ಪ್ರಧಾನ ಮಂತ್ರಿಯವರ ಕಛೇರಿ
ಅಸ್ಸಾಂನ ಗುವಾಹಟಿಯಲ್ಲಿ ನಡೆದ ಬಾಗುರೂಂಬಾ ದೊಹೊ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಣುಕುನೋಟಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
17 JAN 2026 11:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುವಾಹಟಿಯ ಸರುಸಜೈ ಕ್ರೀಡಾಂಗಣದಲ್ಲಿ ಬೋಡೋ ಸಮುದಾಯದ ಶ್ರೀಮಂತ ಪರಂಪರೆಯನ್ನು ಆಚರಿಸುವ ಐತಿಹಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾದ ಬಾಗುರೂಂಬಾ ದೊಹೊ 2026ರಲ್ಲಿ ಭಾಗವಹಿಸಿದ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್ ಗಳಲ್ಲಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಬರೆದಿದ್ದಾರೆ:
"ಬಾಗುರೂಂಬಾ ದೊಹೊ ಕಾರ್ಯಕ್ರಮದಲ್ಲಿ ಗುವಾಹಟಿಯ ನನ್ನ ಸಹೋದರಿಯರು ಮತ್ತು ಸಹೋದರರ ನಡುವೆ ಇರುವುದು ನಾನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುವ ಅನುಭವವಾಗಿದೆ. ಈ ಕಾರ್ಯಕ್ರಮವು ವೈಭವದ ಬೋಡೋ ಸಂಸ್ಕೃತಿಯನ್ನು ಪ್ರದರ್ಶಿಸಿತು. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು."
ಇದೇ ವೇಳೆ ಅವರು, "ಬಾಗುರೂಂಬಾ ದೊಹೊ ಕಾರ್ಯಕ್ರಮದ ಹೆಚ್ಚಿನ ಫೋಟೋಗಳು ಇಲ್ಲಿವೆ."
"ಬೋಡೋ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಆಚರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಹೆಮ್ಮೆ ಇದೆ!"
"ನಮಗೆ, ಅಸ್ಸಾಂನ ಸಂಸ್ಕೃತಿ ಇಡೀ ರಾಷ್ಟ್ರದ ಹೆಮ್ಮೆಯಾಗಿದೆ. ರಾಜ್ಯದ ಶ್ರೀಮಂತ ಪರಂಪರೆ ಮತ್ತು ಅದರ ಮಹಾನ್ ವ್ಯಕ್ತಿಗಳನ್ನು ಗೌರವಿಸುವುದು ಒಂದು ಹೆಮ್ಮೆಯಾಗಿದೆ."
"ಅಸ್ಸಾಂನ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಇಡೀ ರಾಷ್ಟ್ರವು ಬಹಳವಾಗಿ ಮೆಚ್ಚುತ್ತಿದೆ."
ತಮ್ಮ ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಯಾವಾಗಲೂ ಅಸ್ಸಾಂನಲ್ಲಿ ಅಸ್ಥಿರತೆಯನ್ನು ಉತ್ತೇಜಿಸಿದೆ. ಜನರ ಸೇವೆ ಮಾಡುವ ಬದಲು, ಅವರು ಒಳನುಸುಳುಕೋರರನ್ನು ಸ್ವಾಗತಿಸುವತ್ತ ಗಮನ ಹರಿಸಿದರು.
"ಕಾಂಗ್ರೆಸ್ ಯಾವಾಗಲೂ ಅಸ್ಸಾಂ ಮತ್ತು ಇಡೀ ಈಶಾನ್ಯವನ್ನು ನಿರ್ಲಕ್ಷ್ಯದಿಂದ ನೋಡಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಎನ್ ಡಿ ಎ ಭಾವನಾತ್ಮಕ ಅಂತರವನ್ನು ಕಡಿಮೆ ಮಾಡುವುದಲ್ಲದೆ, ಸುಧಾರಿತ ಮೂಲಸೌಕರ್ಯಗಳ ಮೂಲಕ ಇಡೀ ಪ್ರದೇಶವನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ಸಂಪರ್ಕಿಸಿದೆ."
"ಗುವಾಹಟಿಯಲ್ಲಿ ಅದ್ಭುತ ಬಾಗುರೂಂಬಾ ದೊಹೊ ಕಾರ್ಯಕ್ರಮ!"
"ಇಂದು, ರುಪ್ಕೊನ್ವರ್ ಜ್ಯೋತಿ ಪ್ರಸಾದ್ ಅಗರ್ವಾಲ್ ಅವರ ಗೌರವಾರ್ಥ ಅಸ್ಸಾಂ ಶಿಲ್ಪಿ ದಿವಸವನ್ನು ಆಚರಿಸುತ್ತದೆ. ಅವರು ಅಸ್ಸಾಂನ ಸಾಂಸ್ಕೃತಿಕ ದಿಗ್ಗಜರಾಗಿದ್ದರು, ಅವರ ಕೃತಿಗಳು ಅಸ್ಸಾಮಿ ಜನರ ಮನಸ್ಸಿನಲ್ಲಿ ಶಾಶ್ವತವಾದ ಪ್ರಭಾವ ಬೀರಿವೆ. ಅವರ ಜೀವನವು ರಂಗಭೂಮಿ, ಚಲನಚಿತ್ರ, ಸಂಗೀತ ಮತ್ತು ಇತರ ಸಾಂಸ್ಕೃತಿಕ ಅನ್ವೇಷಣೆಗಳಲ್ಲಿ ಉತ್ತಮ ಸಾಧನೆ ಮಾಡಲು ಅಸಂಖ್ಯಾತ ಜನರಿಗೆ ಸ್ಫೂರ್ತಿ ನೀಡಿದೆ.
ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಅವರಿಗೆ ಗೌರವ ಸಲ್ಲಿಸಿದೆ."
“বাগৰুম্বা দহৌ অনুষ্ঠানৰ বাবে গুৱাহাটীৰ মোৰ ভাই-ভনীসকলৰৰ মাজত উপস্থিত থকাৰ এই অভিজ্ঞতা মই সদায় মনত ৰাখিম৷ এই অনুষ্ঠানে গৌৰৱময় বড়ো সংস্কৃতি প্ৰদৰ্শন কৰিছে । এই ঐতিহাসিক কাৰ্যসূচীত অংশগ্ৰহণ কৰা সকলোলৈ মই অভিনন্দন জনাইছো।”
“এয়া বাগৰুম্বা দহৌ অনুষ্ঠানৰ আৰু কিছু আলোকচিত্ৰ।”
“বড়ো সংস্কৃতি আৰু পৰম্পৰাক উদযাপন কৰা এক অনুষ্ঠানত অংশগ্ৰহণ কৰি গৌৰৱান্বিত হৈছো!”
“আমাৰ বাবে, অসমৰ সংস্কৃতি সমগ্ৰ ৰাষ্ট্ৰৰ গৌৰৱ৷ ৰাজ্যখনৰ চহকী ঐতিহ্য আৰু ইয়াৰ মহান ব্যক্তিত্বক সন্মান জনোৱাটো এক সৌভাগ্যৰ কথা৷”
“অসমৰ বিভিন্ন ক্ষেত্ৰত হোৱা উন্নয়নক সমগ্ৰ ৰাষ্ট্ৰই যথেষ্ট প্ৰশংসা কৰিছে।”
“তেওঁলোকৰ ক্ষুদ্ৰ ৰাজনৈতিক লাভালাভৰ বাবে কংগ্ৰেছে সদায় অসমত অস্থিৰতাক প্ৰসাৰিত কৰি আহিছে। জনসাধাৰণৰ সেৱা কৰাৰ পৰিৱৰ্তে, তেওঁলোকে অনুপ্ৰৱেশকাৰীক আদৰি লোৱাতহে মনোনিৱেশ কৰি থাকিল।”
“কংগ্ৰেছে অসম তথা সমগ্ৰ উত্তৰ-পূৰ্বাঞ্চলক সদায় অৱহেলাৰ দৃষ্টিৰে চাই আহিছে।
ইয়াৰ বিপৰীতে, এনডিএয়ে কেৱল আৱেগিক দূৰত্বৰ সেতুবন্ধন কৰাই নহয়, উন্নত আন্তঃগাঁথনিৰ জৰিয়তে সমগ্ৰ অঞ্চলটোক উন্নয়নৰ মূলসুঁতিৰ সৈতেও সংযোগ কৰিছে।”
“গুৱাহাটীত দৰ্শনীয় বাগৰুম্বা দহৌ অনুষ্ঠান!”
“আজি, অসমত ৰূপকোঁৱৰ জ্যোতিপ্ৰসাদ আগৰৱালাক শ্ৰদ্ধাঞ্জলি জনাই শিল্পী দিৱস পালন কৰা হয়। তেওঁ অসমৰ সাংস্কৃতিক জগতৰ মহীৰূহ আছিল, যাৰ সৃষ্টিৰাজিয়ে অসমীয়া মানুহৰ মনত চিৰস্থায়ী ছাপ পেলাইছে। তেওঁৰ জীৱনে অগণন লোকক থিয়েটাৰ, চলচ্চিত্ৰ, সংগীত আৰু অন্যান্য সাংস্কৃতিক সাধনাত পাৰদৰ্শিতা দেখুৱাবলৈ অনুপ্ৰাণিত কৰিছে।
গুৱাহাটীত অনুষ্ঠানৰ সময়ত তেওঁলৈ শ্ৰদ্ধাঞ্জলি জনালো।”
*****
(रिलीज़ आईडी: 2215840)
आगंतुक पटल : 8
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Punjabi
,
Gujarati
,
Odia
,
Telugu
,
Malayalam