ರಾಷ್ಟ್ರಪತಿಗಳ ಕಾರ್ಯಾಲಯ
ಲೋಹ್ರಿ, ಮಕರ ಸಂಕ್ರಾಂತಿ, ಪೊಂಗಲ್ ಮತ್ತು ಮಾಘ ಬಿಹು ಹಬ್ಬದ ಅಂಗವಾಗಿ ರಾಷ್ಟ್ರಪತಿಗಳಿಂದ ಶುಭ ಹಾರೈಕೆ
प्रविष्टि तिथि:
12 JAN 2026 7:33PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಲೋಹ್ರಿ, ಮಕರ ಸಂಕ್ರಾಂತಿ, ಪೊಂಗಲ್ ಮತ್ತು ಮಾಘ ಬಿಹು (ಜನವರಿ 13 ಮತ್ತು 14 ರಂದು ಕ್ರಮವಾಗಿ ಆಚರಿಸಲ್ಪಡುವ) ಹಬ್ಬದ ಅಂಗವಾಗಿ ದೇಶದ ನಾಗರಿಕರಿಗೆ ಶುಭಾಶಯ ಕೋರಿದ್ದಾರೆ.
ರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ, “ಲೋಹ್ರಿ, ಮಕರ ಸಂಕ್ರಾಂತಿ, ಪೊಂಗಲ್ ಮತ್ತು ಮಾಘ ಬಿಹು ಹಬ್ಬಗಳ ಶುಭ ಸಂದರ್ಭದಲ್ಲಿ, ಭಾರತ ಮತ್ತು ವಿದೇಶಗಳಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು.
ಈ ಹಬ್ಬಗಳು ನಮ್ಮ ಶ್ರೀಮಂತ ಕೃಷಿ ಸಂಪ್ರದಾಯಗಳು ಮತ್ತು ರಾಷ್ಟ್ರೀಯ ಏಕತೆಯ ಸಂಕೇತವಾಗಿವೆ. ಅವು ನಮ್ಮ ರೋಮಾಂಚಕ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದೆ. ಈ ಹಬ್ಬಗಳು, ರಾಷ್ಟ್ರದ ಜನರ ಪೋಷಣೆಗೆ ಅವಿಶ್ರಾಂತವಾಗಿ ಶ್ರಮಿಸುವ ನಮ್ಮ ರೈತರ ಕಠಿಣ ಪರಿಶ್ರಮಕ್ಕೆ ನಮನ ಸಲ್ಲಿಸುವ ಸಂದರ್ಭವಾಗಿದೆ. ದೇಶಾದ್ಯಂತ ಆಚರಿಸಲಾಗುವ ಈ ಹಬ್ಬಗಳ ಮೂಲಕ, ನಾವು ಪ್ರಕೃತಿ ಮಾತೆಗೆ ನಮ್ಮ ಕೃತಜ್ಞತೆ ಸಲ್ಲಿಸುತ್ತೇವೆ.
ನಮ್ಮ ಸಮಾಜದಲ್ಲಿ ಪ್ರೀತಿ ಮತ್ತು ಒಗ್ಗಟ್ಟಿನ ಮನೋಭಾವವು ಬಲಗೊಳ್ಳಲಿ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸೋಣ ಎಂದು ನಾನು ಈ ಶುಭ ಸಂದರ್ಭದಲ್ಲಿ ಹಾರೈಸುತ್ತೇನೆ.”
ರಾಷ್ಟ್ರಪತಿಗಳ ಸಂದೇಶ ನೋಡಲು ದಯಮಾಡಿ ಇಲ್ಲಿ ಕ್ಲಿಕ್ ಮಾಡಿ :-
*****
(रिलीज़ आईडी: 2213963)
आगंतुक पटल : 13