ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಪವಿತ್ರ ಉತ್ತರಾಯಣದ ಸಂದರ್ಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು ಅಹಮದಾಬಾದ್‌ನ ಶ್ರೀ ಜಗನ್ನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಗೋಮಾತೆಯನ್ನು ಪೂಜಿಸಿದರು


ಅಹಮದಾಬಾದ್‌ನ ತಲ್ತೇಜ್‌ನಲ್ಲಿರುವ ಗುರುದ್ವಾರ ಗೋವಿಂದ ಧಾಮಕ್ಕೆ ನಮನ ಸಲ್ಲಿಸಿದ ಗೃಹ ಸಚಿವರು

ಗೃಹ ಸಚಿವರು ಅಹಮದಾಬಾದ್‌ನಲ್ಲಿ ನಡೆದ ಗಾಳಿಪಟ ಉತ್ಸವದಲ್ಲೂ ಭಾಗವಹಿಸಿದ್ದರು

ಇಡೀ ಗುಜರಾತ್‌ ಉತ್ತರಾಯಣ ಹಬ್ಬವನ್ನು ಬಹಳ ಸಂತೋಷ ಮತ್ತು ಉತ್ಸಾಹದಿಂದ ಆಚರಿಸುತ್ತಿದೆ

ಸನಾತನ ಧರ್ಮದಲ್ಲಿ, ಗೋಮಾತೆಯ ಸೇವೆ ಮತ್ತು ಆರಾಧನೆಗೆ ವಿಶೇಷ ಮಹತ್ವವಿದೆ

ಮಹಾಪ್ರಭುಗಳ ಕೃಪೆ ದೇಶದ ಜನರ ಮೇಲೆ ಸದಾ ಇರಲಿ

प्रविष्टि तिथि: 14 JAN 2026 6:23PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು ಇಂದು ಉತ್ತರಾಯಣದ ಪವಿತ್ರ ಸಂದರ್ಭದಲ್ಲಿ ಅಹಮದಾಬಾದ್‌ನ ಶ್ರೀ ಜಗನ್ನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಗೋಮಾತೆಯನ್ನು ಪೂಜಿಸಿದರು. ಗೃಹ ಸಚಿವರು ಅಹಮದಾಬಾದ್‌ನ ತಲ್ತೇಜ್‌ ನಲ್ಲಿರುವ ಗುರುದ್ವಾರ ಗೋವಿಂದ ಧಾಮದಲ್ಲಿ ನಮನ ಸಲ್ಲಿಸಿದರು ಮತ್ತು ಉತ್ತರಾಯಣದ ಸಂದರ್ಭದಲ್ಲಿ ಅಹಮದಾಬಾದ್‌ನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದರು.

ಈ ಸಂಬಂಧ ಎಕ್ಸ್‌ ಖಾತೆಯಲ್ಲಿ ಕೇಂದ್ರ ಗೃಹ ಸಚಿವರು, ‘‘ಜೈ ಜಗನ್ನಾಥ್‌! ಪ್ರತಿ ವರ್ಷದಂತೆ ಈ ವರ್ಷವೂ ಉತ್ತರಾಯಣದ ಪವಿತ್ರ ಸಂದರ್ಭದಲ್ಲಿ ಅಹಮದಾಬಾದ್‌ನ ಶ್ರೀ ಜಗನ್ನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಸೌಭಾಗ್ಯ ನನಗೆ ದೊರೆತಿದೆ. ಮಹಾಪ್ರಭುಗಳ ಕೃಪೆ ದೇಶದ ಜನರ ಮೇಲೆ ಸದಾ ಇರಲಿ.’’ 

ಮತ್ತೊಂದು ಪೋಸ್ಟ್‌ನಲ್ಲಿ, "ಗೃಹ ಸಚಿವರು, ಸನಾತನ ಧರ್ಮದಲ್ಲಿ, ಗೋಮಾತೆಯ ಸೇವೆ ಮತ್ತು ಆರಾಧನೆಗೆ ವಿಶೇಷ ಮಹತ್ವವಿದೆ. ಇಂದು, ಉತ್ತರಾಯಣದ ಸಂದರ್ಭದಲ್ಲಿ, ನಾನು ಅಹಮದಾಬಾದ್‌ನ ಶ್ರೀ ಜಗನ್ನಾಥ ದೇವಾಲಯದಲ್ಲಿ ಗೋಮಾತೆಯನ್ನು ಪೂಜಿಸಿದ್ದೇನೆ,'' ಎಂದಿದ್ದಾರೆ.

ಈ ಸಂಬಂಧ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಮತ್ತೊಂದು ಪೋಸ್ಟ್‌ನಲ್ಲಿ, ಶ್ರೀ ಅಮಿತ್‌ ಶಾ, ಉತ್ತರಾಯಣ ಹಬ್ಬವನ್ನು ಇಡೀ ಗುಜರಾತ್‌ನಲ್ಲಿ ಬಹಳ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿದೆ. ಇಂದು, ನಾನು ಅಹಮದಾಬಾದ್‌ನ ನಾರನ್‌ಪುರ ವಾರ್ಡ್‌ನ ಅರ್ಜುನ್‌ ಗ್ರೀನ್‌ ಫ್ಲ್ಯಾಟ್‌ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿ ಗಾಳಿಪಟ ಹಾರಿಸಿದೆ.’’ 

 

*****


(रिलीज़ आईडी: 2214760) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Gujarati , Odia , Tamil