ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರವಾಸಿ ಭಾರತೀಯ ದಿನದ ಅಂಗವಾಗಿ ಜಾಗತಿಕ ಭಾರತೀಯ ಸಮುದಾಯಕ್ಕೆ ಶುಭ ಕೋರಿದ ಪ್ರಧಾನಮಂತ್ರಿ

प्रविष्टि तिथि: 09 JAN 2026 11:58AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರವಾಸಿ ಭಾರತೀಯ ದಿನದ ಅಂಗವಾಗಿ ಇಂದು ಜಾಗತಿಕ ಭಾರತೀಯ ಸಮುದಾಯಕ್ಕೆ ಆತ್ಮೀಯ ಶುಭಾಶಯಗಳನ್ನು ಕೋರಿದ್ದಾರೆ.

ಭಾರತೀಯ ಅನಿವಾಸಿಗಳು ಭಾರತ ಮತ್ತು ವಿಶ್ವದ ನಡುವೆ ಶಕ್ತಿಶಾಲಿ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.

ಅನಿವಾಸಿ ಭಾರತೀಯರನ್ನು ಭಾರತಕ್ಕೆ ಇನ್ನಷ್ಟು ಹತ್ತಿರ ತರಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.

ಶ್ರೀ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಪ್ರವಾಸಿ ಭಾರತೀಯ ದಿನದ ಆತ್ಮೀಯ ಶುಭಾಶಯಗಳು. ಭಾರತೀಯ ಅನಿವಾಸಿಗಳು ಭಾರತ ಮತ್ತು ವಿಶ್ವದ ನಡುವೆ ಶಕ್ತಿಶಾಲಿ ಸೇತುವೆಯಾಗಿ ಮುಂದುವರಿದಿದ್ದಾರೆ. ಅವರು ಹೋದಲ್ಲೆಲ್ಲಾ ಅಲ್ಲಿನ ಸಮಾಜಗಳನ್ನು ಶ್ರೀಮಂತಗೊಳಿಸಿದ್ದಾರೆ ಮತ್ತು ಅದೇ ವೇಳೆ ತಮ್ಮ ಬೇರುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ನಮ್ಮ ಅನಿವಾಸಿಗಳು ನಮ್ಮ ರಾಷ್ಟ್ರದೂತರು ಎಂದು ನಾನು ಆಗಾಗ್ಗೆ ಹೇಳುತ್ತೇನೆ, ಅವರು ಭಾರತದ ಸಂಸ್ಕೃತಿಯನ್ನು ಜಾಗತಿಕವಾಗಿ ಜನಪ್ರಿಯಗೊಳಿಸಿದ್ದಾರೆ. ನಮ್ಮ ಸರ್ಕಾರವು ನಮ್ಮ ಅನಿವಾಸಿಗಳನ್ನು ಭಾರತಕ್ಕೆ ಮತ್ತಷ್ಟು ಹತ್ತಿರ ತರಲು ಹಲವು  ಕ್ರಮಗಳನ್ನು ಕೈಗೊಂಡಿದೆ.’’

 

*****


(रिलीज़ आईडी: 2212874) आगंतुक पटल : 13
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam