ರೈಲ್ವೇ ಸಚಿವಾಲಯ
ರೈಲ್ವೆಯು ಸರಕು ಸಾಗಣೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ
ಒಂದೇ ದಿನದಲ್ಲಿ ದಾಖಲೆಯ 892 ರೈಲುಗಳ ಇಂಟರರ್‌ಚೇಂಜ್ ಮೂಲಕ, ಡಿ ಎಫ್ ಸಿ ಕಾರ್ಯಾಚರಣೆಯ ದಕ್ಷತೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ
ರೈಲ್ವೆಯು ಪ್ರದೇಶಗಳಾದ್ಯಂತ ಸರಕುಗಳ ಸಮರ್ಥ ಚಲನೆಯನ್ನು ಖಚಿತಪಡಿಸುತ್ತಿದೆ, ಸಾಗಣೆ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತಿದೆ
ದಾಖಲೆಯ ಸರಕು ಸಾಗಣೆ ವಿನಿಮಯವು ಪ್ರಯಾಣಿಕ ರೈಲು ಸೇವೆಗಳ ಸಮಯೋಚಿತ ಮತ್ತು ಆರಾಮದಾಯಕ ಪ್ರಯಾಣಕ್ಕೆ ಸಹಾಯ ಮಾಡುತ್ತಿದೆ, ಜೊತೆಗೆ ಕಡಿಮೆ ಲಾಜಿಸ್ಟಿಕ್ಸ್ ವೆಚ್ಚಗಳು ಮತ್ತು ಅಗತ್ಯ ವಸ್ತುಗಳ ವೇಗದ ವಿತರಣೆಯ ಮೂಲಕ ಭಾರತದ ಆರ್ಥಿಕತೆಗೆ ಉತ್ತೇಜನ ನೀಡುತ್ತಿದೆ
प्रविष्टि तिथि:
14 JAN 2026 7:13PM by PIB Bengaluru
ಭಾರತೀಯ ರೈಲ್ವೆಯು ದೇಶದಲ್ಲಿ ಸರಕು ಸಾಗಣೆಯನ್ನು ಮರು ವ್ಯಾಖ್ಯಾನಿಸುತ್ತಿದೆ ಮತ್ತು ವೇಗದ, ವಿಶ್ವಾಸಾರ್ಹ ಮತ್ತು ಕೈಗೆಟುಕುವ ಅಂತ್ಯದಿಂದ ಅಂತ್ಯದವರೆಗಿನ ರೈಲು ಸರಕು ಸಾಗಣೆ ಪರಿಹಾರವನ್ನು ಒದಗಿಸುವ ಮೂಲಕ ಸರಕು ಸಾಗಣೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಸುಧಾರಿತ ಮೂಲಸೌಕರ್ಯ, ಹೆಚ್ಚಿನ ಸಾಮರ್ಥ್ಯದ ಕಾರಿಡಾರ್ ಗಳು ಮತ್ತು ಆಧುನಿಕ ಕಾರ್ಯಾಚರಣಾ ವ್ಯವಸ್ಥೆಗಳನ್ನು ಸಂಯೋಜಿಸುವ ಮೂಲಕ, ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಡಿ ಎಫ್ ಸಿ) ಜಾಲವು ಪ್ರದೇಶಗಳಾದ್ಯಂತ ಸರಕುಗಳ ಸಮರ್ಥ ಚಲನೆಯನ್ನು ಖಚಿತಪಡಿಸುತ್ತಿದೆ, ಸಾಗಣೆ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತಿದೆ.
ತಡೆರಹಿತ ಹೆಚ್ಚಿನ ಸಾಂದ್ರತೆಯ ಸರಕು ಕಾರ್ಯಾಚರಣೆಗಳ ತನ್ನ ಪ್ರವೃತ್ತಿಯನ್ನು ಮುಂದುವರಿಸುತ್ತಾ, ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ (DFCCIL), ಡಿ ಎಫ್ ಸಿ ಜಾಲದಲ್ಲಿ ಅತ್ಯಧಿಕ ರೈಲು ಇಂಟರ್‌ಚೇಂಜ್ ನೊಂದಿಗೆ ಕಾರ್ಯಾಚರಣೆಯ ದಕ್ಷತೆಯ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಭಾನುವಾರ, 5 ಜನವರಿ 2026 ರಂದು, ಡಿ ಎಫ್ ಸಿ ಜಾಲ ಮತ್ತು ಭಾರತೀಯ ರೈಲ್ವೆಯ ಐದು ವಲಯಗಳ ನಡುವೆ ಒಂದೇ ದಿನದಲ್ಲಿ ಒಟ್ಟು 892 ‘ಇಂಟರ್‌ಚೇಂಜ್’ ರೈಲುಗಳನ್ನು ನಿರ್ವಹಿಸಲಾಗಿದೆ, ಇದು ಕಾರಿಡಾರ್ ಗಳ ಕಾರ್ಯಾರಂಭದ ನಂತರ ಸಾಧಿಸಲಾದ ಅತ್ಯಧಿಕ ಇಂಟರ್‌ಚೇಂಜ್ ಆಗಿದೆ. ಈ ಹಿಂದಿನ ದಾಖಲೆಯು 4 ಜನವರಿ 2026 ರಂದು ಸಾಧಿಸಲಾದ 865 ರೈಲುಗಳಾಗಿತ್ತು.
ದಾಖಲೆಯ ಸರಕು ವಿನಿಮಯದಿಂದ ಉಂಟಾದ ಈ ವರ್ಧಿತ ಕಾರ್ಯಾಚರಣೆಯ ದಕ್ಷತೆಯು ಸಾಂಪ್ರದಾಯಿಕ ರೈಲು ಮಾರ್ಗಗಳ ಮೇಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತಿದೆ, ಇದು ಹೆಚ್ಚು ಸಮಯೋಚಿತ ಮತ್ತು ಆರಾಮದಾಯಕ ಪ್ರಯಾಣಿಕ ರೈಲು ಸೇವೆಗಳನ್ನು ಖಚಿತಪಡಿಸುತ್ತಿದೆ ಮತ್ತು ದೈನಂದಿನ ಪ್ರಯಾಣದಲ್ಲಿನ ವಿಳಂಬವನ್ನು ಕಡಿಮೆ ಮಾಡುತ್ತಿದೆ. ಇದು ಕೈಗಾರಿಕೆಗಳ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುತ್ತಿದೆ, ಅಂತಿಮವಾಗಿ ಅಗತ್ಯ ವಸ್ತುಗಳ ವೇಗದ ವಿತರಣೆ ಮತ್ತು ಕಡಿಮೆ ಲಾಜಿಸ್ಟಿಕ್ಸ್ ವೆಚ್ಚಗಳ ಮೂಲಕ ಜನಸಾಮಾನ್ಯರಿಗೆ ಪ್ರಯೋಜನವನ್ನು ನೀಡುತ್ತಿದೆ.
ಈ ಮೈಲಿಗಲ್ಲು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ನ ಬೆಳೆಯುತ್ತಿರುವ ಕಾರ್ಯಾಚರಣಾ ಸಾಮರ್ಥ್ಯ, ಬಲವರ್ಧಿತ ಯೋಜನಾ ಚೌಕಟ್ಟು ಮತ್ತು ದೃಢವಾದ ಸಂಚಾರ ನಿರ್ವಹಣಾ ವ್ಯವಸ್ಥೆಗಳನ್ನು ಪ್ರತಿಬಿಂಬಿಸುತ್ತದೆ. ರೈಲು ವೇಗದ ಪರಿಣಾಮಕಾರಿ ನಿಯಂತ್ರಣ, ಸುರಕ್ಷಿತ ಅಂತರದ ನಿರ್ವಹಣೆ ಮತ್ತು ಪಕ್ಕದ ನಿಲ್ದಾಣಗಳ ನಡುವಿನ ನಿಕಟ ಸಮನ್ವಯದ ಮೂಲಕ ಈ ಸಾಧನೆಯು ಸಾಧ್ಯವಾಗಿದೆ, ಇದು ರೈಲುಗಳು ಕನಿಷ್ಠ ಸಮಯದಲ್ಲಿ ನಿಲ್ದಾಣಗಳನ್ನು ದಾಟಲು ಅನುವು ಮಾಡಿಕೊಡುತ್ತದೆ ಮತ್ತು ಹೆಚ್ಚಿನ ಹೊರೆ ಇರುವ ವಿಭಾಗಗಳಲ್ಲಿಯೂ ಸಹ ಸುರಕ್ಷಿತ, ಇಂಧನ ದಕ್ಷತೆ ಮತ್ತು ಅಡೆತಡೆಯಿಲ್ಲದ ಕಾರ್ಯಾಚರಣೆಗಳನ್ನು ಖಚಿತಪಡಿಸುತ್ತದೆ.
ಆಧುನಿಕ ರೈಲು ವೇಳಾಪಟ್ಟಿ ಪರಿಕರಗಳು, ನೈಜ-ಸಮಯದ ಸಂಚಾರ ಮೇಲ್ವಿಚಾರಣೆ, ಸ್ವಯಂಚಾಲಿತ ಸಿಗ್ನಲಿಂಗ್, ಡಿಜಿಟಲ್ ನಿಯಂತ್ರಣ ಕೊಠಡಿಗಳು ಮತ್ತು ಕಟ್ಟುನಿಟ್ಟಾದ ಸುರಕ್ಷತಾ ಪ್ರೋಟೋಕಾಲ್ ಗಳ ಮೂಲಕ ಈ ಕಾರ್ಯಕ್ಷಮತೆಗೆ ಮತ್ತಷ್ಟು ಬೆಂಬಲ ಸಿಕ್ಕಿದೆ. ಕೇಂದ್ರೀಯ ನಿಯಂತ್ರಣವು ಎಲ್ಲಾ ಕಾರ್ಯಾಚರಣಾ ನಿಯಂತ್ರಣ ಕೇಂದ್ರಗಳು ಮತ್ತು ವಲಯ ನಿಯಂತ್ರಣ ಕಚೇರಿಗಳ ಸಲಹೆ-ಸೂಚನೆಗಳ ಆಧಾರದ ಮೇಲೆ ಜಾಲ-ಮಟ್ಟದ ಯೋಜನೆ ಮತ್ತು ಮೇಲ್ವಿಚಾರಣೆಯನ್ನು ಒದಗಿಸಿದೆ, ಇದು ಜಾಲದಾದ್ಯಂತ ತಡೆರಹಿತ ಅನುಷ್ಠಾನವನ್ನು ಖಚಿತಪಡಿಸಿದೆ.
ಹೆಚ್ಚಿನ ಸಾಮರ್ಥ್ಯದ ಲೋಕೋಮೋಟಿವ್ ಗಳು (ಇಂಜಿನ್) ಹೆಚ್ಚಿನ ಸರಾಸರಿ ವೇಗದಲ್ಲಿ ಉದ್ದನೆಯ ಮತ್ತು ಭಾರೀ ಸರಕು ರೈಲುಗಳನ್ನು ಎಳೆಯುವ ಮೂಲಕ ನಿರ್ಣಾಯಕ ಪಾತ್ರವನ್ನು ವಹಿಸಿವೆ, ಹಾಗೆಯೇ ಲೋಕೋ ಪೈಲಟ್ ಗಳು, ಸಹಾಯಕ ಲೋಕೋ ಪೈಲಟ್ ಗಳು ಮತ್ತು ರೈಲು ವ್ಯವಸ್ಥಾಪಕರ ನಡುವಿನ ಬಲವಾದ ಸಮನ್ವಯವು ದಿನವಿಡೀ ಜಾಗರೂಕ, ಶಿಸ್ತುಬದ್ಧ ಮತ್ತು ಸುರಕ್ಷಿತ ಕಾರ್ಯಾಚರಣೆಗಳನ್ನು ಖಚಿತಪಡಿಸಿದೆ. ಬಲಪಡಿಸಲಾದ ಫೀಡರ್ ಮಾರ್ಗಗಳು ಮತ್ತು ದಕ್ಷ ಯಾರ್ಡ್ ನಿರ್ವಹಣೆಯು ರೈಲುಗಳ ತಡೆಹಿಡಿಯುವಿಕೆಯನ್ನು ಕನಿಷ್ಠಗೊಳಿಸಿದೆ, ಇದು ರೈಲುಗಳ ವೇಗದ ಪ್ರವೇಶ ಮತ್ತು ನಿರ್ಗಮನ ಹಾಗೂ ಸರಕುಗಳನ್ನು ಸಮಯಕ್ಕೆ ಸರಿಯಾಗಿ ಖಾಲಿ ಮಾಡಲು ಅನುವು ಮಾಡಿಕೊಟ್ಟಿದೆ.
ಈ ದಾಖಲೆಯು ಭಾರತದ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯಲ್ಲಿನ ಸಕಾರಾತ್ಮಕ ಪರಿವರ್ತನೆಯನ್ನು ಉಲ್ಲೇಖಿಸುತ್ತದೆ, ಕಲ್ಲಿದ್ದಲು, ಸಿಮೆಂಟ್, ಕಂಟೈನರ್ ಗಳು ಮತ್ತು ಕೃಷಿ ಸರಕುಗಳ ವೇಗವಾದ, ಸುರಕ್ಷಿತವಾದ ಮತ್ತು ಹೆಚ್ಚು ನಿರೀಕ್ಷಿತ ಚಲನೆಗೆ ಅನುಕೂಲ ಮಾಡಿಕೊಡುತ್ತದೆ, ಜೊತೆಗೆ ಸಾಂಪ್ರದಾಯಿಕ ರೈಲು ಜಾಲದ ಮೇಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಡಿ ಎಫ್ ಸಿ ಜಾಲದಲ್ಲಿನ ಇತ್ತೀಚಿನ ಇತರ ಹೆಚ್ಚಿನ ಪ್ರಮಾಣದ ಇಂಟರ್‌ಚೇಂಜ್ ದಿನಗಳಲ್ಲಿ 30 ಮಾರ್ಚ್ 2025 ರಂದು 846 ರೈಲುಗಳು, 14 ಸೆಪ್ಟೆಂಬರ್ 2025 ರಂದು 830, 31 ಮಾರ್ಚ್ 2025 ರಂದು 820, 3 ಜೂನ್ 2026 ರಂದು 812, ಮತ್ತು 25 ಮೇ 2025 ರಂದು 808 ರೈಲುಗಳು ಸೇರಿವೆ, ಇದು ಹೆಚ್ಚಿನ ಸಾಂದ್ರತೆಯ ಸರಕು ಕಾರ್ಯಾಚರಣೆಗಳ ನಿರಂತರ ಪ್ರವೃತ್ತಿಯನ್ನು ಬಿಂಬಿಸುತ್ತದೆ.
ಭಾರತೀಯ ರೈಲ್ವೆಯು ಲಕ್ಷಾಂತರ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಗಳಿಗೆ ಸಮರ್ಥವಾಗಿ ಸಾಗಿಸುವುದನ್ನು ಮುಂದುವರಿಸುತ್ತಿರುವಾಗ, ಅದು ಸುರಕ್ಷತೆ, ವೇಗ ಮತ್ತು ವಿಶ್ವಾಸಾರ್ಹತೆಯೊಂದಿಗೆ ಹೆಚ್ಚಿನ ಸಾಂದ್ರತೆಯ ಸರಕು ಕಾರ್ಯಾಚರಣೆಗಳನ್ನು ನಿರ್ವಹಿಸಲು ಅಷ್ಟೇ ಸಮಾನವಾಗಿ ಸುಸಜ್ಜಿತವಾಗಿದೆ. ಆಧುನಿಕ ಲೋಕೋಮೋಟಿವ್ ಗಳು, ಡಿಜಿಟಲ್ ಮೇಲ್ವಿಚಾರಣೆ ಮತ್ತು ಸುಗಮಗೊಳಿಸಲಾದ ಯಾರ್ಡ್ ಮತ್ತು ಫೀಡರ್ ನಿರ್ವಹಣೆಯ ಮೂಲಕ, ಡಿ ಎಫ್ ಸಿ ಜಾಲವು ಕಲ್ಲಿದ್ದಲು, ಸಿಮೆಂಟ್, ಕಂಟೈನರ್ ಗಳು ಮತ್ತು ಕೃಷಿ ಉತ್ಪನ್ನಗಳಂತಹ ಅಗತ್ಯ ವಸ್ತುಗಳ ವೇಗದ ಚಲನೆಯನ್ನು ಸಕ್ರಿಯಗೊಳಿಸುತ್ತಿದೆ. ಇದು ದೃಢವಾದ ಪೂರೈಕೆ ಸರಪಳಿಯನ್ನು ಖಚಿತಪಡಿಸುತ್ತಿದೆ, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತಿದೆ ಮತ್ತು ರಾಷ್ಟ್ರದ ಆರ್ಥಿಕತೆಯ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ.
******
(रिलीज़ आईडी: 2214743)
आगंतुक पटल : 10