ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಸೃಜನಶೀಲ ವೃತ್ತಿಪರರಿಗಾಗಿ ವಾರ್ಷಿಕ ಸಾಮರ್ಥ್ಯ-ವರ್ಧನೆ ವೆಬಿನಾರ್ ಕಾರ್ಯಕ್ರಮವನ್ನು ಪರಿಚಯಿಸಿದ 'ವೇವ್ಸ್ ಬಜಾರ್'
ಭಾರತದ ಸೃಜನಶೀಲರ ಜ್ಞಾನವನ್ನು ಹೆಚ್ಚಿಸುವ ಮತ್ತು ಜಾಗತಿಕ ಮಾರುಕಟ್ಟೆಗೆ ಅವರನ್ನು ಸಜ್ಜುಗೊಳಿಸುವ ಉದ್ದೇಶದೊಂದಿಗೆ ಉದ್ಯಮ ಸಂಬಂಧಿತ ವೆಬಿನಾರ್ ಗಳು ವರ್ಷಪೂರ್ತಿ ನಡೆಯಲಿವೆ
प्रविष्टि तिथि:
08 JAN 2026 4:40PM
|
Location:
PIB Bengaluru
ವೇವ್ಸ್ ಬಜಾರ್, ತನ್ನ ಯಶಸ್ವಿ ಉದ್ಘಾಟನೆಯ ನಂತರ, ಉದ್ದೇಶಿತ ಸರಣಿ ವೆಬಿನಾರ್ ಗಳು ಮತ್ತು ಮಾಸ್ಟರ್ ಕ್ಲಾಸ್ ಗಳನ್ನು ಪ್ರಾರಂಭಿಸುವ ಮೂಲಕ ವರ್ಷಪೂರ್ತಿ ಸಕ್ರಿಯವಾಗಿರುವ 'ಸಂಪರ್ಕ ಕೇಂದ್ರ'ವಾಗಿ ರೂಪಾಂತರಗೊಳ್ಳುತ್ತಿದೆ. ಈ ಉಪಕ್ರಮವನ್ನು ಭಾರತದ ಚಲನಚಿತ್ರ, ಸಂಗೀತ, ಅನಿಮೇಷನ್ ಮತ್ತು ಗೇಮಿಂಗ್ ಕ್ಷೇತ್ರಗಳ ವೃತ್ತಿಪರ ಸಾಮರ್ಥ್ಯವನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ.
ಹೊಸ ಶೈಕ್ಷಣಿಕ ಕಾರ್ಯಕ್ರಮಗಳು
ಈ ಮುಂಬರುವ ಕಾರ್ಯಕ್ರಮವು ಸೃಜನಶೀಲರು, ಸ್ಟುಡಿಯೋಗಳು ಮತ್ತು ನವೋದ್ಯಮಗಳಿಗೆ ಉದ್ಯಮದ ಪ್ರತಿಷ್ಠಿತ ವೃತ್ತಿಪರರೊಂದಿಗೆ ನೇರ ಸಂವಾದ ನಡೆಸಲು ಅವಕಾಶ ಒದಗಿಸಿಕೊಡುತ್ತದೆ. ಗಮನಹರಿಸಲಿರುವ ಪ್ರಮುಖ ಕ್ಷೇತ್ರಗಳು ಇಲ್ಲಿವೆ:
- ಪ್ರಾಯೋಗಿಕ ವಿಷಯ (ಕಂಟೆಂಟ್) ರಚನೆ: ನಿರ್ಮಾಣ ಮತ್ತು ಸೃಜನಶೀಲ ಕಾರ್ಯವೈಖರಿಗಳ ಕುರಿತು ಒಳನೋಟಗಳು.
- ನಗದೀಕರಣ ಮತ್ತು ಐಪಿ: ಬೌದ್ಧಿಕ ಆಸ್ತಿ ಮತ್ತು ಆದಾಯ ಗಳಿಕೆಯ ತಂತ್ರಗಳು.
- ಜಾಗತಿಕ ತಲುಪುವಿಕೆ: ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆಯಲು ಮಾರುಕಟ್ಟೆ ಸಿದ್ಧತೆ ಮತ್ತು ಡಿಜಿಟಲ್ ಪರಿಸರ ವ್ಯವಸ್ಥೆಗಳ ಬಳಕೆ.
ಈ ಸಂವಾದಾತ್ಮಕ ಆನ್‌ಲೈನ್ ಗೋಷ್ಠಿಗಳು ಮೀಸಲಾದ ಪ್ರಶ್ನೋತ್ತರ ವಿಭಾಗಗಳನ್ನು ಒಳಗೊಂಡಿರುತ್ತವೆ; ಇದು ಸ್ವತಂತ್ರ ವೃತ್ತಿಪರರು ಮತ್ತು ಉದ್ಯಮಿಗಳು ಪರಿಣಿತರೊಂದಿಗೆ ನೇರವಾಗಿ ಸಂವಹನ ನಡೆಸಲು ಹಾಗೂ ನೈಜ-ಪ್ರಪಂಚದ ಜ್ಞಾನ ವಿನಿಮಯವನ್ನು ಸುಗಮಗೊಳಿಸಲು ವೇದಿಕೆ ಕಲ್ಪಿಸುತ್ತದೆ.
ಈಗ, ಇದನ್ನು ವರ್ಷಪೂರ್ತಿ ಸಕ್ರಿಯವಾಗಿರುವ ಸಂಪರ್ಕ ವೇದಿಕೆಯನ್ನಾಗಿ ಮಾಡಲು, ವೇವ್ಸ್ ಬಜಾರ್ ವರ್ಷದುದ್ದಕ್ಕೂ ಉದ್ದೇಶಿತ ಸರಣಿ ಉದ್ಯಮ-ಚಾಲಿತ ವೆಬಿನಾರ್ ಗಳು ಮತ್ತು ಮಾಸ್ಟರ್ ಕ್ಲಾಸ್ ಗಳನ್ನು ನಡೆಸಲಿದೆ. ಇದು ಭಾರತದ ಚಲನಚಿತ್ರ, ಸಂಗೀತ, ಅನಿಮೇಷನ್ ಮತ್ತು ಗೇಮಿಂಗ್ ಕ್ಷೇತ್ರಗಳ ವೃತ್ತಿಪರ ಸಾಮರ್ಥ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ಜ್ಞಾನ ವಿನಿಮಯ, ಜಾಗತಿಕ ಮಾರುಕಟ್ಟೆ ಸಿದ್ಧತೆ ಮತ್ತು ಕ್ಷೇತ್ರ-ನಿರ್ದಿಷ್ಟ ಒಳನೋಟಗಳನ್ನು ಉದ್ಯಮದ ಸ್ಥಾಪಿತ ವೃತ್ತಿಪರರೊಂದಿಗಿನ ನೇರ ಸಂವಾದದ ಮೂಲಕ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಈ ವೆಬಿನಾರ್ ಕಾರ್ಯಕ್ರಮವು ಸೃಜನಶೀಲ ಉದ್ಯಮಶೀಲತೆ, ಜಾಗತಿಕ ಸಹಯೋಗ ಮತ್ತು ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಬೆಂಬಲಿಸುವ ವೇವ್ಸ್ ಬಜಾರ್ ನ ವಿಶಾಲ ವ್ಯಾಪ್ತಿಯ ಭಾಗವಾಗಿದೆ.
ಭಾಗವಹಿಸುವವರಿಗೆ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವ ಮೂಲಕ, ಈ ಉಪಕ್ರಮವು ಸೃಜನಶೀಲ ಮತ್ತು ಡಿಜಿಟಲ್ ಪರಿಸರ ವ್ಯವಸ್ಥೆಗಳಲ್ಲಿ ಸುಸಂಬದ್ಧ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಚಲನಚಿತ್ರ, ಸಂಗೀತ ಮತ್ತು ಗೇಮಿಂಗ್ ಕ್ಷೇತ್ರಗಳಲ್ಲಿ ನಿರಂತರ ಹಾಗೂ ವ್ಯವಸ್ಥಿತ ತೊಡಗಿಸಿಕೊಳ್ಳುವಿಕೆಯನ್ನು ಸಾಧ್ಯವಾಗಿಸುತ್ತದೆ; ಜೊತೆಗೆ ಸಹಯೋಗ, ಸಾಮರ್ಥ್ಯ ವರ್ಧನೆ ಮತ್ತು ದೀರ್ಘಕಾಲೀನ ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
ಗೋಷ್ಠಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಎಲ್ಲಾ ಭಾಗವಹಿಸುವವರು ವೇವ್ಸ್ ಬಜಾರ್ ನಿಂದ 'ಭಾಗವಹಿಸುವಿಕೆ ಪ್ರಮಾಣಪತ್ರ' ಪಡೆಯುತ್ತಾರೆ.


ವೆಬಿನಾರ್ ವೇಳಾಪಟ್ಟಿ
ಜನವರಿ 2026 ರಲ್ಲಿ, ವೇವ್ಸ್ ಬಜಾರ್ ಸೃಜನಶೀಲ ಕ್ಷೇತ್ರದಲ್ಲಿ ಜಾಗತಿಕ ಮಾರುಕಟ್ಟೆ ಪ್ರವೇಶ ಮತ್ತು ಬೌದ್ಧಿಕ ಆಸ್ತಿಯ ಮೇಲೆ ಕೇಂದ್ರೀಕರಿಸುವ ಎರಡು ದೃಢೀಕೃತ ಉದ್ಯಮ-ಚಾಲಿತ ವೆಬಿನಾರ್ ಗಳನ್ನು ಆಯೋಜಿಸಲಿದೆ.
ಜನವರಿ 15 ರಂದು, ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ಮಾಪಕಿ ಗುಣೀತ್ ಮೊಂಗಾ ಅವರು 'ಭಾರತವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕೊಂಡೊಯ್ಯುವುದು' ಎಂಬ ವಿಷಯದ ಕುರಿತು ಚಲನಚಿತ್ರ-ಆಧಾರಿತ ಗೋಷ್ಠಿ ನಡೆಸಿಕೊಡಲಿದ್ದಾರೆ.
ಇದರ ನಂತರ, ಜನವರಿ 22 ರಂದು ಸಂಗೀತ ಕ್ಷೇತ್ರದ ವೆಬಿನಾರ್ ನಡೆಯಲಿದ್ದು, ಎಐ-ಚಾಲಿತ ಸಂಗೀತ ಪರವಾನಗಿ ವೇದಿಕೆಯಾದ 'ಹೂಪರ್' ನ ಸಂಸ್ಥಾಪಕ ಗೌರವ್ ಡಗಾಂವ್ಕರ್ ಅವರು 'ಡಿಜಿಟಲ್ ಸಂಗೀತ ಜಗತ್ತಿನಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ' ಎಂಬ ವಿಷಯದ ಕುರಿತು ಚರ್ಚಿಸಲಿದ್ದಾರೆ.


ಫೆಬ್ರವರಿ 2026ರಲ್ಲಿ, ವೇವ್ಸ್ ಬಜಾರ್ ಚಲನಚಿತ್ರ, ಗೇಮಿಂಗ್, ಅನಿಮೇಷನ್ ಮತ್ತು ವೇದಿಕೆ ಸಕ್ರಿಯಗೊಳಿಸುವಿಕೆ ಕುರಿತು ಸರಣಿ ಆನ್‌ಲೈನ್ ಗೋಷ್ಠಿಗಳನ್ನು ಆಯೋಜಿಸಲಿದೆ. ಈ ಕಾರ್ಯಕ್ರಮವು ಚಿತ್ರಕಥೆ ಅಭಿವೃದ್ಧಿ ಮತ್ತು ಕಥೆ ಹೇಳುವ ಕಲೆ, ಜಾಗತಿಕ ಗೇಮ್ ಪಬ್ಲಿಷರ್ ಗಳ ನಿರೀಕ್ಷೆಗಳು, ಅಂತರರಾಷ್ಟ್ರೀಯ ಪ್ರೇಕ್ಷಕರಿಗಾಗಿ ಭಾರತೀಯ ಪುರಾಣಗಳ ಪ್ರಸ್ತುತಿ, ಅನಿಮೇಷನ್ ನಲ್ಲಿ ವಿನ್ಯಾಸದ ವ್ಯವಹಾರ ಮತ್ತು ವೇವ್ಸ್ ಬಜಾರ್ ಪೋರ್ಟಲ್ ಹಾಗೂ ವ್ಯೂಯಿಂಗ್ ರೂಮ್ ಗಳ ಬಳಕೆಯ ಕುರಿತಾದ ವಿಷಯಗಳನ್ನು ಒಳಗೊಂಡಿರಲಿದೆ.
ಮಾರ್ಚ್ 2026 ರ ವೇಳಾಪಟ್ಟಿಯು ಪ್ರಮುಖ ಮಾರುಕಟ್ಟೆ ಮತ್ತು ಬೆಳವಣಿಗೆಯ ವಿಷಯಗಳ ಮೇಲೆ ಕೇಂದ್ರೀಕರಿಸಲಿದೆ. ಈ ಗೋಷ್ಠಿಗಳು ಭಾರತೀಯ ಗೇಮಿಂಗ್ ಪರಿಸರ ವ್ಯವಸ್ಥೆಯಲ್ಲಿನ ನಗದೀಕರಣ, ಬಿಗಿಯಾದ ಹೂಡಿಕೆ ವಾತಾವರಣದಲ್ಲಿ ಎದುರಾಗುವ ಧನಸಹಾಯದ ಸವಾಲುಗಳು, ಯೂಟ್ಯೂಬ್ ನಂತಹ ವೇದಿಕೆಗಳಲ್ಲಿ ಸಂಗೀತ ರಾಯಲ್ಟಿ ಮತ್ತು ಡಿಜಿಟಲ್ ವಿತರಣೆ ಹಾಗೂ ಭಾರತದಲ್ಲಿ ವೈಯಕ್ತಿಕ ಕಂಪ್ಯೂಟರ್ (ಪಿಸಿ) ಗೇಮಿಂಗ್ ನ ಪುನರುತ್ಥಾನದ ಕುರಿತು ಚರ್ಚಿಸಲಿವೆ.
ಈ ಗೋಷ್ಠಿಗಳು ವರ್ಷಪೂರ್ತಿ ನಡೆಯುವ ವಿಶಾಲವಾದ ಜ್ಞಾನ ಕಾರ್ಯಕ್ರಮದ ಭಾಗವಾಗಿದ್ದು, ಮಾರುಕಟ್ಟೆ ಪ್ರವೇಶ, ನಗದೀಕರಣ, ತಂತ್ರಜ್ಞಾನ ಮತ್ತು ಜಾಗತಿಕ ಸಹಯೋಗದ ಕುರಿತು ಚರ್ಚಿಸಲು ಚಲನಚಿತ್ರ, ಸಂಗೀತ, ಗೇಮಿಂಗ್ ಮತ್ತು ಉದಯೋನ್ಮುಖ ಮಾಧ್ಯಮಗಳಲ್ಲಿ ಇನ್ನೂ ಹೆಚ್ಚಿನ ವೆಬಿನಾರ್ ಗಳನ್ನು ಯೋಜಿಸಲಾಗಿದೆ.

ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಜನವರಿ 27, 2025 ರಂದು ನ್ಯಾಷನಲ್ ಮೀಡಿಯಾ ಸೆಂಟರ್ ನಲ್ಲಿ ಚಾಲನೆ ನೀಡಿದ 'ವೇವ್ಸ್ ಬಜಾರ್', ಮಾಧ್ಯಮ ಮತ್ತು ಮನರಂಜನಾ ವಲಯದ ಪ್ರಮುಖ ಜಾಗತಿಕ ಮಾರುಕಟ್ಟೆಯಾಗಿದೆ.
ಈ ವೇದಿಕೆಯು ದೂರದರ್ಶನ, ಗೇಮಿಂಗ್, ಜಾಹೀರಾತು, ಎಕ್ಸ್ ಆರ್ ಮತ್ತು ಸಂಬಂಧಿತ ಕ್ಷೇತ್ರಗಳ ಪಾಲುದಾರರಿಗೆ ಕೇಂದ್ರ ಬಿಂದುವಾಗಿ ಕಾರ್ಯನಿರ್ವಹಿಸುತ್ತದೆ. ತನ್ನ ಪ್ರಾರಂಭದಿಂದಲೂ, ಈ ವೇದಿಕೆಯು ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದೆ:
- 5,000 ಕ್ಕೂ ಹೆಚ್ಚು ನೋಂದಾಯಿತ ಖರೀದಿದಾರರು ಮತ್ತು ಅಷ್ಟೇ ಸಂಖ್ಯೆಯ ಮಾರಾಟಗಾರರು.
- ವಿವಿಧ ಕ್ಷೇತ್ರಗಳಲ್ಲಿ 1,900 ಕ್ಕೂ ಹೆಚ್ಚು ಸಕ್ರಿಯ ಯೋಜನೆಗಳು.
*****
रिलीज़ आईडी:
2212661
| Visitor Counter:
15