ಪ್ರಧಾನ ಮಂತ್ರಿಯವರ ಕಛೇರಿ
ಅಸ್ಸಾಂನ ಕಲಿಯಾಬೋರ್‌ನಲ್ಲಿ ₹6,950 ಕೋಟಿಗೂ ಅಧಿಕ ಮೌಲ್ಯದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಯ ಭೂಮಿ ಪೂಜೆಯ ದೃಶ್ಯಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
18 JAN 2026 5:04PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಕಲಿಯಾಬೋರ್‌ನಲ್ಲಿ ₹6,950 ಕೋಟಿಗೂ ಅಧಿಕ ಮೌಲ್ಯದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಯ ಭೂಮಿ ಪೂಜೆಯಲ್ಲಿ ಭಾಗವಹಿಸಿದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
ಎಕ್ಸ್ ಕುರಿತ ಸರಣಿ ಪೋಸ್ಟ್‌ಗಳಲ್ಲಿ, ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ:
"ಕಾಜಿರಂಗ ಎಲಿವೇಟೆಡ್ ಕಾರಿಡಾರ್‌ಗೆ ಶಂಕುಸ್ಥಾಪನೆ ನೆರವೇರಿಸಿರುವುದು ಅಪಾರ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ. ಇದು ವನ್ಯಜೀವಿಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಮತ್ತು ಪರಿಸರ ಸಂರಕ್ಷಣೆಯ ಪ್ರಯತ್ನಗಳನ್ನು ಬಲಪಡಿಸುತ್ತದೆ."
"ಕಲಿಯಾಬೋರ್ ಮತ್ತು ಇಡೀ ಅಸ್ಸಾಂನ ಜನರ ಉತ್ಸಾಹವು, ರಾಜ್ಯದ ಅಭಿವೃದ್ಧಿಯ ವಿಷಯಕ್ಕೆ ಬಂದಾಗ ಡಬಲ್ ಎಂಜಿನ್ NDA ಸರ್ಕಾರದ ಮೇಲೆ ಅವರಿಗಿರುವ ದೃಢವಾದ ನಂಬಿಕೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ."
"ಕಾಂಗ್ರೆಸ್ ಎಲ್ಲೆಡೆ ತಿರಸ್ಕರಿಸಲ್ಪಡುತ್ತಿದೆ.
ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ನಡೆದ ಚುನಾವಣೆಗಳಲ್ಲಿ ಅವರು ಸಂಪೂರ್ಣವಾಗಿ ಸೋತು ಸುಣ್ಣವಾಗಿದ್ದಾರೆ, ಏಕೆಂದರೆ ಅವರ ಬಳಿ ಅಭಿವೃದ್ಧಿಯ ಯಾವುದೇ ಕಾರ್ಯಸೂಚಿ ಇರಲಿಲ್ಲ.
ಅಂತಹ ಕಾಂಗ್ರೆಸ್ ಪಕ್ಷವು ಕಾಜಿರಂಗ ಅಥವಾ ಅಸ್ಸಾಂನ ಕಲ್ಯಾಣಕ್ಕಾಗಿಯೂ ಎಂದಿಗೂ ಕೆಲಸ ಮಾಡಲು ಸಾಧ್ಯವಿಲ್ಲ."
"ಕಲಿಯಾಬೋರ್‌ನಿಂದ ನುಮಾಲಿಗಢದವರೆಗೆ ಅಭಿವೃದ್ಧಿಪಡಿಸಲಾಗುತ್ತಿರುವ ಎಲಿವೇಟೆಡ್ ಕಾರಿಡಾರ್ ಸಂಪರ್ಕವನ್ನು ಸುಧಾರಿಸುತ್ತದೆ, ವನ್ಯಜೀವಿಗಳನ್ನು ರಕ್ಷಿಸುತ್ತದೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ."
"ರಸ್ತೆ, ರೈಲು, ವಾಯುಮಾರ್ಗ ಮತ್ತು ಜಲಮಾರ್ಗಗಳ ಮೂಲಕ ಅಸ್ಸಾಂ ಅನ್ನು ಸಂಪರ್ಕಿಸಲು ನಾವು ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ."
"ಕಾಂಗ್ರೆಸ್ ಕೇವಲ ಒಂದೇ ಒಂದು ನೀತಿಯನ್ನು ಹೊಂದಿದೆ - ಅದು ನುಸುಳುಕೋರರನ್ನು ರಕ್ಷಿಸುವುದು ಮತ್ತು ಅಧಿಕಾರವನ್ನು ಕಸಿದುಕೊಳ್ಳುವುದು.
ಆದರೆ ಈ ಭೀಕರ ಮನಸ್ಥಿತಿಗೆ ಅಸ್ಸಾಂನ ಮಣ್ಣಿನಿಂದ ಕಾಂಗ್ರೆಸ್‌ಗೆ ತಕ್ಕ ಪ್ರತಿಕ್ರಿಯೆ ಸಿಗಲಿದೆ ಎಂಬ ವಿಶ್ವಾಸ ನನಗಿದೆ."
“কাজিৰঙা এলিভেটেড কৰিডৰ নিৰ্মাণৰ আধাৰশিলা স্থাপন কৰা আমাৰ বাবে এক অতি গৌৰৱ আৰু সৌভাগ্যৰ বিষয়। এই প্ৰকল্পই বন্যপ্ৰাণীৰ সুৰক্ষা নিশ্চিত কৰাৰ লগতে পৰিৱেশ সংৰক্ষণৰ দিশত লোৱা প্ৰচেষ্টাসমূহক অধিক সুদৃঢ় কৰি তুলিব।”
“কলিয়াবৰবাসী তথা সমগ্ৰ অসমৰ জনসাধাৰণৰ উচ্ছ্বাসে ৰাজ্যৰ বিকাশৰ ক্ষেত্ৰত ডাবল ইঞ্জিন এন ডি এ চৰকাৰৰ প্ৰতি তেওঁলোকৰ দৃঢ় বিশ্বাস স্পষ্টভাৱে প্ৰতিফলিত কৰে।”
“কংগ্ৰেছ দলটো সকলো ঠাইতে নাকচ হৈ আহিছে।
উন্নয়নৰ কোনো স্পষ্ট এজেণ্ডা নথকাৰ বাবে মহাৰাষ্ট্ৰৰ মুখ্য নগৰসমূহত অনুষ্ঠিত হোৱা নিৰ্বাচনত তেওঁলোক সম্পূৰ্ণৰূপে পৰাস্ত হৈছে।
এনে কংগ্ৰেছ দলে কাজিৰঙা বা অসমৰ কল্যাণৰ বাবে কেতিয়াও কার্যকৰীভাৱে কাম কৰিব নোৱাৰে।”
“আমি অসমক পদপথ, ৰেলপথ, বিমানপথ আৰু জলপথৰ জৰিয়তে সংযোগ স্থাপন কৰাৰ ক্ষেত্ৰত কোনো প্ৰচেষ্টাই বাদ দিয়া নাই।”
“কংগ্ৰেছৰ এটাই নীতি আছে, অনুপ্ৰৱেশকাৰীক সুৰক্ষা দিয়া আৰু ক্ষমতা দখল কৰা।
কিন্তু, এই ঘৃণনীয় মানসিকতাৰ বাবে অসমভূমিৰ পৰা কংগ্ৰেছক শক্তিশালী প্ৰত্যুত্তৰ দিয়া হ’ব বুলি মই দৃঢ়ভাৱে বিশ্বাসী।”
*****
(रिलीज़ आईडी: 2215852)
आगंतुक पटल : 15