ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ನವೋದ್ಯಮ ದಿನದಂದು ಶುಭ ಕೋರಿದ ಪ್ರಧಾನಮಂತ್ರಿ, 10 ವರ್ಷ ಪೂರೈಸಿದ ಸ್ಟಾರ್ಟ್ಅಪ್ ಇಂಡಿಯಾ


ರಾಷ್ಟ್ರೀಯ ನವೋದ್ಯಮ ದಿನದಂದು ಭಾರತದ ಯುವಜನರ ಸ್ಫೂರ್ತಿಯನ್ನು ಶ್ಲಾಘಿಸುವ ಸಂಸ್ಕೃತ ಸುಭಾಷಿತ ಹಂಚಿಕೊಂಡ ಪ್ರಧಾನಮಂತ್ರಿ

प्रविष्टि तिथि: 16 JAN 2026 9:28AM by PIB Bengaluru

ರಾಷ್ಟ್ರೀಯ ನವೋದ್ಯಮ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೋದ್ಯಮಗಳ ಜಗತ್ತಿನೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ಕೋರಿದ್ದಾರೆ. ಈ ವರ್ಷದ ಆಚರಣೆಯು ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮವನ್ನು ಆರಂಭಿಸಿ ಒಂದು ದಶಕ ಪೂರೈಸಿರುವುದನ್ನು ಗುರುತಿಸುತ್ತಿರುವ ವಿಶೇಷ ಮಹತ್ವವನ್ನು ಹೊಂದಿದೆ.

ಜಾಗತಿಕ ನವೋದ್ಯಮ ಪೂರಕ ವ್ಯವಸ್ಥೆಯಲ್ಲಿ ಭಾರತದ ಉದಯಕ್ಕೆ ಶಕ್ತಿ ತುಂಬಿದ ಜನರ, ವಿಶೇಷವಾಗಿ ಯುವಕರ ಧೈರ್ಯ, ನಾವೀನ್ಯತೆಯ ಮನೋಭಾವ ಮತ್ತು ಉದ್ಯಮಶೀಲತಾ ಸ್ಫೂರ್ತಿಯನ್ನು ಆಚರಿಸುವ ದಿನ ಇದಾಗಿದೆ ಎಂದು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ಸ್ಟಾರ್ಟ್ಅಪ್‌ಗಳ ಪರಿವರ್ತನಾತ್ಮಕ ಪಾತ್ರವನ್ನು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ”ಸ್ಟಾರ್ಟ್ಅಪ್‌ಗಳು ನಮ್ಮ ಆರ್ಥಿಕತೆ ಮತ್ತು ಸಮಾಜದ ಭವಿಷ್ಯವನ್ನು ರೂಪಿಸುವ ಬದಲಾವಣೆಯ ಎಂಜಿನ್‌ಗಳಾಗಿ  ಕಾರ್ಯನಿರ್ವಹಿಸುತ್ತಿವೆ. ನಮ್ಮ ಭೂಮಿ ಗ್ರಹ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ಅದೇ ವೇಳೆ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಅವು ಅಸಾಧಾರಣ ಕೆಲಸ ಮಾಡುತ್ತಿವೆ. ದೊಡ್ಡ, ಸವಾಲಿನ ಸಾಂಪ್ರದಾಯಿಕ ಮಾನದಂಡಗಳ ಕನಸು ಕಾಣಲು ಧೈರ್ಯಮಾಡಿದ, ಅಪಾಯಗಳನ್ನು ತೆಗೆದುಕೊಂಡ ಮತ್ತು ತಮ್ಮ ನವೋದ್ಯಮಗಳ ಮೂಲಕ ಪರಿವರ್ತನಾತ್ಮಕ ಪರಿಣಾಮವನ್ನು ಸೃಷ್ಟಿಸಿದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ನನಗೆ ಹೆಮ್ಮೆ ಇದೆ’’ ಎಂದು ಹೇಳಿದ್ದಾರೆ.

ನವೋದ್ಯಮ ಪೂರಕ ವ್ಯವಸ್ಥೆಯನ್ನು  ಮತ್ತಷ್ಟು ಬಲವರ್ಧನೆಗೊಳಿಸಲು ಭಾರತ ಸರ್ಕಾರವು ಎಲ್ಲಾ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ಕೈಗೊಂಡಿರುವ ಸುಧಾರಣಾ ಎಕ್ಸ್‌ಪ್ರೆಸ್ ನವೋದ್ಯಮಗಳಿಗೆ ಬಾಹ್ಯಾಕಾಶ ಮತ್ತು ರಕ್ಷಣೆ ಸೇರಿ ಹಿಂದೆ ಅಲೋಚಿಸಲಾಗದ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ ಎಂದು ಅವರು ಒತ್ತಿ ಹೇಳಿದರು. ಆತ್ಮನಿರ್ಭರ ಭಾರತವನ್ನು ನಿರ್ಮಿಸುವಲ್ಲಿ ನವೋದ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು, ಅಪಾಯಗಳನ್ನು ತೆಗೆದುಕೊಳ್ಳಲು ಮತ್ತು ಸಮಸ್ಯೆ ಪರಿಹಾರಗಳನ್ನು ಸೂಚಿಸ ಬಯಸುವ ಯುವಕರನ್ನು ಬೆಂಬಲಿಸುವ ಸರ್ಕಾರದ ಬದ್ಧತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಮಾರ್ಗದರ್ಶಕರು, ಇನ್ಕ್ಯುಬೇಟರ್‌ಗಳು(ಸಂಪೋಷಣಾ ಕೇಂದ್ರಗಳು), ಹೂಡಿಕೆದಾರರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವ ಇತರರ ವಿಶಾಲ ಪೂರಕ ವ್ಯವಸ್ಥೆಯನ್ನು ಸಹ ಶ್ರೀ ನರೇಂದ್ರ ಮೋದಿ ಅವರು ಗುರುತಿಸಿದ್ದಾರೆ. ಅವರ ಮಾರ್ಗದರ್ಶನ ಮತ್ತು ಒಳನೋಟಗಳು ಯುವ ನಾವೀನ್ಯಕಾರರನ್ನು ಪ್ರೋತ್ಸಾಹಿಸುವಲ್ಲಿ ಮತ್ತು ಭಾರತದ ಪ್ರಗತಿಯ ಯಶೋಗಾಥೆಗೆ ಕೊಡುಗೆ ನೀಡುವಲ್ಲಿ ದೀರ್ಘಕಾಲ ಸಾಗುತ್ತವೆ ಎಂದು ಅವರು ಉಲ್ಲೇಖಿಸಿದರು.

ಭಾರತದ ಸ್ಟಾರ್ಟ್‌ಅಪ್‌ಗಳು ನಾವೀನ್ಯತೆ, ಸ್ಥಿತಿಸ್ಥಾಪಕತ್ವ ಮತ್ತು ರಾಷ್ಟ್ರೀಯ ಪ್ರಗತಿಯ ಚಾಲಕಶಕ್ತಿಯಾಗಿವೆ ಎಂದು  ಪ್ರಧಾನಮಂತ್ರಿ ತಮ್ಮ ವಿಶ್ವಾಸವನ್ನು ಪುನರುಚ್ಚರಿಸಿದರು.

ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿ, ಭಾರತದ ಯುವ ಉದ್ಯಮಿಗಳ ದೃಢಸಂಕಲ್ಪ ಮತ್ತು ಬದ್ಧತೆಯನ್ನು ಶ್ಲಾಘಿಸಿದರು, ಅವರ ಅವಿರತ ಪ್ರಯತ್ನಗಳು ಸ್ಟಾರ್ಟ್‌ಅಪ್‌ಗಳ ಜಗತ್ತಿನಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸುತ್ತಿವೆ ಎಂದು ಉಲ್ಲೇಖಿಸಿದರು. ವಿಕಸಿತ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಅವರ ಶಕ್ತಿ ಮತ್ತು ಉತ್ಸಾಹವು ದೊಡ್ಡ ಸಾಮರ್ಥ್ಯುವನ್ನು ತುಂಬಿದೆ ಎಂದು ಅವರು ಒತ್ತಿ ಹೇಳಿದರು.

ಶ್ರೀ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣ X ಸರಣಿ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ:

“ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನದ ಸಂದರ್ಭದಲ್ಲಿ ಸ್ಟಾರ್ಟ್‌ಅಪ್‌ಗಳ ಜಗತ್ತಿನೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ಶುಭಾಶಯಗಳು. ಸ್ಟಾರ್ಟ್‌ಅಪ್ ಇಂಡಿಯಾ ಆರಂಭವಾಗಿ ಒಂದು ದಶಕ ಪೂರೈಸಿರುವುದರಿಂದ ಇಂದಿನ ಈ ಆಚರಣೆ ವಿಶೇಷವಾಗಿದೆ. ಈ ದಿನವು ನಮ್ಮ ಜನರ, ವಿಶೇಷವಾಗಿ ನಮ್ಮ ಯುವಕರ ಧೈರ್ಯ, ನಾವೀನ್ಯತೆಯ ಮನೋಭಾವ ಮತ್ತು ಉದ್ಯಮಶೀಲತಾ ಸ್ಫೂರ್ತಿಯನ್ನು ಆಚರಿಸುವುದಾಗಿದೆ. ಅವರು ಜಾಗತಿಕ ಸ್ಟಾರ್ಟ್‌ಅಪ್ ಪೂರಕ ವ್ಯವಸ್ಥೆಯಲ್ಲಿ ಭಾರತದ ಸ್ಥಾನಮಾನ ಏರಿಕೆಗೆ ಶಕ್ತಿ ತುಂಬಿದ್ದಾರೆ.

#10YearsOfStartupIndia

https://www.pib.gov.in/PressReleseDetail.aspx?PRID=2214764&reg=3&lang=1

“ಸ್ಟಾರ್ಟ್‌ಅಪ್‌ಗಳು ನಮ್ಮ ಆರ್ಥಿಕತೆ ಮತ್ತು ಸಮಾಜದ ಭವಿಷ್ಯವನ್ನು ರೂಪಿಸುವ ಬದಲಾವಣೆಯ ಎಂಜಿನ್‌ಗಳಾಗಿವೆ. ನಮ್ಮ ಭೂಮಿ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವಲ್ಲಿ ಮತ್ತು ಅದೇ ವೇಳೆ ಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಅವರು ಅಸಾಧಾರಣ ಕೆಲಸ ಮಾಡುತ್ತಿದ್ದಾರೆ. ದೊಡ್ಡ, ಸವಾಲಿನ ಸಾಂಪ್ರದಾಯಿಕ ರೂಢಿಗಳನ್ನು ಕನಸು ಕಾಣಲು ಧೈರ್ಯಮಾಡಿದ, ಅಪಾಯಗಳನ್ನು ತೆಗೆದುಕೊಂಡ ಮತ್ತು ತಮ್ಮ ಸ್ಟಾರ್ಟ್‌ಅಪ್‌ಗಳ ಮೂಲಕ ಪರಿವರ್ತನಾತ್ಮಕ ಪರಿಣಾಮವನ್ನು ಸೃಷ್ಟಿಸಿದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ನನಗೆ ಹೆಮ್ಮೆ ಇದೆ’’

#10YearsOfStartupIndia”

”ಭಾರತದ ಸ್ಟಾರ್ಟ್‌ಅಪ್ ಪೂರಕ ವ್ಯವಸ್ಥೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಭಾರತ ಸರ್ಕಾರವು ಎಲ್ಲಾ ಪಾಲುದಾರರೊಂದಿಗೆ ಒಗ್ಗೂಡಿ ಕಾರ್ಯನಿರ್ವಹಿಸುತ್ತಿದೆ. ಭಾರತ ಕೈಗೊಂಡಿರುವ ಸುಧಾರಣಾ ಎಕ್ಸ್‌ಪ್ರೆಸ್, ಬಾಹ್ಯಾಕಾಶ, ರಕ್ಷಣೆ ಮತ್ತು ಇನ್ನೂ ಹೆಚ್ಚಿನವುಗಳಾಗಿರಬಹುದು, ಹಿಂದೆ ಆಲೋಚಿಸಲಾಗದ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಸ್ಟಾರ್ಟ್‌ಅಪ್‌ಗಳಿಗೆ ಬಹಳ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಆತ್ಮನಿರ್ಭರ ಭಾರತವನ್ನು ನಿರ್ಮಿಸುವಲ್ಲಿ ನಮ್ಮ ಸ್ಟಾರ್ಟ್‌ಅಪ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ನನಗೆ ಹೆಮ್ಮೆ ಇದೆ. ಅಪಾಯಗಳನ್ನು ತೆಗೆದುಕೊಳ್ಳಲು ಮತ್ತು ಸಮಸ್ಯೆ ಪರಿಹಾರಕರಾಗಲು ಬಯಸುವ ನಮ್ಮ ಯುವಕರನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ’

#10YearsOfStartupIndia”

“ಇದು ಮಾರ್ಗದರ್ಶಕರು, ಸಂಪೋಷಕರು (ಇನ್ಕ್ಯುಬೇಟರ್‌ಗಳು), ಹೂಡಿಕೆದಾರರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವ ಇತರರ ಪೂರಕ ವ್ಯವಸ್ಥೆಯನ್ನು ಗುರುತಿಸುವ ದಿನವಾಗಿದೆ. ನಮ್ಮ ಯುವಕರು ಹೊಸತನವನ್ನು ಕಂಡುಕೊಳ್ಳುವಾಗ ಮತ್ತು ಪ್ರಗತಿಗೆ ಕೊಡುಗೆ ನೀಡುವಾಗ ಅವರನ್ನು ಪ್ರೋತ್ಸಾಹಿಸುವಲ್ಲಿ ಬೆಂಬಲ ಮತ್ತು ಒಳನೋಟಗಳು ಬಹಳ ದೂರ ಸಾಗುತ್ತವೆ.

#10YearsOfStartupIndia”

“अपने दृढ़ संकल्प और समर्पण से हमारे युवा साथी स्टार्टअप की दुनिया में नित-नए रिकॉर्ड बना रहे हैं। इनका जोश और जुनून विकसित भारत के सपने को साकार करने में सबसे बड़ी शक्ति बनने वाला है।

दुर्लभान्यपि कार्याणि सिद्ध्यन्ति प्रोद्यमेन हि। 

शिलाऽपि तनुतां याति प्रपातेनार्णसो मुहुः॥”

 

*****


(रिलीज़ आईडी: 2215201) आगंतुक पटल : 4
इस विज्ञप्ति को इन भाषाओं में पढ़ें: Bengali , Telugu , English , Urdu , हिन्दी , Manipuri , Assamese , Punjabi , Gujarati , Tamil , Malayalam