ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸುಭಾಷಿತದ ಮೂಲಕ ಸದ್ಗುಣ, ಚಾರಿತ್ರ್ಯ, ಜ್ಞಾನ ಮತ್ತು ಸಂಪತ್ತಿನ ಸಾರ್ವಕಾಲಿಕ ಮೌಲ್ಯಗಳನ್ನು ತಿಳಿಸಿದ ಪ್ರಧಾನಮಂತ್ರಿ

प्रविष्टि तिथि: 07 JAN 2026 8:57AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರೀಯ ಜೀವನ ಮತ್ತು ವೈಯಕ್ತಿಕ ನಡವಳಿಕೆಗೆ ಮಾರ್ಗದರ್ಶನ ನೀಡುವ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುತ್ತಾ ಭಾರತೀಯ ಪರಂಪರೆಯ ವಿವೇಕದ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ನಿಜವಾದ ಸೌಂದರ್ಯವು ಸದ್ಗುಣದಿಂದ ಅಲಂಕರಿಸಲ್ಪಟ್ಟಿದೆ, ವಂಶಾವಳಿಯು ಚಾರಿತ್ರ್ಯದಿಂದ ಉನ್ನತೀಕರಿಸಲ್ಪಟ್ಟಿದೆ, ಜ್ಞಾನವು ಯಶಸ್ಸಿನ ಮೂಲಕ ತನ್ನ ಮೌಲ್ಯವನ್ನು ಕಂಡುಕೊಳ್ಳುತ್ತದೆ ಮತ್ತು ಸಂಪತ್ತು ಜವಾಬ್ದಾರಿಯುತ ಆನಂದದ ಮೂಲಕ ಅರ್ಥವನ್ನು ಪಡೆಯುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ಮೌಲ್ಯಗಳು ಸಾರ್ವಕಾಲಿಕ ಮಾತ್ರವಲ್ಲದೆ ಸಮಕಾಲೀನ ಸಮಾಜದಲ್ಲಿಯೂ ಆಳವಾಗಿ ಪ್ರಸ್ತುತವಾಗಿದ್ದು, ಪ್ರಗತಿ, ಜವಾಬ್ದಾರಿ ಮತ್ತು ಸಾಮರಸ್ಯದ ಕಡೆಗೆ ಭಾರತದ ಸಾಮೂಹಿತ ಪಯಣಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದು ಅವರು ಹೇಳಿದರು.

ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಸಂಸ್ಕೃತದ ಪದ್ಯವನ್ನು ಹಂಚಿಕೊಂಡಿದ್ದಾರೆ:

“गुणो भूषयते रूपं शीलं भूषयते कुलम्। 

सिद्धिर्भूषयते विद्यां भोगो भूषयते धनम्॥”

 

*****


(रिलीज़ आईडी: 2212010) आगंतुक पटल : 8
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Bengali-TR , Punjabi , Gujarati , Tamil , Telugu , Malayalam