀವು ಸಹ ಹಾಗೆಯೇ ಮಾಡುತ್ತಲೇ ಇರುತ್ತೀರಿ. ಮತ್ತೊಮ್ಮೆ, ನಿಮ್ಮ ಜೀವನದಲ್ಲಿ ಬಂದಿರುವ ಈ ಹೊಸ ವಸಂತ, ಈ ಹೊಸ ಜೀವನದ ಯುಗ ಪ್ರಾರಂಭವಾಗುತ್ತಿದೆ, ನಿಮ್ಮ ಮೂಲಕವೇ 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣವಾಗಲಿದೆ. ನನ್ನ ಕಡೆಯಿಂದ ನಿಮಗೆ ಅನೇಕ ಶುಭಾಶಯಗಳು.
ತುಂಬು ಧನ್ಯವಾದಗಳು.
*****
(रिलीज़ आईडी: 2218121)
आगंतुक पटल : 5